Wednesday, April 1

Author: info@rajasdigital.com

ರೂಪಾಯಿ ಚಿಹ್ನೆ ಬದಲಾವಣೆ: ಎಂ.ಕೆ.ಸ್ಟಾಲಿನ್ ಸಮರ್ಥನೆ

ರೂಪಾಯಿ ಚಿಹ್ನೆ ಬದಲಾವಣೆ: ಎಂ.ಕೆ.ಸ್ಟಾಲಿನ್ ಸಮರ್ಥನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಚೆನ್ನೈ: ತಮಿಳುನಾಡು ರಾಜ್ಯ ಬಜೆಟ್ ಲೋಗೋದಲ್ಲಿ ರೂಪಾಯಿ ಚಿಹ್ನೆ (₹) ಅನ್ನು ತಮಿಳು ಅಕ್ಷರ 'ರು' ('ರುಬಾಯಿ' ನಿಂದ, ಅಂದರೆ ರೂಪಾಯಿ) ನೊಂದಿಗೆ ಬದಲಾಯಿಸುವ ತಮ್ಮ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಸಮರ್ಥಿಸಿಕೊಂಡಿದ್ದಾರೆ. ತಮಿಳು ಭಾಷೆಯನ್ನು ವಿರೋಧಿಸುವವರು ಈ ವಿಷಯವನ್ನು ಅತಿರೇಕಕ್ಕೆ ತಳ್ಳಿದ್ದಾರೆ ಎಂದು ಅವರು ವಾದಿಸಿದ್ದಾರೆ.ಮಾರ್ಚ್ 14 ರಂದು ಮಂಡಿಸಲಾದ ತಮಿಳುನಾಡು ಬಜೆಟ್ 2025-26 ಲೋಗೋದಿಂದ ರೂಪಾಯಿ ಚಿಹ್ನೆಯನ್ನು ತೆಗೆದುಹಾಕುವ ನಿರ್ಧಾರವು ಬಿಜೆಪಿ ಮತ್ತು ಎಐಎಡಿಎಂಕೆ ಸೇರಿದಂತೆ ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ರೂಪಾಯಿ ಲೋಗೋ ವಿಚಾರದ್ಲಲಿನ ಚರ್ಚೆಗಳ ಕುರಿತಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಈ ಕ್ರಮವು ತಮಿಳುನಾಡಿನ ಭಾಷಾ ನೀತಿಗೆ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದರು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಈ ಹಿಂದೆ ಇಂಗ್ಲಿಷ್‌ನಲ್ಲಿ 'ರೆ' ಬದಲಿಗೆ ತಮಿಳು ಅಕ್ಷರ 'ರು' ಅನ್ನು ಬಳಸಿದ್ದಾರೆ ಎಂದು ಅವರು ಗಮನಸೆಳೆದರು.ಈ ನಡುವೆ, ಆಡಳಿತಾರೂಢ ಡಿಎಂಕೆ ರಾಷ್ಟ್ರ...
“ನಾನು ಸ್ವಯಂಸೇವಕ, ನನಗೆ ಈ ಸ್ಥಾನ, ಚೈತನ್ಯ ಕೊಟ್ಟಿದ್ದೂ ಸಂಘ”: RSSಗೆ ಕೃತಜ್ಞತೆ ಸಲ್ಲಿಸಿದ ಮೋದಿ

“ನಾನು ಸ್ವಯಂಸೇವಕ, ನನಗೆ ಈ ಸ್ಥಾನ, ಚೈತನ್ಯ ಕೊಟ್ಟಿದ್ದೂ ಸಂಘ”: RSSಗೆ ಕೃತಜ್ಞತೆ ಸಲ್ಲಿಸಿದ ಮೋದಿ

Focus, Update, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ವೈವಿಧ್ಯ
ನವದೆಹಲಿ: ತನ್ನನ್ನು ಈ ಮಟ್ಟಕ್ಕೆ ಬೆಳೆಸಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜೀವನದಲ್ಲಿ ದೇಶಭಕ್ತಿ ಬೆಳೆಸಿದ್ದಕ್ಕಾಗಿ, ತಮ್ಮನ್ನು ಪೋಷಿಸಿದ್ದಕ್ಕಾಗಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.A wonderful conversation with @lexfridman, covering a wide range of subjects. Do watch! https://t.co/G9pKE2RJqh — Narendra Modi (@narendramodi) March 16, 2025ಪಾಡ್‌ಕ್ಯಾಸ್ಟ್‌ನಲ್ಲಿ AI ಸಂಶೋಧಕ ಮತ್ತು ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸಾಂಘಿಕ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ RSS ತಮ್ಮನ್ನು ಒಬ್ಬ ವ್ಯಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು.'ಇಂಗ್ಲಿಷ್' ಆವೃತ್ತಿಯಲ್ಲೂ ಓದಿ.. "RSS helped me find a life of purpose": PM Modi“RSS ಮೂಲಕ, ನಾನು ಉದ್ದೇಶಿತ ಜೀವನವನ್ನು ಕಂಡುಕೊಂಡೆ. ನಂತರ ಸಂತರ ನಡುವೆ ಸಮಯ ಕಳೆಯುವ ಅದೃಷ್ಟ ಸಿಕ್ಕ...
‘ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಟ್ಟು ಸಮಬಾಳು ಸಮಪಾಲು ಎಂದು ಹೇಳಿ’: ವಿಜಯೇಂದ್ರಗೆ ಡಿಕೆಶಿ ಸವಾಲು:

‘ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಟ್ಟು ಸಮಬಾಳು ಸಮಪಾಲು ಎಂದು ಹೇಳಿ’: ವಿಜಯೇಂದ್ರಗೆ ಡಿಕೆಶಿ ಸವಾಲು:

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಗದಗ: "ಸಮಬಾಳು ಸಮಪಾಲು ಎನ್ನುವ ವಿಜೆಯೇಂದ್ರ ಅವರು ಅಲ್ಪಸಂಖ್ಯಾತರಲ್ಲಿ ಯಾರದರೊಬ್ಬರನ್ನು ಎಂಎಲ್‌ಸಿ, ರಾಜ್ಯಸಭಾ ಸದ್ಯಸರನ್ನಾಗಿ, ಕೇಂದ್ರ ಸಂಪುಟದಲ್ಲಿ ಮಂತ್ರಿ ಮಾಡಿಕೊಳ್ಳಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.ಗದಗದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ  ಭಾನುವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಎಕ್ಸ್ (ಟ್ವೀಟ್) ಬಗ್ಗೆ ಪ್ರತಿಕ್ರಿಯಿಸಿದರು. "ಅವರ ಪಕ್ಷದಲ್ಲಿ ಇಬ್ಬರು ಕ್ರಿಶ್ಚಿಯನ್ಸ್, ಮೂರು ಜನ ಮುಸ್ಲಿಮರಿಗೆ ಅವಕಾಶ ಮಾಡಿಕೊಡಲಿ. ಹೀಗೆ ಮಾಡಿದಾಗ ಮಾತ್ರ ವಿಜಯೇಂದ್ರ ಅವರಿಗೆ ಸಮಬಾಳು ಸಮಪಾಲು ಎಂದು ಮಾತನಾಡಲು ಒಂದು ಅವಕಾಶ ಸಿಗುತ್ತದೆ" ಎಂದರು.ವಿಜಯೇಂದ್ರ ಕುವೆಂಪು ಅವರು ಬರೆದಿರುವ ನಾಡಗೀತೆಯನ್ನು ವಿಜಯೇಂದ್ರ ಸರಿಯಾಗಿ ಓದಲಿ. ಯಾರು, ಯಾರು ಸೇರಿದರೆ ಶಾಂತಿಯ ತೋಟ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲಿ. ಇನ್ನು ಪಾಪ ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರ ಲೆವೆಲ್ ನಲ್ಲಿ ಇರಲಿ" ಎಂದರು."ಮುಸ್ಲಿಂ, ಸಿಕ್, ಜೈನ, ಪಾರ್ಸಿ, ಬೌದ್ದರು ಇವರೆಲ್ಲಾ ನಮ್ಮ‌ ದೇಶದ ಹಾಗೂ ಕರ್ನಾಟಕದ ಪ್ರಜೆಗಳು. ನಾವ...
ಅತ್ತೆ, ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯಗೆ ಷೋಕಾಸ್‌ ನೋಟಿಸ್‌

ಅತ್ತೆ, ಮಾವನ ಮೇಲೆ ಹಲ್ಲೆ ನಡೆಸಿದ ವೈದ್ಯಗೆ ಷೋಕಾಸ್‌ ನೋಟಿಸ್‌

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಯೋವೃದ್ಧ ಅತ್ತೆ ಮಾವನ ಮೇಲೆ ಅಮಾನಮೀಯವಾಗಿ ಹಲ್ಲೆ ಮಾಡಿ, ಮಕ್ಕಳ ಜೊತೆಗೂಡಿ ಕಿರುಕುಳ ಕೊಟ್ಟಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆಗೆ ವಿರುದ್ಧ ವೈದ್ಯಕೀಯ ಶಿಕ್ಷಣ ಇಲಾಖೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು ಕೂಡಲೇ ಇದಕ್ಕೆ ಉತ್ತರ ನೀಡಬೇಕೆಂದು ಸೂಚನೆ ನೀಡಲಾಗಿದೆ.ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೋಶಿನ್‌ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ವೈದ್ಯೆ ಡಾ. ಪ್ರಿಯದರ್ಶಿನಿ ಅವರಿಗೆ ಲಿಖಿತ ಸಮಾಜಾಯಿಷಿ ನೀಡಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶಿನಿ ಎನ್‌. ಇತ್ತೀಚೆಗೆ ತಮ್ಮ ಮಕ್ಕಳ ಜೊತೆಗೂಡಿ ವಯೋವೃದ್ಧ ಅತ್ತೆ, ಮಾವಂದಿರನ್ನು ಥಳಿಸಿದ ವೀಡಿಯೋ ಭಾರಿ ವೈರಲ್‌ ಆಗಿತ್ತು. ಕಳೆದ ಹತ್ತು ವರ್ಷದಿಂದಲೂ ಡಾ. ಪ್ರಿಯದರ್ಶಿನಿ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಿಯದರ್ಶಿನಿ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್...
ಸಂಧ್ಯಾಕಾಲದಲ್ಲಿ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳು; ಆಸ್ತಿ ವರ್ಗಾವಣೆ ರದ್ದತಿಗೆ ಸೂಚನೆ

ಸಂಧ್ಯಾಕಾಲದಲ್ಲಿ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳು; ಆಸ್ತಿ ವರ್ಗಾವಣೆ ರದ್ದತಿಗೆ ಸೂಚನೆ

Others
ಸಂಧ್ಯಾಕಾಲದಲ್ಲಿ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳು.. ದೂರು ಸಲ್ಲಿಸಲು ಇಲಾಖಾ ವ್ಯಾಪ್ತಿಯ ಆಸ್ಪತ್ರೆಯ ನಿರ್ದೇಶಕರಿಗೆ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಸೂಚನೆಬೆಂಗಳೂರು: ಇಂದಿನ ಯಾಂತ್ರೀಕೃತ ಹಾಗೂ ತಂತ್ರಜ್ಞಾನ ಜೀವನದಲ್ಲಿ ಭಾವನೆಗಳು ಹಾಗೂ ಸಂಬಂಧಗಳು ಮರೆಯಾಗುತ್ತಿರುವುದು ಬೇಸರದ ಸಂಗತಿ. ಇದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಜನ್ಮ ನೀಡಿದ ತಂದೆ-ತಾಯಂದಿರನ್ನೇ ಅನಾಥರನ್ನಾಗಿ ಮಾಡುತ್ತಿರುವ ಪರಿಪಾಠ ಹೆಚ್ಚಾಗಿದೆ. ಇಂಥ ಅಮಾನವೀಯ ಕೃತ್ಯಗಳಿಗೆ "ಬ್ರೇಕ್‌" ಹಾಕಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ.ಕಾಯ್ದೆಯ ಸೆಕ್ಷನ್ 23 ರ ಪ್ರಕಾರ, ಮಕ್ಕಳು ಆಸ್ತಿಯನ್ನು ಆನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ಕಾಯ್ದೆಯಲ್ಲಿ ಅನುಮತಿ ಇದೆ ಎಂದು ತಿಳಿಸಲಾಗಿದೆ.ಕರ್ನಾಟಕದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಉದಾಹರಣೆಗಳು ಹೆಚ್ಚ...
ಪಾಕ್ ವಿಭಜನೆಗೆ ಬಂಡುಕೋರರು ಪಟ್ಟು: ನೂರಾರು ಸೈನಿಕರ ಹತ್ಯೆ?

ಪಾಕ್ ವಿಭಜನೆಗೆ ಬಂಡುಕೋರರು ಪಟ್ಟು: ನೂರಾರು ಸೈನಿಕರ ಹತ್ಯೆ?

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಂಡುಕೋರರು ರೈಲನ್ನು ಅಪಹರಿಸಿದ್ದ ನಂತರ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಸೇನಾಕಾರ್ಯಾಚರಣೆಯಲ್ಲಿ ಒತ್ತೆಯಾಳುಗಳನ್ನು ಬಿಡಿಲೊಂಡ ಬಳಿಕ ಬಲೂಚ್ ಬಂಡುಕೋರರು ಸೇಡು ತೀರಿಸುತ್ತಿದ್ದಾರೆ. ಬಲೂಚಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಗಾಗಿ ಪಾಕಿಸ್ತಾನಕ್ಕೆ 48 ಗಂಟೆಗಳ ಗಡುವು ನೀಡಿದ್ದ ಬಲೂಚ್ ಲಿಬರೇಶನ್ ಆರ್ಮಿ, ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ 214 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ.ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಬೇಕೆಂದು ಪ್ರತ್ಯೇಕತಾವಾದಿ ಬಲೂಚ್ ಲಿಬರೇಶನ್ ಆರ್ಮಿ ಒತ್ತಾಯಿಸುತ್ತಿದೆ. ಮಂಗಳವಾರ ರೈಲ್ವೆ ಹಳಿಯನ್ನು ಸ್ಫೋಟಿಸಿ ರೈಲನ್ನು ಅಪಹರಿಸಿತ್ತು. ರೈಲಿನಲ್ಲಿದ್ದ 400ಕ್ಕೂ ಹೆಚ್ಚು ಪ್ರಯಾಣಿಕರನ್ನು ಸೇನೆ ಕಾರ್ಯಾಚರಣೆ ನಡೆಸಿ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿ ಹಲವು ಪಾಕ್ ಸೈಕೀಕರನ್ನು ಬಲೂಚ್ ಲಿಬರೇಶನ್ ಆರ್ಮಿ ಬಂಡೂಕೋರರು ಅಪಹರಿಸಿದ್ದರು. ಇದೀಗ ಈ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಬಂಡೂಕೋರರು ಹೇಳಿದ್ದ...
ಮುಸ್ಲಿಂ ಟೆಂಡರ್‌ ಮೀಸಲಾತಿಯ ಮಾಸ್ಟರ್ ಮೈಂಡ್ ರಾಹುಲ್ ಗಾಂಧಿ?

ಮುಸ್ಲಿಂ ಟೆಂಡರ್‌ ಮೀಸಲಾತಿಯ ಮಾಸ್ಟರ್ ಮೈಂಡ್ ರಾಹುಲ್ ಗಾಂಧಿ?

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕದಲ್ಲಿ ಮುಸ್ಲಿಮರಿಗೆ ಸರ್ಕಾರಿ ಟೆಂಡರ್‌ಗಳಲ್ಲಿ ಶೇಕಡಾ 4 ರಷ್ಟು ಮೀಸಲಾತಿ ನೀಡುವ ಸಿದ್ದರಾಮಯ್ಯ ಸರ್ಕಾರದ ನಿಲುವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ರಾಷ್ಟ್ರೀಯ ಪರಿಣಾಮಗಳನ್ನು ಬೀರುತ್ತದೆ ಎಂದಿರುವ ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ಸ್ವಾತಂತ್ರ್ಯ ಸಮಯದಲ್ಲಿ ದೇಶದ ವಿಭಜನೆಗೆ ಕಾರಣವಾದ ಅಂತಹ ವಿಷಯಗಳನ್ನು ಕಾಂಗೇಸ್ ಸರ್ಕಾರ ನೆನಪಿಸುವಂತಿದೆ ಎಂದು ಟೀಕಿಸಿದ್ದಾರೆ.BJP MP Ravishankar Prasad- "Rahul Gandhi is spending more time in Vietnam than his constituency.He should explain this sudden fondness of Vietnam.The frequency of his visit is very curious." pic.twitter.com/zBgzeldCFu— News Arena India (@NewsArenaIndia) March 15, 2025ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬೆಂಬಲದೊಂದಿಗ...
ಪೊಲೀಸ್ ಅಧಿಕಾರಿಯಿಂದಲೇ ಗೂಂಡಾಗಿರಿ? ಅಖಾಡಕ್ಕಿಳಿದ ವಿಜಯೇಂದ್ರ

ಪೊಲೀಸ್ ಅಧಿಕಾರಿಯಿಂದಲೇ ಗೂಂಡಾಗಿರಿ? ಅಖಾಡಕ್ಕಿಳಿದ ವಿಜಯೇಂದ್ರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಚಿತ್ರದುರ್ಗದಲ್ಲಿ PSI ಮೇಲೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣಕ್ಕೆ ಹಠಾತ್ ತಿರುವು ಸಿಕ್ಕಿದೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪೊಲೀಸ್ ಅಧಿಕಾರಿಯೇ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ… pic.twitter.com/zf5ZN3pk3J — Vijayendra Yediyurappa (@BYVijayendra) March 15, 2025ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣ...
BJPಗೆ ಒಲಿದ ಬೆಳಗಾವಿ ಗದ್ದುಗೆ; ಮೇಯರ್ ಆಗಿ ಮಂಗೇಶ ಪವಾರ, ಉಪ ಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆ

BJPಗೆ ಒಲಿದ ಬೆಳಗಾವಿ ಗದ್ದುಗೆ; ಮೇಯರ್ ಆಗಿ ಮಂಗೇಶ ಪವಾರ, ಉಪ ಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆ

Focus, ಪ್ರಮುಖ ಸುದ್ದಿ, ರಾಜ್ಯ
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಿಗಳು ಮೇಲುಗೈ ಸಾಧಿಸಿದ್ದಾರೆ. ಮೇಯರ್ ಆಗಿ ಬಿಜೆಪಿಯ ಮಂಗೇಶ ಪವಾರ ಹಾಗೂ‌ ಉಪಮೇಯರ್ ಆಗಿ ವಾಣಿ‌ ವಿಲಾಸ ಜೋಶಿ‌ ಆಯ್ಕೆಯಾಗಿದ್ದಾರೆ.40 ಸದಸ್ಯರನ್ನು ಹೊಂದಿರುವ ಬಿಜೆಪಿ ಮತ್ತೊಮ್ಮೆ ಪಾಲಿಕೆ‌ ಚುಕ್ಕಾಣಿ ‌ಹಿಡಿಯುವಲ್ಲಿ ಯಶಸ್ವಿಯಾಗಿದೆ. ಒಟ್ಟು 65 ಮತದಾರ ಪೈಕಿ 60 ಮಂದಿ ಚುನಾವಣಾ ಸಂದರ್ಭದಲ್ಲಿ ಹಾಜರಿದ್ದರು. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ ಜಾರಕಿಹೊಳಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್ ಹಾಗೂ ಓರ್ವ ಪಾಲಿಕೆ ಸದಸ್ಯ ಗೈರಾಗಿದ್ದರು....
‘ನಾನು ಮುಗ್ದೆ, ನನ್ನಿಂದ ಏನನ್ನೂ ವಶಪಡಿಸಿಲ್ಲ’: ತನಿಖಾಧಿಕಾರಿಗಳ ವಿರುದ್ಧ ರನ್ಯಾ ಗಂಭೀರ ಆರೋಪ

‘ನಾನು ಮುಗ್ದೆ, ನನ್ನಿಂದ ಏನನ್ನೂ ವಶಪಡಿಸಿಲ್ಲ’: ತನಿಖಾಧಿಕಾರಿಗಳ ವಿರುದ್ಧ ರನ್ಯಾ ಗಂಭೀರ ಆರೋಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ನಟಿ ರನ್ಯಾ ರಾವ್ ತಮ್ಮ ವಿರುದ್ದದ ಗೋಲ್ಡ್ ಸ್ಮಗ್ಲಿಂಗ್ ಕೇಸಿಗೆ ಹಠಾತ್ ತಿರುವು ನೀಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ರಾಣ್ಯಾರಾವ್ ಜೈಲಿನಿಂದಲೇ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಪತ್ರ ಬರೆದಿದಿದ್ದು ತಮ್ಮ ವಿರುದ್ದದ ಆರೋಪಗಳನ್ನು ಅಲ್ಲಗಳೆದಿದ್ದಾರೆ.ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮಾರ್ಚ್ 6 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ರನ್ಯಾರಾವ್, ಇತರ ಕೆಲ ಪ್ರಯಾಣಿಕರನ್ನು ರಕ್ಷಿಸಲು ನನ್ನನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ.'ಈ ಪ್ರಕರಣದಲ್ಲಿ ನಾನು ಮುಗ್ಧೆ, ನನ್ನಿಂದ ಏನನ್ನೂ ವಶಕ್ಕೆ ಪಡೆಯದಿದ್ದರೂ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ರನ್ಯಾ ರಾವ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಹೇಳಿದ್ದಾರೆ. ಅಧಿಕಾರಿಗಳು ಹೇಳಿದಂತೆ ಯಾವುದೇ ಮಹಜರ್ ಮಾಡಿಲ್ಲ ಅಥವಾ ಯಾವುದೇ ಶೋಧ ಕಾರ್ಯ ನಡೆದಿಲ್ಲ. ನನ್ನಿಂದ ಏನನ್ನೂ ವಶಕ್ಕೆ ಪಡೆದಿಲ್ಲ ಎಂದು ಅವರು ನಾಲ್ಕು ಪುಟಗಳ ಪತ್ರದಲ್ಲಿ ಬರೆದುಕೊಂಡಿದ್ದಾರೆ.ಬಂಧನವಾದಾಗಿನಿಂದ ನ್ಯಾಯಾಲಯಕ್ಕ...