Sunday, April 5

Author: info@rajasdigital.com

ಬಿಜೆಪಿ ಅಧ್ಯಕ್ಷರಿಂದ PSI ಮೇಲೆ ಹಲ್ಲೆ ಆರೋಪ

ಬಿಜೆಪಿ ಅಧ್ಯಕ್ಷರಿಂದ PSI ಮೇಲೆ ಹಲ್ಲೆ ಆರೋಪ

Focus, ಪ್ರಮುಖ ಸುದ್ದಿ, ರಾಜ್ಯ
ಚಿತ್ರದುರ್ಗ: ಚಿತ್ರದುರ್ಗ ನಗರ ಠಾಣೆ ಪಿಎಸ್​ಐ ಗಾದಿಲಿಂಗಪ್ಪ ಮೇಲೆ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ತುರುವನೂರು ರಸ್ತೆಯ ಖಾಸಗಿ ಹೋಟೆಲ್ ಬಳಿ ತಡರಾತ್ರಿ ರಸ್ತೆ ಮೇಲೆ ತುಮಕೂರು ಜಿಲ್ಲೆ ಮಧುಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತೇಗೌಡ ಗುಂಪಾಗಿ ನಿಂತಿದ್ದನ್ನು ಪಿಎಸ್​ಐ ಗಾದಿಲಿಂಗಪ್ಪ ಪ್ರಶ್ನಿಸಿದ್ದಾರೆ. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪಿಎಸ್​ಐ ಗಾದಿಲಿಂಗಪ್ಪ ಅವರ ಕೈ ಬೆರಳಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ನಡುವೆ, ಹಲ್ಲೆ ಆರೋಪದಲ್ಲಿ ಹನುಮಂತೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸರೇ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹನುಮಂತೇಗೌಡ ಆರೋಪಿಸಿದ್ದಾರೆ. ಇದೆಲ್ಲದರ ನಡುವೆ, ಬಿಜೆಪಿ ನಾಯಕ ಹನುಮಂತೇಗೌಡ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ....
‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

Focus, ಆಧ್ಯಾತ್ಮ, ದೇಗುಲ ದರ್ಶನ, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಗತ ವೈಭವ ಮರುಕಳಿಸಿದೆ. ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ 'ಪೊಳಲಿ ಚೆಂಡು' ಎಂದೇ ಇದು ಪ್ರತೀತಿ. ಈ ವರ್ಷ 28 ದಿನಗಳ ಜಾತ್ರೆ ನಡೆಯಲಿದ್ದು ಎಪಿಲ್ 9 ರಂದು 'ಕಡೆ ಚೆಂಡು' ನಿಗದಿಯಾಗಿದೆ.ಪೊಳಲಿ ಚೆಂಡು ಉತ್ಸವದ ಸಂಕ್ಷಿಪ್ತ ಕ್ಯಾಲೆಂಡರ್‌ ಹೀಗಿದೆ: ಈ ಬಾರಿ ಏಪ್ರಿಲ್ 4ರಂದು 20ನೇ ದಂಡಮಾಲೋತ್ಸವ, ಏಪ್ರಿಲ್ 5ರಂದು ಮೊದಲ ಚೆಂಡು, ಏಪ್ರಿಲ್ 9ರಂದು ಕಡೇ ಚೆಂಡು, ಏಪ್ರಿಲ್ 10ರಂದು ಬ್ರಹ್ಮ ರಥೋತ್ಸವ, ಏಪ್ರಿಲ್ 11ರಂದು ಆರಾಟ ಮಹೋತ್ಸವ ಜರುಗಲಿದೆ.ದಕ್ಷಿಣಕನ್ನಡದ ಪೊಳಲಿಯಲ್ಲಿರುವ ನಾಡಿನ ಅಧಿ ದೇವತೆ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಪ್ರತೀ ವರ್ಷ ಮಾರ್ಚ್ 14ರ ತಡರಾತ್ರಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ  ಎಷ್ಟು ದಿನಗಳ ಜಾತ್ರೆ ನಡೆಯುತ್ತದೆ ಎಂಬುದು ಘೋಷಣೆಯಾಗುವುದು. ಈ ಘೋಷಣೆಯನ್ನು ಕೇಳಲು ಇಡೀ ನಾಡು ಕಾತುರದಿಂದ ಕಾಯುತ್ತಿರುವುದೇ ವಿಶೇಷ. ಈ ಬ...
ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ

ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಕೆನಡಾ: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಪ್ರಮಾಣವಚನ ಸ್ವೀಕರಿಸಿದ್ದಾರೆ.My remarks outside of Rideau Hall. Mon allocution devant Rideau Hall. https://t.co/xqmwRmQwJ1 — Mark Carney (@MarkJCarney) March 14, 2025ಜನವರಿಯಲ್ಲಿ ರಾಜೀನಾಮೆ ಘೋಷಿಸಿದ್ದಜಸ್ಟಿನ್ ಟ್ರುಡೊ ಅವರ ಸ್ಥಾನವನ್ನು ಮಾರ್ಕ್ ಕಾರ್ನಿ ತುಂಬಿದ್ದಾರೆ.It is my honour to serve. Canada has given me everything. Now, I’m ready to give everything for Canada. pic.twitter.com/5OTBL7NzoF — Mark Carney (@MarkJCarney) March 14, 2025
ಭಾರತೀಯನಿಂದ ಗಿನ್ನೆಸ್ ದಾಖಲೆ: ಅತೀ ಹೆಚ್ಚು ಹೊತ್ತು ‘ಹರ್ಕ್ಯುಲಸ್ ಪಿಲ್ಲರ್’ ಹಿಡಿದುಟ್ಟುಕೊಂಡ ಖರಡಿ

ಭಾರತೀಯನಿಂದ ಗಿನ್ನೆಸ್ ದಾಖಲೆ: ಅತೀ ಹೆಚ್ಚು ಹೊತ್ತು ‘ಹರ್ಕ್ಯುಲಸ್ ಪಿಲ್ಲರ್’ ಹಿಡಿದುಟ್ಟುಕೊಂಡ ಖರಡಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ವೈವಿಧ್ಯ
ಭಾರತೀಯ ಅಥ್ಲೀಟ್ ವಿಸ್ಪಿ ಖರಡಿ ಅವರು ವಿಶ್ವದ ಅತೀ ದೊಡ್ಡ 'ಹರ್ಕ್ಯುಲಸ್ ಪಿಲ್ಲರ್ ಹೋಲ್ಡ್' ಅನ್ನು ಅತೀ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.Longest duration holding Hercules pillars (male) 💪⏱️ 2 mins 10.75 seconds by @VispyKharadi 🇮🇳 pic.twitter.com/JxFFSU4xGv — Guinness World Records (@GWR) March 13, 2025    ಗುಜರಾತ್‌ನ ಸೂರತ್‌ನಲ್ಲಿ ಹೊಸ ದಾಖಲೆಯ ಸನ್ನಿವೇಶ ನಡೆದಿದೆ. ಖರಡಿ ಅವರು 2 ನಿಮಿಷ 10.75 ಸೆಕೆಂಡುಗಳ ಕಾಲ ಬೃಹತ್ ಕಂಬಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ತಮ್ಮ ಅಸಾಧಾರಣ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.ಗ್ರೀಕ್ ವಾಸ್ತುಶಿಲ್ಪದಿಂದ ಪ್ರೇರಿತವಾದ ಈ ಕಂಬಗಳು 123 ಇಂಚು ಎತ್ತರ ಮತ್ತು 20.5 ಇಂಚು ವ್ಯಾಸವನ್ನು ಹೊಂದಿವೆ. ಇದು ಸುಮಾರು166.7 - 168.9 ಕೆಜಿ ತೂಕವಿದ್ದು, ಅವು ಮಾನವ ಸಹಿಷ್ಣುತೆ ಮತ್ತು ಕಚ್ಚಾ ಶಕ್ತಿಯ ಮಿತಿಗಳನ್ನು ಮೀರಿವೆ ಎಂದು ಹೇಳಲಾಗುತ್ತಿದೆ....
ಜಲಜೀವನ್ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರದ ಸರ್ಕಾರ: ಸಿ.ಟಿ.ರವಿ ಆಕ್ರೋಶ

ಜಲಜೀವನ್ ಯೋಜನೆ ಜಾರಿಗೆ ಇಚ್ಛಾಶಕ್ತಿ ತೋರದ ಸರ್ಕಾರ: ಸಿ.ಟಿ.ರವಿ ಆಕ್ರೋಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಜಲಜೀವನ್ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ. ವಿಧಾನಪರಿಷತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿ.ಟಿ.ರವಿ ಅವರು ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು.ಜಲಜೀವನ್ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ. 26,592 ಗ್ರಾಮಗಳು ರಾಜ್ಯದಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಿ,‌ ನೀರು ಸರಬರಾಜು ಆಗುತ್ತಿರುವ ಗ್ರಾಮಗಳ ಸಂಖ್ಯೆ 4,675. ಇನ್ನೂ 21,000 ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಆಗಿರುವ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ.… pic.twitter.com/6wBsR7EhgW — BJP Karnataka (@BJP4Karnataka) March 14, 2025ಜಲಜೀವನ್ ಯೋಜನೆ ಜಾರಿಗೆ ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲಎಂದು ವಾಗ್ದಾಳಿ ನಡೆಸಿದ ಅವರು, 26,592 ಗ್ರಾಮಗಳು ರಾಜ್ಯದಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಿ,‌ ನೀರು ಸರಬರಾಜು ಆಗುತ್ತಿರುವ ಗ್ರಾಮಗಳ ಸಂಖ್ಯೆ 4,675. ಇನ್ನೂ 21,000 ಕ್ಕೂ ಅಧಿಕ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ ಎಂ...
ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

Others
ನವದೆಹಲಿ: ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುವ ಮತ್ತು ಚಿಕಿತ್ಸೆಗೆ ನಿರೋಧಕವಾದ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗಳಲ್ಲಿ ಗೆಡ್ಡೆಯ ಬೆಳವಣಿಗೆಯನ್ನು ನಿಧಾನಗೊಳಿಸುವ ಹೊಸ ರೀತಿಯ ಪ್ರತಿಕಾಯವನ್ನು ವಿಜ್ಞಾನಿಗಳ ತಂಡವು ಸಂಶೋಧಿಸುತ್ತಿದೆ.IgG ಎನ್ನುವುದು ಸಾಮಾನ್ಯವಾಗಿ ಬಳಸುವ ಪ್ರತಿಕಾಯ ಚಿಕಿತ್ಸೆಯಾಗಿದ್ದು, ಇದು ಕ್ಯಾನ್ಸರ್ ವಿರುದ್ಧ ರೋಗಿಯ ಸ್ವಂತ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ - ಇದನ್ನು ಇಮ್ಯುನೊಥೆರಪಿ ಎಂದೂ ಕರೆಯುತ್ತಾರೆ. ಈ ಚಿಕಿತ್ಸೆಯನ್ನು ಕೀಮೋಥೆರಪಿ ಮತ್ತು ರೇಡಿಯೊಥೆರಪಿಗೆ ಪರ್ಯಾಯವಾಗಿ ಹೆಚ್ಚಾಗಿ ನೋಡಲಾಗುತ್ತಿರುವಾಗ, ಇದು ನಿರ್ದಿಷ್ಟವಾಗಿ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡಿರುವುದರಿಂದ, HER2 ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ಗಳಿರುವ ಕೆಲವು ರೋಗಿಗಳಲ್ಲಿ ಇದು ಯಾವಾಗಲೂ ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಪ್ರತಿರೋಧವನ್ನು ಅಭಿವೃದ್ಧಿಪಡಿಸಬಹುದು.ಇಂಗ್ಲಿಷ್ ಆವೃತ್ತಿಯಲ್ಲೂ ಓದಿ..ಯುಕೆಯ ಕಿಂಗ್ಸ್ ಕಾಲೇಜ್ ಲಂಡನ್‌ನ ತಂಡವು ವಿಭಿನ್ನ ಪ್ರತಿಕಾಯ ಪ್ರಕಾರವಾದ IgE ಅನ್ನು ತನಿಖ...
ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ಜಾಮೀನು ಅರ್ಜಿ ವಜಾ

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ಜಾಮೀನು ಅರ್ಜಿ ವಜಾ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.ನ್ಯಾಯಾಂಗ ಬಂಧನದಲ್ಲಿರುವ ರನ್ಯಾ ರಾವ್ ಜಾಮೀನು ಕೋರಿ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತಂತೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ನಾಟಿಗೆ ಜಾಮೀನು ಮಂಜೂರು ಮಾಡಲು ಕೋರ್ಟ್ ನಿರಾಕರಿಸಿದೆ.ಇನ್ನೊಂದೆಡೆ, ಮತ್ತೊಬ್ಬ ಆರೋಪಿ ತರುಣ್ ಕೂಡಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ....
VIDEO: ಕಾರು ಡಿಕ್ಕಿಹೊಡಿಸಿ ವ್ಯಕ್ತಿಯ ಕೊಲೆಗೆ ಯತ್ನ: ತಲೆಕೆಳಗಾಗಿ ಸಿಲುಕಿದ ಮಹಿಳೆ..

VIDEO: ಕಾರು ಡಿಕ್ಕಿಹೊಡಿಸಿ ವ್ಯಕ್ತಿಯ ಕೊಲೆಗೆ ಯತ್ನ: ತಲೆಕೆಳಗಾಗಿ ಸಿಲುಕಿದ ಮಹಿಳೆ..

Focus, Update Videos, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ಮಂಗಳೂರು: ಬಂದರು ನಗರಿ ಮಂಗಳೂರು ಆಘಾತಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಜಗಳವಾಡುತ್ತಿದ್ದ ನೆರಮನೆಯವನನ್ನು ಕೊಳ್ಳಲು ಹೋಗಿ ಮಹಿಳೆಯ ಪ್ರಾಣಕ್ಕೆ ಸಂಚಕಾರ ತಂದ ವ್ಯಕ್ತಿ ಇದೀಗ ಜೈಲು ಸೇರಿದ್ದಾನೆ.A retired #BSNL employee in #Karnataka’s #Mangaluru has been arrested for allegedly attempting to murder his neighbour by intentionally ramming his car into the latter’s motorcycle amid a longstanding dispute. The accused, 69-year-old #SatishKumarKM, a resident of #Bejai, was… pic.twitter.com/ssdpJxwEvF— Hate Detector 🔍 (@HateDetectors) March 14, 2025ಮಂಗಳೂರಿನ ಬಿಜೈ ಸಮೀಪದ ಕಾಪಿಕಾಡ್ ಬಳಿ ನಿವೃತ್ತ BSNL ಅಧಿಕಾರಿ ಎನ್ನಲಾದ ಸತೀಶ್ ಕುಮಾರ್ ಎಂಬವರು ತಮ್ಮ ನೆರೆಮನೆಯ ವ್ಯಕ್ತಿಯ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.  ತನ್ನ ಎದುರಾಳಿ ವ್ಯಕ್ತಿ ಬೈಕ್ ನಲ್ಲಿ ಬರುವುದನ್ನೇ ಕಾರಿನಲ್ಲಿ ಕುಳಿತು ಕಾಯುತ್ತಿದ್ದ ಸತೀಶ್ ಕುಮಾರ್, ಆತ ಬೈಕಿನಲ್ಲಿ ಬರುತ್ತಿದ್ದಂತೆಯೇ ಅತಿ ವೇಗದಲ್ಲಿ ಕಾರು ಚಲಾಯಿ...
ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಬೈಕ್ ಡಿಕ್ಕಿ: ಗಂಭೀರ ಗಾಯ

ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಬೈಕ್ ಡಿಕ್ಕಿ: ಗಂಭೀರ ಗಾಯ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಚಿತ್ರದುರ್ಗ: ವಿಧಾನ ಸಭೆಯ ಉಪಸಭಾಪತಿ ಹಾಗೂ ಹಾವೇರಿ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಅವರು ಅಪಘಾತದಲ್ಲಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರಕ್ಕೆ ಕಾರಿನಲ್ಲಿ ತೆರಳಿದ್ದ ಅವರು ಮಾರ್ಗಮಧ್ಯೆ ಅಪಘಾತಕ್ಕೀಡಾಗಿದ್ದಾರೆ. ಶುಕ್ರವಾರ ಬೆಂಗಳೂರಿಂದ ಹಾವೇರಿಗೆ ತೆರಳುತ್ತಿದ್ದ ವೇಳೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಅವರು ಇಳಿದಿದ್ದರು. ಆ ವೇಳೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರುದ್ರಪ್ಪ ಲಮಾಣಿ ಅವರು ನೆಲಕ್ಕೆ ಬಿದ್ದಿದ್ದು, ಅವರ ಹಣೆ, ಹಲ್ಲು ಮತ್ತು ಮೊಣಕಾಲಿಗೆ ಬಲವಾದ ಏಟು ತಗುಲಿದೆ. ತಕ್ಷಣಕ್ಕೆ ಹಿರಿಯೂರಿನಲ್ಲಿ ಚಿಕಿತ್ಸೆ ನೀಡಿ ಅವರನ್ನು ದಾವಣಗೆರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.Deputy speaker of state legislative assembly #Rudrappa #Lamani suffered injuries when he was returning from a short break at Javanagondana...
‘ಈಜಿಪುರ ಮೇಲ್ಸೇತುವೆ’ ಕಾಮಗಾರಿಗೆ : ಸಚಿವ ರಾಮಲಿಂಗಾ ರೆಡ್ಡಿ ತಾಕೀತು ಬೆನ್ನಲ್ಲೇ ಬಿಬಿಎಂಪಿ ಮಹತ್ವದ ಆದೇಶ

‘ಈಜಿಪುರ ಮೇಲ್ಸೇತುವೆ’ ಕಾಮಗಾರಿಗೆ : ಸಚಿವ ರಾಮಲಿಂಗಾ ರೆಡ್ಡಿ ತಾಕೀತು ಬೆನ್ನಲ್ಲೇ ಬಿಬಿಎಂಪಿ ಮಹತ್ವದ ಆದೇಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕೋರಮಂಗಲದ 'ಈಜಿಪುರ ಮೇಲ್ಸೇತುವೆ' ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.ತಾವು ಪ್ರತಿನಿಧುಸುತ್ತಿರುವ ಬೆಂಗಳೂರಿನ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವ ರಾಮಲಿಂಗಾ ರೆಡ್ಡಿ, ಕೋರಮಂಗಲದ ಈಜಿಪುರ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಲು ಪ್ರತ್ಯೇಕ ಅಭಿಯಂತರರ ತಂಡ ರಚಿಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಬಿ.ಎಂ.ಪಿ ಮುಖ್ಯ ಆಯುಕ್ತರ ಆದೇಶ ಹೊರಬಿದ್ದಿದೆ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದ "ಈಜಿಪುರ ಮೇಲ್ವೇತುವ ಯೋಜನೆ' ಕಾಮಗಾರಿಯನ್ನು ಪ್ರಸ್ತುತ ಯೋಜನೆ-ಕೇಂದ್ರ ವಿಭಾಗದಿಂದ ನಿರ್ವಹಿಸಲಾಗುತ್ತಿರುತ್ತದೆ. ಈಜಿಪುರ ಮೇಲ್ಸೇತುವೆ ಕಾಮಗಾರಿ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಶೀಘ್ರವಾಗಿ ಪೂರ್ಣಗೊಳಿಸಿ ಅನುಷ್ಠಾನಗೊಳಿಸಬೇಕೆಂದು ಸಚಿವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿ.ಬಿ.ಎಂ.ಪಿ ಯ ಮುಖ್ಯ ಆಯುಕ್ತರು, ಇನ್ನು ಮುಂದೆ ಕೇ...