Wednesday, April 15

Author: info@rajasdigital.com

ಕಾಂಗ್ರೆಸ್‌ ಹೈಕಮಾಂಡ್‌ಗೆ ಧಮ್‌ ಇದ್ದರೆ ಡಿ.ಕೆ.ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ: ಅಶೋಕ್

ಕಾಂಗ್ರೆಸ್‌ ಹೈಕಮಾಂಡ್‌ಗೆ ಧಮ್‌ ಇದ್ದರೆ ಡಿ.ಕೆ.ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ: ಅಶೋಕ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಈಶ ಫೌಂಡೇಶನ್‌ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಭಾಗವಹಿಸಿರುವ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಅಸಮಾಧಾನ ಕಂಡುಬಂದಿದೆ. ಡಿಕೆಶಿ ನಡೆಯನ್ನು ಬಿಜೆಪಿ ನಾಯಕರು ಸ್ವಾಗತಿಸಿದರೆ, ಕಾಂಗ್ರೆಸ್ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ.ಕಾಂಗ್ರೆಸ್ ನಾಯಕರ ನಿಲುವಿನ ಬಗ್ಗೆ ಟೀಕಿಸಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್‌ ಹೈಕಮಾಂಡ್‌ಗೆ ಧಮ್‌ ಇದ್ದರೆ ಡಿ.ಕೆ.ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ ಎಂದು ಸವಾಲು ಹಾಕಿದ್ದಾರೆ.ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಅವರು, ಡಿ.ಕೆ.ಶಿವಕುಮಾರ್‌ ಕುಂಭಮೇಳಕ್ಕೆ ಹೋದಾಗ ಕಾಂಗ್ರೆಸ್‌ ಹೈಕಮಾಂಡ್‌ ಏನೂ ಮಾಡಲಿಲ್ಲ. ಪ್ರಧಾನಿಯನ್ನು ಭೇಟಿ ಮಾಡಿದಾಗಲೂ ಏನೂ ಮಾಡಲಿಲ್ಲ. ಉತ್ತರಪ್ರದೇಶದ ಮುಖ್ಯಮಂತ್ರಿಯನ್ನು ಹಾಡಿ ಹೊಗಳಿದರೂ ಸುಮ್ಮನಿದ್ದರು. ಇತ್ತೀಚೆಗೆ ಈಶ ಫೌಂಡೇಶನ್‌ಗೆ ಹೋಗಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಧಮ್‌ ಇದ್ದರೆ ಡಿ.ಕೆ.ಶಿವಕುಮಾರ್‌ ಅವರನ್ನು ಅಮಾನತು ಮಾಡಲಿ ಎಂದರು. ನಾವ್ಯಾರೂ ಡಿ.ಕೆ.ಶಿವಕುಮಾರ್‌ ಅವರನ್ನು ಪಕ್ಷಕ್ಕೆ ಆಹ್ವಾನಿಸಿಲ್ಲ ಎಂದು ಅಶೋಕ್ ಹೇಳಿದರು. ...
ತೆಲುಗು, ಹಿಂದಿಯಲ್ಲೂ ‘ಕಣ್ಣಪ್ಪ’: ಟೀಸರ್ ಬಗ್ಗೆ ಭಾರೀ ಮೆಚ್ಚುಗೆ

ತೆಲುಗು, ಹಿಂದಿಯಲ್ಲೂ ‘ಕಣ್ಣಪ್ಪ’: ಟೀಸರ್ ಬಗ್ಗೆ ಭಾರೀ ಮೆಚ್ಚುಗೆ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಕನ್ನಡದ ‘ಬೇಡರ ಕಣ್ಣಪ್ಪ’ ಸಿನಿಮಾ ಒಂದು ಇತಿಹಾಸ. ಇದೀಗ ಅದೇ ಕತೆಯನ್ನು ಹೋಲುವಂತೆ ತೆಲುಗಿನಲ್ಲೂ ಸಿನಿಮಾ ಮಾಡಲಾಗುತ್ತಿದೆ. ‘ಕಣ್ಣಪ್ಪ’ ಹೆಸರಿನ ತೆಲುಗು ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಶನಿವಾರ ಬಿಡುಗಡೆ ಆಗಿದೆ.https://www.youtube.com/watch?v=wKBP9dFxFBcಹಿಂದಿ ಭಾಷೆಯಲ್ಲೂ ಟೀಸರ್ ಅನಾವರಣ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕತ್ತಾಗಿ ಸದ್ದುಮಾಡುತ್ತಿದೆ. ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ದೇವರಾಜ್  ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.https://www.youtube.com/watch?v=_R66K_KnNeg ...
‘ಶಿಕ್ಷಣ ಎಂದರೆ ವ್ಯಾಪಾರವಲ್ಲ’: ವಿವಿ ಮುಚ್ಚುವ ನಿರ್ಧಾರಕ್ಕೆ ಆಕ್ಷೇಪ

‘ಶಿಕ್ಷಣ ಎಂದರೆ ವ್ಯಾಪಾರವಲ್ಲ’: ವಿವಿ ಮುಚ್ಚುವ ನಿರ್ಧಾರಕ್ಕೆ ಆಕ್ಷೇಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಡ್ಯ: ವಿಶ್ವವಿದ್ಯಾಲಯಗಳಿಂದ ಲಾಭ ಬರುತ್ತಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ. ಕಾಂಗ್ರೆಸ್‌ ಸರ್ಕಾರ ಭಿಕ್ಷೆ ಬೇಡುವ ಸ್ಥಿತಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಡ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ಹೊಸ 9 ವಿಶ್ವವಿದ್ಯಾಲಯಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅದನ್ನು ಕಿತ್ತುಕೊಂಡಿದೆ. ವಿವಿಗಳನ್ನು ಮುಚ್ಚಲು ರೂಪಿಸಿದ ವರದಿಯಲ್ಲಿ ವಿವಿಗಳು ಲಾಭದಾಯಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದಲೂ ಆದಾಯ ಬರಬೇಕು ಎಂಬುದು ಸರ್ಕಾರ ಉದ್ದೇಶ. ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಭಿಕ್ಷೆ ಬೇಡುತ್ತಿದ್ದಾರೆ. ಈ ಬಾರಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಅತ್ಯಧಿಕ ಸಾಲ ಮಾಡಿದ್ದಾರೆ ಎಂದು ದೂರಿದರು.ಒಂದು ಜಿಲ್ಲೆಯಲ್ಲಿ ಒಂದು ವಿಶ್ವವಿದ್ಯಾಲಯವಿದ್ದರೆ ಆ ಜಿಲ್ಲೆ ಶಿಕ್ಷಣದಲ್ಲಿ ಸ್ವಾವಲಂಬಿಯಾಗುತ್...
ಆಶಾ ಕಾರ್ಯಕರ್ತರಿಗೆ ನಿವೃತ್ತಿ ಸೌಲಭ್ಯ.. ವೇತನ ಸಹಿತ 180 ದಿನ ಹೆರಿಗೆ ರಜೆ, ವೇತನವೂ ಮಾಸಿಕ 10,000; ಇದು ಆಂಧ್ರಪ್ರದೇಶ ಸರ್ಕಾರದ ಘೋಷಣೆ

ಆಶಾ ಕಾರ್ಯಕರ್ತರಿಗೆ ನಿವೃತ್ತಿ ಸೌಲಭ್ಯ.. ವೇತನ ಸಹಿತ 180 ದಿನ ಹೆರಿಗೆ ರಜೆ, ವೇತನವೂ ಮಾಸಿಕ 10,000; ಇದು ಆಂಧ್ರಪ್ರದೇಶ ಸರ್ಕಾರದ ಘೋಷಣೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಅಮರಾವತಿ: ಅರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಆಂಧ್ರಪ್ರದೇಶದ ಎನ್‌ಡಿಎ ಸರ್ಕಾರವು ಗ್ರಾಚ್ಯುಟಿ ಘೋಷಿಸಿದೆ. ನಿವೃತ್ತಿ ವಯಸ್ಸನ್ನು 60 ರಿಂದ 62 ವರ್ಷಗಳಿಗೆ ಹೆಚ್ಚಿಸಿರುವ ಸರ್ಕಾರ ಹಲವು ಸೌಲಭ್ಯಗಳನ್ನೂ ಘೋಷಿಸಿದೆ.ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶನಿವಾರ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ) ಕಾರ್ಯಕರ್ತರಿಗೆ ಗ್ರಾಚ್ಯುಟಿ ಪಾವತಿಸಲು ಹಸಿರು ನಿಶಾನೆ ತೋರಿಸಿದ್ದಾರೆ. 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ನಿವೃತ್ತಿಯ ಸಮಯದಲ್ಲಿ ಪ್ರತಿಯೊಬ್ಬರಿಗೂ 1.5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ.ಆಶಾ ಕಾರ್ಯಕರ್ತರಿಗೆ ಗ್ರಾಚ್ಯುಟಿ ಪಾವತಿಸುವ ದೇಶದ ಮೊದಲ ಮತ್ತು ಏಕೈಕ ರಾಜ್ಯ ಆಂಧ್ರಪ್ರದೇಶವಾಗಲಿದೆ ಎಂದು ಹೇಳಲಾಗುತ್ತಿದೆ.ಮೊದಲ ಎರಡು ಹೆರಿಗೆಗಳಿಗೆ 180 ದಿನಗಳವರೆಗೆ ಪಾವತಿಸಿದ ಹೆರಿಗೆ ರಜೆಯನ್ನು ಸರ್ಕಾರ ಘೋಷಿಸಿದೆ. ಈ ಪರಿಹಾರಗಳು ರಾಜ್ಯಾದ್ಯಂತ 42,752 ಆಶಾ ಕಾರ್ಯಕರ್ತರಿಗೆ ಪ್ರಯೋಜನವನ್ನು ನೀಡಲಿವೆ. ಗ್ರಾಮೀಣ ಪ್ರದೇಶಗಳಲ್ಲಿ 37,017 ಕಾರ್ಮಿಕರಿದ್ದರೆ, ನಗರ ಪ್ರದೇಶಗಳಲ್ಲಿ 5,735 ಕಾರ್ಮಿಕರಿದ್ದಾರೆ. ಇವರ ಬೇಡಿ...
ವಿದ್ಯಾರ್ಥಿ ನಾಪತ್ತೆ ಪ್ರಕರಣ: ಮಂಗಳೂರು ಹೊರವಲಯದಲ್ಲಿ VHP ಪ್ರತಿಭಟನೆ

ವಿದ್ಯಾರ್ಥಿ ನಾಪತ್ತೆ ಪ್ರಕರಣ: ಮಂಗಳೂರು ಹೊರವಲಯದಲ್ಲಿ VHP ಪ್ರತಿಭಟನೆ

Others
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಇಂದು ಭಾರೀ ಪ್ರತಿಭಟನೆಗೆ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಮಂಗಳೂರು ಹೊರವಲಯದ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌, ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ಹಮ್ಮಿಕೊಂಡಿತ್ತು.ಬಾಲಕ ನಾಪತ್ತೆಯಾಗಿ ಐದು‌ ದಿನ ಕಳೆದರೂ ಆತನ ಸುಳಿವು ಸಿಕ್ಕಿಲ್ಲ. ನಾಪತ್ತೆಯಾದ ವಿದ್ಯಾರ್ಥಿ ದಿಗಂತ್​ನನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಹೋರಾಟಕ್ಕಿಳಿದಿವೆ. ವಿಶ್ವ ಹಿಂದೂ ಪರಿಷತ್ ನೀಡಿರುವ ಹೋರಾಟವನ್ನು ಬೆಂಬಲಿಸಿ ಹಲವು ಅಂಗಡಿ ಮಾಲೀಕರು ವಹಿವಾಟು ಸ್ಥಗಿತ ಗೊಳಿಸಿದ್ದರು. ಇದರಿಂದಾಗಿ ಶನಿವಾರ ಬೆಳಿಗ್ಗೆ ಫರಂಗಿಪೇಟೆ ಪಟ್ಟಣದಲ್ಲಿ ಅಘೋಷಿತ ಬಂದ್ ವಾತಾವರಣ ಕಂಡುಬಂತು.ಮಂಗಳೂರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ದಿಗಂತ್, ಫೆ.25ರಂದು ರಾತ್ರಿ 7 ಗಂಟೆ ಸುಮಾರಿಗೆ ಫರಂಗಿಪೇಟೆ ಅಂಜನೇಯ ವ್ಯಾಯಮ ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ. ಆದರೆ ಮತ್ತೆ ವಾಪಾಸ್ ಆಗಿಲ್ಲ. ಸಮೀಪದ ರೈಲ್ವೆ ಹಳಿಯಲ್ಲಿ ದಿಗಂತ್...
ಕೊಳ್ಳೇಗಾಲ ಬಳಿ ಭೀಕರ ಅಪಘಾತ: ಐವರು ದುರ್ಮರಣ

ಕೊಳ್ಳೇಗಾಲ ಬಳಿ ಭೀಕರ ಅಪಘಾತ: ಐವರು ದುರ್ಮರಣ

Focus, ಪ್ರಮುಖ ಸುದ್ದಿ, ರಾಜ್ಯ
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಿಂದುವಾಡಿ ಬಳಿಯ ಮುಖ್ಯರಸ್ತೆಯಲ್ಲಿ ಕಾರು ಮತ್ತು ಟಿಪ್ಪರ್ ನಡುವೆ ಈ ಅಪಘಾತ ಸಂಭವಿಸಿದೆ.ಕಾರಿನಲ್ಲಿದ್ದ ಮೂವರು ಪುರುಷರು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಇವರೆಲ್ಲರೂ ಮಂಡ್ಯ ಮೂಲದವರು ಎನ್ನಲಾಗಿದ್ದು, ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಇವರು ಕಾರಿನಲ್ಲಿ ತೆರಳುತ್ತಿದ್ದರು ಎಂದು ಎನ್ನಲಾಗಿದೆ....
ಕಮಲ ಪಾಳಯದಲ್ಲಿ ತಳಮಳ: BJPಯನ್ನು ಇಬ್ಬಾಗ ಮಾಡುತ್ತಾ ನಾಯಕರ ಬಣ ಬಡಿದಾಟ

ಕಮಲ ಪಾಳಯದಲ್ಲಿ ತಳಮಳ: BJPಯನ್ನು ಇಬ್ಬಾಗ ಮಾಡುತ್ತಾ ನಾಯಕರ ಬಣ ಬಡಿದಾಟ

Others
ಬೆಂಗಳೂರು: ರಾಜ್ಯ ಕಮಲ ಪಾಳಯದಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಈ ವರೆಗೂ ಆಡಳಿತ ಪಕ್ಷದ ವಿರುದ್ಧ ರಣಕಹಳೆ ಮೊಳಗಿಸುತ್ತಿದ್ದ ಬಿಜೆಪಿಗರು ಇದೀಗ ತಮ್ಮ ಪಕ್ಷದೊಳಗೆ ಬಣ ಬಡಿದಾಟದಲ್ಲಿ ತೊಡಗಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಜನರೆದುರು ಕೊಂಡೊಯ್ದು ಜಿಲ್ಲಾ-ತಾಲೂಕು ಪಂಚಾಯ್ತಿ ಚುನಾವಣೆಗೆ ರಣತಂತ್ರ ರೂಪಿಸಬೇಕಿದ್ದ ನಾಯಕರು ತಮ್ಮ ಬಣದ ಬಲಪ್ರದರ್ಶನಕ್ಕೆ ಮುಂದಾಗುವ ಅನಿವಾರ್ಯತೆ ಸೃಷ್ಟಿಯಾಗಿರುವುದು ರಾಜ್ಯ ರಾಜಕಾರಣದ ಅಚ್ಚರಿ.ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಬಣ ಪ್ರಯತ್ನ ನಡೆಸುತ್ತಿದೆ. ಬಿಜೆಪಿಯೊಳಗಿನ ಕುಟುಂಬ ರಾಜಕಾರಣದ ವಿರುದ್ಧ ಸಮರ ಸಾರಿರುವ ಯತ್ನಾಳ್ ಬಣ ನಿರಂತರ ಚಟುವಟಿಕೆಗಳಲ್ಲಿ ತೊಡಗಿದೆ. ಇದೇ ವೇಳೆ ಯತ್ನಾಳ್ ಬಣಕ್ಕೆ ಸೆಡ್ಡು ಹೊಡೆಯಲು ವಿಜಯೇಂದ್ರ ಬೆಂಬಲಿಗರು ನಡೆಸುತ್ತಿರುವ ಕಾರ್ಯತಂತ್ರವು ಪಕ್ಷವನ್ನೇ ಇಬ್ಬಾಗದತ್ತ ಕೊಂಡೊಯ್ದಿತೇ ಎಂಬ ಆತಂಕವನ್ನು ಹುಟ್ಟುಹಾಕಿದೆ.BSY ಬಣದಿಂದ ಪ್ರತ್ಯೇಕ ಲಿಂಗಾಯತ ಸಭೆ: BJPಯೊಳಗೆ ಶಕ್ತಿ ಪ್ರದರ್ಶನ ಯತ್ನಾಳ್ ಬಣಕ್ಕೆ ಸೆಡ್ಡುಹೊಡೆಯಲು ಮುಂದಾಗಿರುವ ವಿಜಯೇಂದ್ರ, ತಾನು ಲಿಂಗಾಯತ ನಾಯಕ, ...
ಉತ್ತರಾಖಂಡದ ಚಮೋಲಿಯಲ್ಲಿ ಹಿಮಪಾತ: ಭಯಾನಕ ದೃಶ್ಯ

ಉತ್ತರಾಖಂಡದ ಚಮೋಲಿಯಲ್ಲಿ ಹಿಮಪಾತ: ಭಯಾನಕ ದೃಶ್ಯ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿ ಹಿಮಪಾತ ಆತಂಕದ ಸನ್ನಿವೇಶ ಸೃಷ್ಟಿಸಿದೆ. ಚಮೋಲಿ ಜಿಲ್ಲೆಯ ಮಾನಾ ಬಳಿ ಶುಕ್ರವಾರ ಹಿಮಪಾತ ಸಂಭವಿಸಿದ್ದು, ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿದ್ದ ಅನೇಕ ಕಾರ್ಮಿಕರು ಹಿಮಪಾತದಲ್ಲಿ ಸಿಲುಕಿದ್ದರು. ಈ ಹಿಮಪಾತದ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. At least 57 BRO workers are missing after the deadly avalanche in Chamoli, Uttarakhand. Prayers for their safety. (Representative Video) pic.twitter.com/LNtbk65UKM— Baba Banaras™ (@RealBababanaras) February 28, 2025...
ಕರ್ನಾಟಕದಲ್ಲಿ ತಯಾರಾಗುವ ಎಲ್ಲಾ ಉತ್ಪನ್ನಗಳು ಇನ್ನು ‘ಕನ್ನಡಮಯ’

ಕರ್ನಾಟಕದಲ್ಲಿ ತಯಾರಾಗುವ ಎಲ್ಲಾ ಉತ್ಪನ್ನಗಳು ಇನ್ನು ‘ಕನ್ನಡಮಯ’

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳು ತಮ್ಮ ಕಂಪನಿಯ ಹೆಸರು ಮತ್ತು ಬಳಕೆಯ ಸೂಚನೆಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಸಿಎಂ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 15 ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಸೇವೆಗಳು ಮತ್ತು ಸಮನ್ವಯ) ಅಧೀನ ಕಾರ್ಯದರ್ಶಿ ಕೆ. ಉಮಾದೇವಿ ಅವರು ಸುತ್ತೋಲೆಯನ್ನು ಹೊರಡಿಸಿದ್ದಾರೆ.ಸುತ್ತೋಲೆಯಲ್ಲಿ, ಕರ್ನಾಟಕ ಸರ್ಕಾರವು ಮಾರ್ಚ್ 12, 2024 ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ, 2022 ನ್ನು ಅನಿಷ್ಠಾನಕ್ಕೆ ತಂದಿದೆ. ಅದರಂತೆ ಭಾಷೆಯ ಬೆಳವಣಿಗೆಗೆ ಉತ್ಪಾದನೆ, ಮಾರುಕಟ್ಟೆ ಮತ್ತು ವಹಿವಾಟುಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸುವುದು ಅತ್ಯಗತ್ಯ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.ಕಾಯ್ದೆಯ ಸೆಕ್ಷನ್ 17 (7) ರ ಅಡಿಯಲ್ಲಿ ರಾಜ್ಯದೊಳಗೆ ಉತ್ಪಾದಿಸುವ ಮತ್ತು ಮಾರಾಟ ಮಾಡುವ ಎಲ್ಲಾ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳು ಇತರ ಭಾಷೆಗಳೊಂದಿಗೆ ತಮ್ಮ ಹೆಸರು ಮತ್ತು ಬಳಕೆದಾರ ಸೂಚನೆಗಳನ್ನು ಕನ್ನಡದಲ್ಲಿ ಮುದ್ರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲ...
ಕಟೀಲು, ಕಾಪು ಯಾತ್ರೆಯ ನಡುವೆ ‘ಶಿಲ್ಪ’ ಸುಂದರಿ.. ‘ತುಳು ನಾಡಿನ’ ಸೊಗಸಿಗೆ ಸಾಕ್ಷಿಯಾದ ಬಾಲಿವುಡ್ ತಾರೆ

ಕಟೀಲು, ಕಾಪು ಯಾತ್ರೆಯ ನಡುವೆ ‘ಶಿಲ್ಪ’ ಸುಂದರಿ.. ‘ತುಳು ನಾಡಿನ’ ಸೊಗಸಿಗೆ ಸಾಕ್ಷಿಯಾದ ಬಾಲಿವುಡ್ ತಾರೆ

Others
ಮಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಂಗಳೂರು ಬಳಿಯ ಪ್ರಸಿದ್ಧ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಉಡುಪಿ ಜಿಲ್ಲೆಯ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ತಮ್ಮ ಸಹೋದರಿ ಬಾಲಿವುಡ್ ನಟಿ ಶಮಿತಾ ಶೆಟ್ಟಿ ಸೇರಿದಂತೆ ಕುಟುಂಬದೊಂದಿಗೆ ಭೇಟಿ ನೀಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು. ಶುಕ್ರವಾರ ಅವರು ಈ ಕ್ಷೇತ್ರ ಪರ್ಯಟನೆ ಕೈಗೊಂಡಿದ್ದು, ಈ ಕುರಿತ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.ದೇವಾಲಯ ಭೇಟಿ ಸಮಯದಲ್ಲಿ ಶಿಲ್ಪಾ ಶೆಟ್ಟಿ, ಅವರ ತಾಯಿ ಸುನಂದಾ ಶೆಟ್ಟಿ, ಅವರ ಮಕ್ಕಳಾದ ವಿಯಾನ್ ಮತ್ತು ಸಮಿಶಾ ಮತ್ತು ಅವರ ಸಹೋದರಿ ಶಮಿತಾ ಶೆಟ್ಟಿ ಪ್ರದರ್ಶಿಸಿದ ಸರಳತೆ ಮತ್ತು ಭಕ್ತಿ ಅಭಿಮಾನಿಗಳು ಮತ್ತು ಸ್ಥಳೀಯರ ಹೃದಯಗಳನ್ನು ಗೆದ್ದಿದೆ. ಶಿಲ್ಪಾ ಶೆಟ್ಟಿ ಕುಟುಂಬವು ಮೊದಲು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿತು.ಚೂಡಿದಾರ್ ಧರಿಸಿದ್ದ ನಟಿ ತನ್ನ ನೇಟಿವಿಟಿಗೆ ತಕ್ಕಂತೆ ಮಲ್ಲಿಗೆ ಹೂವು ಮುಡಿದು ಪಕ್ಕ ತುಳು ಸಂಪ್ರದಾಯ ಅನುಸರಿಸಿದರು. ಪೂಜಾ ಸಾಮಗ್ರಿಗಳೊಂದಿಗೆ ತಟ್ಟೆಯನ್ನು ಹೊತ್ತುಕೊಂಡು ದೇವಾಲಯವನ್ನು ಪ್ರವೇಶಿಸಿದ ವೈಖರಿಯೂ ...