Saturday, April 18

Author: info@rajasdigital.com

ಗಣರಾಜ್ಯೋತ್ಸವ: ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

ಗಣರಾಜ್ಯೋತ್ಸವ: ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಈ ಬಾರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕರ್ನಾಟಕದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.ವಿಶಿಷ್ಟ ಸೇವೆಗಾಗಿ KSRP DIGP ಬಸವರಾಜ್ ಶರಣಪ್ಪ ಜಿಳ್ಳೆ, ಮತ್ತು ಕೆಎಸ್ ಆರ್ ಪಿ ತುಮಕೂರಿನ ಕಮಾಂಡೆಂಟ್ ಹಂಜಾ ಹುಸೇನ್ ಅವರಿಗೆ ರಾಷ್ಟ್ರಪತಿ ಪದಕ ಪ್ರಕಟಿಸಲಾಗಿದೆ. ಪ್ರಶಸ್ತಿ ಪುರಸ್ಕೃತರು:ಬೆಂಗಳೂರಿನ DCRI DIGP ರೇಣುಕಾ ಕೆ ಸುಕುಮಾರ, ಎಐಜಿಪಿ ಸಂಜೀವ ಎಂ. ಪಾಟೀಲ್,  IRI ಕಮಾಂಡೆಂಟ್ ಬಿ.ಎಂ.ಪ್ರಸಾದ್, ಕೆಎಸ್ ಆರ್ ಪಿ ಡೆಪ್ಯೂಟಿ ಕಮಾಂಡೆಂಟ್ ವೀರೇಂದ್ರ ನಾಯಕ್, ಬೆಂಗಳೂರು ಸಿಸಿಬಿಯ ಗೋಪಾಲ ಡಿ ಜೋಗಿನ, ಡಿವೈಎಸ್ ಪಿ ಗೋಪಾಲಕೃಷ್ಣ ಬಿ ಗೌಡರ್, ಚಿತ್ರದುರ್ಗದ ಲೋಕಾಯುಕ್ತ ಇನ್ಸ್ ಪೆಕ್ಟರ್ ಹೆಚ್. ಗುರು ಬಸವರಾಜ , ಬೆಂಗಳೂರಿನ ಇನ್ಸ್ ಪೆಕ್ಟರ್ ಹೆಚ್. ಜಯರಾಜ್, ಹಾಸನದ ಇನ್ಸ್ ಪೆಕ್ಟರ್ ಪ್ರದೀಪ್, ಬೆಂಗಳೂರು ಸಿಸಿಪಿ ಇನ್ಸ್ ಪೆಕ್ಟರ್ ಮೊಹಮ್ಮದ್ ಮುಕರಮ್, ಇನ್ಸ್ ಪೆಕ್ಟರ್ ಎಂ.ಎ. ವಸಂತ್ ಕುಮಾರ್, ಸಿಐಡಿ ಎಎಸ್ ಐ ಮಂಜುನಾಥ್, ವಿಲ್ಸನ್ ಗಾರ್ಡನ್ ಎಎಸ್ ಐ ಅಲ್ತಾಪ್ ಹುಸೇನ್, ಕೆ.ಎಸ್. ಆರ್.ಪಿ ಬಲೇಂದ್ರನ್, ಕಲಬುರಗಿ ಡಿಐಜ...
ಫೈರ್ ಬ್ರಾಂಡ್ ಜಗದೀಶ್ ಬಂಧನ; ಅಕ್ರಮ ‘ಫೈರಿಗ್’ ಕೇಸಲ್ಲಿ ಅರೆಸ್ಟ್

ಫೈರ್ ಬ್ರಾಂಡ್ ಜಗದೀಶ್ ಬಂಧನ; ಅಕ್ರಮ ‘ಫೈರಿಗ್’ ಕೇಸಲ್ಲಿ ಅರೆಸ್ಟ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು:​ ಕನ್ನಡ 'ಬಿಗ್​ ಬಾಸ್' ಸ್ಪರ್ಧಿಯಾಗಿದ್ದ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಕೊಡಿಗೇಹಳ್ಳಿ ಬಳಿ ಶುಕ್ರವಾರ ನಡೆದ ಗಲಾಟೆ ಪ್ರಕರಣದಲ್ಲಿ ಪೊಲೀಸರು ಜಗದೀಶ್, ಜಗದೀಶ್, ಅವರ ಮಗ ಆರ್ಯನ್ ಹಾಗೂ ಇಬ್ಬರು ಗನ್ ಮ್ಯಾನ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.ಶುಕ್ರವಾರ ಗಲಾಟೆ ಸಂದರ್ಭದಲ್ಲಿ ಗನ್​ಮ್ಯಾನ್​ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು​ ಜಗದೀಶ್​ ಸಹಿತ ಹಲವರನ್ನು ಬಂಧಿಸಿದ್ದಾರೆ....
ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಒಂದು ಸಾವಿರ ರೋಬೋಟಿಕ್ ಶಸ್ತ್ರಚಿಕಿತ್ಸೆ ಸಾಧನೆ

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ಒಂದು ಸಾವಿರ ರೋಬೋಟಿಕ್ ಶಸ್ತ್ರಚಿಕಿತ್ಸೆ ಸಾಧನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
ಬೆಂಗಳೂರು: ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವಹಾಗೂ ದೇಶದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಎನಿಸಿಕೊಂಡಿರುವಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು 1 ಸಾವಿರರೊಬೊಟಿಕ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಿದೆ.ಮೊದಲ ಬಾರಿಗೆ ರೋಬೊಟಿಕ್ ಯಂತ್ರ ಅಳವಡಿಕೆ ಮಾಡಿಕೊಂಡ ಏಕೈಕಆಸ್ಪತ್ರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾಗಿದೆ. ಅತ್ಯಾಧುನಿಕರೋಬೊಟಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇದುವರೆಗೆ ಒಂದುಸಾವಿರ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ವಿಶೇಷಮೈಲುಗಲ್ಲು ಸಾಧಿಸಿದೆ. ಸರಕಾರಿ ಸಂಸ್ಥೆಗಳ ಪೈಕಿ ಕಿದ್ವಾಯಿ ಸ್ಮಾರಕ ಗಂಥಿಆಸ್ಪತ್ರೆಯಲ್ಲಿ ಮಾತ್ರ ರೋಬೋಟಿಕ್ ಸರ್ಜರಿ ಸೌಕರ್ಯ ಇರುವುದು ಮತ್ತೊಂದು ಹೆಗ್ಗಳಿಕೆ.ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಹಲವು ಸಾಧನೆಗಳನ್ನು ಮಾಡುವಲ್ಲಿದಾಫುಗಾಲಿಡುತ್ತಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕಯೋಜನೆಯಡಿ ಹೆಚ್ಚು ಚಿಕಿತ್ಸೆ ನೀಡಿದ ಆಸ್ಪತ್ರೆಯಾಗಿ ಹೊರಹೊಮ್ಮಿದೆ. ಒಳರೋಗಿಗಳಿಗೆ ಹೆಚ್ಚು ಚಿಕಿತ್ಸೆ ನೀಡಿದ ಏಕೈಕ ಸೂಪರ್‌ ಸ್ಪೆಷಾಲಿಟಿಆಸ್ಪತ್ರೆ ಎಂಬ...
ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಸರ್ಕಾರದ ಚಿಂತನೆ

ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಸರ್ಕಾರದ ಚಿಂತನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಟಿಕೆಟ್ ದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೊತೆಗೆ, ಕಲಾತ್ಮಕ ಚಿತ್ರಗಳ ಪ್ರೋತ್ಸಾಹಕ್ಕೆ ಪ್ರತೀ ಜಿಲ್ಲೆಗೂ 200 ಆಸನಗಳ ಮಿನಿ ಚಿತ್ರಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕನ್ನಡ ಸೇನಾನಿ ಸಾ.ರಾ.ಗೋವಿಂದು ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಕ್ಕದ ರಾಜ್ಯಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ದರ ಎಷ್ಟಿದೆ ಎಂದು ಪರಿಶೀಲಿಸಿ, ರಾಜ್ಯದಲ್ಲಿ ಅದಕ್ಕೆ ತಕ್ಕಂತೆ ನಿಯಂತ್ರಣ ತರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡುತ್ತೇನೆ. ಕನ್ನಡದ ಕೆಲಸಕ್ಕೆ ನಮ್ಮ ಸರ್ಕಾರ ಸದಾ ಮುಂದೆ ಇರುತ್ತದೆ. ದಿನಾಂಕ 27 ರಂದು ವಿಧಾನಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿ ಪುತ್ಥಳಿ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.ಗೋವಿಂದು ಅವರು ರಾಜ್ ಕುಮಾರ್ ಸಂಘದ ಅಧ್ಯಕ್ಷರಾಗಿ ಮಾಡಿದ ಕೆಲಸಗಳು ಸ್ಮರಣೀಯ. ರಾಜ್ ಅವರ ವಿನಯ, ಸಭ್ಯತೆ, ಸರಳತೆ ಇಡೀ ಮನುಷ್ಯ ಕುಲಕ್ಕೆ ಮಾದರಿ. ಡಾ.ರಾಜ್ ಕುಮಾರ್ ಅವರಿಗೆ ರಾಜ್ ಅವರೇ ಸಾಟ...
‘ಬಿಗ್ ಬಾಸ್’ ಸ್ಪರ್ಧಿ ಜಗದೀಶ್ ಮೇಲೆ ದಾಳಿ; ಭಯಾನಕ ವೀಡಿಯೊ ವೈರಲ್

‘ಬಿಗ್ ಬಾಸ್’ ಸ್ಪರ್ಧಿ ಜಗದೀಶ್ ಮೇಲೆ ದಾಳಿ; ಭಯಾನಕ ವೀಡಿಯೊ ವೈರಲ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
‘ಬಿಗ್ ಬಾಸ್ ಕನ್ನಡ' ಸ್ಪರ್ಧಿಯಾಗಿದ್ಫ್ದ ಜಗದೀಶ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಜಗದೀಶ್ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಯುವಕರ ಗುಂಪು ದಾಳಿ ನಡೆಸಿತ್ತು. ಆ ವೀಡಿಯೋ ಇದೀಗ ವೈರಲ್ ಆಗಿದೆ. View this post on Instagram  A post shared by GANGA JADHAV (@ganga_jadhav__)ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಬಳಿ ಅಣ್ಣಮ್ಮ ದೇವಿ ವಿಗ್ರಹ ಸ್ಥಾಪನೆ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಗಲಾಟೆ ನಡೆದಿತ್ತು. ನಟ ದರ್ಶನ ವಿವಿರುದ್ದದ ಟೀಕೆಯ ವಿಚಾರದಲ್ಲೂ ಜಗದೀಶ್ ಅವರು ನಟನ ಅಭಿಮಾನಿಗಳಿಂದ ಮುನಿಸಿಕೊಂಡಿದ್ದರು.ಈ ನಡುವೆ, ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಯುವಕರ ಗುಂಪು ದಾಳಿ ಮಾಡಿದೆ. ದೊಣ್ಣೆಯಿಂದ ಹಲ್ಲೆ ಮಾಡಿದ ಘಟನೆ ಹಾಗೂ ಕಾರನ್ನು ಹಾನಿಗೊಳಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಉದ್ರಿಕ್ತರನ್ನು ಚದುರಿಸಿದ್ದಾರೆ.Bigboss fame Lawyer Jagadish was attacked by few miscreants. #Bbk11 pic.twitter.com/Z2pvgq6BGV — 👑C...
ಬೆಂಗಳೂರು ಅರಮನೆ ಮೈದಾನದ ಜಾಗ ಸರ್ಕಾರದ ಬಳಕೆಗೆ ಸುಗ್ರಿವಾಜ್ಞೆ

ಬೆಂಗಳೂರು ಅರಮನೆ ಮೈದಾನದ ಜಾಗ ಸರ್ಕಾರದ ಬಳಕೆಗೆ ಸುಗ್ರಿವಾಜ್ಞೆ

Focus, Update, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಜಾಗ ಸರ್ಕಾರದ ಬಳಕೆಗೆ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತಂತೆ ಸಿದ್ದರಾಮಯ್ಯ ಅವರು ಮಾಹಿತಿ ಹಂಚಿಕೊಂಡಿದ್ದಾರೆ.ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ಕ್ಕೆ ಸಂಬಂಧಪಟ್ಟ ಸಿವಿಲ್ ಅಪೀಲುಗಳು ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿಯಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಹಕ್ಕುಗಳನ್ನು (ಟಿ.ಡಿ.ಆರ್) ವಿತರಿಸಿದ್ದಲ್ಲಿ ರಾಜ್ಯದ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳಲು ಮತ್ತು ನಿಯಂತ್ರಿಸಲು ಸುಗ್ರಿವಾಜ್ಞೆ ಹೊರಡಿಸಲು ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದವರು ತಿಳಿಸಿದ್ದಾರೆ....
ಅಯೋಧ್ಯೆ ಪ್ರತಿಷ್ಠೋತ್ಸವ; ಮಣಿಪಾಲದಲ್ಲಿ ವೈಭವದ ದೀಪೋತ್ಸವ

ಅಯೋಧ್ಯೆ ಪ್ರತಿಷ್ಠೋತ್ಸವ; ಮಣಿಪಾಲದಲ್ಲಿ ವೈಭವದ ದೀಪೋತ್ಸವ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಣಿಪಾಲ: ಅಯೋಧ್ಯೆ ಶ್ರೀರಾಮ ದೇಗುಲದ ಬಾಲರಾಮನ ಪ್ರತಿಷ್ಠೋತ್ಸವದ ವಾರ್ಷಿಕೋತ್ಸವವನ್ನು ದೇಶದೆಲ್ಲೆಡೆ ಶ್ರದ್ದಾ ಭಕ್ತಿಯಿಂದ ನೆರವೇರಿಸಲಾಗಿದೆ. ಇದೇ ವೇಳೆ ಉಡುಪಿ ಜಿಲ್ಲೆ ಮಣಿಪಾಲದಲ್ಲಿ ನಡೆದ ಕಾರ್ಯಕ್ರಮ ಗಮನಸೆಳೆದಿದೆ.ಮಣಿಪಾಲದ ದಶರಥನಗರದ ಶಿವಾಣಿ ಆರ್ಕಿಡ್ ಬಳಿ ದೀಪೋತ್ಸವ ವೈಭವ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಆಸ್ತಿಕರು ಭಾಗಿಯಾದರು.ಇದೇ ವೇಳೆ, ತೇಜಸ್ವಿನಿ ಅನಿಲ್ ರಾಜ್ ರವರ ಶ್ರೀ ರಾಮ ಭಕ್ತಿ ಗಾಯನ ಕಾರ್ಯಕ್ರಮ ಭಕ್ತಸಮೂಹ ಆಸ್ತಿಕರ ಗಮನಕೇಂದ್ರೀಕರಿಸಿತು. ರಾಮ ಲಕ್ಷ್ಮಣ ಸೀತಾ ಹಾಗು ಹನುಮಾನ್ ಪ್ರತಿಮೆ ಪ್ರದರ್ಶನಾವೂ ಕುತೂಹಲದ ಕೇಂದ್ರಬಿಂದುವಾಯಿತು. ರಾಮಾಯಣದ ಬಗ್ಗೆ ರಸ ಪ್ರಶ್ನೆ, ಕುಣಿತ ಭಜನೆ, ಕ್ರೇಜಿ ಕಿಡ್ಸ , ಪರ್ಕಳ ಇವರ ನೃತ್ಯ ಕಾರ್ಯಕ್ರಮಗಳು ಈ ಭಕ್ತಿ ಸಮಾರಂಭಕ್ಕೆ ಆಕರ್ಷಣೆಯನ್ನೂ ತುಂಬಿತು.ಉದ್ಯಮಿಗಳಾದ ರಾಧಾಕೃಷ್ಣ, ಸಂದೇಶ್ ಕುಮಾರ್ ಹಾಗೂ ಸ್ಥಳೀಯ ಪ್ರಮುಖರರಾದ ಸಚ್ಚೀಂದ್ರ ಅಂಬಾಗಿಲು, ಕುಮಾರಿ ವೈಷ್ಣವಿ ನಾಯಕ್ ಸಹಿತ ಹಲವರ ಸಹಭಾಗಿತ್ವದಲ್ಲಿ ಸಮಾರಂಭ ಅರ್ಥಪೂರ್ಣವಾಗಿ ನೆರವೇರಿತು....
ಲಾಭಿಗೆ ಮಣಿದು RGUHSಗೆ ಭ್ರಷ್ಟರನ್ನು ಕುಲಪತಿ ಮಾಡಿದರೆ ಜೋಕೆ; ಸರ್ಕಾರಕ್ಕೆ CRF ಪರೋಕ್ಷ ಎಚ್ಚರಿಕೆ?

ಲಾಭಿಗೆ ಮಣಿದು RGUHSಗೆ ಭ್ರಷ್ಟರನ್ನು ಕುಲಪತಿ ಮಾಡಿದರೆ ಜೋಕೆ; ಸರ್ಕಾರಕ್ಕೆ CRF ಪರೋಕ್ಷ ಎಚ್ಚರಿಕೆ?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಹಗರಣಗಳ ಆಗರವಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಈ ಬಾರಿಯಾದರೂ ಭ್ರಷ್ಟಾಚಾರ-ಮುಕ್ತ, ಸೂಕ್ತ ವ್ಯಕ್ತಿಯನ್ನು ಕುಲಪತಿಗಳನ್ನಾಗಿ ನೇಮಕ ಮಾಡುವಂತೆ 'ಸಿಟಿಜನ್ ರೈಟ್ಸ್ ಫೌಂಡೇಶನ್' ಸಿಎಂ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲಹೆ ನೀಡಿದೆ. ಈ ಸಂಬಂಧ 'ಸಿಟಿಜನ್ ರೈಟ್ಸ್ ಫೌಂಡೇಷನ್' ಅಧ್ಯಕ್ಷ ಕೆ.ಎ.ಪಾಲ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ ಪಾಟೀಲ್ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಬೆಳವಣಿಗೆ ಕುತೂಹಲ ಕೆರಳಿಸಿದೆ.ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಒಂದಿಲ್ಲೊಂದು ಹಗರಣಗಳಿಂದಾಗಿ ದೇಶದಲ್ಲೇ ವಿವಾದದ ಕೇಂದ್ರ ಬಿಂದುವಾಗುತ್ತಿದೆ. ಹತ್ತಾರು ಅಕ್ರಮ ಆರೋಪಗಳು ಸುದ್ದಿಯಾಗುತ್ತಲೇ ಇವೆ. ವೈದ್ಯಕೀಯ ಕಾಲೇಜುಗಳ ಅಕ್ರಮ, ನರ್ಸಿಂಗ್ ಕಾಲೇಜ್ ಭ್ರಷ್ಟಾಚಾರ ಪ್ರಕರಣಗಳಿಂದಾಗಿ RGUHS ಪ್ರತಿಷ್ಠೆಗೆ ಧಕ್ಕೆ ಬಂದಿದೆ. ಹಾಗಾಗಿ ಭ್ರಷ್ಟಾತೀತ, ಸಮರ್ಥ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಕ ಮಾಡಬೇಕೆಂದು ಕೆ...
ಮುಡಾ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌?

ಮುಡಾ ಹಗರಣ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಿದೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ 14 ಸೈಟು ವಾಪಸ್‌ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ. ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ. ಆದರೆ ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾ...
‘ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ, ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ’

‘ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ, ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ’

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮಾಜಿ ಸಚಿವ ಶ್ರೀರಾಮುಲು ಅವರು ಬಿಜೆಪಿ ತ್ಯಜಿಸಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ, ಯಾವುದೇ ಟೀಮ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಪಕ್ಷದಲ್ಲಿ ಗೊಂದಲ ಇರುವುದು ನಿಜ. ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ ಎಂದವರು ತಿಳಿಸಿದರು.ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ. ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಆದರೂ ದೂರು ನೀಡಿದ್ದೇನೆ ಎಂದು ಸುಳ್ಳಾಗಿ ಪತ್ರಿಕೆಯಲ್ಲಿ ಬರೆಯಲಾಗಿದೆ. ಒಕ್ಕಲಿಗರು ಪ್ರತ್ಯೇಕವಾಗಿ ಸಭೆ ಮಾಡಿಲ್ಲ ಅಥವಾ ಗುರುತಿಸಿಕೊಂಡಿಲ್ಲ. ಇದು ಕೂಡ ಸುಳ್ಳು ಸುದ್ದಿ ಎಂದು ಅಶೋಕ್ ಸ್ಪಷ್ಟಪಡಿಸಿದರು....