Friday, January 30

ಬೆಂಗಳೂರು

ಅತ್ಯಾಚಾರ, ಹನಿಟ್ರ್ಯಾಪ್‌, ಎಚ್‌ಐವಿ ಹರಡುವಿಕೆ ಪ್ರಕರಣ; ಮುನಿರತ್ನ ವಿರುದ್ದದ ತನಿಖೆಗೆ SIT?

ಅತ್ಯಾಚಾರ, ಹನಿಟ್ರ್ಯಾಪ್‌, ಎಚ್‌ಐವಿ ಹರಡುವಿಕೆ ಪ್ರಕರಣ; ಮುನಿರತ್ನ ವಿರುದ್ದದ ತನಿಖೆಗೆ SIT?

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಒಕ್ಕಲಿಗ ನಾಯಕರು ಆಗ್ರಹಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕಲಿಗ ಸಮುದಾಯದ ನಾಯಕರು ಮನವಿ ಮಾಡಿದ್ದಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ನಿಯೋಗ ಸಿಎಂ ಅವರನ್ನು ಭೇಟಿಯಾಗಿ ಮುನಿರತ್ನ ವಿರುದ್ಧ ಕಮಿಷನ್‌ ದಂಧೆ, ಅತ್ಯಾಚಾರ, ಹನಿಟ್ರ್ಯಾಪ್‌, ಎಚ್‌ಐವಿ ಹರಡುವಿಕೆ ಸೇರಿದಂತೆ ವಿವಿಧ ಆರೋಪಗಳು ಇವೆ. ಹಾಗಾಗಿ, ಎಲ್ಲಾ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಮನವಿ ಮಾಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಕಚೇರಿ, ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಜಿ ಸಚಿವರಾದ ಮುನಿರತ್ನ ಅವರ ಮೇಲಿನ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವಂತೆ ಮನವಿ ಸಲ್ಲಿಸಿದರು ಎಂದು ತಿಳಿಸಿದೆ....
ಹಸಿರು ಹೊದಿಕೆ: ಕೊತ್ತನೂರಿನಲ್ಲಿ 22.08ಎಕರೆ ಜಮೀನು ಮರುವಶಕ್ಕೆ ಸಚಿವರ ಆದೇಶ

ಹಸಿರು ಹೊದಿಕೆ: ಕೊತ್ತನೂರಿನಲ್ಲಿ 22.08ಎಕರೆ ಜಮೀನು ಮರುವಶಕ್ಕೆ ಸಚಿವರ ಆದೇಶ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೊತ್ತನೂರಿನಲ್ಲಿ ಅರಣ್ಯ ಇಲಾಖೆಗೆ ವಹಿಸಲಾದ 22.08ಎಕರೆ ಜಮೀನಿನ ಮರುವಶಕ್ಕೆ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ನಿರ್ದೇಶನ ನೀಡಿದ್ದಾರೆ. 22.08ಎಕರೆ ಜಮೀನಿನ ಮರುವಶಕ್ಕೆ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿರುವ ಅವರು, ಕೆ.ಆರ್.ಪುರ-2 ಹೋಬಳಿಯ ಕೊತ್ತನೂರು ಗ್ರಾಮದ ಸರ್ವೆ ನಂ.48ರಲ್ಲಿ 8 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ 2000 ಇಸವಿಯಲ್ಲಿ ವಹಿಸಲಾಗಿರುತ್ತದೆ. ಆದರೆ, ಅಧಿಕಾರಿಗಳು ಇಲಾಖೆಗೆ ಮಂಜೂರಾದ ಭೂಮಿಯನ್ನು ವಶಕ್ಕೆ ಪಡೆದು ಅರಣ್ಯ ಬೆಳೆಸುವಲ್ಲಿ ವಿಫಲರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣ 'X'ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಈಶ್ವರ್ ಬಿ. ಖಂಡ್ರೆ, ಬೆಂಗಳೂರಿನಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ 1999-2000 ಸಾಲಿನಲ್ಲಿ ಕೆಆರ್ ಪುರಂ ಬಳಿಯ ಕೊತ್ತನೂರು ಸರ್ವೇ ನಂ. 48ರಲ್ಲಿನ 22.08 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಈ ಜಮೀನನ್ನು ವಶಕ್ಕೆ ಪಡೆದು ಅರಣ್ಯ ಬೆಳೆಯುವಲ್ಲಿ ಈ ಹಿಂದಿನ ಅರಣ್ಯ ಅ...
ಮೈಸೂರು ಅರಮನೆ ಆವರಣದಿಂದ ದಕ್ಕಾಪಾಲಾಗಿ ಓಡಿ ಆತಂಕ ಸೃಷ್ಟಿಸಿದ ಆನೆಗಳು

ಮೈಸೂರು ಅರಮನೆ ಆವರಣದಿಂದ ದಕ್ಕಾಪಾಲಾಗಿ ಓಡಿ ಆತಂಕ ಸೃಷ್ಟಿಸಿದ ಆನೆಗಳು

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮೈಸೂರು: ಜಗದ್ವಿಖ್ಯಾತ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಯಾರಿ ಸಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಕೂಡಾ ಅರಮನೆ ಆವರಣದಲ್ಲಿ ಗಮನಸೆಳೆಯುತ್ತಿದೆ. ಈ ನಡುವೆ, ಶುಕ್ರವಾರ ಎರಡು ಆನೆಗಳು ಅರಮನೆಯ ಆವರಣದಿಂದ ಏಕಾಏಕಿ ಹೊರನಡೆದು ಆತಂಕ ಸೃಷ್ಟಿಸಿತು. ದಸರಾ ಗಜಪಡೆಯ ಕಂಜನ್​​ ಹಾಗೂ ಧನಂಜಯ ಆನೆ ನಡುವೆ ಊಟದ ಸಮಯದಲ್ಲಿ ಗಲಾಟೆ ನಡೆದಿದೆ.‌ ಧನಂಜಯ ಆನೆಯಿ ಕಂಜನ್ ಆನೆ‌ ಮೇಲೆ ದಾಳಿಗೆ ಮುಂದಾಗಿದೆ. ಬೆದರಿದ ಕಂಜನ್ ಆನೆ ಓಡಲಾರಂಭಿಸಿದೆ. ಅದನ್ನು ಕಂಡ ಧನಂಜಯ ಆನೆ ಕಂಜನ್ ಆನೆಯನ್ನು ಬನ್ನಟ್ಟಿದೆ. ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿ ಜನರಿದ್ದ ಸ್ಥಳಕ್ಕೆ ಧಾವಿಸಿದೆ. ಅದಾಗಲೇ ಮಾವುತ ಧನಂಜಯನನ್ನು ನಿಯಂತ್ರಣ ಮಾಡಿದ್ದಾನೆ. ಬಳಿಕ ಕಂಜನ್ ಆನೆಯನ್ನು ಅರಮನೆ‌ ಆವರಣಕ್ಕೆ ಕರೆ ತರಲಾಗಿದೆ....
ಲೋಕ ಅದಾಲತ್‌ನಲ್ಲಿ ಒಂದೇ ದಿನ ಬರೋಬ್ಬರಿ 35.85 ಲಕ್ಷ ಪ್ರಕರಣಗಳು ಇತ್ಯರ್ಥ

ಲೋಕ ಅದಾಲತ್‌ನಲ್ಲಿ ಒಂದೇ ದಿನ ಬರೋಬ್ಬರಿ 35.85 ಲಕ್ಷ ಪ್ರಕರಣಗಳು ಇತ್ಯರ್ಥ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 14 ರಂದು ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಇತಿಹಾಸ ಸೃಷ್ಟಿಸಿದೆ. ಲೋಕ ಅದಾಲತ್‌ನಲ್ಲಿ ಒಂದೇ ದಿನದಲ್ಲಿ 35.85 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. ಈ ಕುರಿತಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಹಕ ಅಧ್ಯಕ್ಷರಾದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್​ ಮತ್ತು ಹೈಕೋರ್ಟ್‌ನ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್‌ ಕುಮಾರ್‌ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ಒದಗಿಸಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 2 ಲಕ್ಷ ಪ್ರಕರಣಗಳು ಮತ್ತು 33.84 ಲಕ್ಷ ವ್ಯಾಜ್ಯ ಪೂರ್ವ ಪ್ರಕರಣಗಳು ಕೂಡಾ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿವೆ....
ಕಲ್ಮಲಾ ಜಂಕ್ಷನ್‌ – ಲಿಂಗಸಗೂರು ರಸ್ತೆ ಕಾಮಗಾರಿಯಲ್ಲಿ ಸುರಕ್ಷತೆಗೆ ಒತ್ತು ನೀಡಿ; ಸಚಿವರ ಸೂಚನೆ  

ಕಲ್ಮಲಾ ಜಂಕ್ಷನ್‌ – ಲಿಂಗಸಗೂರು ರಸ್ತೆ ಕಾಮಗಾರಿಯಲ್ಲಿ ಸುರಕ್ಷತೆಗೆ ಒತ್ತು ನೀಡಿ; ಸಚಿವರ ಸೂಚನೆ  

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು : ರಾಯಚೂರ ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರು ಬಳಿಯ ಬಳ್ಳಾರಿ-ಲಿಂಗಸುಗೂರು ರಸ್ತೆ ವೃತ್ತದವರೆಗಿನ 78 ಕಿಲೋಮೀಟರ್‌ ರಸ್ತೆಯ ಅಭಿವೃದ್ದಿ ಕಾಮಗಾರಿಯಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು, ಗುಣಮಟ್ಟದ ಹಾಗೂ ಕ್ಷಿಪ್ರಗತಿಯಲ್ಲಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿಹೊಳಿ ಸೂಚನೆ ನೀಡಿದರು. ಇಂದು ವಿಕಾಸಸೌಧಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸಚಿವರಾದ ಶರಣಪ್ರಕಾಶ್‌ ಪಾಟೀಲ್, ಎನ್‌ ಎಸ್‌ ಭೋಸರಾಜು ಶಾಸಕರಾದ ಬಿ.ಆರ್ ಪಾಟೀಲ್‌, ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ಬಸವನಗೌಡ ದದ್ದಲ್‌, ಸರಕಾರಾದ ಪ್ರಧಾನ ಕಾರ್ಯದರ್ಶಿ ಲೋಕೋಪಯೋಗಿ ಇಲಾಖೆ ಸೆಲ್ವಕುಮಾರ್‌ ಸೇರಿದಂತೆ, ಕೆಆರ್‌ಡಿಸಿಎಲ್‌ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಯಚೂರ ಬಳಿಯ ಕಲ್ಮಲಾ ಜಂಕ್ಷನ್‌ನಿಂದ ಸಿಂಧನೂರು ಬಳಿಯ ಬಳ್ಳಾರಿ-ಲಿಂಗಸುಗೂರು ರಸ್ತೆ ವೃತ್ತದವರೆಗಿನ 78 ಕಿಲೋಮೀಟರ್‌ ಉದ್ದ ರಸ್ತೆಯ ಅಭಿವೃದ್ದಿ ಕಾಮಗಾರಿಯಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು. ಹಗಲು ರಾತ್ರಿ ಕಾಮಗಾರಿ ನಡೆ...
ದಾವಣಗೆರೆ ಗಣೇಶ ಮೆರವಣಿಗೆ ಮೇಲೆ ಕಲ್ಲುತೂರಾಟ ಘಟನೆ; 30 ಮಂದಿಯ ಬಂಧನ

ದಾವಣಗೆರೆ ಗಣೇಶ ಮೆರವಣಿಗೆ ಮೇಲೆ ಕಲ್ಲುತೂರಾಟ ಘಟನೆ; 30 ಮಂದಿಯ ಬಂಧನ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ದಾವಣಗೆರೆ: ದಾವಣಗೆರೆಯ ಚಾಮರಾಜಪೇಟೆ ವೃತ್ತದ ಬಳಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದರು. ಗಲಭೆ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ....
ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

ರಾಜ್ಯದ ಮುಜರಾಯಿ ದೇಗುಲಗಳಲ್ಲಿ ‘ನಂದಿನಿ ತುಪ್ಪ’ ಮಾತ್ರ ಬಳಕೆ; ಸರ್ಕಾರದ ಕಟ್ಟಪ್ಪಣೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಂದಿನಿ ತುಪ್ಪವನ್ನೇ ಬಳಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರ ಸೂಚನೆಯಂತೆ ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ತಿರುಪತಿ ದೇಗುಲದ ಪ್ರಸಾದದಲ್ಲಿ ನಕಲಿ ತುಪ್ಪ ಬಳಕೆ ಮಾಡಲಾಗಿತ್ತೆಂಬ ಬಗ್ಗೆ ಭಾರೀ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈಗಿನ ಸರ್ಕಾರದ ಸೂಚನೆಯಂತೆ ತಿರುಪತಿ ದೇವಾಲಯವು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಉತ್ಪನ್ನವಾಗಿರುವ 'ನಂದಿನಿ ತುಪ್ಪ'ವನ್ನು ಖರೀದಿಸುತ್ತಿದೆ. ಇದೀಗ ರಾಜ್ಯದ ಮುಜರಾಯಿ ದೇಗುಲಗಳಲ್ಲೂ ನಂದಿನಿ ತುಪ್ಪವನ್ನೇ ಬಳಸುವಂತೆ ಕರ್ನಾಟಕ ಸರ್ಕಾರ ಆದೇಶಿಸಿದೆ. ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ ಪ್ರಸಾದ ತಯಾರಿಕೆಗೆ ಮತ್ತು ಶುದ್ಧ ನಂದಿನಿ ತುಪ್ಪ ವನ್ನು ಮಾತ್ರ ಬಳಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.‌ ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳಿಗೆ, ದೀಪಗಳಿಗೆ ಮತ್ತು ಎಲ್ಲಾ ವಿಧದ ಪ್ರಸಾದ ತಯಾರಿಕೆಗೆ ...
ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣಗಳಲ್ಲಿ ಅರಗ ಜ್ಞಾನೇಂದ್ರ ಪುತ್ರನ ಪಾತ್ರ? ಸಮಗ್ರ ತನಿಖೆಗೆ ರಮೇಶ್ ಬಾಬು ಆಗ್ರಹ

ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣಗಳಲ್ಲಿ ಅರಗ ಜ್ಞಾನೇಂದ್ರ ಪುತ್ರನ ಪಾತ್ರ? ಸಮಗ್ರ ತನಿಖೆಗೆ ರಮೇಶ್ ಬಾಬು ಆಗ್ರಹ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಪಿಎಸ್ ಐ ಹಗರಣ, ಬಿಟ್ ಕಾಯಿನ್ ಹಗರಣ ಸೇರಿದಂತೆ ಹಲವು ಹಗರಣಗಳಲ್ಲಿ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರ ಪಾತ್ರವಿದೆ ಆದರೂ ಅವರನ್ನು ಹಲವಾರು ಪ್ರಕರಣಗಳಲ್ಲಿ ತನಿಖೆ ಮಾಡಿಲ್ಲ. ಆದ ಕಾರಣ ಸರ್ಕಾರ ಇವರ ವಿರುದ್ದ ಎಸ್ ಐಟಿ ತನಿಖೆ ಮಾಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗ ಅಧ್ಯಕ್ಷ ರಮೇಶ್ ಬಾಬು ಪ್ರತಿಪಾದಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಬೇನಾಮಿ ವಹಿವಾಟುಗಳು ನಡೆದಿವೆ. ಅರಗ ಜ್ಞಾನೆಂದ್ರ ಅವರ ಮಗ ಕೂಡ ಅನೇಕ ಭೂ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು. ಗೃಹ ಹಾಗೂ ಗ್ರಾಮೀಣ ಅಭಿವೃದ್ದಿ ಇಲಾಖೆಯ ಕಟ್ಟಡಗಳ ಕಾಮಗಾರಿಯನ್ನು ಕಳಪೆ ಮಾಡಲಾಗಿದೆ. ಇದರಲ್ಲಿ ನೇರವಾಗಿ ಅರಗ ಜ್ಞಾನೇಂದ್ರ ಅವರ ಕೈವಾಡವಿದೆ. ಇದೆಲ್ಲದರ ಬಗ್ಗೆಯೂ ಸಮಗ್ರ ತನಿಖೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ರಮೇಶ್ ಬಾಬು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಅರಗ ಜ್ಞಾನೇಙದ್ರ, ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ್ ಹುಂಚದಕಟ್ಟೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ, ಬ್ಲಾಕ್ ಕಾಂಗ್ರೆ...
ಬಿಜೆಪಿ ಸರ್ಕಾರದ ‘ಅರಗ’ ಹಗರಣಗಳ ಬಗ್ಗೆ ಸಮರ್ಪಕ ತನಿಖೆಯಾಗಲಿ; ಸರ್ಕಾರಕ್ಕೆ ಆಡಳಿತ ಪಕ್ಷ‌ ಕಾಂಗ್ರೆಸ್ ಮನವಿ

ಬಿಜೆಪಿ ಸರ್ಕಾರದ ‘ಅರಗ’ ಹಗರಣಗಳ ಬಗ್ಗೆ ಸಮರ್ಪಕ ತನಿಖೆಯಾಗಲಿ; ಸರ್ಕಾರಕ್ಕೆ ಆಡಳಿತ ಪಕ್ಷ‌ ಕಾಂಗ್ರೆಸ್ ಮನವಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದ ವೇಳೆ ಅನೇಕ ಅಕ್ರಮಗಳು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದಿವ. ಪಿಎಸ್‌ಐ ಹಗರಣದಿಂದ ಹಿಡಿದು ಕಳಪೆ ಕಟ್ಟಡ ಕಾಮಗಾರಿಗಳು ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ಬಾಕರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತಿಯಲ್ಲಿ  ಮಾಧ್ಯಮಗೋಷ್ಠಿಯಲ್ಲಿ ಕಿಮ್ಮನೆ ರತ್ನಾಕರ, ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದ ವೇಳೆ ಅನೇಕ ಅಕ್ರಮಗಳು ತೀರ್ಥಹಳ್ಳಿ ಕ್ಷೇತ್ರದಲ್ಲಿ ನಡೆದಿದೆ. ಪಿಎಸ್ ಐ ಹಗರಣದಿಂದ ಹಿಡಿದು ಕಳಪೆ ಕಟ್ಟಡ ಕಾಮಗಾರಿಗಳು ನಡೆದಿವೆ. ಈ ವಿಚಾರಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ, ಗೃಹಸಚಿವರು ಹಾಗೂ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತರಲಾಗುವುದು ಹಾಗೂ ಅರಗ ಜ್ಞಾನೇಂದ್ರ ಅವರ ವಿರುದ್ಧ ವಿಶೇಷ ತನಿಖಾ ತಂಡ ರಚನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಅರಗ ಜ್ಞಾನೇಂದ್ರ ಅವರ ಕಾಲದಲ್ಲಿ ನಡೆದ ಪಿಎಸ್ ಐ ಹಗರಣದ ತನಿಖೆ ವೇಳೆ ಇವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಅಲ್ಲದೇ ಸ್ಯಾಂಟ್ರೋ...
KSRTCಗೆ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ಗೋಲ್ಡನ್ ಸ್ಟಾರ್ ಪ್ರಶಸ್ತಿ-2024

KSRTCಗೆ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ಗೋಲ್ಡನ್ ಸ್ಟಾರ್ ಪ್ರಶಸ್ತಿ-2024

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: KSRTCಗೆ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ಗೋಲ್ಡನ್ ಸ್ಟಾರ್ ಪ್ರಶಸ್ತಿ-2024 ಲಭಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಕ್ಕಾಗಿ ಏಷ್ಯಾ ಪೆಸಿಫಿಕ್ HRM ಕಾಂಗ್ರೆಸ್ ಪ್ರಶಸ್ತಿ ಮತ್ತು ನಿಗಮದ ಪ್ರತಿಷ್ಠಿತ ಬ್ಯ್ರಾಂಡಿಂಗ್ ಉಪಕ್ರಮಗಳಿಗಾಗಿ ಗೋಲ್ಡನ್ ಸ್ಟಾರ್ ಪ್ರಶಸ್ತಿ ಲಭಿಸಿದೆ. ಗುರುವಾರ ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರೊಫೆಸರ್ ಡಾ. ರಾಮಪ್ರಸಾದ್ ಬ್ಯಾನರ್ಜಿಯವರು, EIILM, ಕೊಲ್ಕತ್ತ. ಸಂಜಯ್ ರಾಮದಾಸ್ ಕಾಮತ್, ಹಿರಿಯ ಉಪಾಧ್ಯಕ್ಷರು ಮತ್ತು ಬಿಸಿನೆಸ್ ಮುಖ್ಯಸ್ಥರು, SASIA ರವರು, ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಸೋಮಶೇಖರ್, ಕಾರ್ಯನಿರ್ವಾಹಕ ಅಭಿಯಂತರರು, ನರಸಿಂಹ ವರ್ಮ.ವಿ, ಕಾನೂನು ಅಧಿಕಾರಿ, ಸತೀಶ್ ಕುಮಾರ್.ಎನ್, ವಿಭಾಗೀಯ ಸಂಚಾರ ಅಧಿಕಾರಿ ಮತ್ತು ಚಂದ್ರೇಗೌಡ ಎ.ಜಿ, ಭದ್ರತಾ ಮತ್ತು ಜಾಗೃತಾಧಿಕಾರಿ, ಕೆ.ಎಸ್.ಆರ್.ಟಿ.ಸಿ ರವರುಗಳು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು....