ಅಂದು ಸುದ್ದಿ ನಿರೂಪಕ ಈಗ ಬೆಳ್ಳಿತೆರೆಯ ಹೀರೋ ರಾಘವ ಸೂರ್ಯ; ‘ರಮ್ಮಿ ಆಟ’ ಚಿತ್ರದ ಸುತ್ತ
📝 ಈಶ್ವರ್ ಸಿರಿಗೇರಿ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಮ್ಮಿ ಆಟ / ರಮ್ಮಿ ಗೇಮ್ ಮನುಕುಲದ ಅವನತಿ ಎಂಬ ಅಪವಾದವಿದೆ, ತಮ್ಮ ಜೀವವನ್ನೇ ಆಹುತಿ ಮಾಡಿಕೊಳ್ಳುತ್ತಿರುವ ಪ್ರಸ್ತುತ ಯುವ ಸಮೂಹದ ಬಗ್ಗೆ ಸೃಜನಶೀಲ ಕಥೆಯನ್ನುಟ್ಟುಕೊಂಡು, ಆನ್‌ಲೈನ್ ರಮ್ಮಿ ಆಡುವುದರಿಂದ ಏನೆಲ್ಲ ಸಮಸ್ಯೆಗಳಾಗುತ್ತವೆ. ಜನ ಸಮೂಹವು ಯಾವೆಲ್ಲಾ ರೀತಿ ಮೋಸ ಹೋಗುತ್ತಾರೆ. ಹಾಗೆಯೇ ಆನ್‌ಲೈನ್ ರಮ್ಮಿ ಗೇಮ್ ಕುರಿತು ಜನರಿಗೆ ಎಚ್ಚರಿಕೆ ನೀಡುವಂತಹ ಸಿನಿಮಾವೊಂದು ಕನ್ನಡ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದೆ.
ಸೆಪ್ಟೆಂಬರ್ 20ರಿಂದಲೇ 'ರಮ್ಮಿ ಆಟ"
ಈ ಸಿನಿಮಾ ಮೂಲಕ ಕನ್ನಡ ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿದ್ದ ರಾಘವ ಸೂರ್ಯ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದು ವಿಶೇಷ. ಈ ಆಟದಿಂದ ಏನೆಲ್ಲ ಪರಿಣಾಮಗಳಾಗುತ್ತವೆ ಎಂಬ ಕಥೆಯನ್ಬು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ.
ಸುದ್ದಿ ಸಂಸ್ಥೆಯಲ್ಲಿ ನಿರೂಪಕರಾಗಿದ್ದಾಗಲೇ ರಾಘವ ಸೂರ್ಯ ಅವರು ಈ ಚಿತ್ರದ ಆಫರ್ ಸ್ವೀಕರಿಸಿ, ಕಿರುತೆರೆಯಿಂದ ಬಿಗ್ ಸ್ಕ್ರೀನ್‌ಗೆ ಜಿಗಿದಿದ್ದಾರೆ. ಕನ್ನಡ ಮಾಧ್ಯಮ ಕ್ಷೇತ್ರದಲ್ಲಿನ ತಮ್ಮದೇ ಆದ ಛಾಪು ಮೂಡಿಸಿದ ಖ್...





