ಕೈಗಾರಿಕೆ-ನಿರ್ದಿಷ್ಟ ಕೌಶಲ್ಯ ಅಭಿವೃದ್ಧಿಗಾಗಿ “ನಿಪುಣ ಕಾರ್ಯಕ್ರಮ” ಬಳಸಿಕೊಳ್ಳಲು ಕಾಂಗ್ಸ್‌ಬರ್ಗ್ ಡಿಜಿಟಲ್ ಸಂಸ್ಥೆಗೆ ಸರ್ಕಾರ ಆಹ್ವಾನ
ಬೆಂಗಳೂರು: ಕೈಗಾರಿಕೆ-ನಿರ್ದಿಷ್ಟ ಕೌಶಲ್ಯ ಅಭಿವೃದ್ಧಿಗಾಗಿ ಯೋಜಿಸಲಾಗಿರುವ “ನಿಪುಣ ಕಾರ್ಯಕ್ರಮ” ಬಳಸಿಕೊಳ್ಳುವಂತೆ *ಕಾಂಗ್ಸ್‌ಬರ್ಗ್ ಡಿಜಿಟಲ್ ಸಂಸ್ಥೆಗೆ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಆಹ್ವಾನ ನೀಡಿದ್ದಾರೆ.
ಕಾಂಗ್ಸ್‌ಬರ್ಗ್ ಡಿಜಿಟಲ್‌ನ ಅಧ್ಯಕ್ಷ ಮತ್ತು ಸಿಇಒ ಶೇನ್ ಮೆಕ್‌ಆರ್ಡಲ್ ಮತ್ತು ಕಾಂಗ್ಸ್‌ಬರ್ಗ್ ಡಿಜಿಟಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ನೇತೃತ್ವದ ನಿಯೋಗ ಇಂದು ವಿಧಾನಸೌಧದಲ್ಲಿ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಹ್ವಾನ ಕೊಟ್ಟರು. ನಿಪುಣ ಕಾರ್ಯಕ್ರಮ ನಿರ್ದಿಷ್ಟವಾಗಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಂತಹ ಕ್ಷೇತ್ರಗಳಲ್ಲಿ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ನಿಖರವಾದ ಕೌಶಲ್ಯ ವಲಯದೊಂದಿಗೆ ಯುವ ಸಮೂಹವನ್ನು ಸಜ್ಜುಗೊಳಿಸುವ ಗುರಿ ಹೊಂದಿದೆ. “ಇದು ಸಾಮಾನ್ಯ ತರಬೇತಿ ಕಾರ್ಯಕ್ರಮವಲ್ಲ. ನಿಪುಣ ಕಾರ್ಯಕ್ರಮ ನಿರ್ದಿಷ್ಟ ಉದ್ಯಮದ ಅವಶ್ಯಕತೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಉದ್ಯೋಗಿಗಳ ಬೇಡಿಕೆಗಳನ್ನು ಪೂರೈಸಲು ನಾವು ಕಾಂಗ್ಸ್‌ಬರ್ಗ್ ಡಿಜಿಟಲ್‌ನಂತಹ ಕಂಪನಿಗಳೊಂದಿಗೆ ಸಹಕರ...





