Thursday, January 29

ಬೆಂಗಳೂರು

13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದ 13 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ಮಾತ್ರವಲ್ಲ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಲ ಕೊಳ್ಳಿಯಲ್ಲಿ ವಾಯುಭಾರ ಕುಸಿತ ಮತ್ತು ಪೂರ್ವ ಅರಬ್ಬಿ ಸಮುದ್ರದಲ್ಲಿನ ಹವಾಮಾನದ ವ್ಯತ್ಯಯದಿಂದಾಗಿ ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಕರಾವಳಿಯ ಉದ್ದಕ್ಕೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ 13 ಜಿಲ್ಲೆಗಳಲ್ಲಿ ಸೆಪ್ಟೆಂಬರ್‌ 1ರಿಂದ ಮಳೆಯಾಗುವ ಸಾಧ್ಯತೆಗಳಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸಹಿತ 13 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ....
ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು: ಡಿಕೆಶಿ

ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು: ಡಿಕೆಶಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: “ರಾಜ್ಯಪಾಲರ ಹುದ್ದೆ ಸಂವಿಧಾನ ನೀಡಿರುವ ಪೀಠ. ರಾಜ್ಯಪಾಲರ ಕಚೇರಿ ಒಂದು ರಾಜಕೀಯ ಪಕ್ಷದ ಕಚೇರಿ ಆಗಬಾರದು. ಸಂವಿಧಾನಿಕವಾಗಿ ಈ ಹುದ್ದೆಗೆ ಇರುವ ಘನತೆದೆ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು ಎಂಬುದು ನಮ್ಮ ಅಭಿಲಾಷೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ರಾಜ್ಯಪಾಲರ ಪಕ್ಷಪಾತ ಧೋರಣೆ ಖಂಡಿಸಿ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಧರಣಿ ನಡೆಸಿ ರಾಜ್ಯಾಪಾಲರ ವಿರುದ್ಧ ಘೋಷಣೆ ಕೂಗಿದರು. ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ "ರಾಜಭವನ ಚಲೋ" ಪ್ರತಿಭಟನೆ ಮೂಲಕ ರಾಜಭವನಕ್ಕೆ ಕಾಲ್ನಡಿಗೆ ಮೂಲಕ ತೆರಳಿದ ಕಾಂಗ್ರೆಸ್ ಪಕ್ಷದ ನಿಯೋಗವು, ಲೋಕಾಯುಕ್ತ ಎಸ್ ಐಟಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ಧನ ರೆಡ್ಡಿ ಅವರ ವಿಚಾರಣೆಗೆ ಅನುಮತಿ ನೀಡಿ ಎಂದು ಸಲ್ಲಿಸಿರುವ ಅರ್ಜಿಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರು. ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು "ರಾಜ್ಯಪಾ...
ವಾಯುಭಾರ ಕುಸಿತ; ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ಕೇರಳ ಕೇರಳ ರಾಜ್ಯಗಳಲ್ಲಿ ಬಿರುಗಾಳಿ ಮಳೆ ಸಾಧ್ಯತೆ

ವಾಯುಭಾರ ಕುಸಿತ; ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ, ಕೇರಳ ಕೇರಳ ರಾಜ್ಯಗಳಲ್ಲಿ ಬಿರುಗಾಳಿ ಮಳೆ ಸಾಧ್ಯತೆ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬಂಗಾಲ ಕೊಳ್ಳಿಯಲ್ಲಿ ವಾಯುಭಾರ ಕುಸಿತ ಮತ್ತು ಪೂರ್ವ ಅರಬ್ಬಿ ಸಮುದ್ರದಲ್ಲಿನ ಹವಾಮಾನದ ವ್ಯತ್ಯಯದಿಂದಾಗಿ ಗುಜರಾತ್‌, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ಕರಾವಳಿಯ ಉದ್ದಕ್ಕೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತ ಕರ್ನಾಟಕದ 13 ಜಿಲ್ಲೆಗಳಲ್ಲೂ ಸೆಪ್ಟೆಂಬರ್‌ 1ರಿಂದ ಮಳೆಯಾಗುವ ಸಾಧ್ಯತೆಗಳಿದ್ದು, ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಸಹಿತ 13 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ....
ಈ ಬಾರಿ ಜನೋತ್ಸವವಾಗಿ ‘ಕಲ್ಯಾಣ ಕರ್ನಾಟಕ ಉತ್ಸವ’: ಅಧಿಕಾರಿಗಳಿಗೆ ಸೂಚನೆ

ಈ ಬಾರಿ ಜನೋತ್ಸವವಾಗಿ ‘ಕಲ್ಯಾಣ ಕರ್ನಾಟಕ ಉತ್ಸವ’: ಅಧಿಕಾರಿಗಳಿಗೆ ಸೂಚನೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸೆಪ್ಟೆಂಬರ್ 17ರಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣಪ್ರಕಾಶ್‌ ಪಾಟೀಲ್ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಜನಪ್ರತಿನಿಧಿಗಳೊಂದಿಗೆ ಕಲಬುರಗಿ ಜಿಲ್ಲಾಡಳಿತ ಹಾಗೂ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಸಭೆಯಲ್ಲಿ ಮಾತನಾಡಿದ ಸಚಿವರು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾರಣವಾದ 371 ಜೆ ಅಸ್ಥಿತ್ವಕ್ಕೆ ಬಂದು ಹತ್ತು ವರ್ಷಗಳು ಸಂದ ಸಂದರ್ಭದಲ್ಲಿ ದಶಮಾನೋತ್ಸವವನ್ನು ಆಚರಿಸುತ್ತಿರುವದರಿಂದ ಈ ಬಾರಿಯ ಉತ್ಸವವನ್ನು ಅರ್ಥಗರ್ಭಿತವಾಗಿ ಆಚರಿಸಲು ಕಾರ್ಯಕ್ರಮಗಳನ್ನು ರೂಪಿಸುವಂತೆಯೂ ಪಾಟೀಲ್ ಹೇಳಿದರು. ಸೆಪ್ಟೆಂಬರ್‌ 17ರಂದು ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕಲ್ಯಾಣ ಕರ್ನಾಟಕ ಭಾಗದ ಪ್ರಮು...
ಹೆಚ್ಡಿಕೆ ಹಾಗೂ ಬಿಜೆಪಿ ನಾಯಕರ ವಿರುದ್ದ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹ; ರಾಜ್ಯಪಾಲರ ಬಳಿ ಕಾಂಗ್ರೆಸ್ ನಿಯೋಗ

ಹೆಚ್ಡಿಕೆ ಹಾಗೂ ಬಿಜೆಪಿ ನಾಯಕರ ವಿರುದ್ದ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹ; ರಾಜ್ಯಪಾಲರ ಬಳಿ ಕಾಂಗ್ರೆಸ್ ನಿಯೋಗ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮುಡಾ ನಿವೇಶನ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಬಗ್ಗೆ ಕಾಂಗ್ರೆಸ್ ಆಕ್ರೋಶ ತಣ್ಣಗಾಗಿಲ್ಲ. ಬಿಜೆಪಿ-ಜೆಡಿಎಸ್ ನಾಯಕರ ವಿರುದ್ದದ ಮನವಿಗಳಿಗೂ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಶನಿವಾರ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ. ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ. ಆದರೂ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ ಎಂದರು. ನಾಳೆ (ಶನಿವಾರ) ಕಾಂಗ್ರೆಸ್ ಶಾಸಕರು, ಸಂಸದರು, ಎಂಎಲ್‌ಸಿಗಳು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ. ಕುಮಾರಸ್ವಾಮಿ, ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಒತ್ತಾಯಿಸುತ್ತಾರೆ ಎಂದು ಸಿಎ. ತಿಳಿಸಿದರು. ಕುಮಾರಸ್ವಾಮಿ ವಿರುದ್ಧ ತನಿಖೆ ಆಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೂ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ನಮ್ಮ ಶಾಸಕರು ರಾಜ್ಯಪಾಲರನ್ನು ಭ...
KSRTCಯತ್ತ ಪ್ರಶಸ್ತಿಗಳ ಮೆರವಣಿಗೆ; ಮತ್ತೊಮ್ಮೆ 10ಕ್ಕೂ ಹೆಚ್ಚು ಪುರಸ್ಕಾರಗಳು

KSRTCಯತ್ತ ಪ್ರಶಸ್ತಿಗಳ ಮೆರವಣಿಗೆ; ಮತ್ತೊಮ್ಮೆ 10ಕ್ಕೂ ಹೆಚ್ಚು ಪುರಸ್ಕಾರಗಳು

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಷ್ಟ್ರೀಯ ಮಟ್ಟದ 8 ವೀಡಿಯಾ - ViDEA, 5 ಎಮ್ಕ್ಯೂಬ್ - mCUBE ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿಗಳನ್ನು ಪಡೆದು ಗಮನಸೆಳೆದಿದೆ. ವೀಡಿಯಾ ಪ್ರಶಸ್ತಿಗಳು:  ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಶ್ವಮೇಧ ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್) ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಶ್ವಮೇಧ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಂಬಾರಿ ಉತ್ಸವದ ಬ್ರಾಂಡಿಂಗ್ ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟ...
ಕಿತ್ತೂರು: ಬಿಜೆಪಿ ನಾಯಕನ ಅಪಹರಣ

ಕಿತ್ತೂರು: ಬಿಜೆಪಿ ನಾಯಕನ ಅಪಹರಣ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಳಗಾವಿ: ರಾಜಕೀಯ ಬೆಳವಣಿಗೆಗಳ ನಡುವೆಯೇ ಬಿಜೆಪಿ ನಾಯಕರೊಬ್ಬರ ಅಪಹರಣವಾಗಿದೆ. ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಅಪಹರಣ ಮಾಡಲಾಗಿದೆವೆಂಬ ಆರೋಪ ಕೇಳಿಬಂದಿದೆ. ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆ ಸೆಪ್ಟಂಬರ್ 3ಕ್ಕೆ ನಿಗದಿಯಾಗಿದ್ದು, ಬಿಜೆಪಿ 9, ಕಾಂಗ್ರೆಸ್ ಹಾಗೂ ಪಕ್ಷೇತರ ಸೇರಿ 9 ಸದಸ್ಯರ ಸಂಖ್ಯಾಬಲ ಇದೆ. ಹಾಗಾಗಿ ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ನಾಗರಾಜ್ ಅಸುಂಡಿ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇನ್ನೊಂದೆಡೆ, ಪಟ್ಟಣದ ಚೌಕಿಮಠದ ಬಳಿ ನಿಂತಿದ್ದ ನಾಗರಾಜನನ್ನು ಕೆಲವರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಅವರ ತಂದೆ ಬಸವರಾಜ್ ಅವರು ಕಿತ್ತೂರು ಠಾಣೆಗೆ ದೂರು ನೀಡಿದ್ದಾರೆ....
BMTC ಸಂಸ್ಥೆಗೆ ಮತ್ತೊಂದು ರಾಷ್ಟ್ರಮಟ್ಟದ ‘ಸ್ಕಾಚ್ ಪ್ರಶಸ್ತಿ’ಯ ಹಿರಿಮೆ

BMTC ಸಂಸ್ಥೆಗೆ ಮತ್ತೊಂದು ರಾಷ್ಟ್ರಮಟ್ಟದ ‘ಸ್ಕಾಚ್ ಪ್ರಶಸ್ತಿ’ಯ ಹಿರಿಮೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂ.ಮ.ಸಾ.ಸಂಸ್ಥೆಯು ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ QR ಕೋಡ್ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅತ್ಯಂತ ಸುಲಭವಾಗಿ ಮೆಟ್ರೊ ಫೀಡರ್ಗಳ ಸೇವೆಗಳ ಮಾಹಿತಿಯನ್ನು ಪಡೆಯುವ ಅನುಕೂಲತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ. ಮೆಟ್ರೊ ಫೀಡರ್ನ QR ಕೋಡ್ಗಳ ಬಳಕೆಯೊಂದಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ಮೆಟ್ರೊ ನಿಲ್ದಾಣವಾರು ಆಚರಣೆಯಾಗುವ ಮೆಟ್ರೊ ಫೀಡರ್ಗಳ ಸೇವೆಗಳ ವೇಳಾಪಟ್ಟಿ, ಮಾರ್ಗ, ಬಸ್ಸುಗಳ ನೈಜ-ಸಮಯ (Live tracking) ಮಾಹಿತಿ ದೊರೆಯುತ್ತದೆ. ಈ ವೈಶಿಷ್ಟ್ಯದಿಂದ ಬಳಕೆದಾರರು ಪ್ರಯಾಣವನ್ನು ಪರಿಣಾಮಕಾರಿಯಾಗಿ ಯೋಜಿಸಿಕೊಂಡು, ತಡೆರಹಿತ ಮತ್ತು ಆರಾಮದಾಯಕವಾಗಿ ತಮ್ಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿರುತ್ತದೆ. ದಿನಾಂಕ:28.08.2024 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂ.ಮ.ಸಾ.ಸಂಸ್ಥೆಗೆ ಮೆಟ್ರೊ ಫೀಡರ್‌ ಸೇವೆಗಳು (Smart City) ನಾಮನಿರ್ದೇಶನಕ್ಕೆ ಪ್ರತಿಷ್ಟಿತ ರಾಷ್ಟ್ರೀಯ ಸ್ಕಾಚ್ ಸಂಸ್ಥೆಯಿಂದ ಆರ್ಡರ್ ಆಫ್ ಮೇರಿಟ್ ಪ್ರಶಸ್ತಿ ಲಭಿಸಿದೆ. ಸ್ಕೋಚ್ ಗ್ರೂಪ್ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ, ವಿನೂತನ ಉಪಕ್ರಮಕ್ಕಾಗಿ...
BMTC: ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ನೋಡಲು ಅಂತರ್ಜಾಲ ಸೌಲಭ್ಯ; ಸಚಿವ ರಾಮಲಿಂಗರೆಡ್ಡಿ ಚಾಲನೆ

BMTC: ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ನೋಡಲು ಅಂತರ್ಜಾಲ ಸೌಲಭ್ಯ; ಸಚಿವ ರಾಮಲಿಂಗರೆಡ್ಡಿ ಚಾಲನೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯ ಗಮನಸೆಳೆದಿದೆ‌   ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸುಮಾರು 27,000 ಅಧಿಕಾರಿ /ನೌಕಕರು ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ಅಧಿಕಾರಿ/ನೌಕರರ ಭವಿಷ್ಯನಿದಿ/ಐಚ್ಛಿಕ ಭವಿಷ್ಯನಿಧಿ ಮಾಹೆಯಾನ ವಂತಿಗೆಗಳ ಮಾಹಿತಿಯನ್ನು ಈ ಹಿಂದೆ ಮುದ್ರಿತ ಚೀಟಗಳ ರೂಪದಲ್ಲಿ ಮುದ್ರಿಸಿ ಪ್ರತಿ ನೌಕರರಿಗೆ ವಾರ್ಷಿಕವಾರು ವಿತರಿಸಲಾಗುತ್ತಿತ್ತು. 2022-2023 ನೇ ಸಾಲಿನಿಂದ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ಬಳಸಿ ಆಂತರಿಕವಾಗಿಯೇ ಗಣಕ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ems.mybmtc.com/pf ತಂತ್ರಜ್ಞಾನದಲ್ಲಿ ಆನ್ಲೈನ್ ನಲ್ಲಿಯೇ ಪ್ರತಿ ನೌಕರನು ತನ್ನ ಮೊಬೈಲ್ನಲ್ಲಿಯೇ ಆತನ ಪಿ.ಎಫ್ ಸಂಖ್ಯೆಯನ್ನ ನಮೂದಿಸಿ ಆತನ ಖಾತೆಯಲ್ಲಿರುವ ಪಿ.ಎಫ್ ಮೊತ್ತ, ವಿ.ಪಿ.ಎಫ್ ಮೊತ್ತ, ಬಡ್ಡಿ ಮೊತ್ತ, ಮುಂಗಡಗಳ ವಿವರಗಳು (ಪ್ರಾರಂಭಿಕ/ಅಂತಿಮ ಶಿಲ್ಲುಗಳೊಂದಿಗೆ) ವೀಕ್ಷಿಸಲು ಅವಕಾಶ ಇದೀಗ ಕಲ್ಪಿಸಲಾಗ...
ಅಕ್ರಮ ಆಸ್ತಿ ಕೇಸ್; ಡಿಕೆಶಿಗೆ ರಿಲೀಫ್

ಅಕ್ರಮ ಆಸ್ತಿ ಕೇಸ್; ಡಿಕೆಶಿಗೆ ರಿಲೀಫ್

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಸಿಬಿಐ ಸಲ್ಲಿಸಿದ್ದ ಅರ್ಜಿ ಕುರಿತಂತೆ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ- ಸಿಬಿಐ ನಡುವಿನ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥ ಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಸಿಬಿಐ ಅರ್ಜಿಯನ್ನು ವಿಲೇವಾರಿ ಮಾಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ಕೋರ್ಟ್ ಸಲಹೆ ಮುಂದಿಟ್ಟಿದೆ....