ಕೇಂದ್ರದ ಅನುದಾನಕ್ಕಾಗಿ BJP-JDS ಪಾದಯಾತ್ರೆ ನಡೆಸಿದ್ದರೆ ರಾಜ್ಯಕ್ಕೆ ಒಳಿತಾಗುತ್ತಿತ್ತು..!
ಬೆಂಗಳೂರು: ಹಿಂದೆ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರು ಇದೀಗ ಪಾದಯಾತ್ರೆ ರಾಜಕಾರಣ ಮಾಡುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಇವರ ಜಂಟಿ ಹೋರಾಟ ಕೇಂದ್ರದಿಂದ ಅನುದಾನ ತರುವ ವಿಚಾರಕ್ಕೆ ನಡೆದಿದ್ದರೆ ರಾಜ್ಯಕ್ಕೆ ಒಳಿತಾಗುತ್ತಿತ್ತು ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ-ಜೆಡಿಎಸ್ ಈ ಹಿಂದೆ ಹಾವು ಮುಂಗುಸಿಯ ಹಾಗೆ ಕಿತ್ತಾಡುತ್ತಿದ್ದರು, ಈಗ ಅಧಿಕಾರಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಟೀಕಿಸಿರುವ ಅವರು ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಸಂಸತ್ತಿನಲ್ಲೂ ಮಾತನಾಡುವುದಿಲ್ಲ, ಹೊರಗಡೆಯೂ ಮಾತನಾಡುವುದಿಲ್ಲ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ-ಜೆಡಿಎಸ್ ಈ ಹಿಂದೆ ಹಾವು ಮುಂಗುಸಿಯ ಹಾಗೆ ಕಿತ್ತಾಡುತ್ತಿದ್ದರು, ಈಗ ಅಧಿಕಾರಕ್ಕಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಸಂಸತ್ತಿನಲ್ಲೂ ಮಾತನಾಡುವುದಿಲ್ಲ, ಹೊರಗಡೆಯೂ ಮಾತನಾಡುವುದಿಲ್ಲ.
ಈ...







