‘ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ, ಆ ಪಕ್ಷದಲ್ಲಿರುವವರೆಲ್ಲರೂ ಭ್ರಷ್ಟರೇ’; ರಾಮಲಿಂಗಾ ರೆಡ್ಡಿ
ರಾಮನಗರ: ಭಾರತೀಯ ಜನತಾ ಪಕ್ಷ. ಭ್ರಷ್ಟಾಚಾರದ ಗಂಗೋತ್ರಿ, ಆ ಪಕ್ಷದಲ್ಲಿ ಇರುವವರೆಲ್ಲರೂ ಭ್ರಷ್ಟರೇ ಆಗಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ – ಜೆಡಿಎಸ್ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ. ಭ್ರಷ್ಟಾಚಾರದ ಗಂಗೋತ್ರಿ ಬಿಜೆಪಿ. ಅಳ್ಲಿರುವವರೆಲ್ಲ ಭ್ರಷ್ಟರೇ, ಅವರನ್ನು ಕಡು ಭ್ರಷ್ಟರು ಎಂದರೆ ತಪ್ಪಿಲ್ಲ ಎಂದರು.
ಭ್ರಷ್ಟರಲ್ಲೇ ಅತಿ ಭ್ರಷ್ಟರು ಇರುವುದು ಬಿಜೆಪಿ ಪಕ್ಷದಲ್ಲಿ, ಹಾಗಾಗಿ ಅದೊಂದು ಭ್ರಷ್ಟಾಚಾರದ ಗಂಗೋತ್ರಿ.
ಬಿಜೆಪಿಯೇತರ ಪಕ್ಷಗಳಲ್ಲಿದ್ದ ಭ್ರಷ್ಟರನ್ನೆಲ್ಲ ಐಟಿ, ಇಡಿ ಮೂಲಕ ಹೆದರಿಸಿ, ಬೆದರಿಸಿ ಬಿಜೆಪಿಗೆ ಸೇರಿಸಿಕೊಂಡು ಹಲವು ಹುದ್ದೆಗಳನ್ನು ನೀಡಿದ್ದಾರೆ.
ಇಂತಹ ಭ್ರಷ್ಟರೆಲ್ಲ ಸೇರಿ ಅದು ಭ್ರಷ್ಟರ ಪಕ್ಷ ಆಗಿದೆ. ಅಂತಹ ಭ್ರಷ್ಟರು ಈಗ… pic.twitter.com/NW8KtwNhbR
— Karnataka Congress (@INCKarnataka) August 4, 2024
ದೇಶದಲ್ಲಿ ಭ್ರಷ್ಟಾಚ...



