Saturday, December 6

ಪ್ರಮುಖ ಸುದ್ದಿ

ಬಿಜೆಪಿ-ಜೆಡಿಎಸ್‌ನಿಂದ ಬಡಜನರ ವಿರುದ್ದ ಪಾದಯಾತ್ರೆ?

ಬಿಜೆಪಿ-ಜೆಡಿಎಸ್‌ನಿಂದ ಬಡಜನರ ವಿರುದ್ದ ಪಾದಯಾತ್ರೆ?

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
  ಮಂಡ್ಯ: ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಂಡ್ಯದಲ್ಲಿ ಮಂಗಳವಾರ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿ, ಬಿಜೆಪಿ-ಜೆಡಿಎಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು. “ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಧಮ್ ಇಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ಕೇವಲ ನನ್ನ ಮತ್ತು ಕುಮಾರಸ್ವಾಮಿ ಅವರ ವಿಚಾರವನ್ನೇ ಮಾಧ್ಯಮಗಳು ತೆಗೆದುಕೊಳ್ಳುತ್ತಿವೆ” ಪಾದಯಾತ್ರೆ ಬಗ್ಗೆ ಲೇವಡಿ ಮಾಡಿದರು. “ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿರುವುದು ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧವಲ್ಲ. ಈ ರಾಜ್ಯದ ಬಡಜನರ ವಿರುದ್ದ ಪಾದಯಾತ್ರೆ ಮಾಡುತ್ತಿದ್ದಾರೆ. ಈ ರಾಜ್ಯದ ಜನ ಕಾಂಗ್ರೆಸ್ ಗೆ ಶೇ. 43 ರಷ್ಟು ಮತ ನೀಡಿ 136 ಸ್ಥಾನ ನೀಡಿದ್ದಾರೆ. ಮಂಡ್ಯದಲ್ಲಿ 7 ಸ್ಥಾನ ಕೊಟ್ಟಿದ್ದಾರೆ. ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇದನ್ನು ನಿಲ್ಲಿಸಲು ಸರ್ಕಾರ ಬೀಳಿಸುವ ಹುನ್ನಾರ ಮ...
ಬಾಂಗ್ಲಾದೇಶ ಹಿಂಸಾಚಾರ ಬಗ್ಗೆ ಬ್ರಿಟೀಷ್ ಲೇಬರ್ ಪಾರ್ಟಿ ಕಳವಳ; ಶೀಘ್ರ ಶಾಂತಿ ಸ್ಥಾಪನೆಗೆ ಡಾ.ನೀರಜ್ ಪಾಟೀಲ್ ಕರೆ

ಬಾಂಗ್ಲಾದೇಶ ಹಿಂಸಾಚಾರ ಬಗ್ಗೆ ಬ್ರಿಟೀಷ್ ಲೇಬರ್ ಪಾರ್ಟಿ ಕಳವಳ; ಶೀಘ್ರ ಶಾಂತಿ ಸ್ಥಾಪನೆಗೆ ಡಾ.ನೀರಜ್ ಪಾಟೀಲ್ ಕರೆ

ದೇಶ-ವಿದೇಶ, ಪ್ರಮುಖ ಸುದ್ದಿ
📝 ಜಯ ಪ್ರಕಾಶ್ ಲಂಡನ್: ಭೀಕರ ಹಿಂಸಾಚಾರದಿಂದ ಬಾಂಗ್ಲಾದೇಶ ತ್ತರಿಸಿದೆ. ಉದ್ಯೋಗ ನೀತಿ ವಿರುದ್ದ ವಿದ್ಯಾರ್ಥಿಗಳು ಹಾಗೂ ವಿರೋಧ ಪಕ್ಷಗಳು ದಂಗೆ ಎದ್ದಿದ್ದು ನಿರಂತರ ಹಿಂಸಾಚಾರದಿಂದಾಗಿ ನೂರಾರು ಮಂದಿ ಬಲಿಯಾಗಿದ್ದಾರೆ. ಈ ಹಿಂಸಾಚರದಿಂದ ಬೆಚ್ಚಿದ ಶೇಖ್ ಹಸೀನಾ ಅವರು ಪ್ತಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನವಾಗಿದ್ದಾರೆ. ಬಾಂಗ್ಲಾದೇಶದ ಈ ಪರಿಸ್ಥಿತಿ ಬಗ್ಗೆ ಲಂಡನ್‌‌ನಲ್ಲಿರುವ ಬ್ರಿಟಿಷ್ ಲೇಬರ್ ಪಾರ್ಟಿ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬ್ರಿಟಿಷ್ ಲೇಬರ್ ಪಾರ್ಟಿ ನಾಯಕರೂ ಆದ, ಭಾರತ ಮೂಲದ ಮಾಜಿ ಲಂಡನ್ ಮೇಯರ್ ಡಾ.ನೀರಜ್ ಪಾಟೀಲ್, ಬಾಂಗ್ಲಾದೇಶದಲ್ಲಿ ಶೀಘ್ರ ಶಾಂತಿ ಮರುಸ್ಥಾಪಿಸಲು ವಿಶ್ವ ಸಮುದಾಯ ಸಹಕಾರ ನೀಡಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಬಾಂಗ್ಲಾದೇಶ ಸಂಸತ್ತು ವಿಸರ್ಜನೆಯಾಗಿದೆ, ಅದರ ಪ್ರಧಾನಿ ಈಗ ದೆಹಲಿಯಲ್ಲಿದ್ದಾರೆ. ಮುಂದಿನ ಮೂರು ತಿಂಗಳೊಳಗೆ ಚುನಾಯಿತ ಸರ್ಕಾರವನ್ನು ಮರುಸ್ಥಾಪಿಸುವ ಭರವಸೆಯೊಂದಿಗೆ ಮಿಲಿಟರಿ ಸ್ವಾಧೀನವಿದೆ. ಇದು ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯಾಗಿದೆ ಮತ್ತು ಬ್ರಿಟಿಷ್ ವಿದೇಶಾಂಗ ಕಚೇರಿ ಕೂಡಾ ಕಳವ...
ಹಿಂದು ಸೇವಾ ಪ್ರತಿಷ್ಠಾನ: ‘ಮನೆ ಮನಗಳ ಭೂಷಣ’ ಕೃತಿ ಬಿಡುಗಡೆ

ಹಿಂದು ಸೇವಾ ಪ್ರತಿಷ್ಠಾನ: ‘ಮನೆ ಮನಗಳ ಭೂಷಣ’ ಕೃತಿ ಬಿಡುಗಡೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವನವಾಸಿ ಕಲ್ಯಾಣ ಕರ್ನಾಟಕ ಮತ್ತು ಹಿಂದು ಸೇವಾ ಪ್ರತಿಷ್ಠಾನ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸ್ವರ್ಗೀಯ ಶ್ರೀ ಕೆ. ಎಸ್.ನಾಗಭೂಷಣ ಅವರ ಸ್ಮರಣಾರ್ಥ 'ಮನೆ ಮನಗಳ ಭೂಷಣ' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಆಗಸ್ಟ್ 6, 2024 ಸಂಜೆ ಶಂಕರಪುರದ ರಂಗರಾವ್ ರಸ್ತೆಯ ಉತ್ತುಂಗದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ, ಹಿರಿಯ ಕಾರ್ಯಕರ್ತ ವೈ.ಕೆ.ರಾಘವೇಂದ್ರ ರಾವ್, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಸಹಸರಕಾರ್ಯವಾಹ ಮುಕುಂದ ಸಿ.ಆರ್. ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು....
ಹಿಂದಿನ ಹೇಳಿಕೆಗಳ ಬಗ್ಗೆ ಯು ಟರ್ನ್ ಯಾಕೆ? ಹೆಚ್ಡಿಕೆ ಉತ್ತರಿಸಬೇಕು ಎಂದ ಡಿಕೆಶಿ 

ಹಿಂದಿನ ಹೇಳಿಕೆಗಳ ಬಗ್ಗೆ ಯು ಟರ್ನ್ ಯಾಕೆ? ಹೆಚ್ಡಿಕೆ ಉತ್ತರಿಸಬೇಕು ಎಂದ ಡಿಕೆಶಿ 

ಪ್ರಮುಖ ಸುದ್ದಿ, ರಾಜ್ಯ
ಮಂಡ್ಯ: “ಕುಮಾರಸ್ವಾಮಿ ಅವರು ಈ ಹಿಂದೆ ತಾವೇ ನೀಡಿರುವ ಯು ಟರ್ನ್ ಹೇಳಿಕೆಗಳ ಬಗ್ಗೆ ಉತ್ತರ ನೀಡಲಿ. ಅವರು ನುಡಿದಂತೆ ನಡೆಯಲಿ, ಕೊಟ್ಟ ಮಾತು ತಪ್ಪುವುದನ್ನು ಬಿಡಲಿ” ಎಂದು ಡಿಸಿಎಂ ಡಿಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದ ಮೈಶುಗರ್ ಕಾರ್ಖಾನೆ ಮೈದಾನದಲ್ಲಿ ಮಂಗಳವಾರ ನಡೆದ ʼಜನಾಂದೋಲನ ಸಭೆʼ ಯಲ್ಲಿ ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಅಶ್ವಥ್ ನಾರಾಯಣ್, ಯೋಗಿಶ್ವರ್ ಅವರು ಪರಸ್ಪರ ಆರೋಪ, ಪ್ರತ್ಯಾರೋಪ, ಯೂ ಟರ್ನ್ ಹೊಡೆದಿದ್ದ ಹೇಳಿಕೆಗಳನ್ನು ವಿಡಿಯೋ ಮೂಲಕ ತೆರೆಯ ಮೇಲೆ ಪ್ರದರ್ಶಿಸಿದ ನಂತರ ಡಿಸಿಎಂ ಶಿವಕುಮಾರ್ ಮಾತನಾಡಿದರು.“ಜನ ತೀರ್ಪು ನೀಡಿದ್ದಾರೆ. ಆದ ಕಾರಣಕ್ಕೆ ಗಂಡು ಭೂಮಿ ಮಂಡ್ಯದಲ್ಲಿ ಗೆಲುವು ಕಂಡಿದ್ದೀರಿ. ಇಲ್ಲಿಗೆ ಬಂದು ನಿಮ್ಮ ತಿರುವು-ಮುರುವು ಹೇಳಿಕೆಗಳ ಬಗ್ಗೆ ಉತ್ತರ ನೀಡಬೇಕು. ನಿಮ್ಮ ಅಮೃತದ ನುಡಿಮುತ್ತುಗಳನ್ನು ಈ ನೆಲದ ಮೇಲೆ ಉದುರಿಸಬೇಕು. ಯೂಟರ್ನ್ ಕುಮಾರ, ಕ್ಷಣಕ್ಕೊಂದು ಮಾತು ಕ್ಷಣಕ್ಕೊಂದು ಬಣ್ಣ”ಎಂದು ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ಛೇಡಿಸಿದರು. “ಮೋದಿ ಅವರ ಕೈ ಹಿಡಿದು ಕೇವಲ ಐದು ನಿಮಿಷದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕ...
ವಯನಾಡು ಸಂತ್ರಸ್ತರಿಗಾಗಿ ಮಿಡಿದ ಕರುನಾಡು ಹೃದಯಗಳು.. BTM, ಜಯನಗರ ಕ್ಷೇತ್ರಗಳಿಂದ 9 ಟ್ರಕ್‌ಗಳಲ್ಲಿ ಅಹಾರ, ಅಗತ್ಯವಸ್ತು ರವಾನೆ..

ವಯನಾಡು ಸಂತ್ರಸ್ತರಿಗಾಗಿ ಮಿಡಿದ ಕರುನಾಡು ಹೃದಯಗಳು.. BTM, ಜಯನಗರ ಕ್ಷೇತ್ರಗಳಿಂದ 9 ಟ್ರಕ್‌ಗಳಲ್ಲಿ ಅಹಾರ, ಅಗತ್ಯವಸ್ತು ರವಾನೆ..

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕೇರಳದ ವಯನಾಡಿನಲ್ಲಿ, ಹಾಗೂ ಕರಾವಳಿಯ ಶಿರೂರಿನಲ್ಲಿ ಭೂಕುಸಿತದಿಂದ ಸಂತ್ರಸ್ತರಾದ‌ ಬಡಪಾಯಿಗಳ ಬಗ್ಗೆ ಬೆಂಗಳೂರಿನ ಬಿಟಿಎಂ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳ ಜನರು ಅನುಕಂಪ ತೋರಿದ್ದಾರೆ. ಬಿಟಿಎಂ ಮತ್ತು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಯನಾಡು ಮತ್ತು ಶಿರೂರು ಸಂಭವಿಸಿದ ಭೂಕುಸಿತದ ದುರಂತಕ್ಕೆ ಸ್ಪಂದಿಸಲು ಪರಿಹಾರ ಸಾಮಾಗ್ರಿಗಳನ್ನು ರವಾನಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು (ಮಂಗಳವಾರ) ಸಾರಿಗೆ ಮತ್ತು ಮುಜರಾಯಿ‌ ಸಚಿವ ರಾಮಲಿಂಗಾ ರೆಡ್ಡಿ ಉಪಸ್ಥಿತಿಯಲ್ಲಿ, ಆಹಾರ, ಸಾಮಾಗ್ರಿಗಳನ್ನು ಹೊತ್ತ ಸುವಾರು 9 ಟ್ರಕ್ ಗಳಿಗೆ ಉಪಮುಖ್ಯಮಂತ್ರಿ ಡಿ.ಕೆ‌.ಶಿವಕುಮಾರ್ ಚಾಲನೆ ನೀಡಿದರು. ಸದರಿ ಟ್ರಕ್ ಗಳೊಂದಿಗೆ ಜಯನಗರದ ಮಾಜಿಬಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಕಾರ್ಪೊರೇಟರ್ ನಾಗರಾಜು, ಮಂಜುನಾಥ್‌ ಅವರನ್ನೊಳಗೊಂಡ ನಾಯಕರ ತಂಡ ಈ ಸಾಮಾಗ್ರಿಗಳ ಜೊತೆ ತೆರಳಿದೆ. ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ, ಪ್ರವಾಹದ ದುರಂತಕ್ಕೆ ನೂರಾರು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದು, ಅಪಾರ ಆಸ್ತಿಪಾಸ್ತ...
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತದಲ್ಲಿ ರಕ್ಷಣೆ; ಸರ್ವಪಕ್ಷ ಸಭೆಯಲ್ಲಿ ಸಹಮತ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತದಲ್ಲಿ ರಕ್ಷಣೆ; ಸರ್ವಪಕ್ಷ ಸಭೆಯಲ್ಲಿ ಸಹಮತ

ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಹಿಂಸಾಚಾರದಿಂದ ತತ್ತರಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ಬಳಿಕ ಭಾರತಕ್ಕೆ ಆಗಮಿಸಿದ್ದು, ಅವರಿಗೆ ರಕ್ಷಣೆ ನೀಡಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ಈ ನಿಲುವಿಗೆ ಸರ್ವಪಕ್ಷಗಳು ಸಹಮತ ಸೂಚಿಸಿವೆ. ಈ ಸಂಬಂಧ ನವ ದೆಹಲಿಯಲ್ಲಿ ಮಂಗಳವಾರ ನಡೆದ ಸರ್ವಪಕ್ಷ ಸಭೆ ಮಹತ್ವದ ನಿರ್ಣಯ ಅಂಗೀಕರಿಸಿದೆ. ಬಾಂಗ್ಲಾದೇಶದಿಂದ ಪಲಾಯನವಾಗಿರುವ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತದ ನೆರವು ನೀಡುವ ಕುರಿತು ಮಹತ್ವದ ನಿರ್ಣಯಕ್ಕೆ ಸರ್ವಪಕ್ಷಗಳು ಬೆಂಬಲಿಸಿವೆ. ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಕಲ ರೀತಿಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ....
ಮಂಗಳೂರಿನಲ್ಲಿ ವಾಹನ ಚಾಲಕರು ಗಮನಿಸಲೇಬೇಕು.. ಕರಾವಳಿಯ ಈ ಮಾರ್ಗಗಳಲ್ಲಿ ಗರಿಷ್ಟ ವೇಗದ ಮಿತಿ ನಿಗದಿ

ಮಂಗಳೂರಿನಲ್ಲಿ ವಾಹನ ಚಾಲಕರು ಗಮನಿಸಲೇಬೇಕು.. ಕರಾವಳಿಯ ಈ ಮಾರ್ಗಗಳಲ್ಲಿ ಗರಿಷ್ಟ ವೇಗದ ಮಿತಿ ನಿಗದಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಗಳೂರು, ಭಾರೀ‌ ಮಳೆ ಹಾಗೂ ಸರಣಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳಲ್ಲಿ ವಾಹನಗಳ ವೇಗದ ಮಿತಿಯನ್ನು‌ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭುಕುಸಿತದಿಂದಾಗಿ ಹಾನಿಯ ಹಿನ್ನೆಲೆಯಲ್ಲಿ ಹಾಗೂ ಅಪಘಾತಗಳನ್ನು ನಿಯಂತ್ರಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಿಯಮವನ್ನು ತಾತ್ಕಾಲಿಕವಾಗಿ ಜಾರಿಗೊಳಿಸಿದೆ. ರಾಷ್ಟ್ರೀಯ ಹೆದ್ದಾರಿ-66ರ ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ತೊಕ್ಕೊಟ್ಟು ನಡುವೆ ಹಾಗೂ ರಾಷ್ಟ್ರೀಯ ಹೆದ್ದಾರಿ-73ರ ಬಿ.ಸಿ. ರೋಡ್ ಮತ್ತು ನಂತೂರು ನಡುವೆ ವಾಹನಗಳ ವೇಗದ ಮಿತಿ ಗಂಟೆಗೆ 40 ಕಿಮೀ ನಿಗದಿಪಡಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ....
ಮೈಸೂರು ಪಾದಯಾತ್ರೆ ನಂತರ ‘ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರ ತಯಾರಿ..!

ಮೈಸೂರು ಪಾದಯಾತ್ರೆ ನಂತರ ‘ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ನಾಯಕರ ತಯಾರಿ..!

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮೂಡಾ ಹಗರಣ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡಿರುವಂತೆಯೇ, ಮತ್ತೊಂದೆಡೆ ವಾಲ್ಮಿಕಿ ಅಭಿವೃದ್ಧಿ ನಿಗಮದ ಹಗರಣ ಖಂಡಿಸಿ ಬಳ್ಳಾರಿ ಚಲೋಗೆ ಬಿಜೆಪಿ ತಯಾರಿ ನಡೆಸಿದೆ. ಬೆಂಗಳೂರು-ಮೈಸೂರು ಪಾದಯಾತ್ರೆ ಬೆನ್ನಲ್ಲೇ ಮತ್ತೊಂದು ಸಮಾವೇಶಕ್ಕೆ ಬಿಜೆಪಿ ತಯಾರಿ ನಡೆಸಿದ್ದು ಮಹರ್ಷಿ ವಾಲ್ಮೀಕಿ ಎಸ್‌ಟಿ ಅಭಿವೃದ್ಧಿ ನಿಗಮ ಅಕ್ರಮಗಳನ್ನು ಖಂಡಿಸಿ ಸದ್ಯದಲ್ಲೇ ಬಳ್ಳಾರಿಯಲ್ಲಿ ಈ ಬೃಹತ್ ಸಮಾವೇಶ ನಡೆಸಲು ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಅವರು ಈ ಸಂಬಂಧ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಳ್ಳಾರಿ ಭಾಗದ ಪ್ರಭಾವಿ ನಾಯಕ ಶ್ರೀರಾಮುಲು ಬೆಂಬಲಿಗರು ಕೂಡಾ ಬಳ್ಳಾರಿ ಚಲೋ ನಡೆಸುವ ತಯಾರಿಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಶ್ರೀರಾಮುಲು, ಬಳ್ಳಾರಿ ಭಾಗದಲ್ಲಿ ಮತ್ತೊಮ್ಮೆ ಪಾದಯಾತ್ರೆ ನಡೆಸಲು ತಮ್ಮಪಕ್ಷ ಉತ್ಸುಕವಾಗಿದೆ ಎಂದ...
ವಯನಾಡ್ ಸಂತ್ರಸ್ತರಿಗಾಗಿ 1 ಕೋ.ರೂ.ದೇಣಿಗೆ ಸಮರ್ಪಿಸಿದ ಚಿರಂಜೀವಿ, ರಾಮ್‌ಚರಣ್

ವಯನಾಡ್ ಸಂತ್ರಸ್ತರಿಗಾಗಿ 1 ಕೋ.ರೂ.ದೇಣಿಗೆ ಸಮರ್ಪಿಸಿದ ಚಿರಂಜೀವಿ, ರಾಮ್‌ಚರಣ್

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಹೈದರಾಬಾದ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದುರ್ಘಟನೆಯ ಸಂತ್ರಸ್ತರ ನೆರವಿಗೆ ಧಾವಿಸಿರುವ ದಕ್ಷಿಣ ಭಾರತದ ಖ್ಯಾತ ನಟರಾದ ಚಿರಂಜೀವಿ ಹಾಗೂ ರಾಮ್ ಚರಣ್ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ, ಈ ದುರಂತದಲ್ಲಿ 380ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸಾವಿರಾರು ಮಂದಿ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಸಂತ್ರಸ್ತರ ನೆರವಿಗೆ ಸಿನಿಮಾ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ. ಇದೇ ವೇಳೆ, ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅವರು ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ...
‘ಮೈಸೂರು ಪಾದಯಾತ್ರೆ’ ವೇಳೆ ಬಿಜೆಪಿ ಕಾರ್ಯಕರ್ತೆ ಸಾವು..

‘ಮೈಸೂರು ಪಾದಯಾತ್ರೆ’ ವೇಳೆ ಬಿಜೆಪಿ ಕಾರ್ಯಕರ್ತೆ ಸಾವು..

ಪ್ರಮುಖ ಸುದ್ದಿ, ರಾಜ್ಯ
ರಾಮನಗರ: ಮುಡಾ ಹಗರಣ ಖಂಡಿಸಿ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿತ್ತಿರುವ ಪಾದಯಾತ್ರೆ ನಡುವೆ ಕಾರ್ಯಕರ್ತೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಜೆಪಿ- ಜೆಡಿಎಸ್​ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ನಡೆಸತ್ತಿದ್ದು, ಮೂರನೇ ದಿನವಾದ ಸೋಮವಾರ ಈ ಜಾಥಾ ರಾಮನಗರ ಜಿಲ್ಲೆ ಪ್ರವೇಶಿಸಿದೆ. ಚನ್ನಪಟ್ಟಣದಲ್ಲಿ ಪಾದಯಾತ್ರೆಯಲ್ಲಿ ನಡೆಯುತ್ತಿರುವ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಬಸವನಗುಡಿಯ ಬಿಜೆಪಿ ಕಾರ್ಯಕರ್ತೆ ಗೌರಮ್ಮ ಅವರು ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದು, ಕೂಡಲೇ ಚನ್ನಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಾಗಲೇ ಅವರು ಗೌರಮ್ಮ ಕೊನೆಯುಸಿರೆಳೆದಿದ್ದಾರೆ. ಕಾರ್ಯಕರ್ತೆಯ ನಿಧನಕ್ಕೆ ಬಿಜೆಪಿ-ಜೆಡಿಎಸ್ ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ....