Saturday, December 6

ಸಿನಿಮಾ

‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ತೆಲುಗು ಚಿತ್ರರಂಗದ ಖ್ಯಾತ ನಟ ವಿಜಯ್ ದೇವರಕೊಂಡ ಅವರು ತಮ್ಮ ಸಂಗೀತ ವೀಡಿಯೊ ಸಾಹಿಬಾ ಪ್ರಚಾರ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ಘಟನೆ ಮುಂಬೈನಲ್ಲಿ ನಡೆದಿದೆ. ಶುಕ್ರವಾರ ಅವರು ಮುಂಬೈನ ಕಾಲೇಜ್ ಫೆಸ್ಟ್'ನಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಮೆಟ್ಟಿಲುಗಳಿಂದ ಜಾರಿಬಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಮುಂಬೈನ ಮಿಥಿಬಾಯಿ ಕಾಲೇಜ್'ನಲ್ಲಿ ನಟ ವಿಜಯ್ ದೇವರಕೊಂಡ ಅವರು ಬಿದ್ದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. Why do we fall, sir (#Kushi, #FamilyStar) So that we can learn to pick ourselves up (#VD12, #VD14)#VijayDevarakonda falls during #Sahiba promotions in Mumbai. But, nothing happened#VD #JasleenRoyal pic.twitter.com/rlqS2go6QD — Vishnu Writess (@VWritessss) November 8, 2024...
‘ಬಿಗ್‌ಬಾಸ್’ ಸ್ಪರ್ಧಿ ಧರ್ಮ, ಮಂಜ ಅಭಿನಯದ ‘ಟೆನೆಂಟ್’ ಬಿಡುಗಡೆಗೆ ಸಜ್ಜು

‘ಬಿಗ್‌ಬಾಸ್’ ಸ್ಪರ್ಧಿ ಧರ್ಮ, ಮಂಜ ಅಭಿನಯದ ‘ಟೆನೆಂಟ್’ ಬಿಡುಗಡೆಗೆ ಸಜ್ಜು

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ರಿಯಾಲಿಟಿ ಶೋ 'ಬಿಗ್‌ಬಾಸ್' ಸ್ಪರ್ಧಿಗಳಾಗಿರುವ ಧರ್ಮಕೀರ್ತಿರಾಜ್‌, ಉಗ್ರಂ ಮಂಜು ಅಭಿನಯದ 'ಟೆನಂಟ್' ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ತಿಂಗಳ 22ರಂದು ಈ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಬಿಗ್‌ಬಾಸ್' ಸ್ಪರ್ಧಿಗಳಾಗಿರುವ ಧರ್ಮಕೀರ್ತಿರಾಜ್‌, ಉಗ್ರಂ ಮಂಜು ಅವರು ಇದೀಗ ರಿಯಾಲಿಟಿ ಶೋ ಮನೆಯೊಳಗಿದ್ದಾರೆ. ಅವರಷ್ಟೇ ಅಲ್ಲ, ತಿಲಕ್, ರಾಕೇಶ್ ಮಯ್ಯ, ಸೋನು ಗೌಡ ಸಹಿತ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿ ಪಾತ್ರಗಳನ್ನು ಹಂಚಿಕೊಂಡಿವೆ. ಮಾಸ್ಟರ್ ಚಾಯ್ಸ್ ಕ್ರಿಯೇಶನ್‌ನಡಿ ನಾಗರಾಜ್ ಟಿ. ನಿರ್ಮಾಣ ಮಾಡಿರಿವ ಈ ಸಿನಿಮಾಕ್ಕೆ ಶ್ರೀಧರ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. https://youtu.be/vI4Ia4x2hCw?si=mqHS9-jbGMlvX4rA...
ನಟ ಶಾರುಖ್ ಖಾನ್’ಗೂ ಕೊಲೆ ಬೆದರಿಕೆ; ಆರೋಪಿಗಾಗಿ ಪೊಲೀಸ್ ಬಲೆ

ನಟ ಶಾರುಖ್ ಖಾನ್’ಗೂ ಕೊಲೆ ಬೆದರಿಕೆ; ಆರೋಪಿಗಾಗಿ ಪೊಲೀಸ್ ಬಲೆ

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಬಾಲಿವುಡ್ ತಾರೆಯರಿಗೆ ಜೀವಬೆದರಿಕೆಯ ಪ್ರಕರಣ ಮರುಕಳಿಸುತ್ತಲಿದ್ದು, ನಟ ಸಲ್ಮಾನ್ ಖಾನ್ ಬಳಿಕ ಶಾರುಖ್​ ಖಾನ್​ಗೆ ಕೊಲೆ ಬೆದರಿಕೆಯೊಡ್ಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿರುವ ಮುಂಬೈ ಪೊಲೀಸರು ಆರೋಪಿಗಾಗಿ ಬಲೇ ಬೀಸಿದ್ದಾರೆ. ನಟ ಶಾರುಖ್ ಖಾನ್ ಅವರಿಗೆ ಕರೆ ಮಾಡಿದ ವ್ಯಕ್ತಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ. 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನವೆಂಬರ್ 5 ರಂದು ಪ್ರಕರಣ ದಾಖಲಿಸಿಕೊಂಡ ಬಾಂದ್ರಾ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಯು ಛತ್ತೀಸ್ ಘಡದ ರಾಯ್‌ಪುರದಲ್ಲಿ ಇರಬಹುದೆಂಬ ಸುಳಿವು ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ....
ನವೆಂಬರ್ ಅಂತ್ಯಕ್ಕೆ ‘ಮೇಘ’ ಆಗಮನ

ನವೆಂಬರ್ ಅಂತ್ಯಕ್ಕೆ ‘ಮೇಘ’ ಆಗಮನ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಕಿರಣ್ ರಾಜ್ -ಕಾಜಲ್ ಕುಂದರ್ ನಟಿಸಿರುವ 'ಮೇಘ' ಚಿತ್ರ ನವೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರವನ್ನು ಚರಣ್ ನಿರ್ದೇಶಿಸಿದ್ದಾರೆ. ಶೋಭರಾಜ್, ಸುಂದರ್ ವೀಣಾ, ಸಂಗೀತಾ ಮುಂತಾದ ಕಲಾವಿದರು 'ಮೇಘ' ಚಿತ್ರದಲ್ಲಿ ನಟಿಸಿದ್ದಾರೆ. ಹನುಮಂತೇಗೌಡ, ಗಿರೀಶ್ ಶಿವಣ್ಣ, ತರಂಗ ವಿಶ್ವ ಅವರ ನಟನೆಯೂ ಗಮನಸೆಳೆಯಲಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತ ಹಾಗೂ ಜೋಯಲ್ ಸಕ್ಕರಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. https://www.youtube.com/watch?v=mKyslVuOb1Q...
ಬೆಂಗಳೂರಿನ BGS ಆಸ್ಪತ್ರೆಗೆ ನಟ ದರ್ಶನ್ ದಾಖಲು

ಬೆಂಗಳೂರಿನ BGS ಆಸ್ಪತ್ರೆಗೆ ನಟ ದರ್ಶನ್ ದಾಖಲು

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಬೆನ್ನು ನೋವಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್​ ಗ್ಲೋಬಲ್ ಆಸ್ಪತ್ರೆಗೆ ದರ್ಶನ್ ಅವರು ಶನಿವಾರ ದಾಖಲಾಗಿದ್ದಾರೆ. ದರ್ಶನ್ ಆಗಮನ ಹಿನಯ ಆಸ್ಪತ್ರೆಗೆ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ಕಾರಣದಿಂದಾಗಿ ಆಸ್ಪತ್ರೆ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ....
“ನಾನು ಧನ್ಯ”; ವೈದ್ಯೆ ಜೊತೆ ಡಾಲಿ ಮದುವೆ..! ಮನಮೋಹಕ ವೀಡಿಯೋ.. ಸುಂದರ ಸಾಲು..

“ನಾನು ಧನ್ಯ”; ವೈದ್ಯೆ ಜೊತೆ ಡಾಲಿ ಮದುವೆ..! ಮನಮೋಹಕ ವೀಡಿಯೋ.. ಸುಂದರ ಸಾಲು..

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ನಟ ಡಾಲಿ ಧನಂಜಯ್ ಅವರು ವೈದ್ಯೆಯನ್ನು ವಿವಾಹವಾಗಲಿದ್ದಾರೆ. ತಾವು ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಎಂಬವರೊಂದಿಗೆ ವಿವಾಹವಾಗುವ ಮಾಹಿತಿಯನ್ನು ಧನಂಜಯ್ ಹಂಚಿಕೊಂಡಿದ್ದಾರೆ. ಪ್ರೀತಿಯ ಕರುನಾಡಿಗೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯ ಕೋರಿ ಪೋಸ್ಟ್ ಹಾಕಿರುವ ಧನಂಜಯ್, 'ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ' ಎಂದು ಕೋರಿದ್ದಾರೆ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗೋಕು ಎಂದೂ ಬರೆದುಕೊಂಡಿದ್ದಾರೆ. ಸ್ತ್ರೀರೋಗ ತಜ್ಞೆಯಾಗಿರುವ ಧನ್ಯತಾ ಜೊತೆ ಡಾಲಿ ಧನಂಜಯ ಅವರು ಅನೇಕ ವರ್ಷಗಳ ಪರಿಚಯ ಹೊಂದಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ.   View this post on Instagram   A post shared by Daali Dhana...
ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು; ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಂತಿಲ್ಲ; ದರ್ಶನ್‌ಗೆ ಹೈಕೋರ್ಟ್ ಆದೇಶ

ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು; ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಂತಿಲ್ಲ; ದರ್ಶನ್‌ಗೆ ಹೈಕೋರ್ಟ್ ಆದೇಶ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ನಟ ದರ್ಶನ್ ತೂಗುದೀಪಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ, ಶಸ್ತ್ರಚಿಕಿತ್ಸೆಗೆ ಅವಕಾಶ ಕೋರಿಕೆಯನ್ನು ಮನ್ನಿಸಿ ಹೈಕೋರ್ಟ್ 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿರುವ ನಟ ದರ್ಶನ್​ಗೆ ಹೈಕೋರ್ಟ್ ಆದೇಶದಿಂದ ರಿಲೀಫ್ ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಜಾಮೀನು ಪಡೆದ ಬಳಿಕ ಪ್ರತಿ ವಾರವೂ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಬೇಕು. ಜೊತೆಗೆ ದರ್ಶನ್ ಪಾಸ್ಪೋರ್ಟನ್ನು ಕೋರ್ಟ್ ಸುಪರ್ದಿಗೆ ನೀಡಬೇಕು ಎಂದು ಸೂಚಿಸಿದೆ. ಈ ಜಾಮೀನು ಅವಧಿಯಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ಷರತ್ತು ವಿಧಿಸಿದೆ....
ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಕೊನೆಯಿಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಸಿಂಗಂ ಅಗೈನ್’; ಬಹು ತಾರಾಂಗಣವೇ ಬಂಡವಾಳ

‘ಸಿಂಗಂ ಅಗೈನ್’; ಬಹು ತಾರಾಂಗಣವೇ ಬಂಡವಾಳ

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಸಿಂಗಂ ಚಿತ್ರದ ಮುಂದಿನ ಆವೃತ್ತಿ ನಿರ್ಮಾಣವಾಗಿದ್ದು 'ಸಿಂಗಂ ಅಗೈನ್' ಹೆಸರಿನಲ್ಲಿ ಈ ಸಿನಿಮಾ ಕುತೂಹಲ ಕೆರಳಿಸಿದೆ. ಅಜೇಯ್ ದೇವಗನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಸಹಿತ ಹಲವರು 'ಸಿಂಗಂ ಅಗೈನ್' ಚಿತ್ರದಲ್ಲಿ ನಟಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಜೇಯ್ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾದ ಟ್ರೈಲರ್ ಬಗ್ಗೆ ನೆಟ್ಟಿಗರು ಸಕತ್ ಲೈಕ್ಸ್ ನೀಡಿದ್ದಾರೆ. https://www.youtube.com/watch?v=MD7v0-igVIM&t=64s&ab_channel=JioStudios...