Monday, September 8

ಸಿನಿಮಾ

ವಯನಾಡ್ ಸಂತ್ರಸ್ತರಿಗಾಗಿ 1 ಕೋ.ರೂ.ದೇಣಿಗೆ ಸಮರ್ಪಿಸಿದ ಚಿರಂಜೀವಿ, ರಾಮ್‌ಚರಣ್

ವಯನಾಡ್ ಸಂತ್ರಸ್ತರಿಗಾಗಿ 1 ಕೋ.ರೂ.ದೇಣಿಗೆ ಸಮರ್ಪಿಸಿದ ಚಿರಂಜೀವಿ, ರಾಮ್‌ಚರಣ್

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಹೈದರಾಬಾದ್: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ದುರ್ಘಟನೆಯ ಸಂತ್ರಸ್ತರ ನೆರವಿಗೆ ಧಾವಿಸಿರುವ ದಕ್ಷಿಣ ಭಾರತದ ಖ್ಯಾತ ನಟರಾದ ಚಿರಂಜೀವಿ ಹಾಗೂ ರಾಮ್ ಚರಣ್ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ, ಈ ದುರಂತದಲ್ಲಿ 380ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಸಾವಿರಾರು ಮಂದಿ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಸಂತ್ರಸ್ತರ ನೆರವಿಗೆ ಸಿನಿಮಾ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ. ಇದೇ ವೇಳೆ, ಮೆಗಾಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅವರು ಕೇರಳದ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ...
‘ವೇದಾ’ ಬಗ್ಗೆ ಹೆಚ್ಚಿದ ನಿರೀಕ್ಷೆ; ಟ್ರೇಲರ್ ಬಗ್ಗೆ ಸಕತ್ ಮೆಚ್ಚುಗೆ

‘ವೇದಾ’ ಬಗ್ಗೆ ಹೆಚ್ಚಿದ ನಿರೀಕ್ಷೆ; ಟ್ರೇಲರ್ ಬಗ್ಗೆ ಸಕತ್ ಮೆಚ್ಚುಗೆ

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಸಿನಿರಂಗದಲ್ಲಿ 'ವೇದಾ' ಚಿತ್ರದ ತೀವ್ರ ಕುತೂಹಲ ಕೆರಳಿಸಿದೆ. ನಟ ಜಾನ್ ಅಬ್ರಹಾಂ ಮತ್ತು ಶ್ರಾವರಿ ಅವರು 'ವೇದಾ'ದಲ್ಲಿ ನಟಿಸಿದ್ದು, ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಿಖಿಲ್ ಅಡ್ವಾಣಿ ಅವರು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಟ್ರೇಲರ್ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷೆಯ ಈ‌ ಸಿನಿಮಾ ಸ್ವಾತಂತ್ರ್ಯ ದಿನದಂದು ತೆರೆಕಾಣಲಿದೆ ಎಂದು ನಟ ಜಾನ್ ಅಬ್ರಹಾಂ ಮಾಹಿತಿ ಹಂಚಿಕೊಂಡಿದ್ದಾರೆ. https://youtu.be/eGfYMhdKR0Q?si=A6zsAKIgaFrI_LO6...
ಸನಿಲೋಕದ ರಂಜನೆಗೆ ‘ಸಿಟಡೆಲ್: ಹನಿ ಬನ್ನಿ’ ಸಾಕ್ಷಿಯಾಗಲಿದೆ..!

ಸನಿಲೋಕದ ರಂಜನೆಗೆ ‘ಸಿಟಡೆಲ್: ಹನಿ ಬನ್ನಿ’ ಸಾಕ್ಷಿಯಾಗಲಿದೆ..!

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ಸಿನಿಮಾ
ಸಿಟಡೆಲ್: ಹನಿ ಬನ್ನಿ ಟೀಸರ್ ಅನ್ನು ಸಿನಿ ಅಭಿಮಾನಿಗಳು ಸಕತ್ತಾಗಿ ಎಂಜಾಯ್ ಮಾಡಿದ್ದಾರಂತೆ. ಹೀಗೆಂದು ಸಿನಿ ತಂಡ ಸಂತಸ ಹಂಚಿಕೊಂಡಿದೆ. https://youtu.be/J2rYqO15lJk?si=6K89Az2k34UPm0V3 ನಟಿ ಸಮಂತಾ ರೂತ್ ಪ್ರಭು ಮತ್ತು ವರುಣ್ ಅಭಿನಯದ ಸಿಟಡೆಲ್: ಹನಿ ಬನ್ನಿ ಟೀಸರ್ ಬಿಡುಗಡೆಯಾಗಿದ್ದು ನೆಟ್ಟಿಗರಿಂದ ಸಕತ್ ಲೈಕ್ಸ್ ಸಿಕ್ಕಿದೆ. ಈ ಚಿತ್ರವನ್ನು ರಾಜ್ ಮತ್ತು ಡಿ.ಕೆ. ನಿರ್ದೇಶಿಸಿದ್ದಾರೆ. ಸಿನಿ ಲೋಕದಲ್ಲಿ ಮತ್ತೊಂದು ರಂಜನೆಯ ಕ್ಷಣಗಳಿಗೆ ಈ ಸಿನಿಮಾ ಸಾಕ್ಷಿಯಾಗಲಿದೆ ಎಂಬ ಕಮೆಂಟ್ಸ್ ಗಮನಸೆಳೆದಿದೆ....
ವಯನಾಡು ಸಂತ್ರಸ್ತರ ನೆರವಿಗೆ ಧಾವಿಸಿದ ನಟಿ ರಶ್ಮಿಕಾ ಮಂದಣ್ಣ

ವಯನಾಡು ಸಂತ್ರಸ್ತರ ನೆರವಿಗೆ ಧಾವಿಸಿದ ನಟಿ ರಶ್ಮಿಕಾ ಮಂದಣ್ಣ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ದುರ್ಘಟನೆ ನೂರಾರು ಮಂದಿಯನ್ನು ಬಲಿತೆಗೆದುಕೊಂಡಿದೆ. ನೂರಾರು ಕುಟುಂಬಗಳ ಬದುಕು ಬೀದಿಗೆ ಬಿದ್ದಿವೆ. ಅಸಂಖ್ಯ ಮಂದಿ ಇನ್ನೂ ನಾಪತ್ತೆಯಾಗಿದ್ದು, ಸಂತ್ರಸ್ತರ ಆಕ್ರಂದನ ಮುಗಿಲುಮುಟ್ಟಿದೆ. ಈ ದುರ್ಘಟನೆಯಿಂದಾಗಿ ವಯನಾಡಿನಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ತಮ್ಮವರನ್ನು ಕಳೆದುಕೊಂಡವರ ರೋದನ ಮನಕಲಕುವಂತಿದೆ. ಈ ಸಂದರ್ಭದಲ್ಲಿ ನಟಿ ಕನ್ನಡತಿ ರಶ್ಮಿಕಾ ಮಂದಣ್ಣ ಮಾನವೀಯತೆ ಮೆರೆದಿದ್ದಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ರಶ್ಮಿಕಾ ನಡೆಯಿಂದ ಪ್ರೇರಿತವಾಗಿರುವ ಅನೇಕ ಸಿನಿಮಾ ತಾರೆಯರು ಧನಸಹಾಯಕ್ಕೆ ಮುಂದಾಗಿದ್ದಾರೆ....