Friday, April 3

ಸಿನಿಮಾ

ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು; ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಂತಿಲ್ಲ; ದರ್ಶನ್‌ಗೆ ಹೈಕೋರ್ಟ್ ಆದೇಶ

ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು; ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಂತಿಲ್ಲ; ದರ್ಶನ್‌ಗೆ ಹೈಕೋರ್ಟ್ ಆದೇಶ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ನಟ ದರ್ಶನ್ ತೂಗುದೀಪಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ದರ್ಶನ್​ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ, ಶಸ್ತ್ರಚಿಕಿತ್ಸೆಗೆ ಅವಕಾಶ ಕೋರಿಕೆಯನ್ನು ಮನ್ನಿಸಿ ಹೈಕೋರ್ಟ್ 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿರುವ ನಟ ದರ್ಶನ್​ಗೆ ಹೈಕೋರ್ಟ್ ಆದೇಶದಿಂದ ರಿಲೀಫ್ ಸಿಕ್ಕಿದೆ.ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಜಾಮೀನು ಪಡೆದ ಬಳಿಕ ಪ್ರತಿ ವಾರವೂ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಬೇಕು. ಜೊತೆಗೆ ದರ್ಶನ್ ಪಾಸ್ಪೋರ್ಟನ್ನು ಕೋರ್ಟ್ ಸುಪರ್ದಿಗೆ ನೀಡಬೇಕು ಎಂದು ಸೂಚಿಸಿದೆ. ಈ ಜಾಮೀನು ಅವಧಿಯಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ಷರತ್ತು ವಿಧಿಸಿದೆ....
ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಕಿಚ್ಚ ಸುದೀಪ್‌ಗೆ ಮಾತೃ ವಿಯೋಗ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ವಿಧಿವಶರಾಗಿದ್ದಾರೆ.ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ಕೊನೆಯಿಸಿರೆಳೆದಿದ್ದಾರೆ.ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸರೋಜಾ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಸಿಂಗಂ ಅಗೈನ್’; ಬಹು ತಾರಾಂಗಣವೇ ಬಂಡವಾಳ

‘ಸಿಂಗಂ ಅಗೈನ್’; ಬಹು ತಾರಾಂಗಣವೇ ಬಂಡವಾಳ

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಸಿಂಗಂ ಚಿತ್ರದ ಮುಂದಿನ ಆವೃತ್ತಿ ನಿರ್ಮಾಣವಾಗಿದ್ದು 'ಸಿಂಗಂ ಅಗೈನ್' ಹೆಸರಿನಲ್ಲಿ ಈ ಸಿನಿಮಾ ಕುತೂಹಲ ಕೆರಳಿಸಿದೆ.ಅಜೇಯ್ ದೇವಗನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಸಹಿತ ಹಲವರು 'ಸಿಂಗಂ ಅಗೈನ್' ಚಿತ್ರದಲ್ಲಿ ನಟಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಜೇಯ್ ದೇವಗನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾದ ಟ್ರೈಲರ್ ಬಗ್ಗೆ ನೆಟ್ಟಿಗರು ಸಕತ್ ಲೈಕ್ಸ್ ನೀಡಿದ್ದಾರೆ.https://www.youtube.com/watch?v=MD7v0-igVIM&t=64s&ab_channel=JioStudios...
ನಟಿ ರಾಧಿಕಾ ಕುಮಾರಸ್ವಾಮಿಯಾ ‘ಭೈರಾದೇವಿ’ ಅವತಾರಕ್ಕೆ ವೀಕ್ಷಕರು ಫಿದಾ

ನಟಿ ರಾಧಿಕಾ ಕುಮಾರಸ್ವಾಮಿಯಾ ‘ಭೈರಾದೇವಿ’ ಅವತಾರಕ್ಕೆ ವೀಕ್ಷಕರು ಫಿದಾ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಭೈರಾದೇವಿ' ಚಿತ್ರ ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಬಿಡುಗಡೆಯಾಗಿದ್ದು ಸಿನಿಲೋಕದಲ್ಲಿ ವಿಶೇಷ ಪ್ರಯೋಗ ಎಂದೇ ವೀಕ್ಷಕರು ಪ್ರತಿಪಾದಿಸಿದ್ದಾರೆ. 'ಭೈರಾದೇವಿ' ಟ್ರೈಲರ್ ಕೂಡಾ ನೆಟ್ಟಿಗರ ಕುತೂಹಲದ ಕೇಂದ್ರಬಿಂದುವಾಗಿದೆ. ಶ್ರೀಜೈ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಜೊತೆ ರಮೇಶ್ ಅರವಿಂದ್ ಕೂಡಾ ಅಭಿನಯಿಸಿದ್ದಾರೆ.https://www.youtube.com/watch?v=Jr3up-ZFm4A&t=4s...
ಅರ್ಷದ್ ವಾರ್ಸಿ, ಮೆಹರ್ ವಿಜ್ ನಟನೆಯ ‘ಬಂದಾ ಸಿಂಗ್ ಚೌಧರಿ’ ಬಗ್ಗೆ ವೀಕ್ಷಕರ ಲೈಕ್ಸ್ ಹೀಗಿದೆ

ಅರ್ಷದ್ ವಾರ್ಸಿ, ಮೆಹರ್ ವಿಜ್ ನಟನೆಯ ‘ಬಂದಾ ಸಿಂಗ್ ಚೌಧರಿ’ ಬಗ್ಗೆ ವೀಕ್ಷಕರ ಲೈಕ್ಸ್ ಹೀಗಿದೆ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ನಟ ಅರ್ಷದ್ ವಾರ್ಸಿ ಮತ್ತು ಮೆಹರ್ ವಿಜ್ ನಟನೆಯ ಬಂದಾ ಸಿಂಗ್ 'ಚೌಧರಿ' ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ವೀಕ್ಷಕರು ಕೂಡಾ ಸಿನಿಮಾ ಬಗ್ಗೆ ಫಿದಾ ಆಗಿದ್ದಾರಂತೆ. ಈ ಸಿನಿಮಾದ ಟ್ರೈಲರ್ ಕೂಡಾ ಭಾರೀ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಲೈಕ್ಸ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದೆ. ಅದರಂತೆ ಸಿನಿಮಾ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರವನ್ನು ಅಭಿಷೇಕ್ ಸಕ್ಸೆನಾ ನಿರ್ದೇಶಿಸಿದ್ದಾರೆ.https://www.youtube.com/watch?v=4noS-o_9q0o&t=2s...
ಜೈಲರ್ ನಂತರ ʼವೆಟ್ಟೈಯನ್‌ʼ; ರಜನಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ

ಜೈಲರ್ ನಂತರ ʼವೆಟ್ಟೈಯನ್‌ʼ; ರಜನಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ʼಜೈಲರ್‌ʼ ಬಳಿಕ ರಜಿನಿಕಾಂತ್‌ ಖಾಕಿ ತೊಟ್ಟು ವಿಶೇಷ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಶೇಷ ಪಾತ್ರದ ʼವೆಟ್ಟೈಯನ್‌ʼ ಚಿತ್ರ ಸಿನಿ ಲೋಕದಲ್ಲಿ ಕುತೂಹಲ ಕೆರಳಿಸಿದೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ʼವೆಟ್ಟೈಯನ್‌ʼ ಟ್ರೇಲರ್ ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಮಿತಾಭ್ ಬಚ್ಚನ್ ಕೂಡಾ ವಿಶೇಷ ಪಾತ್ರದಲ್ಲಿ ಗಮನಸೆಳೆದಿದ್ದಾರೆ.https://youtu.be/zPqMbwmGC1U?si=Kn7rPkKdUMYJUUlu
ಸೂಪರ್‌ಸ್ಟಾರ್ ರಜನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಸೂಪರ್‌ಸ್ಟಾರ್ ರಜನಿಕಾಂತ್ ಅಸ್ವಸ್ಥ; ಆಸ್ಪತ್ರೆಗೆ ದಾಖಲು

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ ರಜಿನಿಕಾಂತ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸೋಮವಾರ ಅವರನ್ಬು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೊಟ್ಟೆ ನೋವು ಕಾಣಿಸಿಕೊಂಡು ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’: ಮತ್ತೊಂದು ವೀಡಿಯೋ ರಿವೀಲ್

ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’: ಮತ್ತೊಂದು ವೀಡಿಯೋ ರಿವೀಲ್

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’ ಸಿನಿಮಾದ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್​ 27ರಂದು ‘ದೇವರ’ ಸಿನಿಮಾ ಬಿಡುಗಡೆ​ ಆಗಲಿದೆ.ಇದೇ ಸಂದರ್ಭದಲ್ಲಿ 'ದೇವರ' ಚಿತ್ರದ ಮತ್ತೊಂದು ಟ್ರೇಲರ್ ಬಿಡುಗಡೆಯಾಗಿದೆ. 'ಆರ್​ಆರ್​ಆರ್​’ ಸಿನಿಮಾ ಬಳಿಕ ಜೂನಿಯರ್​ ಎನ್‌ಟಿಆರ್​ ಅವರು ಈ ಚಿತ್ರದಲ್ಲಿ ಕಮಾಲ್ ಪ್ರದರ್ಶಿಸಲಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.https://youtu.be/HNYA6bqL6bU?si=nIRtqhPMISPhVIbJ...
ಬಂಧನವಾಗಿ 100 ದಿನಗಳ ನಂತರ ಜಾಮೀನಿಗಾಗಿ ದರ್ಶನ್ ಅರ್ಜಿ

ಬಂಧನವಾಗಿ 100 ದಿನಗಳ ನಂತರ ಜಾಮೀನಿಗಾಗಿ ದರ್ಶನ್ ಅರ್ಜಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರು ಕೊನೆಗೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.57ನೇ ಸಿಟಿ ಸಿವಿಲ್ ನ್ಯಾಯಾಲಯವು ದರ್ಶನ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಗ್ಯಾಂಗ್ ಬಂಧನವಾಗಿ 100 ದಿನಗಳ ಬಳಿಕ ನಟ ಜಾಮೀನು ಕೋರಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ....