ಕುಡ್ಲದ ‘ಪಾತಕ ಲೋಕ’ ಮಟ್ಟಹಾಕಿದ್ದ ಪೋಲೀಸ್ ಕಥೆ ಅಂದು.. ಆ ಪಾತಕ ಜಗತ್ತಿನ ಜೊತೆ ಇದೀಗ ಹೊಸತೊಂದು ಸಿನಿ ಕಥೆಯ ಝಲಕ್
ತುಳುನಾಡಿನ ಭೂಗತ ಇತಿಹಾಸ ಕರಾವಳಿಗಷ್ಟೇ ಸೀಮಿತವಲ್ಲ. ಮುಂಬೈ ಸಹಿತ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಾಚಿಕೊಂಡದ್ದು ಕರಾಳ ಸತ್ಯ. ಅದರಲ್ಲೂ ಮಂಗಳೂರು ಸುತ್ತಮುತ್ತಲ ಪಾತಕ ಸಾಮ್ರಾಜ್ಯದ ಘಟನಾವಳಿಗಳು ರೋಮಾಂಚನ. ಪ್ರತಿಯೊಂದು ಕೃತ್ಯವೂ ಕರಾಳತೆಯ ಸನ್ನಿವೇಶವನ್ನು ಹುಟ್ಟುಹಾಕಿತ್ತು. ಆದರೆ ಖಡಕ್ ಪೋಲೀಸ್ ಅಧಿಕಾರಿಗಳ ಖದರ್ ಕುಡ್ಲದ ಕೆಲವು ಪುಂಡರ ಗ್ಯಾಂಗನ್ನು ಮಟ್ಟ ಹಾಕಿತ್ತು. ಇದೀಗ ಆ ಭೂಗತ ಜಗತ್ತು ಮತ್ತು ಖಾಕಿ ಖಾದರ್ ಸನ್ನಿವೇಶಗಳನ್ನು ನೆನಪಿಸುವ ಕಥೆಯು ಬೆಳ್ಳಿತೆರೆಯಲ್ಲಿ ಪ್ರತಿಧ್ವನಿಸಲಿದೆ.
ಏನಿದು ಕಥಾಹಂದರ?
ಕುಡ್ಲದ ಪಾತಕ ಲೋಕವನ್ನು ಸಿಡಿಗುಂಡಿನ ಚಂಡಮದ್ದಳೆ ಎಂಬುದಾಗಿ ಹೆಸರಾಂತ ಪತ್ರಕರ್ತ ರವಿಬೆಳಗೆರೆ ಬಣ್ಣಿಸಿದ್ದರು. ಕುಡ್ಲ ಅಂದರೆ ತುಳುನಾಡಿನ ರಾಜಧಾನಿ.
ಈ ತುಳುನಾಡು ಒಂದು ಕಾಲದಲ್ಲಿ ಪಾತಕ ಲೋಕದ ಹೆಡ್ ಕ್ವಾಟ್ರಾಸ್! ಏಳು ಕಡಲಾಚೆ ಕುಳಿತು ಭೂಗತ ಜಗತ್ತನ್ನು ಆಳಿದವರೆಲ್ಲ ಇಲ್ಲಿಂದಲೇ ಫೀಲ್ಡ್ ಗೆ ಎಂಟ್ರಿ ಕೊಟ್ಟವರು. ಎಕ್ಕೂರು, ಎಮ್ಮೆಕೆರೆ, ಬೋಳಾರ, ಮಠದ ಕಣಿ, ಬಳ್ಳಾಲ್ ಬಾಗ್, ಬರ್ಕೆ, ವಾಮಂಜೂರು, ಹೀಗೆ ಗಲ್ಲಿಗೊಂದರಂತೆ ಕುಡ್ಲದ ಪಾತಕ ಲೋಕ ಗರಿ ಬಿಚ್ಚಿತ್ತು. ಜಯಂತ್ ...







