Friday, January 30

Focus

25 ಕ್ಕೂ ಹೆಚ್ಚು ದೇಶಗಳಲ್ಲಿ ಸಾಂಪ್ರದಾಯಿಕ ಔಷಧ ವ್ಯವಸ್ಥೆಯಾಗಿ ‘ಆಯುರ್ವೇದ’

25 ಕ್ಕೂ ಹೆಚ್ಚು ದೇಶಗಳಲ್ಲಿ ಸಾಂಪ್ರದಾಯಿಕ ಔಷಧ ವ್ಯವಸ್ಥೆಯಾಗಿ ‘ಆಯುರ್ವೇದ’

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಆಯುರ್ವೇದವು ಈಗ 25 ಕ್ಕೂ ಹೆಚ್ಚು ದೇಶಗಳಲ್ಲಿ ಸಾಂಪ್ರದಾಯಿಕ ಔಷಧ ವ್ಯವಸ್ಥೆಯಾಗಿ ಕಾನೂನುಬದ್ಧವಾಗಿ ಗುರುತಿಸಲ್ಪಟ್ಟಿದೆ ಮತ್ತು ಭಾರತೀಯ ಆಯುಷ್ ವಲಯದ ಮಾರುಕಟ್ಟೆ ಗಾತ್ರವು 2014 ರಲ್ಲಿ $3 ಬಿಲಿಯನ್‌ನಿಂದ 2022 ರಲ್ಲಿ $23.3 ಶತಕೋಟಿಗೆ ವಿಸ್ತರಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಪ್ರತಾಪ್ರ ರಾವ್ ಜಾದವ್ ತಿಳಿಸಿದ್ದಾರೆ. "ಆಯುಷ್ ವೀಸಾದಿಂದ ಸುಗಮಗೊಳಿಸಲಾದ ಆಯುಷ್ ಆಧಾರಿತ ವೈದ್ಯಕೀಯ ಪ್ರವಾಸೋದ್ಯಮದ ವಿಸ್ತರಣೆಯು ಭಾರತದಲ್ಲಿ ಚಿಕಿತ್ಸೆ ಪಡೆಯುವ ಅಂತರರಾಷ್ಟ್ರೀಯ ರೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದೆ" ಎಂದು ಅವರು ಹೇಳಿದರು. ದೇಶದಲ್ಲಿ ಆಯುಷ್‌ನ ಜನಪ್ರಿಯತೆಯ ಕುರಿತು ವಿವರಿಸಿದ ಅವರು, ಜುಲೈ 2022 ರಿಂದ ಜೂನ್ 2023 ರ ನಡುವೆ ನಡೆಸಿದ ರಾಷ್ಟ್ರೀಯ ಮಾದರಿ ಸಮೀಕ್ಷೆಯ (ಎನ್‌ಎಸ್‌ಎಸ್) 79 ನೇ ಸುತ್ತಿನ ಭಾಗವಾಗಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿಯನ್ನು ಉಲ್ಲೇಖಿಸಿದ್ದಾರೆ ಎಂದರು. "ಆಯುಷ್ ರಫ್ತುಗಳು 2014 ರಲ್ಲಿ $1.09 ಶತಕೋಟಿಯಿಂದ 2020 ರಲ್ಲಿ $1.54 ಶತಕೋಟಿಗೆ ಏರಿಕೆಯಾಗಿದೆ. 900 DPIIT-ಮನ್ನಣೆ ಪಡೆದ ಆಯುಷ್ ಸ್ಟಾರ್ಟಪ್‌ಗ...
ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ವರದಿ ಮಂಡನೆ: ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ

ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ವರದಿ ಮಂಡನೆ: ರಾಜ್ಯಸಭೆಯಲ್ಲಿ ಗದ್ದಲ, ಕೋಲಾಹಲ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ವರದಿಯನ್ನು ರಾಜ್ಯಸಭೆಯಲ್ಲಿ ಇಂದು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವೆ ಗದ್ದಲ ಕೋಲಾಹಲ ಏರ್ಪಟ್ಟು ಸದನವನ್ನು ಮುಂದೂಡಲಾಯಿತು. ಜೆಪಿಸಿ ಸದಸ್ಯರಾದ ಬಿಜೆಪಿ ಸಂಸದೆ ಮೇಧಾ ವಿಶ್ರಮ್ ಕುಲಕರ್ಣಿ ಅವರು ಇಂದು ವರದಿಯನ್ನು ಮಂಡಿಸಿದರು. ಜೆಪಿಸಿ ವರದಿ ಮಂಡನೆಯಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಗದ್ದಲ ಕೋಲಾಹಲದ ನಡುವೆ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದವು. ಈ ವೇಳೆ ಸದಸ್ಯರನ್ನು ಸಮಾಧಾನ ಪಡಿಸಲೆತ್ತನಿಸಿದ ಸಭಾಧ್ಯಕ್ಷ ಜಗದೀಪ್ ಧಂಖರ್ ಅವರು, ರಾಷ್ಟ್ರಪತಿಗಳಿಗೆ ಅಗೌರವ ತೋರಿಸುವಂತಹಾ ನಡೆ ಸರಿಯಲ್ಲ ಎಂದರಲ್ಲದೆ, ಸದಸ್ಉರನ್ನು ತಮ್ಮ ಸ್ಥಾನದಲ್ಲಿ ಕುಳಿತುಕೊಳ್ಳುವಂತೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಬೇಕು ಎಂದು ಮನವಿ ಮಾಡಿದರು. ಆದರೆ ವಿರೋಧ ಪಕ್ಷಗಳ ಸಂಸದರು ಒಪ್ಪಲಿಲ್ಲ. ಈ ಗದ್ದಲದ ನಡುವೆ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು....
ವಿಜಯ್ ದೇವರಕೊಂಡ ಅವರ 12ನೇ ಸಿನಿಮಾ ‘ಕಿಂಗ್​ಡಮ್’; ಟೀಸರ್ ಅನಾವರಣ

ವಿಜಯ್ ದೇವರಕೊಂಡ ಅವರ 12ನೇ ಸಿನಿಮಾ ‘ಕಿಂಗ್​ಡಮ್’; ಟೀಸರ್ ಅನಾವರಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ..  Actor Vijay Deverakonda’s next titled Kingdom; Film to hit screens on May 30 ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾ ಬಗ್ಗೆ ಇದ್ದ ಕುತೂಹಲ ತಣ್ಣಗಾಗಿದೆ. ಈ ವರೆಗೂ ವಿಜಯ್ ದೇವರಕೊಂಡ ಅವರ ಮುಂಬರುವ ಸಿನಿಮಾವನ್ನು ‘VD12’ ಎಂದು ಕರೆಯಲಾಗುತ್ತಿತ್ತು. ಇದೀಗ ಚಿತ್ರದ ಟೈಟಲ್ ಅನಾವರಣ ಆಗಿದೆ. ಟೀಸರ್​ ಕೂಡ ಬಿಡುಗಡೆ ಆಗಿದ್ದು, ನೂತನ ಸಿನಿಮಾಗೆ ‘ಕಿಂಗ್​ಡಮ್’ ಎಂದು ಹೆಸರಿಡಲಾಗಿದೆ. https://youtu.be/McPGQ-Nb9Uk?si=crsksyReJMcXmBEC ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ‘ಕಿಂಗ್​ಡಮ್​’ ಸಿನಿಮಾದ ಟೀಸರ್ ಬಿಡುಗಡೆಯಾಗಿವೆ. ತೆಲುಗಿನಲ್ಲಿ ಜೂನಿಯರ್​ ಎನ್​ಟಿಆರ್​, ಹಿಂದಿಯಲ್ಲಿ ರಣಬೀರ್​ ಕಪೂರ್​ ಹಾಗೂ ತಮಿಳಿನಲ್ಲಿ ಸೂರ್ಯ ಅವರು ‘ಕಿಂಡ್​ಕಮ್’ ಟೀಸರ್​ಗೆ ಧ್ವನಿ ನೀಡಿರುವುದು ವಿಶೇಷ.....
ಮೈಕ್ರೋಫೈನಾನ್ಸ್‌ಗೆ ಅಂಕುಶ; ಸರ್ಕಾರದ ಪರಿಷ್ಕೃತ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಮೈಕ್ರೋಫೈನಾನ್ಸ್‌ಗೆ ಅಂಕುಶ; ಸರ್ಕಾರದ ಪರಿಷ್ಕೃತ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮೈಕ್ರೋ ಫೈನಾನ್ಸಿಂಗ್ ಸಂಸ್ಥೆಗಳ (MFI) ಹಾವಳಿ ನಿಯಂತ್ರಿಸುವ ಅಸ್ತ್ರಕ್ಕೆ ರಾಜ್ಯಪಾಲರು ಅಸ್ತು ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಗೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಬುಧವಾರ ಅನುಮೋದನೆ ನೀಡಿದ್ದಾರೆ. ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ.. Karnataka Governor approves ordinance aimed to tackle microfinance menace ರಾಜ್ಯಪಾಲರು ಕೋರಿದ ವಿವರಣೆಯೊಂದಿಗೆ ಮೈಕ್ರೋಫೈನಾನ್ಸ್‌ಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಸರ್ಕಾರ ರಾಜಭವನಕ್ಕೆ ಕಳುಹಿಸಿದೆ. "ಈಗ, ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ" ಎಂದು ಮುಖ್ಯಮಂತ್ರಿಗಳ ಕಚೇರಿ (CMO) ತಿಳಿಸಿದೆ. ಇದರೊಂದಿಗೆ, ಕರ್ನಾಟಕ ಮೈಕ್ರೋ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ತಡೆಗಟ್ಟುವಿಕೆ) ಸುಗ್ರೀವಾಜ್ಞೆ, 2025 ಜಾರಿಗೆ ಬರಲಿದೆ. ಈ ಸಂಬಂಧ ವಿವರಗಳನ್ನು ಇನ್ನೂ ಅಧಿಕೃತಗೊಳಿಸಬೇಕಾಗಿದೆ. ಆದಾಗ್ಯೂ, ಮೈಕ್ರೋಫೈನಾನ್ಸಿಂಗ್ ಪಿಡುಗನ್ನು ನಿಭಾಯಿಸುವಲ್ಲಿ ಕಾನೂನು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನೋಡಬೇಕಾಗಿದೆ. ಈ ಹಿಂದೆ ಸುಗ...
ಕ್ವಿನ್ ಸಿಟಿ ಆಗಲಿದೆ ಹೆಲ್ತ್ ಸಿಟಿ: ಶರಣ್ ಪ್ರಕಾಶ್ ಪಾಟೀಲ್

ಕ್ವಿನ್ ಸಿಟಿ ಆಗಲಿದೆ ಹೆಲ್ತ್ ಸಿಟಿ: ಶರಣ್ ಪ್ರಕಾಶ್ ಪಾಟೀಲ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು, ಫೆಬ್ರವರಿ 12: ನಮ್ಮ ರಾಜಧಾನಿ ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈಗ ಇಲ್ಲಿ ತಲೆ ಎತ್ತುತ್ತಿರುವ ಕ್ವಿನ್ ಸಿಟಿ ವಿಶ್ವದರ್ಜೆಯ ಮಟ್ಟದ್ದಾಗಿದ್ದು, ಇಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳು ಅನುಷ್ಠಾನಕ್ಕೆ ಬರಲಿದೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗುವುದಲ್ಲದೇ, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ. ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ.. KWIN City to Become a Health City: Sharan Prakash Patil ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಇನ್ವೆಸ್ಟ್ ಕರ್ನಾಟಕ) ಎರಡನೇ ದಿನದಲ್ಲಿ "ಕ್ವಿನ್ ಸಿಟಿ ಹಾಗೂ ಆರೋಗ್ಯ ರಕ್ಷಣೆ ಕ್ಷೇತ್ರದ" ಚರ್ಚಾಗೋಷ್ಠಿಯಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದರು. ಬೆಂಗಳೂರಿನ ಸಮೀಪದಲ್ಲಿ 5,800 ಎಕರೆಗಳಲ್ಲಿ ಮೈದಳೆಯುತ್ತಿರುವ ಕ್ವಿನ್ ಸಿಟಿ, ವೈದ್ಯಕ...
ಬೆಂಗಳೂರು ವಿವಿ: ಚಲಪತಿ ಕೆ. ಅವರಿಗೆ ಪಿಎಚ್‌.ಡಿ ಪ್ರದಾನ

ಬೆಂಗಳೂರು ವಿವಿ: ಚಲಪತಿ ಕೆ. ಅವರಿಗೆ ಪಿಎಚ್‌.ಡಿ ಪ್ರದಾನ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್"ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ಚಲಪತಿ ಕೆ. ಅವರಿಗೆ ಪಿಎಚ್.ಡಿ ಪ್ರದಾನ ಮಾಡಲಾಗಿದೆ. ಬೆಂಗಳೂರು ವಿವಿಯ "ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್"ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಚಲಪತಿ ಕೆ. ಅವರು ಯುವಿಸಿಇ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾದ ಡಾ. ಇನಾಯತುಲ್ಲಾ ಎಂ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ "Quantitative and Qualitative Analysis of seasonal and Spatial variations in surface and Groundwater at River Basin Scale" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ....
ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ: ಪ್ರತಿಪಕ್ಷ ಆರೋಪ

ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ: ಪ್ರತಿಪಕ್ಷ ಆರೋಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಪೊಲೀಸರ ಆತ್ಮಸ್ಥೈರ್ಯ ಕುಸಿದಿದೆ. ಒಂದೆಡೆ ಮರಳು ಮಾಫಿಯಾ ಕೈಯಲ್ಲಿ ಸರ್ಕಾರ ಸಿಲುಕಿದ್ದರೆ, ಮತ್ತೊಂದೆಡೆ ಮೈಸೂರಿನಲ್ಲಿ ಗಲಭೆಕೋರರ ಪರವಾಗಿ ಸಚಿವರು ಮಾತಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಕೆಂಗಲ್‌ ಹನುಮಂತಯ್ಯ ಪ್ರತಿಮೆ ಮುಂಭಾಗ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರಿನಲ್ಲಿ ಉದಯಗಿರಿ ಪೊಲೀಸ್‌ ಠಾಣೆ ಮೇಲೆ ಮುಸ್ಲಿಂ ಮತಾಂಧರು ದಾಳಿ ಮಾಡಿದರೂ ಪೊಲೀಸರಿಗೆ ರಕ್ಷಣೆ ನೀಡಿಲ್ಲ. ಇಂತಹ ಘಟನೆಗಳಿಂದ ಅಧಿಕಾರಿಗಳ ಆತ್ಮಸ್ಥೈರ್ಯ ಕುಸಿದಿದೆ. ನಿಷ್ಠಾವಂತ ಅಧಿಕಾರಿಗಳು ಹಾಗೂ ಪೊಲೀಸರಿಗೆ ರಕ್ಷಣೆ ನೀಡಿ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನಿಷ್ಠಾವಂತ ಅಧಿಕಾರಿಗಳನ್ನು ಕಾಪಾಡಬೇಕಾದ ವಿಧಾನಸೌಧ ಮೌನ ಸೌಧವಾಗಿದೆ. ಸರ್ಕಾರಿ ಕೆಲಸ ದೇವರ ಕೆಲಸ ಎಂದು ಮಾಜಿ ಸಿಎಂ ಕೆಂಗಲ್‌ ಹನುಮಂತಯ್ಯ ಬರೆಸಿದ್ದಾರೆ. ಕಾಂಗ್ರೆಸ್‌ನಿಂದಾಗಿ ಇದು ದೆವ್ವಗಳ ಕೆಲಸ ಎಂಬಂತಾಗಿದೆ. ಭದ್ರಾವತಿಯಲ್ಲಿ ಮರಳು ಮಾಫಿಯಾ ತಡೆಯಲ...
ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ

ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ
ಅಯೋಧ್ಯೆ: ಅಯೋಧ್ಯೆಯಲ್ಲಿರುವ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶರಾಗಿದ್ದಾರೆ. ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ..  Ayodhya Ram Temple’s chief priest Acharya Satyendra Das passes away ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 3 ರಂದು ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದು ಅನಂತರ ಅವರ ಆರೋಗ್ಯ ಕ್ಷೀಣಿಸಿತ್ತೆನ್ನಲಾಗಿದೆ. 85 ವರ್ಷ ವಯಸ್ಸಿನ ಆಚಾರ್ಯ ಸತ್ಯೇಂದ್ರ ದಾಸ್ ಅವರು, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕ ರಾಮ ಮಂದಿರದ ಅರ್ಚಕರಾಗಿದ್ದರು. ಭವ್ಯ ರಾಮ ಮಂದಿರ ನಿರ್ಮಾಣ ನಂತರವೂ ಶ್ರೀರಾಮನ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿದ್ದರು.‌...
ಸಿಎಂ ತವರಲ್ಲೇ ಖಾಕಿ ಮೇಲೆ ದಾಳಿ; ಸಂಸದ ಯಧುವೀರ್ ಖಂಡನೆ

ಸಿಎಂ ತವರಲ್ಲೇ ಖಾಕಿ ಮೇಲೆ ದಾಳಿ; ಸಂಸದ ಯಧುವೀರ್ ಖಂಡನೆ

Focus, ಪ್ರಮುಖ ಸುದ್ದಿ, ರಾಜ್ಯ
ಮೈಸೂರು: ಉದಯಗಿರಿ ಪೋಲಿಸ್ ಸ್ಟೇಷನ್ ಮೇಲೆ ಮತ್ತು ಪೊಲೀಸರ ಮೇಲೆ ನಡೆದ ಹಲ್ಲೆ,ಡಿ.ಸಿ.ಪಿ ಯವರ ವಾಹನದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆಯನ್ನು ಸಂಸದ ಯಧುವೀರ್ ಖಂಡಿಸಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ ಹಿಂಸಾಚಾರˌ ಕೊಲೆˌ ಕಲ್ಲು ತೂರಾಟಗಳಂತಹ ಕೃತ್ಯಗಳು ಸಾಲುಸಾಲಾಗಿ ನಡೆಯುತ್ತಿವೆ. ಶಾಂತಿˌ ಸಮೃದ್ದಿˌ ಸಂಸ್ಕೃತಿಗೆ ಇಡಿ ವಿಶ್ವಕ್ಕೆ ಮಾದರಿಯಾಗಿರುವ ಮೈಸೂರಿನಲ್ಲಿ ಈ ರೀತಿಯ ಗಲಾಟೆಗಳು ನಡೆಯುವುದು ಮತ್ತು ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುವುದು ಈ ನಾಡಿಗೆ ಶೋಭೆ ತರುವುದಿಲ್ಲ ಎಂದವರು ಪ್ರತಿಪಾದಿಸಿದ್ದಾರೆ. ನಿನ್ನೆ ನಮ್ಮ ಮೈಸೂರಿನ ಉದಯಗಿರಿ ಪೋಲಿಸ್ ಸ್ಟೇಷನ್ ಮೇಲೆ ಮತ್ತು ಪೊಲೀಸರ ಮೇಲೆ ನಡೆದ ಹಲ್ಲೆ,ಡಿ.ಸಿ.ಪಿ ಯವರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವುದು ಖಂಡನೀಯ. ರಾಜ್ಯದಲ್ಲಿ ಪ್ರತಿನಿತ್ಯ ಹಿಂಸಾಚಾರˌ ಕೊಲೆˌ ಕಲ್ಲು ತೂರಾಟಗಳಂತಹ ಕೃತ್ಯಗಳು ಸಾಲುಸಾಲಾಗಿ ನಡೆಯುತ್ತಿವೆ. ಶಾಂತಿˌ ಸಮೃದ್ದಿˌ ಸಂಸ್ಕೃತಿಗೆ ಇಡಿ ವಿಶ್ವಕ್ಕೆ ಮಾದರಿಯಾಗಿರುವ… pic.twitter.com/F43lrc4Rpf — Yaduveer Wadiyar (@yaduveerwadiyar) February 11, 2025 ರಾಜ್ಯದಲ್...
ಅಧಿಕಾರಿಗೆ ಧಮ್ಕಿ ಪ್ರಕರಣ; ಭದ್ರಾವತಿ ಪೊಲೀಸರಿಂದ ಮೂವರ ಬಂಧನ

ಅಧಿಕಾರಿಗೆ ಧಮ್ಕಿ ಪ್ರಕರಣ; ಭದ್ರಾವತಿ ಪೊಲೀಸರಿಂದ ಮೂವರ ಬಂಧನ

Focus, ಪ್ರಮುಖ ಸುದ್ದಿ, ರಾಜ್ಯ
ಶಿವಮೊಗ್ಗ: ಭದ್ರಾವತಿ ಬಳಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿ ಮೇಲೆ ದೌರ್ಜನ್ಯಕ್ಕೆ ಮುಂದಾದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೇ ವೇಳೆ, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರವಿ, ವರುಣ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ. ಈ ನಡುವೆ, ಪ್ರಕರಣದಲ್ಲಿ ಶಾಸಕನ ಪುತ್ರನ ಹೆಸರು ನಮೂದಿಸದ ಪೊಲೀಸರ ನಡೆ ಬಗ್ಗೆ ವ್ಯಾಪಕ ಚರ್ಚೆ ಸಾಗಿದೆ. ಇನ್ನೊಂದೆಡೆ ಶಾಸಕರ ಪುತ್ರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಭದ್ರಾವತಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು...