Friday, January 30

Focus

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 16 ದೇಶಗಳ ರಾಯಭಾರಿಗಳು ಭಾಗಿ

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 16 ದೇಶಗಳ ರಾಯಭಾರಿಗಳು ಭಾಗಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳಲ್ಲದೆ, ಹಲವು ದೇಶಗಳ ರಾಯಭಾರಿಗಳು ಕೂಡ ಭಾಗವಹಿಸಿದ್ದಾರೆ. ಇವರಲ್ಲಿ ಬಹ್ರೇನ್ ರಾಯಭಾರಿ ಮಹಮದ್ ಅಲ್ ಗಾವ್ಡ್, ಕ್ಯೂಬಾದ ಅಬೆಲ್ ಅಬಾಲ್ ಡೆಸ್ಪೇನ್, ಇಟಲಿಯ ಆಂಟೋನಿಯೊ ಬಾರ್ತೋಲಿ, ನೇಪಾಳದ ಡಾ.ಶಂಕರ್ ಪ್ರಸಾದ್ ಶರ್ಮ, ಪೋಲೆಂಡಿನ ಸೆಬಾಸ್ಟಿಯನ್ ಡಾಮ್ಜಾಲ್ಸ್ಕಿ, ಮಲೇಷ್ಯಾದ ದಾತೊ ಮಜಾಫರ್ ಷಾ ಮುಸ್ತಫ, ಜಪಾನಿನ ಓನೋ ಕೀಚಿ, ಕಾಂಗೋದ ರೇಮಂಡ್ ಸರ್ಜ್ ಬೇಲ್, ಜಮೈಕಾದ ಜೇಸನ್ ಹಾಲ್ ಫಿಜಿಯ ಜಗನ್ನಾಥ ಸ್ವಾಮಿ, ಜಮೈಕಾದ ಜೇಸನ್ ಹಾಲ್, ಕಝಕಸ್ತಾನದ ನೂರುಲಾನ್ ಝಲ್ಗಸ್ಬಯೇವ್, ಮೊರಾಕ್ಕೋದ ಮಹಮದ್ ಮಾಲೀಕಿ, ಸೀಷೆಲ್ಸ್ ನ ಲಲಟಿಯಾನಾ ಅಕೌಷೆ, ತಝಕಿಸ್ತಾನದ ಲೂಕ್ಮನ್ ಬೊಬಕಾಲೊಜೋಡ, ಟೋಗೋದ ಯಾವೋ ಇಡೆಂ ಮತ್ತು ಜಿಂಬಾಬ್ವೆಯ ಸ್ಟೆಲ್ಲಾ ನೋಮೋ ಸೇರಿದ್ದಾರೆ....
ಸೈಬರ್ ಅಪರಾಧ: ಖದೀಮರ ಖಾತೆ ಪತ್ತೆಗೆ AI ಬಳಕೆ ಕೇಂದ್ರದ ಚಿಂತನೆ; ಅಮಿತ್ ಶಾ

ಸೈಬರ್ ಅಪರಾಧ: ಖದೀಮರ ಖಾತೆ ಪತ್ತೆಗೆ AI ಬಳಕೆ ಕೇಂದ್ರದ ಚಿಂತನೆ; ಅಮಿತ್ ಶಾ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಮ್ಯೂಲ್ ಖಾತೆಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುವ ಪ್ರಯತ್ನಗಳು ನಡೆಯುತ್ತಿವೆ, ಆದರೆ ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ 19 ಲಕ್ಷಕ್ಕೂ ಹೆಚ್ಚು ಅಂತಹ ಖಾತೆಗಳನ್ನು ಪತ್ತೆಹಚ್ಚಲಾಗಿದೆ ಮತ್ತು 2,038 ಕೋಟಿ ರೂ.ಗಳ ವಹಿವಾಟುಗಳನ್ನು ತಡೆಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಮ್ಯೂಲ್ ಖಾತೆ ಎಂದರೆ ಅಪರಾಧಿಗಳು ಕದ್ದ ಹಣವನ್ನು ವರ್ಗಾಯಿಸಲು ಬಳಸುವ ಬ್ಯಾಂಕ್ ಖಾತೆ. ಖಾತೆಯನ್ನು ಹೊಂದಿರುವ ವ್ಯಕ್ತಿಯನ್ನು "ಹಣ ಮ್ಯೂಲ್" ಎಂದು ಕರೆಯಲಾಗುತ್ತದೆ. 'ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧ' ವಿಷಯದ ಕುರಿತು ಗೃಹ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ ಸಭೆ ನಡೆಸಿದ ಅಮಿತ್ ಶಾ, ಸೈಬರ್ ಹಣಕಾಸು ವಂಚನೆಗಳ ಹೆಚ್ಚಳವನ್ನು ಪರಿಗಣಿಸಿ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) 1930 ಸಹಾಯವಾಣಿಯನ್ನು ಕಾರ್ಡ್‌ಗಳನ್ನು ನಿರ್ಬಂಧಿಸುವಂತಹ ವಿವಿಧ ಸೇವೆಗಳನ್ನು ನೀಡುವ ಒಂದು-ಬಿಂದು ಪರಿಹಾರವಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು. ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ.. Cyber crime: Amit Shah hints at using...
Invest Karnataka 2025: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ

Invest Karnataka 2025: ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಆವರಣದಲ್ಲಿ ಆಯೋಜಿಸಲಾಗಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಸಮಾವೇಶಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ Invest Karnataka 2025 ಹೆಸರಿನಲ್ಲಿ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿತವಾಗಿದೆ. ಈ ಸಮಾವೇಶದಲ್ಲಿ ಪ್ರತಿಷ್ಠಿತ ಕಂಪನಿಗಳೊಂದಿಗೆ ಹೂಡಿಕೆ ಒಪ್ಪಂದ, ವಿಚಾರ ಸಂಕಿರಣ ನಡೆಯಲಿದೆ....
ಪ್ರಗತಿಗೆ ವೇಗ ಕೊಟ್ಟ ಮಂತ್ರಿ; ಕೋರಮಂಗಲ ಫ್ಲೈಓವರ್ ಕಾಮಗಾರಿಗೂ ಸಿಕ್ತು ವೇಗ

ಪ್ರಗತಿಗೆ ವೇಗ ಕೊಟ್ಟ ಮಂತ್ರಿ; ಕೋರಮಂಗಲ ಫ್ಲೈಓವರ್ ಕಾಮಗಾರಿಗೂ ಸಿಕ್ತು ವೇಗ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸಿಲಿಕಾನ್ ಸಿಟಿಯ ಕೋರಮಂಗಲ ಸುತ್ತಮುತ್ತಲ ಬಡಾವಣೆಗಳನ್ನು ಸಂಪರ್ಕಿಸುವ ಪ್ರದೇಶಕ್ಕೆ ಅತ್ಯುತ್ತಮ ಫ್ಲೈಓವರ್ ನಿರ್ಮಿಸುವ ಪರಿಕಲ್ಪನೆಗೆ ಸಾರ್ವಜನಿಕ ವಲಯದಲ್ಲಿ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ನಡೆಯುತ್ತಿರುವ ಈ ಫ್ಲೈಓವರ್ ಕಾಮಗಾರಿಗೆ ಸಚಿವರು ವೇಗ ನೀಡಿದ್ದಾರೆ. ಈ ಸಂಬಂಧ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಗಮನಸೆಳೆಯಿತು. ಇದನ್ನೂ ಓದಿ.. KSRTCಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು.. ವಿಕಾಸ ಸೌಧದಲ್ಲಿ ಪರಿಶೀಲನಾ ಸಭೆ ನಡೆಸಿದ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಆಡಳಿತಾಧಿಕಾರಿ ಉಮಾ ಶಂಕರ್, ಬಿಬಿಎಂಪಿ ವಿಶೇಷ ಆಯುಕ್ತಅವಿನಾಶ್, ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್, ಗುತ್ತಿಗೆದಾರರಾದ ರಘುನಾಥ್ ನಾಯ್ಡು ಮತ್ತು ಕೋರಮಂಗಲ ಹಾಗೂ STBED RWA (Resident Welfare Association) ಅಧ್ಯಕ್ಷರ ಉಪಸ್ಥಿತಿಯಲ್ಲಿ (8-1-2025) ಚರ್ಚೆ ನಡೆಸಿದ್ದರು. ಮಂಗಳವಾರ (11-2-2025 ರಂದು) ಮತ್ತೊಮ್ಮೆ ತಮ್ಮ ಕಚೇರಿಯಲ್ಲಿ...
ಕಾಂಗ್ರೆಸ್‌ ಸರ್ಕಾರದ ‘ಪ್ರಕರಣ ವಾಪಸ್‌’ ಅವಾಂತರ; ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಸಿಕ್ತುಎಂದ ಅಶೋಕ್

ಕಾಂಗ್ರೆಸ್‌ ಸರ್ಕಾರದ ‘ಪ್ರಕರಣ ವಾಪಸ್‌’ ಅವಾಂತರ; ಮತಾಂಧರಿಗೆ ಹಲ್ಲೆ ಮಾಡುವ ಧೈರ್ಯ ಸಿಕ್ತುಎಂದ ಅಶೋಕ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತಾಂಧರ ವಿರುದ್ಧ 'ಪ್ರಕರಣ ವಾಪಸ್‌' ಪಡೆಯುವುದರಿಂದಾಗಿ, ಪೊಲೀಸರ ಮೇಲೂ ಹಲ್ಲೆ ಮಾಡುವಷ್ಟು ಧೈರ್ಯ ಮತಾಂಧರಿಗೆ ಬಂದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆ. ಹುಬ್ಬಳ್ಳಿಯಲ್ಲಿ ಆದಂತೆಯೇ ಮೈಸೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ರಾಹುಲ್‌ ಗಾಂಧಿ, ಕೇಜ್ರಿವಾಲ್‌ ಬಗ್ಗೆ ಪೋಸ್ಟ್‌ ಮಾಡಿದ್ದಾರೆಂಬ ಕಾರಣಕ್ಕೆ ಮತಾಂಧ ಮುಸ್ಲಿಮರು ಸೋಮವಾರ ಸಂಜೆ 6-7 ಗಂಟೆ ಸಮಯದಲ್ಲಿ ಚೀಲಗಳಲ್ಲಿ ಕಲ್ಲು ತುಂಬಿಕೊಂಡು ಬಂದು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಹಿಂದೂ ಸಮುದಾಯದ ಜನರಿಗೆ ಬೆದರಿಕೆ ಹಾಕಿದ್ದು, ಇಡೀ ಮೈಸೂರಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ.. Karnataka: BJP slams Siddaramaiah government over mob attack on police station ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಇ...
ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಧಮ್ಕಿ; ಬಿಜೆಪಿ ಆಕ್ರೋಶ

ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಧಮ್ಕಿ; ಬಿಜೆಪಿ ಆಕ್ರೋಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಧಮ್ಕಿ ಹಾಕಿದ್ದಾರೆ ಎನ್ನಲಾದ ಘಟನೆ ಬಗ್ಗೆ ಬಿಜೆಪಿ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅಶೋಕ್, ಕಾಂಗ್ರೆಸ್‌ ಶಾಸಕರಿಗೆ ಬೇರೆ ಆದಾಯವಿಲ್ಲ. ಆದ್ದರಿಂದ ವರ್ಗಾವಣೆ, ಮರಳು ಮಾಫಿಯಾ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಭದ್ರಾವತಿಯಲ್ಲೂ ಇಂಥದ್ದೇ ಘಟನೆ ನಡೆದಿದೆ ಎಂದಿದ್ದಾರೆ. ಬೇರೆ ಜಿಲ್ಲೆಗಳಲ್ಲೂ ಅಧಿಕಾರಿಗಳಿಗೆ ಕಾಂಗ್ರೆಸ್‌ ಶಾಸಕರಿಂದ ಬೆದರಿಕೆ ಇದೆ. ಮಂಡ್ಯ, ಬೀದರ್‌, ಯಾದಗಿರಿ ಮೊದಲಾದ ಕಡೆ ಮರಳು ಮಾಫಿಯಾ ನಡೆಯುತ್ತಿದೆ. ಭದ್ರಾವತಿಯ ಮಹಿಳಾ ಅಧಿಕಾರಿ ರೆಕಾರ್ಡ್‌ ಮಾಡಿಕೊಂಡು ಧೈರ್ಯವಾಗಿ ಹೇಳಿದ್ದಾರೆ. ಉಳಿದ ಜಿಲ್ಲೆಗಳ ಅಧಿಕಾರಿಗಳು ವರ್ಗಾವಣೆ ಭಯದಿಂದ ಸುಮ್ಮನಾಗಿದ್ದಾರೆ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನ್ನು ಉಲ್ಲಂಘಿಸಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಅಲ್ಲಿನ ವ್ಯವಸ್ಥೆಗೆ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಖರ್ಗೆಯವರದ್ದು ನಿಜವಾದ ಕಾಂಗ್ರೆಸ್ಸಾ ಅಥವಾ ಡ...
ಕೇಂದ್ರ ಸರ್ಕಾರ ನಿಗದಿಪಡಿಸದಂತೆ ಮೆಟ್ರೋ ದರ ಏರಿಕೆ: ಸಿಎಂ ಸ್ಪಷ್ಟನೆ

ಕೇಂದ್ರ ಸರ್ಕಾರ ನಿಗದಿಪಡಿಸದಂತೆ ಮೆಟ್ರೋ ದರ ಏರಿಕೆ: ಸಿಎಂ ಸ್ಪಷ್ಟನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾಸ್ತವಾಂಶಗಳನ್ನು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ಜನತೆಯ ಮುಂದಿತ್ತಿದ್ದಾರೆ. ಮೆಟ್ರೋ ಪ್ರಯಾಣ ದರ ಹೆಚ್ಚಳವನ್ನು ವಿರೋಧಿಸುತ್ತಿರುವ ವಿರೋಧ ಪಕ್ಷವಾದ ಬಿಜೆಪಿಯ ನಾಯಕರು ಯಥಾಪ್ರಕಾರ ಸುಳ್ಳು ಮತ್ತು ತಿರುಚಿದ ಮಾಹಿತಿಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ. ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ, ಸಂವಿಧಾನಬದ್ಧವಾದ ಅವರ ಹಕ್ಕನ್ನು ಗೌರವಿಸುತ್ತೇನೆ. ಆದರೆ ವಿರೋಧ ಪಕ್ಷದ ಸ‍್ಥಾನದಲ್ಲಿ ಜನ ಕೂರಿಸಿರುವ ರಾಜ್ಯ ಬಿಜೆಪಿ ನಾಯಕರು ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ. ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕ...
ಎತ್ತಿನಬಂಡಿಗೆ ಬೈಕ್‌ ಡಿಕ್ಕಿ: ಮೂವರು ಯುವಕರ ಸಾವು

ಎತ್ತಿನಬಂಡಿಗೆ ಬೈಕ್‌ ಡಿಕ್ಕಿ: ಮೂವರು ಯುವಕರ ಸಾವು

Focus, ಪ್ರಮುಖ ಸುದ್ದಿ, ರಾಜ್ಯ
ಹಾವೇರಿ: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಗುಡಗೂರು ಕ್ರಾಸ್ ಬಳಿ ಎತ್ತಿನಬಂಡಿಗೆ ಬೈಕ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಬೈಕ್ ಸವಾರರಾದ ಶಶಿಕುಮಾರ್ ಉಪ್ಪಾರ, ದರ್ಶನ್ ಮತ್ತು ಆಕಾಶ್ ಬಿರಾದಾರ ಎಂದು ಗುರುತಿಸಲಾಗಿದೆ. ಮೈಲಾರ ಜಾತ್ರೆಗೆ ಈ ಯುವಕರು ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಎತ್ತಿನಬಂಡಿಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪೊಲೀಸರು ಪರಿಶೆಲನೆ ನಡೆಸಿದ್ದಾರೆ....
KSRTCಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು

KSRTCಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕೆಎಸ್‌ಆರ್‌ಟಿಸಿ ಅನುಷ್ಠಾನಗೊಳಿಸಿರುವ ಉಪಕ್ರಮಗಳಿಗೆ ರಾಷ್ಟ್ರೀಯ ಹಾಗೂ ವಿಶ್ವ ನಾವೀನ್ಯತೆ ಪ್ರಶಸ್ತಿಗಳು ಲಭಿಸಿವೇ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 17, 18 ಮತ್ತು 21 ಫೆಬ್ರವರಿ 2025 ರಂದು ಮುಂಬೈನಲ್ಲಿ ನಡೆಯಲಿದೆ. ಉತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿ ಕನಸುಗಳ ಕಂಪನಿಗಳು – ಉದ್ಯೋಗದಲ್ಲಿ ಆರೋಗ್ಯ ನಿರ್ವಹಣೆಗೆ ಗೌರವ ವರ್ಷದ ವ್ಯವಹಾರ ನಾಯಕ ಪ್ರಶಸ್ತಿ – ಕಾರ್ಯಸ್ಥಳ ಮತ್ತು ಜನಸಂಪತ್ತು ಅಭಿವೃದ್ಧಿ ವಿಶ್ವ ಆರೈಕೆ ಪ್ರಶಸ್ತಿ – ಉತ್ತಮ ಸಾರ್ವಜನಿಕ ಆರೋಗ್ಯ ಉಪಕ್ರಮ ವಿಶ್ವ ನಾವಿನ್ಯತೆ ಪ್ರಶಸ್ತಿ – ಆರೋಗ್ಯ ತಂತ್ರಜ್ಞಾನದಲ್ಲಿ ಉತ್ತಮ ನಾವೀನ್ಯತೆ ಜಾಗತಿಕ ತಯಾರಿಕಾ ನಾಯಕರ ಪ್ರಶಸ್ತಿ – ಸುಸ್ಥಿರತೆಯ ಗೌರವ ಡಿಜಿಟಲ್ ತಂತ್ರಜ್ಞಾನ ಪ್ರಶಸ್ತಿ. ಹೀಗೆ ವಿವಿಧ ವಿಭಾಗಗಳಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿಗಳು ಸಿಕ್ಕಿವೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ....
ಭಾರತದ ವೈಮಾನಿಕ ಶಕ್ತಿ ಅನಾವರಣ; ಏರೋ ಇಂಡಿಯಾ 2025 ವೈಶಿಷ್ಟ್ಯಗಳು ಹೀಗಿವೆ

ಭಾರತದ ವೈಮಾನಿಕ ಶಕ್ತಿ ಅನಾವರಣ; ಏರೋ ಇಂಡಿಯಾ 2025 ವೈಶಿಷ್ಟ್ಯಗಳು ಹೀಗಿವೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
ಬೆಂಗಳೂರು: ಉದ್ಯಾನ ನಗರಿಯ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯುತ್ತಿರುವ ಐದು ದಿನಗಳ ಏರೋ ಇಂಡಿಯಾ 2025 ಪ್ರದರ್ಶನದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಲಘು ಉಪಯುಕ್ತ ಹೆಲಿಕಾಪ್ಟರ್, ಫೈಟರ್ ಜೆಟ್ ಮತ್ತು ತರಬೇತಿ ವಿಮಾನಗಳನ್ನು ಪ್ರದರ್ಶಿಸುತ್ತಿದೆ. "HAL 'ಇನ್ನೋವೇಟ್. ಕೊಲಾಬರೇಟ್. ಲೀಡ್' ಎಂಬ ಥೀಮ್ ಅನ್ನು ಕೇಂದ್ರೀಕರಿಸಿ ಏರೋ ಇಂಡಿಯಾ 2025 ರಲ್ಲಿ ತನ್ನ ಸ್ಥಳೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಿದೆ" ಎಂದು HAL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕೆ ಸುನಿಲ್ ಹೇಳಿದ್ದಾರೆ. HAL ನ ಒಳಾಂಗಣ ಪೆವಿಲಿಯನ್ (HAL-E) ನಲ್ಲಿ LUH, ಹಿಂದೂಸ್ತಾನ್ ಟರ್ಬೊ ಟ್ರೈನರ್ (HTT)-40 ಸಿಮ್ಯುಲೇಟರ್, LCA Mk1A ಫೈಟರ್, LCA Mk1 ಟ್ರೈನರ್, ಹಿಂದೂಸ್ತಾನ್ ಜೆಟ್ ಟ್ರೈನರ್ (HJT)-36, HTT-40, LCH ಮತ್ತು ALH Mk IV ನ ಸ್ಕೇಲ್ಡ್ ಮಾದರಿಗಳು ಪ್ರಮುಖ ಆಕರ್ಷಣೆಯಾಗಿರುತ್ತವೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ವೈಮಾನಿಕ ಪ್ರದರ್ಶನವು LCA Mk 1A, HJT 36, HTT40, LUH ಅನ್ನು ಒಳಗೊಂಡಿರುತ್ತದೆ ಮತ್ತು ಸ್ಥಿರ ಪ್ರದರ್ಶನವು LCA ...