Friday, January 30

Focus

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣ; ನಾಲ್ವರು ಡೈರಿ ಪ್ರಮುಖರ ಬಂಧನ

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣ; ನಾಲ್ವರು ಡೈರಿ ಪ್ರಮುಖರ ಬಂಧನ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ತಿರುಮಲ: ದಕ್ಷಿಣ ಭಾರತದ ಪುಣ್ಯಕ್ಷೇತ್ರ ತಿರುಪತಿ ತಿರುಮಲದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖರ ಬಂಧನವಾಗಿದೆ. ಭಾನುವಾರ ನಾಲ್ವರನ್ನು ತನಿಖಾ ತಂಡ ಬಂಧಿಸಿದೆ. ಲಡ್ಡು ಪ್ರಸಾದ ಪ್ರಕರಣ ಕುರಿತಂತೆ ತನಿಖೆ ಕೈಗೊಂಡಿರುವ ಸಿಬಿಐ ಹೈದರಾಬಾದ್ ವಿಭಾಗದ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿದೆ ಎನ್ನಲಾಗಿದೆ. ಈ ಆರೋಪಿಗಳು ವಿವಿಧ ಡೈರಿಗಳ ಪ್ರಮುಖರೆಂದು ಹೇಳಲಾಗುತ್ತಿದೆ....
ನಟ ದರ್ಶನ್ ಹುಟ್ಟುಹಬ್ಬದಂದೇ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆ

ನಟ ದರ್ಶನ್ ಹುಟ್ಟುಹಬ್ಬದಂದೇ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ನಟ ದರ್ಶನ್ ಅಭಿನಯದ 'ಡೆವಿಲ್' ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 16ರಂದು ನಟ ದರ್ಶನ್ ರ ಹುಟ್ಟುಹಬ್ಬವಿದ್ದು ಅಂದೇ ಡೆವಿಲ್ ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಈ ಕುರಿತಂತೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ನಮ್ಮ ಹೊಸ ಪ್ರಯತ್ನದ ಹಾರಿವು ಶೀಘ್ರದಲ್ಲೇ ನಿಮ್ಮ ಮುಂದೆ!' ಎಂದು ಅವರು ಹಾಕಿರುವ ಪೋಸ್ಟ್ ಗಮನಸೆಳೆದಿದೆ....
ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆ: ರಾಜನಾಥ್ ಸಿಂಗ್

ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆ: ರಾಜನಾಥ್ ಸಿಂಗ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಏರೋ ಇಂಡಿಯಾ ನಮ್ಮ ಯುವಕರಿಗೆ ಸ್ಫೂರ್ತಿಯ ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ, ವೈಜ್ಞಾನಿಕ ಮನೋಧರ್ಮ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುವುದರ ಜೊತೆಗೆ ಸರ್ಕಾರದ ಬಲವಾದ ಮತ್ತು ಸ್ವಾವಲಂಬಿ ಭಾರತದ ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಏರೋ ಇಂಡಿಯಾದ 15 ನೇ ಆವೃತ್ತಿಯ ಮುನ್ನಾದಿನ, ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಏರೋ ಇಂಡಿಯಾ ನವ ಭಾರತದ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸ್ವಾವಲಂಬನೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇದು ಭಾರತದ ರಕ್ಷಣಾ ಸನ್ನದ್ಧತೆಗೆ ನಿರ್ಣಾಯಕ ಮಾತ್ರವಲ್ಲ, ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಮತ್ತು ಜಾಗತಿಕ ಪಾಲುದಾರಿಕೆಗಳನ್ನು ರೂಪಿಸುತ್ತದೆ. ಎಂದರು. ಆರ್ಡನೆನ್ಸ್ ಫ್ಯಾಕ್ಟರಿ ಮಂಡಳಿಯ ಕಾರ್ಪೊರೇಟೀಕರಣದ ನಂತರ, ಹೊಸದಾಗಿ ರೂಪುಗೊಂಡ ಕಂಪನಿಗಳು ರಕ್ಷಣಾ ಉತ್ಪಾದನೆಯಲ್ಲಿ ಅಸಾಧಾರಣವಾಗಿ ಉತ್ತಮವಾಗಿ ಕಾ...
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ

ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅತಿಶಿ ರಾಜೀನಾಮೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಲನುಭವಿಸಿದ ಹಿನ್ನೆಲೆಯಲ್ಲಿ ಹೊಸ ಸರ್ಕಾರ ರಚಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿ ಅತಿಶಿ ಅವರು ರಾಜೀನಾಮೆ ನೀಡಿದ್ದಾರೆ. ಭಾನುವಾರ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಅತಿಶಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ಕಲ್ಕಾಜಿ ಕ್ಷೇತ್ರದಲ್ಲಿ ಅತಿಶಿ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಅವರ ಪಕ್ಷ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯಕ್ಕೆ ಸಾಧನೆ ಮಾಡಿದೆ....
ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌: ಭದ್ರತಾಪಡೆ ಗುಂಡಿಗೆ 31 ನಕ್ಸಲರು ಬಲಿ

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌: ಭದ್ರತಾಪಡೆ ಗುಂಡಿಗೆ 31 ನಕ್ಸಲರು ಬಲಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 31 ನಕ್ಸಲರ ಹತ್ಯೆಯಾಗಿದೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಅರಣ್ಯದಲ್ಲಿ ಭಾನುವಾರ ಬೆಳಗ್ಗೆ ಭದ್ರತಾ ಪಡೆಗಳು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಿವೆ. ಆ ವೇಳೆ ಎನ್‌ಕೌಂಟರ್‌ನಲ್ಲಿ 31 ನಕ್ಸಲರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯೂ ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ....
ಡಾಲಿ -ಧನ್ಯತಾ ಜೋಡಿ ಬಗ್ಗೆ ಸುಂದರ ವೀಡಿಯೋ; ಮದುವೆಗೆ ಆಹ್ವಾನ..

ಡಾಲಿ -ಧನ್ಯತಾ ಜೋಡಿ ಬಗ್ಗೆ ಸುಂದರ ವೀಡಿಯೋ; ಮದುವೆಗೆ ಆಹ್ವಾನ..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಡಾಲಿ ಧನಂಜಯ್ ಅವರು ಫೆಬ್ರವರಿ 16 ರಂದು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಮದುವೆಗೆ ಅಭಿಮಾನಿ ಬಳಗವನ್ನು ಆಹ್ವಾನಿಸಿರುವ ಅವರು ಸುಂದರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಧನಂಜಯ್-ಧನ್ಯತಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಆ ಸನ್ನಿವೇಶದ ವಿಡಿಯೋವನ್ನು ದಾಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ತಾಗಿ ವೈರಲ್ ಆಗುತ್ತಿದೆ....
ದೆಹಲಿ ಫಲಿತಾಂಶ: ಜನರಿಂದ ಆಪ್‌ ಪಕ್ಷ ತಿರಸ್ಕಾರ, ಒಡೆದು ಚೂರಾದ ಇಂಡಿ ಒಕ್ಕೂಟ?

ದೆಹಲಿ ಫಲಿತಾಂಶ: ಜನರಿಂದ ಆಪ್‌ ಪಕ್ಷ ತಿರಸ್ಕಾರ, ಒಡೆದು ಚೂರಾದ ಇಂಡಿ ಒಕ್ಕೂಟ?

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಪ್‌ ಪಕ್ಷವನ್ನು ನವದೆಹಲಿಯ ಜನರು ತಿರಸ್ಕಾರ ಮಾಡಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಸಿಕ್ಕಿರುವ ಗೆಲುವು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ಆಪ್‌ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅರವಿಂದ ಕೇಜ್ರಿವಾಲ್‌ ಆರಂಭದಲ್ಲಿ ಸರಳವಾದ ಕಾರಿನಲ್ಲಿ ಸಂಚರಿಸುತ್ತಿದ್ದರು. ಈಗ ದೊಡ್ಡ ಅರಮನೆ ಕಟ್ಟಿಕೊಂಡಿದ್ದು, ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದಾರೆ. ಅವರ ಆಡಳಿತವನ್ನು ನೋಡಿ ಜನರು ಬೇಸತ್ತಿದ್ದಾರೆ. ಯಮುನಾ ನದಿಯ ಬಗ್ಗೆ ಅವರು ಆಡಿದ ಮಾತು ಜನರಲ್ಲಿ ಬೇಸರ ತಂದಿದೆ. ಜನರು ಪ್ರತಿ ದಿನ ಕುಡಿಯುವ ನೀರಿನ ಬಗ್ಗೆ ಆಪಾದನೆ ಮಾಡಿದ್ದರು ಎಂದರು. ಯಮುನಾ ನದಿಯನ್ನು ಸರ್ಕಾರ ಸ್ವಚ್ಛವಾಗಿ ಇಡಬೇಕಿತ್ತು. ಅದನ್ನು ಬಿಟ್ಟು ನದಿಯ ಮೇಲೆಯೇ ಆಪಾದನೆ ಮಾಡಿದ್ದರು. ಜೈಲಿಗೆ ಹೋದರೂ ರಾಜೀನಾಮೆ ನೀಡದೆ ಅಲ್ಲಿಯೇ ಕುಳಿತು ಕಡತಕ್ಕೆ ಸಹಿ ಹಾಕಿದ್ದರು. ಬೇರೆಯವರಿಗೆ ಅಧಿಕಾರವನ್ನು ವಹಿಸುವ ಬದಲು, ತಾವೇ ಅಧಿಕಾರ...
‘ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆ; ಪರಿಷ್ಕೃತ ದರ ಜಾರಿಗೆ

‘ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆ; ಪರಿಷ್ಕೃತ ದರ ಜಾರಿಗೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಯಾಗಿಡೇ. ಈ ಸಂಬಂಧ BMRCL ಅಧಿಕೃತ ಪ್ರಕಟಣೆ ಹೊರಡಿಸಿದೆ. 8 ವರ್ಷಗಳ ಬಳಿಕ ನಮ್ಮ ಮೆಟ್ರೋ ರೈಲು ಪ್ರಯಾಣ ದರ ಏರಿಕೆಯಾಗಿದೆ ಎನ್ನಲಾಗುತ್ತಿದ್ದು, ಪರಿಷ್ಕೃತ ದರ ಫೆ.9 ರಿಂದ ಜಾರಿಗೆ ಬರಲಿದೆ. ಪ್ರಯಾಣ ದರ ಶೇ.46 ರಷ್ಟು ಏರಿಕೆ ಮಾಡಲಾಗಿದ್ದು 10 ರೂಪಾಯಿಯಿಂದ 90 ರೂಪಾಯಿ ವರೆಗೆ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದರು.
“ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ” ಮೋದಿ ಸಂದೇಶ

“ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ” ಮೋದಿ ಸಂದೇಶ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾಪಕ್ಷ ಗೆದ್ದು ಬೀಗಿದೆ. ಕಾರ್ಯಕರ್ತರ ಜಯಘೋಷ ಮುಗಿಲುಮುಟ್ಟಿದೆ. ಈ ಸನ್ನಿವೇಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ. ಜನಶಕ್ತಿಯೇ ಸರ್ವಶ್ರೇಷ್ಠ! ಅಭಿವೃದ್ಧಿ ಗೆಲ್ಲುತ್ತದೆ, ಉತ್ತಮ ಆಡಳಿತ ಗೆಲ್ಲುತ್ತದೆ ಎಂದವರು ಹೇಳಿದ್ದಾರೆ. ದೆಹಲಿ ಚುನಾವಣಾ ಫಲಿತಾಂಶ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಪ್ರತಿಕ್ರಿಯಿಸಿರುವ ಮೋದಿ, ಬಿಜೆಪಿಗೆ ಈ ಅದ್ಭುತ ಮತ್ತು ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ನಮಸ್ಕರಿಸುತ್ತೇನೆ. ಈ ಆಶೀರ್ವಾದಗಳನ್ನು ಸ್ವೀಕರಿಸಲು ನಮಗೆ ವಿನಮ್ರತೆ ಮತ್ತು ಗೌರವವಿದೆ ಎಂದಿದ್ದಾರೆ. ದೆಹಲಿಯನ್ನು ಅಭಿವೃದ್ಧಿಪಡಿಸುವಲ್ಲಿ, ಜನರ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮತ್ತು ವಿಕ್ಷಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿಗೆ ಪ್ರಮುಖ ಪಾತ್ರವಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದವರು ಭರವಸೆ ನೀಡಿದ್ದಾರೆ. Jana Shakti is paramount! Development wins, good go...
ಬೆಂಗಳೂರು ವಿವಿ: ನಾರಾಯಣಸ್ವಾಮಿ ಬಿ.ವಿ. ಅವರಿಗೆ ಪಿಎಚ್.ಡಿ ಪ್ರದಾನ

ಬೆಂಗಳೂರು ವಿವಿ: ನಾರಾಯಣಸ್ವಾಮಿ ಬಿ.ವಿ. ಅವರಿಗೆ ಪಿಎಚ್.ಡಿ ಪ್ರದಾನ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ನಾರಾಯಣಸ್ವಾಮಿ ಬಿ.ವಿ. ಅವರಿಗೆ ಪಿಎಚ್.ಡಿ ಪ್ರದಾನ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡ ಬೊಮ್ಮನಹಳ್ಳಿ ಗ್ರಾಮದ ರೈತಾಪಿ ಕುಟುಂಬಕ್ಕೆ ಸೇರಿದ ಅಕ್ಕಯಮ್ಮ ಮತ್ತು ವೆಂಕಟೇಶಪ್ಪ ರವರ ಪುತ್ರರಾದ ನಾರಾಯಣಸ್ವಾಮಿ ಬಿ.ವಿ.ರವರು ಪ್ರಸ್ತುತ ಬೆಂಗಳೂರು ವಿವಿಯಲ್ಲಿ ತಾತ್ಕಾಲಿಕ ಸಹಾಯಕ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿರುವ ನಾರಾಯಣಸ್ವಾಮಿ ಬಿ.ವಿ. ರವರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ರಮೇಶ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ "ಅವೇರ್ನೆಸ್ ಅಂಡ್ ಯುಟಿಲೈಜೇಷನ್ ಆಫ್ ಐಸಿಟಿ ಇನಿಶಿಯೇಟಿವ್ ಆಫ್ ಮಿನಿಸ್ಟ್ರಿ ಆಫ್ ಎಜುಕೇಶನ್, ಗವರ್ನಮೆಂಟ್ ಆಫ್ ಇಂಡಿಯಾ ಬೈ ದ ಯೂನಿವರ್ಸಿಟಿ ಲೈಬ್ರರೀಸ್ ಇನ್ ಕರ್ನಾಟಕ ಸ್ಟೇಟ್, ಆನ್ ಯೂಸರ್ ಅಸೆಸ್ಮೆಂಟ್ ಸ್ಟಡಿ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್...