Thursday, January 29

Focus

MSME ಗಳಿಗೆ ವರ್ಗೀಕರಣ ಮಾನದಂಡಗಳಲ್ಲಿ ಪರಿಷ್ಕರಣೆ; ಹೂಡಿಕೆ ಮತ್ತು ವಹಿವಾಟು ಮಿತಿ 2 ಪಟ್ಟು ಹೆಚ್ಚಳ

MSME ಗಳಿಗೆ ವರ್ಗೀಕರಣ ಮಾನದಂಡಗಳಲ್ಲಿ ಪರಿಷ್ಕರಣೆ; ಹೂಡಿಕೆ ಮತ್ತು ವಹಿವಾಟು ಮಿತಿ 2 ಪಟ್ಟು ಹೆಚ್ಚಳ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಕೇಂದ್ರ ಬಜೆಟ್: ಅತಿಸಣ್ಣ (ಮೈಕ್ರೋ) ಮತ್ತು ಸಣ್ಣ ಉದ್ಯಮಗಳಿಗೆ ಕನಿಷ್ಠ ಸಾಲದ ಮೊತ್ತ 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಳ.. ಮುಂದಿನ 5 ವರ್ಷಗಳಲ್ಲಿ 1.5 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲ..
ಕೇಂದ್ರ ಬಜೆಟ್: ವಿಮಾ ವಲಯದಲ್ಲಿ FDI ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ

ಕೇಂದ್ರ ಬಜೆಟ್: ವಿಮಾ ವಲಯದಲ್ಲಿ FDI ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ ನಮ್ಮ ಬೆಳವಣಿಗೆಯ ಸಾಮರ್ಥ್ಯ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಆರು ಕ್ಷೇತ್ರಗಳಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಪ್ರಾರಂಭಿಸುವ ಗುರಿಯನ್ನು 2025-26ನೇ ಸಾಲಿನ ಬಜೆಟ್ ಹೊಂದಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿ ಮಾಹಿತಿ ನೀಡಿದ್ದಾರೆ. ಈ ಕ್ಷೇತ್ರಗಳಲ್ಲಿ ಹಣಕಾಸು ವಲಯವೂ ಒಂದಾಗಿದ್ದು, ಇದು ವಿಮೆ, ಪಿಂಚಣಿಗಳು, ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳು (ಬಿಐಟಿಎಸ್) ಮತ್ತು ಮುಂತಾದ ಕ್ಷೇತ್ರಗಳನ್ನು ಒಳಗೊಂಡಿದೆ. ವಿಮಾ ಕ್ಷೇತ್ರದಲ್ಲಿ ಎಫ್.ಡಿ.ಐ ವಿಮಾ ವಲಯದಲ್ಲಿ ವಿದೇಶಿ ನೇರ ಹೂಡಿಕೆ - ಎಫ್.ಡಿ.ಐ ಮಿತಿ ಶೇ 74 ರಿಂದ ಶೇ 100ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. ಈ ಹೆಚ್ಚಳದ ಮಿತಿಯು ಸಂಪೂರ್ಣ ಪ್ರೀಮಿಯಂ ಭಾರತದಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಲಭ್ಯವಿರುತ್ತದೆ. ವಿದೇಶಿ ಹೂಡಿಕೆಗೆ ಸಂಬಂಧಿಸಿದ ಪ್ರಸ್ತುತ ಗಾರ್ಡ್‌ರೇಲ್‌ಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲಾಗುತ್ತದ...
ಕೇಂದ್ರ ಬಜೆಟ್: ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 30,000 ಮಿತಿಯೊಂದಿಗೆ UPI ಲಿಂಕ್ಡ್ ಕ್ರೆಡಿಟ್ ಕಾರ್ಡ್‌

ಕೇಂದ್ರ ಬಜೆಟ್: ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯ ಅಡಿಯಲ್ಲಿ 30,000 ಮಿತಿಯೊಂದಿಗೆ UPI ಲಿಂಕ್ಡ್ ಕ್ರೆಡಿಟ್ ಕಾರ್ಡ್‌

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್ತಿನಲ್ಲಿ 2025-2026ರ ಬಜೆಟ್ ಮಂಡಿಸಿದರು. 'ನಗರಗಳು ಬೆಳವಣಿಗೆಯ ಕೇಂದ್ರಗಳು' ಮತ್ತು ಇತರೆ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ₹ 1 ಲಕ್ಷ ಕೋಟಿಯ ನಗರ ಚಾಲೆಂಜ್ ನಿಧಿಯನ್ನು ಸ್ಥಾಪಿಸಲಿದೆ ಎಂದು ಹೇಳಿದರು. 'ನಗರಗಳ ಸೃಜನಾತ್ಮಕ ಪುನರಾಭಿವೃದ್ಧಿ' ಮತ್ತು ನೀರು ಮತ್ತು ನೈರ್ಮಲ್ಯ' ಎಂದು ಜುಲೈ ಬಜೆಟ್‌ನಲ್ಲಿ ಘೋಷಿಸಿದರು. ಈ ನಿಧಿಯು ಬ್ಯಾಂಕಬಲ್ ಯೋಜನೆಗಳ ವೆಚ್ಚದ 25 ಪ್ರತಿಶತದವರೆಗೆ ಹಣಕಾಸು ನೀಡುತ್ತದೆ. ಕನಿಷ್ಠ 50 ಪ್ರತಿಶತದಷ್ಟು ವೆಚ್ಚವನ್ನು ಬಾಂಡ್‌ಗಳು, ಬ್ಯಾಂಕ್ ಸಾಲಗಳು ಮತ್ತು PPP ಗಳಿಂದ ನಿಧಿಸಲಾಗುವುದು. 2025-26ಕ್ಕೆ ₹ 10,000 ಕೋಟಿ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಭೌಗೋಳಿಕ ಮೂಲಸೌಕರ್ಯ ಮತ್ತು ಡೇಟಾವನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಜಿಯೋಸ್ಪೇಷಿಯಲ್ ಮಿಷನ್ ಅನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಧಾನಮಂತ್ರಿ ಗತಿ ಶಕ್ತಿಯನ್ನು ಬಳಸಿಕೊಂಡು, ಈ ಮಿಷನ್ ಭೂ ದಾಖಲೆಗಳ ಆಧುನೀಕರಣ, ನಗರ ಯೋಜನೆ ಮತ್ತು...
ಕರ್ನಾಟಕವನ್ನು ಪ್ರತಿನಿಧಿಸಿರುವ ನಿರ್ಮಲಾ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು?

ಕರ್ನಾಟಕವನ್ನು ಪ್ರತಿನಿಧಿಸಿರುವ ನಿರ್ಮಲಾ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕೇಂದ್ರದ ಬಜೆಟ್‌ನಲ್ಲಿ ಜನಸಾಮಾನ್ಯರ ಬದುಕು ಬದಲಾಯಿಸುವಂಥ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ವಿಶ್ಲೇಷಿಸಿದ್ದಾರೆ. ಇಂಗ್ಲಿಷ್'ನಲ್ಲೂ ಉದಯ ನ್ಯೂಸ್ ಲಭ್ಯ.. Siddaramaiah's criticism of Budget 2025 purely politically motivated: K'taka BJP ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪದ್ಮರಾಜ್ ಆರ್. ಪೂಜಾರಿ, ಉದ್ಯೋಗ ಸೃಷ್ಟಿಗೆ ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಕಳೆದ ಹತ್ತ ವರ್ಷಗಳಿಂದಲೂ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗವುದು ಎಂದು ಹೇಳುತ್ತಾ ಬಂದಿದ್ದಾರೆ. ಅದು ಘೋಷಣೆಯಾಗಿ ಮಾತ್ರ ಉಳಿದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ ಎಂದಿದ್ದಾರೆ. 12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಮತ್ತು ಕೆಲವೊಂದು ತೆರಿಗೆ ವಿನಾಯಿತಿ ಮಾಡಿರುವುದು ಮಾತ್ರ ಸ್ವಾಗತಾರ್ಹ. ಆದರೇ, ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯಕ ಆಯವ್ಯಯ ಎಂದು ಬಣ್ಣಿಸಿದ ಪದ್ಮರಾಜ್, ಕಳೆದ 10 ವರ್ಷ...
ಕೇಂದ್ರದ ‘ಸಾಲದ ಬಜೆಟ್’: ಮಂಜುನಾಥ್ ಭಂಡಾರಿ ಟೀಕೆ

ಕೇಂದ್ರದ ‘ಸಾಲದ ಬಜೆಟ್’: ಮಂಜುನಾಥ್ ಭಂಡಾರಿ ಟೀಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಕೇಂದ್ರ ಬಜೆಟ್‌ನಲ್ಲಿ ಬಿಜೆಪಿ ಮೈತ್ರಿ ಸರ್ಕಾರವಿರುವ ರಾಜ್ಯಗಳಿಗೆ ಬಂಪರ್, ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಬಿಡಿಕಾಸು..? ಅನ್ಯಾಯವಾಗಿದೆ, ವಿತ್ತ ಸಚಿವರು ಹಾಗೂ ಪ್ರಧಾನಿಯವರು ಪುನರ್ ಪರಿಶೀಲಿಸಬೇಕು ಎಂದು ಭಂಡಾರಿ ಸಲಹೆ..! ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿರುವುದು 'ಸಾಲದ ಬಜೆಟ್' ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಮಂಜುನಾಥ ಭಂಡಾರಿ ವಿಶ್ಲೇಷಿಸಿದ್ದಾರೆ. ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಡವರಿಗೆ, ಮಧ್ಯಮ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಪೂರಕವಾದ ಒಂದೇ ಒಂದು ಯೋಜನೆ ಈ ಬಾರಿಯ ಆಯವ್ಯಯದಲ್ಲಿ ಇಲ್ಲ ಎಂದು ಬೊಟ್ಟು ಮಾಡಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಬಜೆಟ್ ನಲ್ಲಿ ಎಲ್ಲೂ ಪ್ರತಿಫಲಿಸಿಲ್ಲ. ಅದು ಕೇವಲ ಘೋಷಣೆಯಾಗೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಂಜುನಾಥ್ ಭಂಡಾರಿ, ದೆಹಲಿ, ಬಿಹಾರ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಮಂಡಿಸಿದ ಬಜೆಟ್ ಇದಾಗಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳ ಸರ್ಕಾರವಿರುವ ರಾಜ್ಯಗಳಿ...
ಪ್ರಣಾಳಿಕೆಯಲ್ಲಿ ಹೇಳಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ: ಅಶೋಕ ಆಗ್ರಹ

ಪ್ರಣಾಳಿಕೆಯಲ್ಲಿ ಹೇಳಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ: ಅಶೋಕ ಆಗ್ರಹ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆಯೇ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆರ್‌.ಅಶೋಕ ಭೇಟಿ ನೀಡಿದರು. ನಂತರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಅವರ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗಿ ಎಂದು ಬೆದರಿಸಿದ್ದಾರೆ. ಅವರಿಗೆ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಅವರಿಗೆ ಕುಡಿಯುವ ನೀರು, ಶೌಚಾಲಯ, ಟೆಂಟ್‌ ಮೊದಲಾದ ಸೌಲಭ್ಯ ನೀಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರೂ. ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7,000 ರೂ. ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದರಂತೆಯೇ ಈಗಲೇ ಸರ್ಕಾರ ಗೌರವಧನ ನೀಡಲಿ ಎಂದು ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಅವರನ್ನು ಕರೆದು ...
ಬಿಎಂಟಿಸಿ-ಕೆನರಾ ಬ್ಯಾಂಕ್ ಒಡಂಬಡಿಕೆ; ನೌಕರರಿಗೆ ವಿಮೆ, ಮೃತರ ಅವಲಂಬಿತರಿಗೆ ಪರಿಹಾರ

ಬಿಎಂಟಿಸಿ-ಕೆನರಾ ಬ್ಯಾಂಕ್ ಒಡಂಬಡಿಕೆ; ನೌಕರರಿಗೆ ವಿಮೆ, ಮೃತರ ಅವಲಂಬಿತರಿಗೆ ಪರಿಹಾರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆನರಾ ಬ್ಯಾಂಕ್ ನೊಂದಿಗೆ ರೂ. 1.5 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆಯ ಒಡಂಬಡಿಕೆ ಮಾಡಿಕೊಂಡಿದ್ದು, ಮೃತರ ಅವಲಂಬಿತರಿಗೆ ರೂ. 1 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು. ಬೆಂ.ಮ.ಸಾ.ಸಂಸ್ಥೆಯು ಒಟ್ಟು 51 ಘಟಕಗಳನ್ನು ಹೊಂದಿದದ್ದು, ಪ್ರತಿದಿನ 5861 ಅನುಸೂಚಿಗಳಿಂದ 61536 ಸುತ್ತುವಳಿಗಳನ್ನು 12.04 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿ ದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಸ್ತುತ 1279 ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ 352 ಎಲೆಕ್ನಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ ಒಟ್ಟು 6158 ವಾಹನಗಳನ್ನು ಹೊಂದಿದ್ದು, ಪರಿಸರಸ್ನೇಹಿ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರ ಜೊತೆಯಲ್ಲೇ, ನಿಗಮದ ನೌಕರರ...
ALF 4.0 : ‘ಏಷ್ಯನ್ ಶತಮಾನ’ ಸಾಹಿತ್ಯ ಮತ್ತು ಸಂಸ್ಕೃತಿಗೆ ‘ಅಲಯನ್ಸ್‌ ವಿಶ್ವವಿದ್ಯಾಲಯ’ ವೇದಿಕೆ

ALF 4.0 : ‘ಏಷ್ಯನ್ ಶತಮಾನ’ ಸಾಹಿತ್ಯ ಮತ್ತು ಸಂಸ್ಕೃತಿಗೆ ‘ಅಲಯನ್ಸ್‌ ವಿಶ್ವವಿದ್ಯಾಲಯ’ ವೇದಿಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಅಲೈಯನ್ಸ್ ವಿಶ್ವವಿದ್ಯಾಲಯವು ಫೆಬ್ರವರಿ 13 ರಿಂದ ಫೆಬ್ರವರಿ 15, 2025 ರವರೆಗೆ ಮೂರು ದಿನಗಳ ಸಾಹಿತ್ಯ, ಸಂಸ್ಕೃತಿ ಮತ್ತು ಬೌದ್ಧಿಕ ಸಂವಾದವನ್ನೊಳಗೊಂಡ 'ಅಲಯನ್ಸ್ ಸಾಹಿತ್ಯ ಉತ್ಸವ (ALF 4.0)' ನಾಲ್ಕನೇ ಆವೃತ್ತಿಯನ್ನು ಆಚರಿಸಲಿದೆ. ಈ ವರ್ಷದ ವಿಷಯವಾದ “ದಿ ಏಷ್ಯನ್ ಸೆಂಚುರಿ” ಜಾಗತಿಕ ಸಂಸ್ಕೃತಿ, ರಾಜಕೀಯ, ಆರ್ಥಿಕತೆ ಮತ್ತು ಕಲೆಯ ಮೇಲೆ ಏಷ್ಯಾದ ಆಳವಾದ ಪ್ರಭಾವವನ್ನು ಎತ್ತಿ ತೋರಿಸುತ್ತದೆ, ಸಾಹಿತ್ಯ ಉತ್ಸಾಹಿಗಳು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ರಾಜತಾಂತ್ರಿಕರು ಮತ್ತು ಸಾಂಸ್ಕೃತಿಕ ಅಭಿಜ್ಞರು ಅರ್ಥಪೂರ್ಣ ಸಂಭಾಷಣೆಗಳು ಮತ್ತು ತಲ್ಲೀನಗೊಳಿಸುವ ಅನುಭವಗಳಲ್ಲಿ ತೊಡಗಿಸಿಕೊಳ್ಳಲು ಅಸಾಧಾರಣ ವೇದಿಕೆಯನ್ನು ಕಲ್ಪಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ ಉತ್ಸವವು 25 ಕ್ಕೂ ಹೆಚ್ಚು ದೇಶಗಳ ಸಾಹಿತ್ಯ ಸೇರಿದಂತೆ 120 ಕ್ಕೂ ಹೆಚ್ಚು ಭಾಷಣಕಾರರನ್ನು ಒಳಗೊಂಡ ಅಸಾಧಾರಣ ಶ್ರೇಣಿಯನ್ನು ಭರವಸೆ ನೀಡುತ್ತದೆ. ಪ್ರಸಿದ್ಧ ಭಾರತೀಯ ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್; ಪ್ರಸಿದ್ಧ ಜಪಾನಿನ ಲೇಖಕ ಅಸಕೊ ಯುಜುಕಿ, ಏಷ್ಯನ್ ಶತಮಾನದ ಭಾರತದ ಧ್ವನಿ ಪಾಲ್ಕಿ ಶರ್ಮ...
ಕೇಂದ್ರ ಬಜೆಟ್; ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಳ

ಕೇಂದ್ರ ಬಜೆಟ್; ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಳ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಶನಿವಾರ ಬಜೆಟ್ ಮಂಡಿಸಿದರು. ಮಧ್ಯಮ ವರ್ಗದ ಬಹು ದಿನಗಳ ಬೇಡಿಕೆಯಂತೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಹೆಚ್ಚಿಸುವ ಭರವಸೆ ಪ್ರಕಟಿಸಿದರು. ಹೊಸ ತೆರಿಗೆ ಪದ್ಧತಿಯಂತೆ 12 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ಇಲ್ಲ. 4 ಲಕ್ಷದಿಂದ 8 ಲಕ್ಷದವರೆಗೆ ಶೇ.5 ತೆರಿಗೆ, 8 ಲಕ್ಷದಿಂದ 11 ಲಕ್ಷದವರೆಗೆ ಶೇ.10 ತೆರಿಗೆ, 12 ಲಕ್ಷದಿಂದ 15 ಲಕ್ಷದವರೆಗೆ ಶೇ.15 ತೆರಿಗೆ, 15 ಲಕ್ಷದಿಂದ 20 ಲಕ್ಷದವರೆಗೆ ಶೇ.20 ತೆರಿಗೆ 20 ಲಕ್ಷದಿಂದ 24 ಲಕ್ಷದರೆಗೆ ಶೇ.25 ತೆರಿಗೆ 24 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.30ರಷ್ಟು ತೆರಿಗೆ ಹೊಸ ತೆರಿಗೆ ಪದ್ಧತಿ ಅನ್ವಯ 4 ಲಕ್ಷ ರೂ ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. ಹಿರಿಯ ನಾಗರಿಕರಿಗೆ ತೆರಿಗೆ ಕಡಿತದ ಮಿತಿಯನ್ನು 1 ಲಕ್ಷ ರೂ.ಗೆ ದ್ವಿಗುಣಗೊಳಿಸಲಾಗಿದೆ ಎಂದು ಪ್ರಕಟಿಸಿದ ನಿರ್ಮಲಾ ಸೀತಾರಾಮನ್ ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿಯನ್ನು 2.4 ಲಕ್ಷ ರೂ.ಗಳಿಂದ 6 ಲಕ್ಷ ರ...