Thursday, January 29

Focus

ಅಮೆರಿಕಾದಲ್ಲಿ ಮತ್ತೊಂದು ವಿಮಾನ ದುರಂತ; ಅನೇಕ ಮನೆಗಳಿಗೆ ಅಗ್ನಿಸ್ಪರ್ಶ

ಅಮೆರಿಕಾದಲ್ಲಿ ಮತ್ತೊಂದು ವಿಮಾನ ದುರಂತ; ಅನೇಕ ಮನೆಗಳಿಗೆ ಅಗ್ನಿಸ್ಪರ್ಶ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ವಾಷಿಂಗ್ಟನ್: ವಾಷಿಂಗ್ಟನ್ ಡಿಸಿಯಲ್ಲಿ 67 ಜನರ ಸಾವಿಗೆ ಕಾರಣವಾದ ವಿಮಾನ ಡಿಕ್ಕಿಯಿಂದ ಅಮೆರಿಕ ಚೇತರಿಸಿಕೊಳ್ಳುತ್ತಿರುವಾಗಲೇ, ಶುಕ್ರವಾರ ಸಂಜೆ ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. ಪೆನ್ಸಿಲ್ವೇನಿಯಾ ಪ್ರಾಂತ್ಯದ ಫಿಲಡೆಲ್ಫಿಯಾದಲ್ಲಿ ಲಘು ವಿಮಾನವೊಂದು ಪತನಗೊಂಡು ಹಲವಾರು ಮನೆಗಳಿಗೆ ಬೆಂಕಿ ಹಚ್ಚಿಕೊಂಡಿದೆ. ಈ ವಿಮಾನದಲ್ಲಿ ಆರು ಜನ ಪ್ರಯಾಣಿಸುತ್ತಿದ್ದು, ಅದು ವೈದ್ಯಕೀಯ ಸೇವಾ ನಿರತ ವಿಮಾನವಾಗಿತ್ತು ಎನ್ನಲಾಗಿದೆ. ಈ ವಿಮಾನ ಪತನದಿಂದಾಗಿ ನ್ಯೂ ರೂಸ್‌ವೆಲ್ಟ್ ಬೌಲೆವಾರ್ಡ್ ಮತ್ತು ಕಾಟ್‌ಮನ್ ಅವೆನ್ಯೂದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಶುಕ್ರವಾರ ಸಂಜೆ 6 ಗಂಟೆಯ ನಂತರ ವಸತಿ ಬೀದಿಯಾದ ಕ್ಯಾಲ್ವರ್ಟ್ ಸ್ಟ್ರೀಟ್‌ನ 7200 ಬ್ಲಾಕ್ ಬಳಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ತುರ್ತು ಸೇವೆಗಳ ರವಾನೆಗಳನ್ನು ಸುದ್ದಿ ತಾಣ ಉಲ್ಲೇಖಿಸಿದೆ....
‘ಪೂರ್‌ ಲೇಡಿ’ ಹೇಳಿಕೆ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

‘ಪೂರ್‌ ಲೇಡಿ’ ಹೇಳಿಕೆ: ಸೋನಿಯಾ ಗಾಂಧಿ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ನೀಡಿದ 'ಪೂರ್‌ ಲೇಡಿ' ಹೇಳಿಕೆ ಅತ್ಯಂತ ಖಂಡನೀಯ ಎಂದಿರುವ ಬಿಜೆಪಿ, ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಕಾಂಗ್ರೆಸ್‌ ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಸೋನಿಯಾ ಗಾಂಧಿಯವರ ಕೀಳು ಹೇಳಿಕೆಯೇ ಸಾಕ್ಷಿ ಎಂದಿದೆ. ಈ ದೇಶದ ಆದಿವಾಸಿ ಹಾಗೂ ದಲಿತ ಸಮುದಾಯದವರ ಬಗ್ಗೆ ಕಾಂಗ್ರೆಸ್‌ ಎಂತಹ ಮನಸ್ಥಿತಿ ಹೊಂದಿದೆ ಎಂಬುದಕ್ಕೆ ಬಹುಷಃ ಇದಕ್ಕಿಂತ ಬೇರೆ ಉದಾಹರಣೆ ಸಿಗುವುದಿಲ್ಲ ಎಂದು ಬಿಜೆಪಿ ಹೇಳಿದೆ. ಸೋನಿಯಾ ಗಾಂಧಿಯವರು ತಮ್ಮ ಹೇಳಿಕೆಯ ಬಗ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಆಗ್ರಹಿಸಿದೆ. ರಾಷ್ಟ್ರಪತಿ @rashtrapatibhvn ದ್ರೌಪದಿ ಮುರ್ಮು ಅವರ ಬಗ್ಗೆ @INCIndia ಅಧಿನಾಯಕಿ ಶ್ರೀಮತಿ ಸೋನಿಯಾ ಗಾಂಧಿಯವರು ನೀಡಿದ “ಪೂರ್‌ ಲೇಡಿ” ಹೇಳಿಕೆ ಅತ್ಯಂತ ಖಂಡನೀಯ.ಈ ದೇಶದ ಆದಿವಾಸಿಗಳು, ದಲಿತರು ರಾಷ್ಟ್ರದ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರೆ, ಕಾಂಗ್ರೆಸ್‌ ಅದನ್ನು ಸಹಿಸುವುದಿಲ್ಲ ಎಂಬುದಕ್ಕೆ ಸೋನಿಯಾ ಗಾಂಧಿಯವರ ಕೀಳು ಹೇಳಿಕೆಯೇ… ...
ಓಮನ್: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ

ಓಮನ್: ಮಾಜಿ ಸಚಿವ ಸಿ.ಟಿ.ರವಿ ಅವರಿಗೆ “ಗ್ಲೋಬಲ್ ಆಚಿವರ್ಸ್ ಅವಾರ್ಡ್” ಪ್ರಶಸ್ತಿ ಪ್ರದಾನ

Focus, Update, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಓಮನ್: ಓಮನ್ ನಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ "ಗ್ಲೋಬಲ್ ಆಚಿವರ್ಸ್ ಅವಾರ್ಡ್" ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಅಪರೂಪದ ಸಾಧಕರನ್ನು ಗುರುತಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಉನ್ನತ ಆಶಯದಿಂದ "ವಿಶ್ವವಾಣಿ" "ಸಂಸ್ಥೆ ಕರ್ನಾಟಕ ಸಂಘ ಮಸ್ಕತ್" ಅವರ ಸಹಯೋಗದೊಂದಿಗೆ ಓಮನ್ ನಲ್ಲಿ ನಡೆದ "ಗ್ಲೋಬಲ್ ಆಚಿವರ್ಸ್ ಅವಾರ್ಡ್" ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಮಾಜಿ ಸಚಿವ ಸಿ.ಟಿ.ರವಿ ಅವರಿಗೆ "ಗ್ಲೋಬಲ್ ಆಚಿವರ್ಸ್ ಅವಾರ್ಡ್" ಪ್ರಶಸ್ತಿನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಟಿ.ರವಿ, ಸಾಧಕರನ್ನು ಗೌರವಿಸುವ ಮಹೋನ್ನತ ಕಾರ್ಯಮಾಡಿದ ವಿಶ್ವವಾಣಿ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಎರಡು ದೇಶಗಳ ಮೈತ್ರಿ ಮತ್ತು ಪರಸ್ಪರ ಸಂಸ್ಕೃತಿಕ ವಿನಿಮಯದ ಆಶಯದಿಂದ ನೆರವೇರಿಸಲಾದ ಮಹಾ ಸಮಾರಂಭದಲ್ಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವಾರು ಜನ ಸಾಧಕರೊಂದಿಗೆ, ವಿಧಾನ ಸಭೆಯ ಸಭಾಧ್ಯಕ್ಷ ಯುಟಿ ಖಾದರ್, ಮಸ್ಕತ್ ನ ಕರ್ನಾ...
ದೇಶದ 14.72 ಲಕ್ಷ ಶಾಲೆಗಳಲ್ಲಿ 24.8 ಕೋಟಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ : ಆರ್ಥಿಕ ಸಮೀಕ್ಷೆ 2024-25

ದೇಶದ 14.72 ಲಕ್ಷ ಶಾಲೆಗಳಲ್ಲಿ 24.8 ಕೋಟಿ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ : ಆರ್ಥಿಕ ಸಮೀಕ್ಷೆ 2024-25

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೈವಿಧ್ಯ
ಆರ್ಥಿಕ ಸಮೀಕ್ಷೆಯ ಹೈಲೈಟ್ಸ್: ಕಂಪ್ಯೂಟರ್ ಹೊಂದಿರುವ ಶಾಲೆಗಳ ಪ್ರಮಾಣ 2019-20ರಲ್ಲಿ ಇದ್ದ 38.5%ನಿಂದ 2023-2024ರಲ್ಲಿ 57.2% ಗೆ ಏರಿಕೆ, ಇಂಟರ್ ನೆಟ್ ಸೌಲಭ್ಯ ಹೊಂದಿರುವ ಶಾಲೆಗಳ ಪ್ರಮಾಣ 2019-20ರಲ್ಲಿ ಇದ್ದ 22.3%ನಿಂದ 2023-2024ರಲ್ಲಿ 53.9%ಗೆ ಏರಿಕೆ ಇತ್ತೀಚಿನ ವರ್ಷಗಳಲ್ಲಿ ಶಾಲೆ ತೊರೆಯುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಸ್ಥಿರವಾಗಿ ಕಡಿಮೆಯಾಗಿವೆ, ಪ್ರಾಥಮಿಕ ಹಂತದಲ್ಲಿ 1.9%, ಉನ್ನತ ಪ್ರಾಥಮಿಕ ಹಂತದಲ್ಲಿ 5.2% ಮತ್ತು ಮಾಧ್ಯಮಿಕ ಹಂತದಲ್ಲಿ 14.1%ಗೆ ತಗ್ಗಿದೆ ಶಿಕ್ಷಣ ವ್ಯವಸ್ಥೆಯ ಚಲನಶೀಲತೆಯನ್ನು ವೇಗವಾಗಿ ಅಭಿವೃದ್ಧಿಪಡಿಸುವಲ್ಲಿ ತಂತ್ರಜ್ಞಾನದ ಏಕೀಕರಣ(ಕೃತಕ ಬುದ್ಧಿಮತ್ತೆ) ಅತ್ಯಗತ್ಯ ಒಟ್ಟು ಉನ್ನತ ಶಿಕ್ಷಣ ಸಂಸ್ಥೆಗಳು(ಎಚ್ಇಐಎಸ್) 2014-15ರಲ್ಲಿ ಇದ್ದ 51,534ರಿಂದ 2022-23ರಲ್ಲಿ 58,643ಕ್ಕೆ ಅಂದರೆ ಶೇಕಡ 13.8ರಷ್ಟು ಹೆಚ್ಚಾಗಿದೆ ನವದೆಹಲಿ: ಆರ್ಥಿಕ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಗುರಿಗಳನ್ನು ಸಾಧಿಸಲು ಪೀರ್ ಬೋಧನೆ(ಶಿಕ್ಷಕರಿಗೆ ಬದಲಾಗಿ ಮಕ್ಕಳ ನಡುವೆ ಬೋಧನೆ)ಯಂತಹ ನಾವೀನ್ಯತೆಗೆ ಆರ್ಥಿಕ ಸಮೀಕ್ಷೆ ಒತ್ತು ನೀಡಿದೆ. ಕೇಂದ್ರ ಹಣ...
ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಡ್ಡಿ; ಟೆಂಟ್ ಕಿತ್ತುಹಾಕಿಸಿದ ಸರ್ಕಾರದ ವಿರುದ್ಧ ಆಕ್ರೋಶ

ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಡ್ಡಿ; ಟೆಂಟ್ ಕಿತ್ತುಹಾಕಿಸಿದ ಸರ್ಕಾರದ ವಿರುದ್ಧ ಆಕ್ರೋಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯರ್ತೆಯರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಟ್ಟಹಾಸ ಮೆರೆದಿದ್ದು, ಪೊಲೀಸರ ಮೂಲಕ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಹಿಟ್ಲರ್ ಧೋರಣೆ ತೋರಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರನ್ನ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ. ಈಗ ಅವರ ಶಾಂತಿಯುತ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ...
ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 1,737.68 ಕೋ.ರೂ.ಖರ್ಚು

ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ 1,737.68 ಕೋ.ರೂ.ಖರ್ಚು

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷವು 1,737.68 ಕೋಟಿ ರೂ. ಖರ್ಚು ಮಾಡಿದೆ. ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಲೆಕ್ಕ ಕೊಟ್ಟಿದೆ. 884.45 ಕೋಟಿ ರೂ ಪಕ್ಷದ ಪ್ರಚಾರಕ್ಕಾಗಿ ಖರ್ಚು, 853.23 ಕೋಟಿ ರೂ ಅಭ್ಯರ್ಥಿಗಳ ವೆಚ್ಚ, ಜಾಹೀರಾತು ಮತ್ತಿತರ ಪ್ರಚಾರಗಳಿಗಾಗಿ ಸುಮಾರು 611.50 ಕೋಟಿ ರೂ ಖರ್ಚು ಮಾಡಲಾಗಿದೆ. ಪೋಸ್ಟರ್‌ಗಳು, ಬ್ಯಾನರ್‌, ಧ್ವಜ ಮುಂತಾದ ಪ್ರಚಾರ ಸಾಮಗ್ರಿಗಳಿಗಾಗಿ 55.75 ಕೋಟಿ ರೂ, ವೇದಿಕೆ, ಆಸನ, ಧ್ವನಿವರ್ಧಕ ವಾಹನಗಳು ಸೇರಿದಂತೆ ಬಹಿರಂಗ ಪ್ರಚಾರಗಳಿಗಾಗಿ 19.84 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ತನ್ನ ಖರ್ಚು-ವೆಚ್ಚಗಳ ವರದಿಯಲ್ಲಿ ತಿಳಿಸಿದೆ....
ಮುಡಾ ಪ್ರಕರಣ: ಇಡೀ ವರದಿ ರಾಜಕೀಯ ಪ್ರೇರಿತ ಎಂದ ಸಿಎಂ

ಮುಡಾ ಪ್ರಕರಣ: ಇಡೀ ವರದಿ ರಾಜಕೀಯ ಪ್ರೇರಿತ ಎಂದ ಸಿಎಂ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಅಕ್ರಮ ವರ್ಗಾವಣೆ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿ ಯವರ ಕ್ರಮ ಕಾನೂನು ಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಡಿ ಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಿದ್ದಾರೆ. ಸರ್ಕಾರ ಹಾಗೂ ಮುಖ್ಯಮಂತ್ರಿ ಹುದ್ದೆಯ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಇಡಿ ಯವರ ನೋಟೀಸ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೇಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಪ್ರಯತ್ನಗಳು ಸಫಲವಾಗಲು...
ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಮಾಡಬೇಡಿ, ದೂರು ನೀಡಿ: ಸಿಎಂ ಕರೆ

ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಮಾಡಬೇಡಿ, ದೂರು ನೀಡಿ: ಸಿಎಂ ಕರೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮೈಸೂರು: ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು, ಬದಲಾಗಿ ದೂರು ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಬಿಐ ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು. ಜನರು ಆತಂಕಕ್ಕೊಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ರಾಜ್ಯದ ಜನರಲ್ಲಿ ವಿನಂತಿಸುತ್ತೇನೆ ಎಂದರು. ಮೈಕ್ರೋ ಫೈನಾನ್ಸ್ ನಿಂದ ಜನರಿಗಾಗುತ್ತಿರುವ ತೊಂದರೆ ನಮ್ಮ ಗಮನದಲ್ಲಿದೆ. ಜನರು ಸಾಲ ಲಭ್ಯವಾಗುವ ಕಡೆ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಹಣಕಾಸು ಸಂಸ್ಥೆ, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರವನ್ನು ಹಾಕುವುದಲ್ಲದೇ, ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ವಾ...
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ; ಇಬ್ಬರು ಉಗ್ರರ ಹತ್ಯೆ

ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ; ಇಬ್ಬರು ಉಗ್ರರ ಹತ್ಯೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮ ನುಸುಳುವಿಕೆಗೆ ಸೇನೆ ಬ್ರೇಕ್ ಹಾಕಿದೆ. ಪೂಂಚ್ ಜಿಲ್ಲೆಯ ಖಾರಿ ಕರ್ಮರಾ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿಶಸ್ತ್ರಸಜ್ಜಿತ ಉಗ್ರರ ಗುಂಪು ಒಳನುಸುಳಲು ಯತ್ನಿಸಿದ್ದು ಅದನ್ನು ಯೋಧರು ವಿಫಲಗೊಳಿಸಿದ್ದಾರೆ. ಉಗ್ರರು ಒಳನುಸುಳಲು ಯತ್ನಿಸುತ್ತಿದ್ದಂತೆ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ರಾತ್ರಿ ಹಲವು ಬಾರಿ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ಸ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಆಮ್ ಆದ್ಮಿಗೆ ಸ್ವಪಕ್ಷೀಯರಿಂದಲೇ ಆಘಾತ; 8 ಶಾಸಕರು ಎಎಪಿ ಪಕ್ಷಕ್ಕೆ ರಾಜೀನಾಮೆ

ಆಮ್ ಆದ್ಮಿಗೆ ಸ್ವಪಕ್ಷೀಯರಿಂದಲೇ ಆಘಾತ; 8 ಶಾಸಕರು ಎಎಪಿ ಪಕ್ಷಕ್ಕೆ ರಾಜೀನಾಮೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ದೆಹಲಿ ಚುನಾವಣೆಗೆ ಕೇವಲ ಐದು ದಿನ ಇರುವಾಗಲೇ, ಆಮ್ ಆದ್ಮಿ ಪಕ್ಷಕ್ಕೆ ಸ್ವಪಕ್ಷೀಯರೇ ಆಘಾತ ನೀಡಿದ್ದಾರೆ. ಟಿಕೆಟ್ ಸಿಗದೇ ಪಕ್ಷದ ವಿರುದ್ದ ಮುನಿಸಿಕೊಂಡಿದ್ದ 8 ಶಾಸಕರು ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ನರೇಶ್ ಯಾದವ್, ರೋಹಿತ್ ಕುಮಾರ್, ರಾಜೇಶ್ ರಿಷಿ, ಮದನ್ ಲಾಲ್, ಪವನ್ ಶರ್ಮಾ, ಮತ್ತು ಭಾವನಾ ಗೌಡ್, ಬಿಎಸ್ ಜೂನ್, ಮತ್ತು ಗಿರೀಶ್ ಸೋನಿ ಅವರು ಆಮ್ ಆದ್ಮಿ ಪಕ್ಷ ತ್ಯಜಿಸಿದ್ದಾರೆ. ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನಡೆ ಬಗ್ಗೆ ಈ ನಾಯಕರು ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ....