Thursday, January 29

Focus

ಉಚಿತ ಬಸ್‌ಪಾಸ್‌ ಸೌಲಭ್ಯ; ಗ್ರಾಮೀಣ ಪತ್ರಕರ್ತರಿಗೆ ಸಿಎಂ ಸಲಹೆ ಹೀಗಿದೆ..!

ಉಚಿತ ಬಸ್‌ಪಾಸ್‌ ಸೌಲಭ್ಯ; ಗ್ರಾಮೀಣ ಪತ್ರಕರ್ತರಿಗೆ ಸಿಎಂ ಸಲಹೆ ಹೀಗಿದೆ..!

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಮಾಧ್ಯಮ ಮಾನ್ಯತಾ ಪತ್ರ ಹೊಂದಿರದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಮೂಲಕ ಬಜೆಟ್‌ನಲ್ಲಿ ಘೋಷಣೆ ಮಾಡಿ ಅದನ್ನು ಯಥಾವತ್ತಾಗಿ ಜಾರಿಗೆ ಕೊಟ್ಟು ನಮ್ಮ ಸರ್ಕಾರವು ನುಡಿದಂತೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ 'X'ನಲ್ಲಿ ಸಿಎಂ ಸಿದ್ದರಾಮಯ್ಯ ಹಂಚಿಕೊಂಡ ಮಾಹಿತಿ ಹೀಗಿದೆ: ಉಚಿತ ಬಸ್‌ಪಾಸ್‌ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಪೂರ್ಣಾವಧಿಗೆ ನೇಮಕಗೊಂಡು 4 ವರ್ಷಗಳ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿ ಆದೇಶ/ ವೇತನ ಪತ್ರ/ ಬ್ಯಾಂಕ್ ಸ್ಟೇಟ್‌ಮೆಂಟ್‌ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಸೇವಾನುಭವಕ್ಕಾಗಿ ಒದಗಿಸಬೇಕು ಎಂದವರು ಮಾಹಿತಿ ನೀಡಿದ್ದಾರೆ. ಅರ್ಹ ಪತ್ರಕರ್ತರು ಉಚಿತ ಬಸ್‌ಪಾಸ್‌ ಅಡಿ ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದು....
ಪ್ರಯಾಗರಾಜ್​ ಕಾಲ್ತುಳಿತ: ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

ಪ್ರಯಾಗರಾಜ್​ ಕಾಲ್ತುಳಿತ: ಮೃತರ ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ

Focus, Update, ಪ್ರಮುಖ ಸುದ್ದಿ, ಬೆಂಗಳೂರು
ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್​ ಮಹಾಕುಂಭಮೇಳದಲ್ಲಿ ಸಂಭವಿಸಿರುವ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಉತ್ತರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಕಾಲ್ತುಳಿತಪ್ರಕರಣಕ್ಕೆ ಸಂಬಂಧಿಸಿದಂತೆ 30 ಭಕ್ತರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಹೇಳಿದೆ. ಈ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಈ ದುರಂತ ಬಗ್ಗೆ ತನಿಖೆಗಾಗಿ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಜನವರಿ 30ರಂದು ಮಹಾ ಕುಂಭ ಮೇಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಿಎಂ ಆದಿತ್ಯನಾಥ್ ತಿಳಿಸಿದ್ದಾರೆ....
ಮೂರನೇ ವಿವಾಹಕ್ಕೆ ರಾಖೀ ಸಾವಂತ್ ತಯಾರಿ? ಪಾಕಿಸ್ತಾನ ಹುಡುಗನ ಹುಡುಗನ ಕೈ ಹಿಡಿಯಲಿದ್ದಾರೆ ನಟಿ

ಮೂರನೇ ವಿವಾಹಕ್ಕೆ ರಾಖೀ ಸಾವಂತ್ ತಯಾರಿ? ಪಾಕಿಸ್ತಾನ ಹುಡುಗನ ಹುಡುಗನ ಕೈ ಹಿಡಿಯಲಿದ್ದಾರೆ ನಟಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಒಂದಿಲ್ಲೊಂದು ವಿವಾದಗಳ ಸುದ್ದಿಗಳಿಂದ ಗಮನಸೆಳೆಯುತ್ತಿರುವ ನಟಿ ರಾಖಿ ಸಾವಂತ್ ಅವರು ಇಡೀಗ್ಗ ಮತ್ತೊಂದು ಮದುವೆ ಪ್ರಸ್ತಾಪ ವಿಚಾರದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ರಾಖಿ ಸಾವಂತ್ ಅವರು ಇದೀಗ ಮೂರನೇ ಬಾರಿಗೆ ಮದುವೆಯಾಯಾಗುವ ತಯಾರಿಯಲ್ಲಿದ್ದಾರೆ. ಈ ಬಾರಿ ಅವರು ಪಾಕಿಸ್ತಾನದ ಹುಡುಗನ ಕೈ ಹಿಡಿಯಲಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ ಪೊಲೀಸ್ ಅಧಿಕಾರಿ ಆಗಿಯೂ ಕೆಲಸ ಮಾಡುತ್ತಿರುವ ನಟ ಡೊಡಿ ಖಾನ್ ಜೊತೆ ಮದುವೆ ಆಗುವುದಾಗಿ ರಾಖಿ ಸಾವಂತ್ ತಿಳಿಸಿದ್ದಾರೆ. ಡೊಡಿ ಖಾನ್ ಅವರು ತಮಗೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ ಎಂದು ರಾಖಿ ಸಾವಂತ್​ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದಿಬ್ಬಣ ಕರೆದುಕೊಂಡು ಭಾರತಕ್ಕೆ ಬರಲೇ ಅಥವಾ ದುಬೈಗೆ ಬರಲೇ’ ಎಂದು ಡೊಡಿ ಖಾನ್ ಕೇಳಿದ್ದಾರೆ ಎಂದು ರಾಖಿ ಹೇಳಿದ್ದಾರೆ. ಈಗಾಗಲೇ ಅವರಿಗೆ ಎರಡು ಮದುವೆ ಆಗಿ ಮುರಿದು ಬಿದ್ದಿವೆ. 2019ರಲ್ಲಿ ಅವರು ರಿತೇಶ್ ಸಿಂಗ್ ಜೊತೆ ಮದುವೆ ಆಗಿದ್ದರು. 2022ರಲ್ಲಿ ವಿಚ್ಛೇದನ ಪಡೆದುಕೊಂಡ ಬಳಿಕ ಮೈಸೂರು ಮೂಲದ ಆದಿಲ್ ಖಾನ್​ ಜೊತೆ ಮದುವೆ ನೆರವೇರಿತ್ತು. ಅವರೊಂದಿಗಿನ ವಿಚ್ಛೇದನದ ನಂತರ ಇದೀಗ ಮೂರನೇ ವ...
ವಿಜಯೇಂದ್ರ ವಿರುದ್ದ ಬಿಜೆಪಿ ಸಂಸದರ ಬಂಡಾಯ; ಇನ್ನೇನಿದ್ದರೂ ಯುದ್ಧ ಎಂದ ಡಾ.ಕೆ.ಸುಧಾಕರ್‌

ವಿಜಯೇಂದ್ರ ವಿರುದ್ದ ಬಿಜೆಪಿ ಸಂಸದರ ಬಂಡಾಯ; ಇನ್ನೇನಿದ್ದರೂ ಯುದ್ಧ ಎಂದ ಡಾ.ಕೆ.ಸುಧಾಕರ್‌

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವದ ವಿರುದ್ದ ಸಂಸದ ಡಾ.ಸುಧಾಕರ್ ಬಂಡಾಯದ ರಣಕಹಳೆ ಮೊಳಗಿಸಿದ್ದಾರೆ. ಇಂದು ತರ್ತು ಸುದ್ದಿಗೋಷ್ಠಿ ನಡೆಸಿದ ಸುಧಾಕರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು. ಯಾವುದೇ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಪಕ್ಷವನ್ನು ಅವನತಿಗೆ ಕೊಂಡೊಯ್ಯುವ ಜೊತೆಗೆ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಅವರನ್ನು ಬದಲಿಸಲು ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬ ಕಾರಣಕ್ಕೆ 2019 ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದೆ. ಎಷ್ಟೇ ಅಪಮಾನವಾದರೂ, ರಾಜಕೀಯವಾಗಿ ತುಳಿಯಲು ಯತ್ನಿಸಿದರೂ ಪಕ್ಷವನ್ನು ಬಿಡಲಿಲ್ಲ. ನಂತರ ನಾನು ಸೋತರೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಬಿಜೆಪಿ ಪಾಲಿಗೆ ಮರಳುಭೂಮಿಯಾಗಿರುವ ಈ ಪ್ರದೇಶದಲ್ಲಿ ಪಕ್ಷವನ್ನು ಬೆಳೆಸಲು ಶ್ರಮಿಸಿದ್ದೇನೆ ಎಂದರು. ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯುವಾಗ ಎಲ್ಲರ ಅಭಿಪ...
ರಾಜ್ಯ ಬಿಜೆಪಿಯಲ್ಲಿ ಈಗ ‘ಜಗನ್ನಾಥ ಭವನ Vs ಬಾಲಭವನ’; ಏನಿದು ಕಾಂಗ್ರೆಸ್ ವ್ಯಾಖ್ಯಾನ?

ರಾಜ್ಯ ಬಿಜೆಪಿಯಲ್ಲಿ ಈಗ ‘ಜಗನ್ನಾಥ ಭವನ Vs ಬಾಲಭವನ’; ಏನಿದು ಕಾಂಗ್ರೆಸ್ ವ್ಯಾಖ್ಯಾನ?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ 'ಜಗನ್ನಾಥ ಭವನ Vs ಬಾಲಭವನ' ಎಂಬ ಎರಡು ಗುಂಪುಗಳಿವೆ ಎಂದು ಪ್ರದೇಶ ಕಾಂಗ್ರೆಸ್ ವ್ಯಾಖ್ಯಾನಿಸಿದೆ. ಕರ್ನಾಟಕದ ಭಾರತೀಯ ಜನತಾ ಪಕ್ಷ ಗುಂಪುಗಾರಿಕೆಯಿಂದ ಬಸವಳಿದಿದ್ದು, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರವರು ಕರ್ನಾಟಕ ಬಿಜೆಪಿಯನ್ನು ಒಣಗಿದ ಮರಕ್ಕೆ ಹೋಲಿಸಿಕೊಂಡು ಭಿನ್ನಮತೀಯರನ್ನು ಕಾಗೆಗಳಿಗೆ ಹೋಲಿಕೆ ಮಾಡಿ, ಅಪಶಕುನದ ಕಾಗೆಗಳನ್ನು ಗುಂಡಿಟ್ಟು ಓಡಿಸಬೇಕೆಂದು ಪತ್ರಿಕಾ ಸಂದರ್ಶನದಲ್ಲಿ ಹೇಳುವುದರ ಮೂಲಕ ಭೌದ್ದಿಕವಾಗಿ ದಿವಾಳಿಯಾಗಿರುವ, ಗುಂಪುಗಾರಿಕೆಯಿಂದ ತತ್ತರಿಸಿ ಸ್ವಜನ ಪಕ್ಷಪಾತದಿಂದ ತುಳುಕಿರುವ ರಾಜ್ಯ ಬಿಜೆಪಿ ನಾಯಕರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ. ಸದಾನಂದ ಗೌಡರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುಚ ರಮೇಶ್ ಬಾಬು, ಹಿಂದೂ ಸಂಪ್ರದಾಯದಲ್ಲಿ ಕಾಗೆಯನ್ನು ವಿವಿಧ ಆಯಾಮಗಳಲ್ಲಿ ನೋಡಲಾಗುತ್ತದೆ. ಸದಾನಂದ ಗೌಡರು ಕಾಗೆಯನ್ನು ಅಪಶಕುನವೆಂದು ಭಾವಿಸಿ, ರಾಜ್ಯ ಬಿಜೆಪಿಯ ಭಿನ್ನಮತೀಯರನ್ನು ಅಪಶಕುನದ ಕಾಗೆಗಳೆಂದು ಚಿತ್ರಿಸಿರುವುದು ಅವರ ಪಕ್ಷದ ವ್ಯ...
VIDEO: ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

VIDEO: ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಯಶೋಗಾಥೆ ಬರೆದಿದೆ. ಎನ್'ವಿಎಸ್-02 ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯಿಸಿದೆ. ಈ ಮೂಲಕ ಇಸ್ರೋ ಸಂಸ್ಥೆಯು ತನ್ನ 100ನೇ ಉಡ್ಡಯನವನ್ನು ಬುಧವಾರ ಯಶಸ್ವಿಯಾಗಿ ನಡೆಸಿದೆ. ಈ ಕುರಿತ ವೀಡಿಯೊವನ್ನು ಇಸ್ರೋ ಸಂಸ್ಥೆ ಹಂಚಿಕೊಂಡಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯಶೋಗಾಥೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 🌍 A view like no other! Watch onboard footage from GSLV-F15 during the launch of NVS-02. India’s space programme continues to inspire! 🚀 #GSLV #NAVIC #ISRO pic.twitter.com/KrrO3xiH1s — ISRO (@isro) January 29, 2025...
ಇಸ್ರೋ ಶತಕದ ಯಶೋಗಾಥೆ; ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋ ಶತಕದ ಯಶೋಗಾಥೆ; ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

Focus, Update Videos, ಆಧ್ಯಾತ್ಮ, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಯಶೋಗಾಥೆ ಬರೆದಿದೆ. ಎನ್'ವಿಎಸ್-02 ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯಿಸಿದೆ. ಈ ಮೂಲಕ ಇಸ್ರೋ ಸಂಸ್ಥೆಯು ತನ್ನ 100ನೇ ಉಡ್ಡಯನವನ್ನು ಬುಧವಾರ ಯಶಸ್ವಿಯಾಗಿ ನಡೆಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಿಗ್ಗೆ 6.23ರ ಸುಮಾರಿಗೆ ಎನ್'ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್'ವಿ ನಭಕ್ಕೆ ಜಿಗಿದಿದೆ. ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್'ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 1963ರ ನ.21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನದೊಂದಿಗೆ ಇತಿಹಾಸ ಸೃಷ್ಟಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಬಾಹ್ಯಾಕಾಶ ನ್ಯಾವಿಗೇಷನ್‌ನಲ್ಲಿ ಭಾರತ ಹೊಸ ಎತ್ತರಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದೆ....
ಕರ್ನಾಟಕದಲ್ಲಿ 2024-25ರ ಹಿಂಗಾರು ಬೆಳೆ ಕಡಲೆಗೆ ಬೆಂಬಲ ಬೆಲೆ; ಕೇಂದ್ರದ ಅನುಮತಿ

ಕರ್ನಾಟಕದಲ್ಲಿ 2024-25ರ ಹಿಂಗಾರು ಬೆಳೆ ಕಡಲೆಗೆ ಬೆಂಬಲ ಬೆಲೆ; ಕೇಂದ್ರದ ಅನುಮತಿ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಕರ್ನಾಟಕ ಸರ್ಕಾರದ ಪ್ರಸ್ತಾವನೆಯಂತೆ ಕರ್ನಾಟಕದಲ್ಲಿ 2024-25 ರ ರಾಬಿ ಋತುವಿನಲ್ಲಿ ( ಹಿಂಗಾರು ಬೆಳೆ) ಬೆಳೆದ ಕಡಲೆಯನ್ನು ಬೆಂಬಲ ಬೆಲೆ ಯೋಜನೆಯಡಿ Price Support Scheme (PSS) ಖರೀದಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವಾಲಯ ಅನುಮತಿ ನೀಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದಲ್ಲಿ ಕಡಲೆ ಬೆಳೆದ ರೈತರ ಪರಿಸ್ಥಿತಿ ಅರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತ ದೃಷ್ಟಿಯಿಂದ ರೈತಪರ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿಸಿದ್ಫ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆ ಕಡಿಮೆ ಇರುವುದರಿಂದ msp ಅಡಿಯಲ್ಲಿ ಖರೀದಿಸಿ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿದ್ದು ರಾಜ್ಯ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ನಮೂದಿಸಿದಂತೆ 96,498 ಮೆಟ್ರಿಕ್ ಟನ್ ಗುಣಮಟ್ಟದ ಕಡಲೆ ಕಾಳನ್ನು ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದವರು ತಿಳಿಸಿದ್ದಾರೆ. ಈಗ ಜಿಲ್ಲಾವಾರು 90 ದಿನದೊಳಗಾಗಿ‌ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ರೈತರಿಂದ ಖರೀದಿ ಮಾಡಿ, ರೈತರ...
ಮೈಸೂರು: ಕಾಲೇಜು ಕಟ್ಟಡ ದುರಸ್ತಿ ವೇಳೆ ಅವಘಡ; ಕಾರ್ಮಿಕ ಸಾವು

ಮೈಸೂರು: ಕಾಲೇಜು ಕಟ್ಟಡ ದುರಸ್ತಿ ವೇಳೆ ಅವಘಡ; ಕಾರ್ಮಿಕ ಸಾವು

Focus, ಪ್ರಮುಖ ಸುದ್ದಿ, ರಾಜ್ಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಘೋರ ಅನಾಹುತ ಸಂಭವಿಸಿದೆ. ಕಾಲೇಜಿನ ಕಟ್ಟಡದ ಮೇಲ್ಛಾವಣಿ ಕುಸಿದು ಸಂಭವಿಸಿದ ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಮೃತನನ್ನು 32 ವರ್ಷದ ಕಾರ್ಮಿಕ, ಮೊಹಮ್ಮದ್ ಸದ್ದಾಂ ಎಂದು ಗುರ್ತಿಸಲಾಗಿದೆ. ಈತ ಮೈಸೂರಿನ ಗೌಸಿಯಾ ನಗರದ ನಿವಾಸಿ ಎನ್ನಲಾಗಿದೆ. ಸುಮಾರು 80 ವರ್ಷಗಳ ಹಳೆಯ ಕಟ್ಟಡದ ದುರಸ್ಥಿ ಕಾರ್ಯ ನಡೆಯುತ್ತಿರುವಾಗ ಮಂಗಳವಾರ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಆ ಸಂದರ್ಭದಲ್ಲಿ ಕಟ್ಟಡದಲ್ಲಿ 15 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನನ್ನ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸುದೀರ್ಘ ಕಾರ್ಯಾಚರಣೆ ನಡೆಸಿದ್ದರು....
ಮಹಾಕುಂಭಮೇಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ; ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕೇಸ್

ಮಹಾಕುಂಭಮೇಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ವಿವಾದ; ಮಲ್ಲಿಕಾರ್ಜುನ ಖರ್ಗೆ ವಿರುದ್ದ ಕೇಸ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಪಾಟ್ನಾ: ಮಹಾಕುಂಭದ ಕುರಿತು ವಿವಾದಾತ್ಮಕ ಹೇಳಿಜೆ ನೀಡಿರುವ ಆರೋಪ ಕುರಿತಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ದ ಪ್ರಕರಣ ದಾಖಲಾಗಿದೆ. ಬಿಹಾರದ ಮುಜಾಫರ್‌ಪುರ ಜಿಲ್ಲಾ ನ್ಯಾಯಾಲಯದ ವಕೀಲ ಸುಧೀರ್ ಕುಮಾರ್ ಓಜಾ ಅವರು ದೂರು ದಾಖಲಿಸಿದ್ದಾರೆ. ಖರ್ಗೆ ಅವರು ಉದ್ದೇಶಪೂರ್ವಕವಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಮಧ್ಯಪ್ರದೇಶದ ಮ್ಹೋ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಖರ್ಗೆ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ದೂರು ನೀಡಲಾಗಿದೆ. ಇದು ಸನಾತನ ಧರ್ಮವನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದೆ ಮತ್ತು ಗಂಗಾ ಮೈಯಾ (ಗಂಗಾ ನದಿ) ಮತ್ತು ಕುಂಭಮೇಳದ ಭಕ್ತರನ್ನು ಅಪರಾಧ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಓಜಾ ಆರೋಪಿಸಿದ್ದಾರೆ. “ಪವಿತ್ರ ಗಂಗೆಯನ್ನು ಪೂಜಿಸುವ ಮತ್ತು ಕುಂಭದಲ್ಲಿ ಭಾಗವಹಿಸುವ ಹಿಂದೂಗಳ ಭಾವನೆಗಳಿಗೆ ಅವರು ನೋವುಂಟು ಮಾಡಿದ್ದಾರೆ. ಅವರ ಹೇಳಿಕೆಯನ್ನು ಸಾರ್ವಜನಿಕವಾಗಿ ರಾಜಕೀಯ ಗಮನ ಸೆಳೆಯಲು ಮತ್ತು ಅವರ ಪಕ್ಷಕ್ಕೆ ಲಾಭ ಪಡೆಯಲು ಮಾ...