MCC ಹಗರಣ ತನಿಖೆಗೆ ರೋಚಕ ತಿರುವು; 33 ಬ್ಯಾಂಕ್ ಸದಸ್ಯರ ದೂರಿನ ಹಿನ್ನೆಲೆ ತನಿಖೆ ಪ್ರಕ್ರಿಯೆಗೆ ಸರ್ಕಾರದ ಮುನ್ನುಡಿ!
ಬೆಂಗಳೂರು: ಎಂಸಿಸಿ ಬ್ಯಾಂಕ್ ಹಗರಣಕ್ಕೆ ರೋಚಕ ತಿರುವು ಸಿಕ್ಕಿದೆ. ಹಲವಾರು ಅಕ್ರಮ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಹಾಗೂ ಅಕ್ರಮಗಳಿಂದ ರೋಸಿಹೋದ ಸದಸ್ಯರೊಬ್ಬರು ಸಾವಿಗೆ ಶರಣಾದ ಪ್ರಕರಣ ಹಿನ್ನೆಲೆಯಲ್ಲಿ ಎಂಸಿಸಿ ಬ್ಯಾಂಕ್ ಸೂಪರ್‌ಸೀಡ್ ಮಾಡಬೇಕೆಂಬ ಆಗ್ರಹ ಹೆಚ್ಚಾಗಿದೆ. ಈ ಕುರಿತಂತೆ ಎಂಸಿಸಿ ಬ್ಯಾಂಕಿನ ಸುಮಾರು 33 ಸದಸ್ಯರು ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಕಾರ್ಯದರ್ಶಿ ಸಹಿತ ಸರ್ಕಾರದ ಪ್ರಮುಖರಿಗೆ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಎಂಸಿಸಿ ಬ್ಯಾಂಕಿನ ವಿರುದ್ದದ ಆರೋಪಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಹಕಾರ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಪರಿಶೀಲನಾ ವರದಿ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಹಠಾತ್ ಬೆಳವಣಿಗೆ?
'ಮಂಗಳೂರು ಕೆಥೋಲಿಕ್ ಸಹಕಾರ ಬ್ಯಾಂಕ್ (MCC Bank) ಬಹುಕೋಟಿ ರೂಪಾಯಿ ಅವ್ಯವಹಾರ ಆರೋಪ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಸಾಲ ವಸೂಲಾತಿ ನೆಪದಲ್ಲಿ ಜನ...









