Thursday, January 29

Focus

ಯಲ್ಲಾಪುರ ಅಪಘಾತ: ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ

ಯಲ್ಲಾಪುರ ಅಪಘಾತ: ಮೃತರ ಕುಟುಂಬದವರಿಗೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಪ್ರಧಾನಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಉತ್ತರ ಕನ್ನಡ ಜಿಲ್ಲೆ ಯಲ್ಲಾಫುರ ಬಳಿ ಸಂಭವಿಸಿದ ಲಾರಿ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬದವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕೋಟೆಕಾರು ಬ್ಯಾಂಕ್​ ದರೋಡೆ ಪ್ರಕರಣ; ಆರೋಪಿಗಳ ಬಂಧನ

ಕೋಟೆಕಾರು ಬ್ಯಾಂಕ್​ ದರೋಡೆ ಪ್ರಕರಣ; ಆರೋಪಿಗಳ ಬಂಧನ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಗಳೂರು: ಕೋಟೆಕಾರು ಬ್ಯಾಂಕ್​ ದರೋಡೆ ಪ್ರಕರಣ ಬೇಧಿಸಿದುವ ಮಂಗಳೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಜನವರಿ 17ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕೆ.ಸಿ.ರೋಡಿನಲ್ಲಿರುವ ಸಹಕಾರಿ ಬ್ಯಾಂಕ್ ಗೆ ಹಾಡಹಗಲೇ ನುಗ್ಗಿದ ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಸುಮಾರು 12 ಕೋಟಿ ರೂ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿದ್ದರು. ಮಹಾರಾಷ್ಟ್ರದ ಕಾರು ಬಳಸಿ ದರೋಡೆಕೋರು ಪರಾರಿಯಾಗಿದ್ದರು. ದರೋಡೆಕೋರರ ಹೆಜ್ಜೆ ಜಾಡು ಬೆನ್ನತ್ತಿದ ಪೊಲೀಸರು, ತಮಿಳುನಾಡಿನ ತಿರುನೆಲ್ವೇಲಿಗೆ ಆರೋಪಿಗಳು ಪರಾರಿಯಾಗಿರುವುದನ್ನು ಪತ್ತೆ ಮಾಡಿದರು. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ಮೂವರು ಆರೋಪಿಗಳನ್ನು ಮಧುರೈ ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಮುರುಗನ್, ಪ್ರಕಾಶ್ (ಜೈಸ್ವಾ) ಹಾಗೂ ಮಣಿವಣ್ಣನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.‌ ತಮಿಳುನಾಡಿನ ವಿವಿಧ ಪ್ರದೇಶದಲ್ಲಿ ಮೂವರು ಆರೋಪಿಗಳನ್ನು ಸೆರೆಹಿಡಿಯಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ನಗದು, ತಲ್ವಾರ್‌, 2 ಪಿಸ್ತೂಲ್‌ ಜಪ್ತಿ ಮಾಡಲಾಗಿದೆ. ಇನ್ನುಳಿದ ಆರೋಪಗಳ...
‘ಟಾಕ್ಸಿಕ್’ ಅವಾಂತರ; ಅಧಿಕಾರಿಗಳಿಗೆ ಸರ್ಕಾರದ ಟಾನಿಕ್

‘ಟಾಕ್ಸಿಕ್’ ಅವಾಂತರ; ಅಧಿಕಾರಿಗಳಿಗೆ ಸರ್ಕಾರದ ಟಾನಿಕ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: 'ಟಾಕ್ಸಿಕ್' ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸರ್ಕಾರ ಶೋಕಾಸ್ ನೋಟಿಸ್ ನೀಡಿದೆ. ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಶೂಟಿಂಗ್ ಸಂಬಂಧ ಮರಗಳನ್ನು ಕಡಿಯಲಾಗಿದೆ ಎಂಬ ಆರೋಪ ಇದೆ. ಈ ಸಂಬಂಧ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ. ನೋಟಿಸ್ ಗೆ ಅಧಿಕಾರಿಗಳು ಉತ್ತರ ನೀಡಲಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ....
ಅಮೇರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್ ಪದಗ್ರಹಣ

ಅಮೇರಿಕಾದ 47ನೇ ಅಧ್ಯಕ್ಷರಾಗಿ ಟ್ರಂಪ್ ಪದಗ್ರಹಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ವಾಷಿಂಗ್ ಟನ್ ಡಿಸಿ: ಅಮೇರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರು ಅಮೇರಿಕಾದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ವಾಷಿಂಗ್ ಟನ್ ಡಿಸಿಯ ಕ್ಯಾಪಿಟಲ್ ಹಿಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಟ್ರಂಪ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ, ಉಪಾಧ್ಯಕ್ಷರಾಗಿ ಜೆಡಿ ವ್ಯಾನ್ಸ್ ಕೂಡಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ....
ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು; ಗೃಹ ಇಲಾಖೆ ಸಂಪೂರ್ಣ ವಿಫಲ ಎಂದ ಪ್ರತಿಪಕ್ಷ

ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು; ಗೃಹ ಇಲಾಖೆ ಸಂಪೂರ್ಣ ವಿಫಲ ಎಂದ ಪ್ರತಿಪಕ್ಷ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ದೇಶಕ್ಕೆ ಸ್ವಾತ್ರಂತ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ. ಅವರೇ ನಿಜವಾದ ಗಾಂಧಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇವರೆಲ್ಲಾ ನಕಲಿ ಗಾಂಧಿಗಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಮಾಸುವ ಮುನ್ನವೇ, ಹೊನ್ನಾವರದಲ್ಲಿ ಕೂಡ ಗರ್ಭಿಣಿ ಹಸುವನ್ನು ಭೀಕರವಾಗಿ ಕೊಲ್ಲಲಾಗಿದೆ. ಕರ್ನಾಟಕದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಇದು ಕಿವುಡು ಸರ್ಕಾರ. ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ, ಸರ್ಕಾರ ಸಮಾವೇಶ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇವರೆಲ್ಲಾ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ? ಇವರೆಲ್ಲಾ ಡೂಪ್ಲಿಕೇಟ್ ಗಾಂಧಿಗಳು ಎಂದರು. ರಾಜ್ಯದಲ್ಲಿ ಗೃಹ ಸಚಿವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಎಲ್ಲ ಸಚಿವರು ಗೃಹ ಇಲಾಖೆಯಲ್ಲಿ ಕೈಯಾಡಿಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಲಂಚಾವತಾರ ಮಿತಿ ಮೀರಿದೆ. ಶೇ.60 ರಷ್ಟು ಕಮಿಷನ್ ಕೊಟ್ಟರೆ ...
BJP, RSS ವಿರುದ್ದ ಹೇಳಿಕೆ: ರಾಹುಲ್ ಗಾಂಧಿ ವಿರುದ್ದ FIR

BJP, RSS ವಿರುದ್ದ ಹೇಳಿಕೆ: ರಾಹುಲ್ ಗಾಂಧಿ ವಿರುದ್ದ FIR

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ​ ಕಾಂಗ್ರೆಸ್​ ಪಕ್ಷದ ಕಚೇರಿಯೊಂದರ ಉದ್ಘಾಟನೆ ವೇಳೆ ರಾಹುಲ್ ಗಾಂಧಿ ಅವರು, ಬಿಜೆಪಿ ಮತ್ತು ಆರ್​​ಎಸ್​ಎಸ್​ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ನಾವು ಈಗ ಅವುಗಳ ವಿರುದ್ಧ ಹೋರಾಡುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕರೂ ಆದ ರಾಹುಲ್ ಗಾಂಧಿ ವಿರುದ್ದ ವಕೀಲ ಮೊಂಜಿತ್ ಚೇಟಿಯಾ ಎಂಬವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗುವಾಹಟಿಯ ಪಾನ್ ಬಜಾರ್ ಠಾಣೆಯಲ್ಲಿ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕೃತ್ಯಗಳ ಆರೋಪದ ಮೇಲೆ ಪ್ರಕರಣ​ ದಾಖಲಾಗಿದೆ....
ಪ್ರಯಾಗ್​ರಾಜ್​: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ

ಪ್ರಯಾಗ್​ರಾಜ್​: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಪ್ರಯಾಗ್​ರಾಜ್​: ಮಹಾ ಕುಂಭಮೇಳ ನಡೆಯುತ್ತಿರುವ ಪ್ರಯಾಗ್​ರಾಜ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕುಂಭಮೇಳ ಪ್ರದೇಶದ ಸೆಕ್ಟರ್ 19ರಲ್ಲಿ ಸಿಲಿಂಡರ್​​ಗಳು ಸ್ಫೋಟಗೊಂಡು ಭಾರೀ ಅನಾಹುತ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಟೆಂಟ್​​ಗಳು ಹೊತ್ತಿ ಉರಿದಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ವಿವೇಕಾನಂದ ಸೇವಾ ಸಮಿತಿಗೆ ಸೇರಿದ 25ಕ್ಕೂ ಹೆಚ್ಚು ಟೆಂಟ್​ಗಳು ಬೆಂಕಿಯಾ ಕೆನ್ನಾಲಿಗೆಗೆ ಭಸ್ಮವಾಗಿವೆ. ಟೆಂಟ್​ಗಳಲ್ಲಿ ಇಡಲಾಗಿದ್ದ ಸಿಲಿಂಡರ್​ಗಳು ಒಂದೊಂದಾಗಿ ಸ್ಫೋಟಗೊಂಡಿದ್ದರಿಂದಾಗಿ ಬೆಂಕಿ ತೀವ್ರತೆ ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ...
ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನ: ‘ಚಂದ್ರ ಮಂಡಲ’ ಆಕರ್ಷಣೆ

ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನ: ‘ಚಂದ್ರ ಮಂಡಲ’ ಆಕರ್ಷಣೆ

Focus, ಆಧ್ಯಾತ್ಮ, ದೇಗುಲ ದರ್ಶನ, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು : ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಉತ್ಸವವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ಚಂದ್ರ ಮಂಡಲ ವಾಹನದ ಹಸ್ತಾಂತರ ಕಾರ್ಯಕ್ರಮ ಗಮನಸೆಳೆಯಿತು. ಭಾನುವಾರ ಕುಂಭಾಶಿಯಲ್ಲಿರುವ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ವಿಶೇಷ ಕೈಂಕರ್ಯ ನೆರವೇರಿತು. ಶ್ರೀ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ​ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತಿಯಲ್ಲಿ ಈ ಸೇವೆ ನೆರವೇರಿತು. 20.01.2025 ಸೋಮವಾರ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಪಾದುಕಾ ಪುರಪ್ರವೇಶ, ನೂತನ ಚಂದ್ರ ಮಂಡಲ ವಾಹನ ಪುರಪ್ರವೇಶ, ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪುರಪ್ರವೇಶ ನಡೆಯಲಿದೆ. ಶ್ರೀ ವೀರ ವೆಂಕಟೇಶ ದೇವರ ಉತ್ಸವ ಕಾರ್ಯಕ್ರಮ ಉದ್ಧಿಶ್ಯ ನೂತನವಾಗಿ ನಿರ್ಮಿಸಲಾದ ಚಂದ್ರಮಂಡಲ ವಾಹನದ ಪುರಪ್ರವೇಶ ಕಾರ್ಯಕ್ರಮ ಜೊತೆಗೆ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಲಾದ ಶ್ರೀ ಗುರು ಪಾದುಕಾ ಯಾತ್ರೆಯ ಪುರಪ್ರವೇಶ ಹಾಗೂ ಮಂಗಳೂರು ರಥೋತ್ಸವ ಪ್ರಯು...
‘ಕೇಂದ್ರದ ಅನುದಾನ ಸಧ್ಭಳಕೆ ಮಾಡದ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು?’; ಬಿಜೆಪಿ ಪ್ರಶ್ನೆ

‘ಕೇಂದ್ರದ ಅನುದಾನ ಸಧ್ಭಳಕೆ ಮಾಡದ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು?’; ಬಿಜೆಪಿ ಪ್ರಶ್ನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರಹಾಕಿದೆ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸುಳ್ಳಾಡುವ ಸಿಎಂ ಸಿ ಎಂ ಸಿದ್ದರಾಮಯ್ಯ ಅವರು, ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಯೋಗ್ಯತೆ ಸರ್ಕಾರಕ್ಕಿಲ್ಲ ಎಂಬುದು ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ಹೇಳಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಕೊಟ್ಟ ಅನುದಾನವನ್ನು ಖರ್ಚು ಮಾಡಿ ಸಧ್ಭಳಕೆ ಮಾಡದ ನಿಮ್ಮ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು ಎಂದು ಎದಿರೇಟು ನೀಡಿದೆ. ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ನಿಮ್ಮ ಟೂಲ್‌ ಕಿಟ್‌ ಅನ್ನು ಬದಿಗಿಟ್ಟು, ಮೊದಲು ಅನುದಾನವನ್ನು ಸದ್ಭಳಕೆ ಮಾಡುವತ್ತ ಗಮನಹರಿಸಿ ಎಂದು ಬಿಜೆಪಿ ಹೇಳಿದೆ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸುಳ್ಳಾಡುವ ಸಿಎಂ @siddaramaiah ಅವರೆ,ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ಲ ಎಂಬುದು ಸಾಬೀತಾಗಿದೆ.ಕೊಟ್ಟ ಅನುದಾನವನ್ನು ಖರ್ಚು ಮಾಡಿ ಸಧ್ಭಳಕೆ ಮಾಡದ ನ...
ಕರ್ನಾಟಕಕ್ಕೆ ಅನುದಾನ; ಕೇಂದ್ರದಿಂದ ಹಣ ಬಿಡುಗಡೆಯ ಭರವಸೆ

ಕರ್ನಾಟಕಕ್ಕೆ ಅನುದಾನ; ಕೇಂದ್ರದಿಂದ ಹಣ ಬಿಡುಗಡೆಯ ಭರವಸೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗಿರುವ ಬಗ್ಗೆ ಸರ್ಕಾರ ಕೇಂದ್ರದ ಗಮನಸೆಳೆದಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕರ್ನಾಟಕಕ್ಕೆ ಕರ್ನಾಟಕಕ್ಕೆ ಅನುದಾನ ಹಂಚಿಕೆ ವಿಚಾರದಲ್ಲಿ ಅನ್ಯಾಯವಾಗಿರುವ ಬಗ್ಗೆ ಗಮನಸೆಳೆದಿದೆರಲ್ಲದೆ, ತಮ್ಮ ರಾಜ್ಯಕ್ಕೆ ನ್ಯಾಯಯುತವಾದ ಅನುದಾನವನ್ನು ನೀಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರ ಸರ್ಕಾರ ರಾಜ್ಯಗಳಿಗೆ ತೆರಿಗೆ ಪಾಲು ಹಂಚುವುದರಲ್ಲಿ ಕರ್ನಾಟಕಕ್ಕೆ ನ್ಯಾಯವಾದ ಪಾಲು ನೀಡುತ್ತಿಲ್ಲ. ರಾಜಕೀಯ ಕಾರಣಗಳಿಗಾಗಿ ಅನುದಾನವನ್ನು ಕಡಿತಗೊಳಿಸುವುದು ಸರಿಯಲ್ಲ ಎಂದರು. ಅನುದಾನ ಬಿಡುಗಡೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ತಾವು ಒತ್ತಾಯಿಸಿರುವುದಾಗಿ ತಿಳಿಸಿದರು. ಇದೇ ವೇಳೆ, ಯಾವುದೇ ವಿಳಂಬವಿಲ್ಲದೆ ಹಣ ನೀಡಲಿದ್ದು, ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭರವಸೆ ನೀಡಿದರು ಎಂದು ಕೃಷ್ಣ ಬೈರೇ...