Saturday, March 21

Focus

ಭ್ರಷ್ಟಾಚಾರ, ಅಧಿಕಾರ ದುರುಪಯೋಗ; ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್​ ಬಂಧನ

ಭ್ರಷ್ಟಾಚಾರ, ಅಧಿಕಾರ ದುರುಪಯೋಗ; ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್​ ಬಂಧನ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಸಿಯೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್​ ಅವರ ಬಂಧನವಾಗಿದೆ. ಭ್ರಷ್ಟಾಚಾರ ಹಾಗೂ ಅಧಿಕಾರ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಪೊಲೀಸರು ಯೂನ್ ಸುಕ್ ಯೋಲ್ ಅವರನ್ನು ಬಂಧಿಸಿದ್ದಾರೆ.ದಕ್ಷಿಣ ಕೊರಿಯಾದ ನ್ಯಾಯಾಲಯ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್​ ಜಾರಿಯಾಗಿತ್ತು. ದಂಗೆ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ಬಗ್ಗೆ ತನಿಖಾಧಿಕಾರಿಗಳು ದೋಷಾರೋಪ ಹಾರಿದ್ದು, ಈ ಆರೋಪಗಳ ಗಂಭೀರತೆ ಅರಿತ ಸಿಯೋಲ್ ನ್ಯಾಯಾಲಯವು ಯೂನ್ ಸುಕ್ ಯೋಲ್‌ಗೆ ಬಂಧನ ವಾರಂಟ್ ಹೊರಡಿಸಿತ್ತು.ಜನವರಿ 15 ರ ಬುಧವಾರ ಬೆಳಗ್ಗೆ, ದಕ್ಷಿಣ ಕೊರಿಯಾದ ಅಧಿಕಾರಿಗಳು ಯುನ್ ಸುಕ್ ಯೋಲ್ ನಿವಾಸಕ್ಕೆ ತೆರಳಿ ಬಂಧಿಸಿದೆ ಎನ್ನಲಾಗಿದೆ....
ತುಳು ಸಿನಿಮಾದಲ್ಲಿ ಬಾಲಿವುಡ್ ತಾರೆ; ರೂಪೇಶ್ ಶೆಟ್ಟಿ ಜೊತೆ ಕೈಜೋಡಿಸಿದ ಸುನೀಲ್ ಶೆಟ್ಟಿ

ತುಳು ಸಿನಿಮಾದಲ್ಲಿ ಬಾಲಿವುಡ್ ತಾರೆ; ರೂಪೇಶ್ ಶೆಟ್ಟಿ ಜೊತೆ ಕೈಜೋಡಿಸಿದ ಸುನೀಲ್ ಶೆಟ್ಟಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ತುಳುನಾಡು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಂಗಳೂರು ಮೂಲದ ಅವರು ತುಳು ಭಾಷೆಯ ಸಿನಿಮಾದಲ್ಲಿ ನಟಿಸಲಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ಸಿನಿಮಾವೊಂದರಲ್ಲಿ ಕೈ ಜೋಡಿಸಿದ್ದಾರೆ.ರೂಪೇಶ್ ಶೆಟ್ಟಿ ಅವರು ಇತ್ತೀಚೆಗೆ ‘ಜೈ’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಅವರೇ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಲಿದ್ದಾರೆ. ಈ ಬಗ್ಗೆ ರೂಪೇಶ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಗಮನಸೆಳೆದಿದೆ. View this post on Instagram  A post shared by All About Mangaluru (@all_about_mangaluru)...
ಪೊಳಲಿ ಸೊಸೈಟಿ ಚುನಾವಣೆ; ನಿರ್ದೇಶಕರ ಅವಿರೋಧ ಆಯ್ಕೆ

ಪೊಳಲಿ ಸೊಸೈಟಿ ಚುನಾವಣೆ; ನಿರ್ದೇಶಕರ ಅವಿರೋಧ ಆಯ್ಕೆ

Focus, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಬಹಳಷ್ಟು ಮಂದಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಹಿಂದೆ ಪೊಳಲಿ ವ್ಯವಸಾಯ ಸೇವಾ ಸಹಕಾರ ಸಂಘ ಇದೀಗ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ನಿಯಮಿತ ಆಗಿ ಪರಿವರ್ತನೆಯಾಗಿದ್ದು, ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣಾ ನಿಗದಿಯಾಗಿದೆ. ಆದರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಫಲಿತಾಂಶ ಗೊತ್ತಾಗಿದೆ. ಬಹುತೇಕ ಸ್ಥಾನಗಳಿಗೆ ಈ ಬಾರಿ ಅವಿರೋಧ ಆಯ್ಕೆ ನಡೆದಿದೆ ರಿಟರ್ನಿಂಗ್ ಅಧಿಕಾರಿ ಎನ್.ಜೆ. ಗೋಪಾಲ್ ಅವರು ಪ್ರಕಟಿಸಿದ್ದಾರೆ.ನೂತನ ನಿರ್ದೇಶಕರ ಪಟ್ಟಿ: ಸುಕೇಶ್ ಚೌಟ, ವೆಂಕಟೇಶ್ ನಾವಡ, ಯಶವಂತ ಪೂಜಾರಿ, ಅಬೂಬಕ್ಕರ್ ಡಿ.ಎ., ಗೋಪಾಲ್ ಅಂಚನ್, ಗೋಡ್ ಫಿ ಫೆರ್ನಾಂಡಿಸ್, ನಿರಂಜನಿ ಸಿ. ಶೆಟ್ಟಿ ಜಯಂತಿ, ಕರುಣಾಕರ ಆಳ್ವ, ಕರಿಯದ, ಲಕ್ಷ್ಮೀಶ ಶೆಟ್ಟಿ.  ಇದೇ ವೇಳೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾವುದೇ ಉಮೇದುವಾರಿಕೆ ಸ್ವೀಕೃತವಾಗಿಲ್ಲ. ಹಾಗಾಗಿ ಆ ಸ್ಥಾನ ಖಾಲಿ ಉಳಿದಿದೆ....
ಅಸಾರಾಂ ಬಾಬಾಗೆ ಮಧ್ಯಂತರ ಜಾಮೀನು; ಅನುಯಾಯಿಗಳಲ್ಲಿ ಹರ್ಷ

ಅಸಾರಾಂ ಬಾಬಾಗೆ ಮಧ್ಯಂತರ ಜಾಮೀನು; ಅನುಯಾಯಿಗಳಲ್ಲಿ ಹರ್ಷ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಜೈಪುರ: 2013 ರ ಅತ್ಯಾಚಾರ ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದ ನಂತರ, ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಬಾ ಅವರು ಮಂಗಳವಾರ ತಡರಾತ್ರಿ ರಾಜಸ್ಥಾನದ ಜೋಧಪುರದ ಆರೋಗ್ಯ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ನಂತರ ಅವರು ಜೋಧಪುರದ ಪಾಲ್ ಗ್ರಾಮದಲ್ಲಿರುವ ಅವರ ಆಶ್ರಮಕ್ಕೆ ತೆರಳಿದರು. ಆಸ್ಪತ್ರೆಯ ಹೊರಗೆ ಜಮಾಯಿಸಿದ ಬೆಂಬಲಿಗರ ಗುಂಪು ಅಸಾರಾಂ ಅವರನ್ನು ಹಾರಗಳನ್ನು ನೀಡಿ ಸ್ವಾಗತಿಸಿತು. ಆಶ್ರಮವನ್ನು ತಲುಪಿದ ನಂತರ, ಅವರ 'ಸೇವಕರು' ಅವರನ್ನು ಪಟಾಕಿಗಳೊಂದಿಗೆ ಸ್ವಾಗತಿಸಿದರು.ಜೋಧಪುರದ ಮನೈ ಆಶ್ರಮದಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ, ಸೆಪ್ಟೆಂಬರ್ 2, 2013 ರಂದು ಅಸಾರಾಂ ಅವರನ್ನು ಜೈಲಿಗೆ ಹಾಕಲಾಯಿತು. ಏಪ್ರಿಲ್ 25, 2018 ರಂದು, ಜೋಧಪುರದ ವಿಶೇಷ ಪೋಕ್ಸೊ ನ್ಯಾಯಾಲಯವು ಅವರನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. 11 ವರ್ಷ, 4 ತಿಂಗಳು ಮತ್ತು 12 ದಿನಗಳ ಜೈಲುವಾಸದ ನಂತರ, ಅವರಿಗೆ ಆರೋಗ್ಯದ ಆಧಾರದ ಮೇಲೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.ರಾಜಸ್ಥಾನ ಹೈಕೋರ್ಟ್ ಅಸಾರಾಂ ...
ರಜನಿಕಾಂತ್ ಮತ್ತೊಂದು ಇನ್ನಿಂಗ್ಸ್.. ‘ಜೈಲರ್ 2’ ಟೀಸರ್ ಅನಾವರಣ

ರಜನಿಕಾಂತ್ ಮತ್ತೊಂದು ಇನ್ನಿಂಗ್ಸ್.. ‘ಜೈಲರ್ 2’ ಟೀಸರ್ ಅನಾವರಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಚೆನ್ನೈ: ನಿರ್ದೇಶಕ ನೆಲ್ಸನ್ ಅವರು ಸೂಪರ್‌ಸ್ಟಾರ್ ರಜನಿಕಾಂತ್ ನಾಯಕನಾಗಿರುವ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ 'ಜೈಲರ್ 2' ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಮೆಗಾ ಬಜೆಟ್'ನ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.ಚಿತ್ರವನ್ನು ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್, ಪೊಂಗಲ್ ಹಬ್ಬದ ಶುಭ ದಿನದಂದು ಟೀಸರ್ ಅನ್ನು ಬಿಡುಗಡೆ ಮಾಡಿದೆ. ಟೀಸರ್ ಹಂಚಿಕೊಂಡಿರುವ "ಸನ್ ಪಿಕ್ಚರ್ಸ್' 'ಜೈಲರ್ 2' ಸಿನಿಮಾದಲ್ಲಿ ಸೂಪರ್‌ಸ್ಟಾರ್ ಪಾತ್ರದ ಸುಳಿವನ್ನು ನೀಡಿದೆ. ಭಾಗ 1 ರಂತೆಯೇ, 'ಜೈಲರ್ 2'ರಲ್ಲಿ ಅನಿರುದ್ಧ್ ಸಂಗೀತ ಸಂಯೋಜಿಸಲಿದ್ದಾರೆ ಮತ್ತು ನೆಲ್ಸನ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಸಂಗೀತ ನಿರ್ದೇಶಕ ಅನಿರುದ್ಧ್ ಮತ್ತು ನಿರ್ದೇಶಕ ನೆಲ್ಸನ್ ಗೋವಾದಲ್ಲಿ ತಮಾಷೆಯ ಸಂಭಾಷಣೆ ನಡೆಸುತ್ತಿರುವಾಗ, ರೇಡಿಯೊದಲ್ಲಿ ಚಂಡಮಾರುತವು ಕರಾವಳಿಗೆ ಬರುತ್ತಿದೆ ಎಂಬ ಘೋಷಣೆಯೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ, ಅಲ್ಲಿ ಅವರು ನೆಲ್ಸನ್ ಹೇಳುವ ಕಥೆಯ ಚರ್ಚೆಯ ಮೂಲಕ ಬಂದಿದ್ದಾರೆ.https://www.youtube.com/watch?v=sl7gy2uxhjYಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಇಬ್ಬರೂ ರಕ್ಷಣೆಗ...
‘ಮಹಾ ಕುಂಭಮೇಳ’ದಲ್ಲಿ ಸನಾತನ ಬಗ್ಗೆ ಕೆಣಕಿದ ಯೂಟ್ಯೂಬರ್’ಗೆ ನಾಗಾಸಾಧು ಧರ್ಮದೇಟು

‘ಮಹಾ ಕುಂಭಮೇಳ’ದಲ್ಲಿ ಸನಾತನ ಬಗ್ಗೆ ಕೆಣಕಿದ ಯೂಟ್ಯೂಬರ್’ಗೆ ನಾಗಾಸಾಧು ಧರ್ಮದೇಟು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಪ್ರಯಾಗರಾಜ್: ಉತ್ತರಪ್ರದೇಶದ ಪ್ರಯಾಗರಾಜ್'ನಲ್ಲಿ ನಡೆಯುತ್ತಿರುವ ಶತಮಾನದ ವೈಭವದ ಮಹಾಕುಂಭಮೇಳ ಜಗತ್ತಿನ ಗಮನಸೆಳೆದಿದೆ. ಹಿಂದೂ ಧರ್ಮದ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರ ಉತ್ಸವಗಳಲ್ಲಿ ಈ ಮಹಾ ಕುಂಭಮೇಳ ಒಂದಾಗಿದೆ. ಕೋಟ್ಯಂತರ ಆಸ್ತಿಕರ ಸಮಾಗಮಕ್ಕೆ ಸಾಕ್ಷಿಯಾಗುತ್ತಿರುವ ಈ ಮಹಾಕುಂಭ ಮೇಳದಲ್ಲಿ ಲಕ್ಷಾಂತರ ನಾಗ ಸಾಧುಗಳು, ಸಾಧು ಸಂತರುಗಳು ಜಮಾಯಿಸಿದ್ದಾರೆ.महाकुंभ में कवरेज करने आये युट्यूबरो को मुश्किलें ज्यादा होगी!अपने चैनल के रीच को बढ़ाने के चक्कर मे फालतू सवाल पूछेगे बाबा जी लोग चिमटे से ठोक पीट कर सही कर देंगे।🤣 pic.twitter.com/vk4WsJMRcB — Suresh Singh (@sureshsinghj) January 12, 2025  ಈ ನಡುವೆ ಯೂಟ್ಯೂಬರ್ ಒಬ್ಬ ಧ್ಯಾನಾಸಕ್ತ ಸಾಧುಸಂತರನ್ನು ಕೆಣಕಲು ಹೋಗಿ ಧರ್ಮದೇಟು ತಿಂದಿದ್ದಾನೆ. ಮಹಾಕುಂಭದಲ್ಲಿ ಭಾಗಿಯಾಗಿದ್ದ ನಾಗಾ ಸಾಧುವೊಬ್ಬರ ಸಂದರ್ಶನ ನಡೆಸಿದ ಯೂಟ್ಯೂಬರ್ ಸನಾತನ ಸಂಪ್ರದಾಯದ ಬಗ್ಗೆ ಅಸಂಬದ್ಧ ಪ್ರಶ್ನೆ ಕೇಳಿದ್ದಾನೆ. ಇದರಿಂದ ಕುಪಿತರಾದ ನಾಗಾಸಾಧು ಆ ಯೂಟ್ಯೂಬರನ್ನು ಹೊಡೆದು ಸಿಟ್ಟು ತೋರಿಸಿಕೊ...
ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ ಬಿಜೆಪಿ ನಿರ್ಧಾರ

ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ ಬಿಜೆಪಿ ನಿರ್ಧಾರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಸೂಕ್ತ ತನಿಖೆಗಾಗಿ ಆಗ್ರಹಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಿದೆ. ಈ ಘಟನೆಯಿಂದ ಹಿಂದೂಗಳನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದು, ರಕ್ತ ಸುರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ಇದು ಒಬ್ಬರೇ ಮಾಡಿದ ಕೃತ್ಯವಲ್ಲ. ಇದರಲ್ಲಿ ಹಲವರು ಭಾಗಿಯಾಗಿದ್ದಾರೆ. ಈ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡಬೇಕಿತ್ತು. ಈಗ ಸಂಕ್ರಾಂತಿ ಹಬ್ಬ ನಡೆಯುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಂತಹ ಸಮಯದಲ್ಲೇ ಈ ಕೃತ್ಯ ಮಾಡುವುದರ ಜೊತೆಗೆ ಹಸು ಮಾಲೀಕ ಕರ್ಣ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಸುವನ್ನು ಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ದೂರಿದರು.1 ಲಕ್ಷ ರೂ. ಪರಿಹಾರವನ್ನು ಹಸು ಮಾಲೀಕ ಕರ್ಣ ಅವರಿಗೆ ಬಿಜೆಪಿ ವತಿಯಿಂದ ನೀಡಲಾಗಿದೆ. ಹಿಂದೂಗಳು ಬೇಡುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‌ನವರು ಒಂದು ಕೈಯಲ್ಲಿ ಹಸುವನ್ನು ನೀಡುತ್ತಾರೆ. ಮತ್ತೊಂ...
ಹಸುವಿನ ಕೆಚ್ಚಲು ಕೊಯ್ದ ಘಟನೆ; ಹಸು ಮಾಲೀಕರಿಗೆ ಬಿಜೆಪಿಯಿಂದ ಪರಿಹಾರ

ಹಸುವಿನ ಕೆಚ್ಚಲು ಕೊಯ್ದ ಘಟನೆ; ಹಸು ಮಾಲೀಕರಿಗೆ ಬಿಜೆಪಿಯಿಂದ ಪರಿಹಾರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣ ಬಗ್ಗೆ ಬಿಜೆಪಿ ಆಕ್ರೋಶ ಹೊರಹಾಕಿದೆ. ಸಂತ್ರಸ್ತರ ಗೋಳನ್ನು ಸರ್ಕಾರ ಕೇಳಲಿಲ್ಲ ಎಂದು ಆರೋಪಿಸಿರುವ ಬಿಜೆಪಿ ನಾಯಕರು ತಾವೇ ಹಸುಮಾಲೀಕರಿಗೆ ಪರಿಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನೊಳಗೊಂಡ ಬಿಜೆಪಿ ನಿಯೋಗ ಸಂತ್ರಸ್ತರನ್ನು ಭೇಟಿಮಾಡಿ 1 ಲಕ್ಷ ರೂ. ಪರಿಹಾರವನ್ನು ನೀಡಿದ್ದಾರೆ.ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಮತ್ತು ಪ್ರತಿಪಕ್ಷ ನಾಯಕರಾದ ಶ್ರೀ @RAshokaBJP ಅವರು ಕಾಟನ್ ಪೇಟೆಯ ದುಂಡು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮಾಲೀಕನ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿ, ಗೋ ಪೂಜೆ ನೆರವೇರಿಸಿ ಪಕ್ಷದ ವತಿಯಿಂದ ಗೋವನ್ನು ಸಂತ್ರಸ್ತರಿಗೆ ನೀಡಿದರು.ಈ… pic.twitter.com/1ibb9aSlrf — BJP Karnataka (@BJP4Karnataka) January 14, 2025...
ಡಾಲಿ ಧನಂಜಯ್, ನಾಗಭೂಷಣ್ ಕಾಂಬಿನೇಷನ್​ನ ‘ವಿದ್ಯಾಪತಿ’ ಬಿಡುಗಡೆಗೆ ಡೇಟ್ ಫಿಕ್ಸ್

ಡಾಲಿ ಧನಂಜಯ್, ನಾಗಭೂಷಣ್ ಕಾಂಬಿನೇಷನ್​ನ ‘ವಿದ್ಯಾಪತಿ’ ಬಿಡುಗಡೆಗೆ ಡೇಟ್ ಫಿಕ್ಸ್

Focus, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಡಾಲಿ ಧನಂಜಯ್ ಮತ್ತು ನಾಗಭೂಷಣ್ ಕಾಂಬಿನೇಷನ್​ನ ಸಿನಿಮಾ ‘ವಿದ್ಯಾಪತಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಡಾಲಿ ಧನಂಜಯ್ ನಿರ್ಮಾಣ ಮಾಡಿರುವ, ನಾಗಭೂಷಣ್ ನಟಿಸಿರುವ ‘ವಿದ್ಯಾಪತಿ’ ಮುಂಬರುವ ಏಪ್ರಿಲ್ ೧೦ರಂದು ಬಿಡುಗಡೆಯಾಗಲಿದೆ. ಈ ಕುರಿತಂತೆ ಡಾಲಿ ಪಿಕ್ಚರ್ಸ್ ತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. View this post on Instagram  A post shared by Daali Pictures (@daalipictures)...
ನಾಡಿನಾದ್ಯಂತ ಮಕರ ಸಂಕ್ರಾಂತಿ ವೈಭವ; ದೇವಕಾಲಯಗಳಲ್ಲಿ ವಿಶೇಷ ಕೈಂಕರ್ಯ

ನಾಡಿನಾದ್ಯಂತ ಮಕರ ಸಂಕ್ರಾಂತಿ ವೈಭವ; ದೇವಕಾಲಯಗಳಲ್ಲಿ ವಿಶೇಷ ಕೈಂಕರ್ಯ

Focus, ಆಧ್ಯಾತ್ಮ, ದೇಗುಲ ದರ್ಶನ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ತರಾಯಣ ಪರ್ವಕಾಲವನ್ನು ಸ್ವಾಗತಿಸುವ ಕೈಂಕರ್ಯ ಎಲ್ಲೆಡೆ ಸಾಗಿದೆ. ಎಲ್ಲೆಲ್ಲೂ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಅದರಲ್ಲೂ ಅಯ್ಯಪ್ಪ ದೇಗುಲಗಳಲ್ಲಿ ಮಕರ ಸಂಕ್ರಾಂತಿಯನ್ನು ವಿಶೇಷ ವೈಭವ ರೀತಿಯಲ್ಲಿ ಅಕ್ಕಿಗರಿಸಲಾಗುತ್ತಿದೆ.ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದ್ದು ಇಂದು ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭೀಷೇಕ, ನೆರವೇರಿದ್ದು, ದೇಗುಲಗಳು ಭಕ್ತಸಮೂಹದಿಂದ ತುಂಬಿವೆ....