ಫ್ರಾನ್ಸ್‌ನ ‘ವಿಶ್ವ ಕೌಶಲ್ಯ ಸ್ಪರ್ಧೆ’ಯಲ್ಲಿ ಕರ್ನಾಟಕದ 9 ಮಂದಿ ವಿದ್ಯಾರ್ಥಿಗಳ ಕಮಾಲ್
ಬೆಂಗಳೂರು: ಫ್ರಾನ್ಸ್ ನ ಲಿಯೋನ್‌ನಲ್ಲಿ ನಡೆಯಲಿರುವ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿ (ಕೆ.ಎಸ್.ಡಿ.ಸಿ) ರಾಜ್ಯದ 9 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ. *ಫ್ರಾನ್ಸ್ ತೆರಳುವ ಮುನ್ನ ಭೇಟಿಯಾದ ವಿದ್ಯಾರ್ಥಿಗಳಿಗೆ ವೈದ್ಯ ಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಬುಧವಾರ ಶುಭಕೋರಿದರು.
2024 ಸೆಪ್ಟೆಂಬರ್ 10 ರಿಂದ 15ರವರೆಗೆ ಫ್ರಾನ್ಸ್ ನ ಲಿಯೋನ್ ನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ವೃತ್ತಿಪರ ಕೌಶಲಗಳ “ಒಲಂಪಿಕ್ಸ್” ಎಂದೇ ಬಣ್ಣಿಸಲಾಗುತ್ತದೆ. 1 ವಿಭಿನ್ನ ಕೌಶಲ್ಯ ಸ್ಪರ್ಧೆಗಳು ನಡೆಯುವ ವಿಶ್ವದ ಅತಿ ದೊಡ್ದ ಕಾರ್ಯಕ್ರಮವಾಗಿದೆ. 22 ವರ್ಷದ ಒಳಗಿನ ಸುಮಾರು 1000 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ತಮ್ಮ ವೃತ್ತಿಪರ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿಯು ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಕರ್ನಾಟಕದ ಕೌಶಲಪೂರ್ಣ ಅಭ್ಯರ...





