Sunday, March 15

ದೇಶ-ವಿದೇಶ

ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’: ಮತ್ತೊಂದು ವೀಡಿಯೋ ರಿವೀಲ್

ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’: ಮತ್ತೊಂದು ವೀಡಿಯೋ ರಿವೀಲ್

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಜೂನಿಯರ್​ ಎನ್​ಟಿಆರ್​ ನಟನೆಯ ‘ದೇವರ: ಪಾರ್ಟ್​ 1’ ಸಿನಿಮಾದ ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್​ 27ರಂದು ‘ದೇವರ’ ಸಿನಿಮಾ ಬಿಡುಗಡೆ​ ಆಗಲಿದೆ.ಇದೇ ಸಂದರ್ಭದಲ್ಲಿ 'ದೇವರ' ಚಿತ್ರದ ಮತ್ತೊಂದು ಟ್ರೇಲರ್ ಬಿಡುಗಡೆಯಾಗಿದೆ. 'ಆರ್​ಆರ್​ಆರ್​’ ಸಿನಿಮಾ ಬಳಿಕ ಜೂನಿಯರ್​ ಎನ್‌ಟಿಆರ್​ ಅವರು ಈ ಚಿತ್ರದಲ್ಲಿ ಕಮಾಲ್ ಪ್ರದರ್ಶಿಸಲಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.https://youtu.be/HNYA6bqL6bU?si=nIRtqhPMISPhVIbJ...
ದೆಹಲಿಯ 3ನೇ ಮಹಿಳಾ ಸಿಎಂ ಆಗಿ ಅತಿಶಿ ಪದಗ್ರಹಣ

ದೆಹಲಿಯ 3ನೇ ಮಹಿಳಾ ಸಿಎಂ ಆಗಿ ಅತಿಶಿ ಪದಗ್ರಹಣ

ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ಹಿರಿಯ ಎಎಪಿ ಶಾಸಕಿ ಅತಿಶಿ ಅವರು ಪ್ರಮಾಣವಚನ ಸ್ವೀಕರಿಸಿದರು. ರಾಜಧಾನಿಯ ರಾಜ್ ನಿವಾಸದಲ್ಲಿ ಶನಿವಾರ ಅವರು ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು. ಅವರ ಜೊತೆ ಐವರು ಸಂಪುಟ ಸಚಿವರಾಗಿ ಕೂಡಾ ಪ್ರಮಾಣ ವಚನ ಸ್ವೀಕರಿಸಿದರು.ದೆಹಲಿಯ 3ನೇ ಸಿಎಂ ಆಗಿ ಆತಿಶಿ ಅವರು ಅಧಿಕಾರ ವಹಿಸಿಕೊಂಡು ಗಮನಸೆಳೆದಿದ್ದಾರೆ. ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಹಿನ್ನಲೆಯಲ್ಲಿ ಸಿಎಂ ಪದಗ್ರಹಣ ಸಮಾರಂಭ ಸರಳವಾಗಿ ನಡೆಯಿತು. ಆತಿಶಿ ಸರ್ಕಾರ ಈ ತಿಂಗಳ 26-27 ರಂದು ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಬಹುಮಾನ ಸಾಬೀತುಪಡಿಸಲಿದೆ ಎಂದು ಆಪ್ ನಾಯಕರು ತಿಳಿಸಿದ್ದಾರೆ....
KSRTCಗೆ ಪ್ರತಿಷ್ಠಿತ ‘ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024’

KSRTCಗೆ ಪ್ರತಿಷ್ಠಿತ ‘ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024’

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ರಾಜ್ಯ ಸರ್ಕಾರಿ ಸ್ವಮ್ಯದ ಸಾರಿಗೆ ನಿಗಮ KSRTCಗೆ ಮತ್ತೊಂದು ಪುರಸ್ಕಾರ ಸಿಕ್ಕಿದೆ. ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2024' ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಗೆ ಲಭಿಸಿಸೆ.ನಿಗಮದ ನೌಕರರಿಗೆ ಹೃದಯ ಸಂಬಂಧಿ ಆರೋಗ್ಯ ತಪಾಸಣೆ ಮತ್ತು ಮುಂಜಾಗ್ರತೆ ವಹಿಸುವ ಉಪಕ್ರಮಗಳಿಗಾಗಿ “ಸಾರಿಗೆ ಸಂಜೀವಿನಿ” ಎಂಬ ಯೋಜನೆ ಜಾರಿಗೆ ತರಲಾಗಿದ್ದು, ಸದರಿ ಉಪಕ್ರಮಕ್ಕಾಗಿ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ದೆಹಲಿ ಮೂಲದ ಸ್ಕಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆಯಾಗಿದ್ದು 1997ರಲ್ಲಿ ಸ್ಥಾಪಿತವಾಗಿರುತ್ತದೆ. ಈ ಸಂಸ್ಥೆಯು 2003 ರಿಂದ ಸ್ಕಾಚ್ ಪ್ರಶಸ್ತಿಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತದೆ.ಸ್ಕಾಚ್ ಸಂಸ್ಥೆಯು ದೆಹಲಿಯ ಸಿಲ್ವರ್ ...
ದಕ್ಷಿಣ ಭಾರತದ ಜನಪ್ರಿಯ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಂಧನ

ದಕ್ಷಿಣ ಭಾರತದ ಜನಪ್ರಿಯ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಬಂಧನ

ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಹೈದರಾಬಾದ್: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ದಕ್ಷಿಣ ಭಾರತದ ಜನಪ್ರಿಯ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಯುವತಿಯ ದೂರಿನ ಆಧಾರದಲ್ಲಿ ಜಾನಿ ಮಾಸ್ಟರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಅರೋಪ ಬಗ್ಗೆ ದೂರು ದಾಖಲಾಗಿತ್ತು. ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧದ ಈ ಆರೋಪ ದಕ್ಷಿಣ ಭಾರತದ ಚಿತ್ರೋದ್ಯಮಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿಯಾಗಿತ್ತು. ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ಕೂಡ ದಾಖಲಾಗಿದೆ.ದೂರು ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅವರನ್ನು ಹೈದರಾಬಾದ್‌ನ ಪೊಲೀಸರು ನಾಲ್ಕು ತಂಡಗಳಲ್ಲಿ ಹುಡಿಲುಕಾಟ ನಡೆಸುತ್ತಿದ್ದರು.ಈ ನಡುವೆ, ಜಾನಿ ಮಾಸ್ಟರ್ ಅವರನ್ನು ಗೋವಾದಲ್ಲಿ ಪತ್ತೆ ಮಾಡಿದ ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ....
ಒಡಿಶಾದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಕಟೀಲ್ ಕಮಾಲ್

ಒಡಿಶಾದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಕಟೀಲ್ ಕಮಾಲ್

ದೇಶ-ವಿದೇಶ, ಪ್ರಮುಖ ಸುದ್ದಿ
ಭುವನೇಶ್ವರ: ಮಾಜಿ ಸಂಸದ ನಳಿನ್ ಕುಮಾರ್ ಇದೀಗ ಒಡಿಶಾದಲ್ಲಿ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಒಡಿಶಾ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡಿರುವ ಕರ್ನಾಟಕ ಬಿಜೆಪಿ ಮಾಜಿ ಅಧ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್ ಕಳೆದ ಕೆಲವು ದಿನಗಳಿಂದ ಅವಿರತ ಪ್ರವಾಸ ಕೈಗೊಂಡಿದ್ದಾರೆ.ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಿ ಸ್ಥಳೀಯ ಮುಖಂಡರ ಸೈನ್ಯ ಕಟ್ಟಿರುವ ಕಟೀಲ್, ಭಾರೀ ಸಂಖ್ಯೆಯಲ್ಲಿ ಯುವಕರನ್ನು ಸೆಳೆಯುತ್ತಿದ್ದಾರೆ.ಒಡಿಶಾದ ಸಾಂಪ್ರದಾಯಿಕ ಸಭೆಗಳಲ್ಲಿ ಭಾಗಿಯಾಗಿ, ಮೋದಿ ಸರ್ಕಾರದ ಸಾಧನೆಗಳನ್ನು ಅನಾವರಣ ಮಾಡುವ ಮೂಲಕ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಭುವನೇಶ್ವರ, ಕಟಕ್, ನೌಪಾಡಾ ಜಿಲ್ಲೆಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವು ಪಕ್ಷದ ನಿರೀಕ್ಷೆಯನ್ನು ಮೀರಿ ಯಶಸ್ವಿಯಾಗಿ ಸಾಗಿದೆ. ಮೋದಿ ಅವರೇ ಆದರ್ಶ ನಾಯಕ:  ಈ ಅಭಿಯಾನದ ನಡುವೆ ಮಾತನಾಡಿರುವ ನಳಿನ್ ಕುಮಾರ್ ಕಟೀಲ್, ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ದೇಶದ ಪ್ರಗತಿಗೆ ಪೂರಕವಾದ ಕಾರ್ಯಕ್ರಮ ರೂಪಿಸಿದೆ. ಒಡಿಶಾ ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.ಮುಂಬರುವ ವಿವಿಧ ರ...
‘ಒನ್ ನೇಷನ್ ಒನ್ ಎಲೆಕ್ಷನ್’; ಕೇಂದ್ರದ ನಿರ್ಧಾರಕ್ಕೆ ಬಿಜೆಪಿ ಸ್ವಾಗತ

‘ಒನ್ ನೇಷನ್ ಒನ್ ಎಲೆಕ್ಷನ್’; ಕೇಂದ್ರದ ನಿರ್ಧಾರಕ್ಕೆ ಬಿಜೆಪಿ ಸ್ವಾಗತ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರಕಾರ ‘ಒಂದು ದೇಶ, ಒಂದು ಚುನಾವಣೆ’ ಸಂಬಂಧ ಒಂದು ಸಮರ್ಥ ನಿರ್ಧಾರ ಮಾತ್ರವಲ್ಲದೆ, ಐತಿಹಾಸಿಕ ತೀರ್ಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಮೆಚ್ಚುಗೆ ಸೂಚಿಸಿದ್ದಾರೆ.ಮಾಧ್ಯಮಗಳಿಗೆ ಇಂದು ಹೇಳಿಕೆ ಬಿಡುಗಡೆ ಮಾಡಿದ ಅವರು, ದೇಶದ ಹಿತಾಸಕ್ತಿಯ ಪ್ರಮುಖ ಉದ್ದೇಶ ಇದರ ಹಿಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 1951, 1967 ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿತ್ತು. ಕಾನೂನು ಆಯೋಗವು 1999ರ ತನ್ನ 170ನೇ ವರದಿಯಲ್ಲಿ ಐದು ವರ್ಷಗಳಿಗೆ ಒಮ್ಮೆ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಕುರಿತು ತಿಳಿಸಿತ್ತು ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ ವರದಿಯಲ್ಲಿರುವ ಅಂಶಗಳ ಕುರಿತು ಅವರು ಗಮನ ಸೆಳೆದಿದ್ದಾರೆ.ಮೊದಲ ಹಂತದಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಮತ್ತು ಈ ಸಾರ್ವತ್ರಿಕ ಚುನಾವಣೆ ನಡೆದ 100 ದಿನಗಳ ಒಳಗೆ ಎರಡನೇ ಹಂತದಲ್ಲಿ ಜಿಲ್ಲಾ ಪಂ...
ಸೆಪ್ಟೆಂಬರ್ 21ರಿಂದ ಕ್ವಾಡ್ ನಾಯಕರ ಶೃಂಗಸಭೆ; ಮೋದಿ ಅಮೆರಿಕ ಪ್ರವಾಸ ನಿಗದಿ

ಸೆಪ್ಟೆಂಬರ್ 21ರಿಂದ ಕ್ವಾಡ್ ನಾಯಕರ ಶೃಂಗಸಭೆ; ಮೋದಿ ಅಮೆರಿಕ ಪ್ರವಾಸ ನಿಗದಿ

ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಡೆಲವೇರ್‌ನ ವಿಲ್ಮಿಂಗ್ಟನ್‌ನಲ್ಲಿ ಸೆಪ್ಟೆಂಬರ್ 21ರಂದು ಕ್ವಾಡ್ ನಾಯಕರ ಶೃಂಗಸಭೆ ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.ಕ್ವಾಡ್‌ ನಾಯಕರ ಈ ನಾಲ್ಕನೇ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್21 ರಿಂದ 23ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೋದಿ ಪ್ರವಾಸ ಬಗ್ಗೆ ತಿಳಿಸಿದೆ,ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಸ್ವಗ್ರಾಮದಲ್ಲಿ ಈ ಸಭೆ ಆಯೋಜಿತವಾಗಿದೆ. ಈ ಕ್ವಾಡ್ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸಹಿತ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ....
ಲೆಬನಾನ್, ಸಿರಿಯಾದ ಹಲವೆಡೆ ಪೇಜರ್‌ಗಳ ನಿಗೂಢ ಸ್ಫೋಟ; 9 ಮಂದಿ ಸಾವು, 2800 ಮಂದಿಗೆ ಗಾಯ

ಲೆಬನಾನ್, ಸಿರಿಯಾದ ಹಲವೆಡೆ ಪೇಜರ್‌ಗಳ ನಿಗೂಢ ಸ್ಫೋಟ; 9 ಮಂದಿ ಸಾವು, 2800 ಮಂದಿಗೆ ಗಾಯ

ದೇಶ-ವಿದೇಶ, ಪ್ರಮುಖ ಸುದ್ದಿ
ಲೆಬನಾನ್: ಇಸ್ರೇಲ್-ಪ್ಯಾಲೆಸ್ತೇನ್ ಸಮರದ ನಡುವೆ ಲೆಬನಾನ್, ಸಿರಿಯಾಗಳಲ್ಲಿ ಪೇಜರ್‌ಗಳ ನಿಗೀಢ ಸ್ಫೋಟ ಪ್ರಕರಣ ಆತಂಕ ಸೃಷ್ಟಿಸಿದೆ. ಪೇಜರ್‌ಗಳ ಸ್ಫೋಟದಿಂದ 9ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 2,800 ಮಂದಿ ಹಿಜ್‌ಬುಲ್ಲಾ ಸದಸ್ಯರು ಗಾಯಗೊಂಡಿದ್ದಾರೆ.ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಲೆಬನಾನ್ ಸರ್ಕಾರದ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್, ಅಲ್ಲಲ್ಲಿ ಪೇಜರ್‌ಗಳು ಸ್ಫೋಟಗೊಂಡಿದ್ದು, ಗಾಯಾಳುಗಳ ಪೈಕಿ 200 ಮಂದಿ ಸ್ಥಿತಿ ತೀವ್ರಗೊಂಡಿದೆ. ಹೆಚ್ಚಿನವರ ಮುಖ, ಹೊಟ್ಟೆ, ಕೈಗಳಿಗೆ ಗಾಯಗಳಾಗಿವೆ ಎಂದವರು ತಿಳಿಸಿದ್ದಾರೆ.ಲೆಬನಾನ್‌ ಮತ್ತು ಸಿರಿಯಾದ ಹಲವೆಡೆ ಏಕಕಾಲದಲ್ಲಿ ನೂರಾರು ಹ್ಯಾಂಡ್‌ ಪೇಜರ್‌ಗಳು ಸ್ಫೋಟಗೊಂಡಿವೆ. ಹಮಾಸ್‌ನ ಮಿತ್ರ ಸಂಘಟನೆಯಾಗಿರುವ ಹಿಜ್ಬುಲ್ಲಾಗಳ ಪೇಜರ್ ದಾಳಿ ನಡೆದಿದ್ದು ಇಸ್ರೇಲ್ ಈ ಕೃತ್ಯ ನಡೆಸಿದೆ ಎಂದು ಲೆಬನಾನ್ ಸರ್ಕಾರ ಆರೋಪಿಸಿದೆ....
ದೆಹಲಿ ನೂತನ ಸಿಎಂ ಸ್ಥಾನಕ್ಕೆ ಎಂ.ಎಸ್.ಅತಿಶಿ; ಆಪ್ ಸಭೆಯಲ್ಲಿ ಒಮ್ಮತದ ಆಯ್ಕೆ

ದೆಹಲಿ ನೂತನ ಸಿಎಂ ಸ್ಥಾನಕ್ಕೆ ಎಂ.ಎಸ್.ಅತಿಶಿ; ಆಪ್ ಸಭೆಯಲ್ಲಿ ಒಮ್ಮತದ ಆಯ್ಕೆ

ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಎಂ.ಎಸ್.ಅತಿಶಿ ಆಯ್ಕೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಉತ್ತರಾಧಿಕಾರಿಯಾಗಿ ಅತಿಶಿ ಅವರನ್ನು ಆಮ್ ಆದ್ಮಿ ಪಕ್ಷ ಆಯ್ಕೆ ಮಾಡಿದೆ.ಎಎಪಿ ಪಕ್ಷದ ಶಾಸಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಎಪಿ ಶಾಸಕರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಎಲ್ಲಾ ಎಎಪಿ ಶಾಸಕರು ಸರ್ವಾನುಮತದಿಂದ ಒಪ್ಪಿಕೊಂಡರು. ಆ ಮೂಲಕ ಆಪ್ ಶಾಸಕಾಂಗ ಪಕ್ಷದ ನೂತನ ನಾಯಕರನ್ನಾಗಿ ಎಂ.ಎಸ್.ಅತಿಶಿ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ....
‘ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ?’: ಸಿಎಂ ವಿರುದ್ದ ಹೆಚ್ಡಿಕೆ ಟ್ವೀಟಾಸ್ತ್ರ

‘ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ?’: ಸಿಎಂ ವಿರುದ್ದ ಹೆಚ್ಡಿಕೆ ಟ್ವೀಟಾಸ್ತ್ರ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸ್ಥಳೀಯ ಸರ್ಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ದ ಸಾಮಾಜಿಕ ಜಾಲತಾಣ 'X'ನಲ್ಲಿ ಪೋಸ್ಟ್ ಹಾಕಿರುವ ಕುಮಾರಸ್ವಾಮಿ, ಮಾನವ ಸರಪಳಿ ನೆಪದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಜಾಪ್ರಭುತ್ವ ಉಳಿಸುವ ಕಾಳಜಿಯೇ ಇಲ್ಲ. ಇದ್ದರೆ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.ಅಧಿಕಾರಕ್ಕೇರಿದಾಗಿನಿಂದ ಪ್ರಜಾಪ್ರಭುತ್ವದ ಸರಪಳಿಯ ತಳಮಟ್ಟದ ಆಧಾರಸ್ತಂಭಗಳಾದ ಜಿಲ್ಲಾ & ತಾಲೂಕು ಪಂಚಾಯತಿ ಮತ್ತು ಬಿಬಿಎಂಪಿ ಚುನಾವಣೆ ನಡೆಸಿಲ್ಲ, ಯಾಕೆ? ಸ್ಥಳೀಯ ಸರಕಾರಗಳ ಕತ್ತು ಹಿಸುಕಿ ನೀವು ವಿಧಾನಸೌಧದಲ್ಲಿ ಮೆರೆದರೇನು ಭಾಗ್ಯ? ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು ವರ್ಷದ ಮೇಲೆ 4 ತಿಂಗಳಾಯಿತು (2023 ಮೇ 20). ಈವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಪ್ರಜಾಪ್ರಭುತ್ವ, ಜನಪರತೆ, ಜಾಹೀರಾತುಗಳಲ್ಲಷ್ಟೆ ಝಗಮಗಿಸುತ್ತಿದೆ ಎಂದವರು ಟೀಕಿಸಿದ್ದಾರೆ...