Sunday, March 15

ದೇಶ-ವಿದೇಶ

ಪ್ರಚೋದನಾಕಾರಿ ಹೇಳಿಕೆಯ ಪ್ರತಿಧ್ವನಿ; ಬಂಟ್ವಾಳ ಬಳಿ ಹಿಂದೂ ಕಾರ್ಯಕರ್ತರಿಂದ ದಿಢೀರ್ ‘ಬಿ.ಸಿ.ರೋಡ್ ಚಲೋ’; ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಪರದಾಟ

ಪ್ರಚೋದನಾಕಾರಿ ಹೇಳಿಕೆಯ ಪ್ರತಿಧ್ವನಿ; ಬಂಟ್ವಾಳ ಬಳಿ ಹಿಂದೂ ಕಾರ್ಯಕರ್ತರಿಂದ ದಿಢೀರ್ ‘ಬಿ.ಸಿ.ರೋಡ್ ಚಲೋ’; ಪರಿಸ್ಥಿತಿ ನಿಯಂತ್ರಿಸಲು ಪೊಲೀಸ್ ಪರದಾಟ

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬಂಟ್ಚಾಳದಲ್ಲಿ  ಪ್ರಚೋದನಕಾರಿ ಹೇಳಿಕೆ ವಿರುದ್ದ ಹಿಂದೂ ಕಾರ್ಯಕರ್ಯರು ಬೀದಿಗಿಳಿದಿದ್ದಾರೆ. 'ತಾಕತ್ತಿದ್ದರೆ ಈದ್ ಮಿಲಾದ್ ಮೆರವಣಿಗೆಯ ಮೇಲೆ ದಾಳಿ ಮಾಡಿ' ಎಂದು ಬಂಟ್ವಾಳ ಪುಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ನೀಡಿದ್ದಾರೆ ಎನ್ನಲಾದ ಪ್ರಚೋದನಕಾರಿ ಹೇಳಿಕೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಬಂಟ್ವಾಳ ಸಮೀಪ ಬಿ.ಸಿ.ರೋಡ್‌ನಲ್ಲಿ ರ್ಯಾಲಿ ಕೈಗೊಂಡಿದ್ದಾರೆ.ಮುಸ್ಲಿಂ ಮುಖಂಡರು ಹಿಂದೂ ಸಂಘಟನೆಯ ನಾಯಕ ಶರಣ್ ಪಂಪ್‌ವೆಲ್ ವಿರುದ್ದ ಪ್ರಚೋದನಾಕಾರಿ ಹೇಳಿಕೆ ನೀಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಇದರಿಂದ ಕೆರಳಿರುವ ಹಿಂದೂ ಸಂಘಟನೆಗಳು 'ಬಿ.ಸಿ.ರೋಡ್ ಚಲೋ'ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಬಿ.ಸಿ.ರೋಡ್‌ ಪಟ್ಟಣದಲ್ಲಿ ಜಮಾಯಿಸಿದ್ದಾರೆ.ಪರಿಸ್ಥಿತಿ ನಿಯಂತ್ರಿಸಲು ನೂರಾರು ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರೂ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನೂ ಬೇಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತ...
ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ

ದೇಶ-ವಿದೇಶ, ಪ್ರಮುಖ ಸುದ್ದಿ
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ.ಅಮೆರಿಕದ ಫ್ಲೋರಿಡಾದ ಗಾಲ್ಫ್​ ಕೋರ್ಸ್​ ಬಳಿ ಈ ಘಟನೆ ನಡೆದಿದ್ದು ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಟ್ರಂಪ್ ಗಾಲ್ಫ್ ಕೋರ್ಸ್‌ನಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟ್ರಂಪ್ ಪುತ್ರ ಟ್ರಂಪ್ ಜೂನಿಯರ್ ತಿಳಿಸಿದ್ದಾರೆ.ಭಾನುವಾರ ಫ್ಲೋರಿಡಾದ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕೋರ್ಸ್ ಬಳಿ, ಟ್ರಂಪ್‌ಗೆ ಬಹಳ ಹತ್ತಿರದಲ್ಲಿ ಬುಲೆಟ್‌ಗಳನ್ನು ಹಾರಿಸಲಾಗಿದೆ ಎಂಬುದನ್ನು ಖಚಿತಪಡಿಸಿರುವ ಎಫ್‌ಬಿಐ ಅಧಿಕಾರಿಗಳು, ಟ್ರಂಪ್ ಕೊಲೆಗೆ ಯತ್ನಿಸಿದ ವ್ಯಕ್ತಿಯನ್ನು ಸೆರೆಹಿಡಿದಿದ್ದಾರೆ.ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಅಪಾಯವಾಗಿಲ್ಲ, ಅವರು ಸಂಪೂರ್ಣ ಸೇಫ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಎಂಎಸ್‌ಪಿ ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ : ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ

ಎಂಎಸ್‌ಪಿ ಖಾತ್ರಿ ಕಾನೂನು ಜಾರಿಯಾಗುವ ತನಕ ಹೋರಾಟ ನಿಲ್ಲುವುದಿಲ್ಲ : ಸಂಯುಕ್ತ ಕಿಸಾನ್ ಮೋರ್ಚಾ ಘೋಷಣೆ

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಹರಿಯಾಣ: ಹರಿಯಾಣ ಚುನಾವಣಾ ಹಿನ್ನಲೆಯಲ್ಲಿ. ಕಿಸಾನ್ ಮಹಾಪಂಚಾಯತ್ ಸಮಾವೇಶ ನಡೆಸಲು ಸಾಧ್ಯವಿಲ್ಲ ಎಂದು ಪೊಲೀಸರು ರೈತರಿಗೆ ತಿಳಿಸಿದ್ದಾರೆ.. ಹಾಗೂ ಸಮಾವೇಶದ ಸ್ಥಳದಲ್ಲಿ ಹಾಕಲಾಗಿದ್ದ ಶಾಮಿಯಾನ ಮೈಕಳನ್ನ ಕಿತ್ತುಹೊಯ್ದಿದ್ದಾರೆ. ಇದನ್ನು ರೈತ ಮುಖಂಡರು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ಸಂದೇಶ ನೀಡಿದ್ದಾರೆ..ಸಮಾವೇಶ ನಡೆಸಲು ಹಾಕಿದ್ದ ಟೆಂಟುಗಳನ್ನ ಕಿತ್ತಾಕಿ ಮೈಕಳನ್ನ ಕಿತ್ತೆಸೆದ ಪೊಲೀಸರು ಬೆಳಿಗ್ಗೆ 9:00 ಒಳಗೆ ಸಮಾವೇಶ ನಡೆಸಲು ಆಸ್ಪದ ನೀಡದಿದ್ದರೆ. ರೈತರು ರಾಜ್ಯದ್ಯಂತ ಎಲ್ಲ ರಸ್ತೆಗಳನ್ನ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಸಮಾವೇಶ ನಡೆಸಲು ಅವಕಾಶ ಕಲ್ಪಿಸಿತು ಆದರೆ ಪಕ್ಕದ ರಾಜ್ಯದ ಪಂಜಾಬ್ ರೈತರಿಗೆ ಸಮಾವೇಶಕ್ಕೆ ಬರಲು ಅವಕಾಶ ನೀಡಲಿಲ್ಲ. ಆಗ ಮತ್ತಷ್ಟು ಸಂಖ್ಯೆಯ ರೈತರು ತಂಡೋಪ ತಂಡವಾಗಿ ಸಮಾವೇಶ ಸ್ಥಳಕ್ಕೆ ಬಂದರು. ಇದರಿಂದ ರೈತಶಕ್ತಿ ಇಮ್ಮಡಿ ಗೊಳಿಸಿತು.ಇದೇ ಸಮಾವೇಶದಲ್ಲಿ ಮಾತನಾಡಿದ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ರೈತರ...
ಇನ್ನೆರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ; ಕೇಜ್ರಿವಾಲ್ ಘೋಷಣೆ

ಇನ್ನೆರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ; ಕೇಜ್ರಿವಾಲ್ ಘೋಷಣೆ

ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಇನ್ನೇರಡು ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂಧ ಕೇಜ್ರಿವಾಲ್ ಪ್ರಕಟಿಸಿದ್ದಾರೆ.ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರು ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾನುವಾರ ಮಹತ್ವದ ಘೋಷಣೆ ಮಾಡಿದರು.ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಎರಡು ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು. ಮತ್ತೆ ಜನರ ಆಶೀರ್ವಾದ ಸಿಗುವವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದರು.ಕಾನೂನು, ನ್ಯಾಯಾಲಯದಿಂದ ನನಗೆ ನ್ಯಾಯ ಸಿಕ್ಕಿದೆ ಎಂದ ಅರವಿಂದ್ ಕೇಜ್ರಿವಾಲ್, ಈಗ ಜನತಾ ನ್ಯಾಯಾಲಯದಿಂದ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು....
ಪ್ರಧಾನಿ ನಿವಾಸಕ್ಕೆ ಹೊಸ ಅತಿಥಿ.. ‘ದೀಪಜ್ಯೋತಿ’ಯನ್ನು ಮುದ್ದಾಡಿದ ಮೋದಿ ಮೋಡಿಗೆ ನೆಟ್ಟಿಗರ ಸಕತ್ ಲೈಕ್ಸ್

ಪ್ರಧಾನಿ ನಿವಾಸಕ್ಕೆ ಹೊಸ ಅತಿಥಿ.. ‘ದೀಪಜ್ಯೋತಿ’ಯನ್ನು ಮುದ್ದಾಡಿದ ಮೋದಿ ಮೋಡಿಗೆ ನೆಟ್ಟಿಗರ ಸಕತ್ ಲೈಕ್ಸ್

ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಈ ಒಂದು ಮುದ್ದಾದ ಅತಿಥಿ ಜೊತೆಗಿನ ವಿಡಿಯೋವನ್ನು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.हमारे शास्त्रों में कहा गया है - गाव: सर्वसुख प्रदा:'। लोक कल्याण मार्ग पर प्रधानमंत्री आवास परिवार में एक नए सदस्य का शुभ आगमन हुआ है।प्रधानमंत्री आवास में प्रिय गौ माता ने एक नव वत्सा को जन्म दिया है, जिसके मस्तक पर ज्योति का चिह्न है।इसलिए, मैंने इसका नाम 'दीपज्योति'… pic.twitter.com/NhAJ4DDq8K— Narendra Modi (@narendramodi) September 14, 2024ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಪುಟ್ಟ ಕರು ಆಗಮಿಸಿದೆ. ಆ ಮುಗ್ದ ಕರುವನ್ನು ಪ್ರಧಾನಿ ಮೋದಿ ಮುದ್ದಾಡಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣ 'Xನಲ್ಲಿ ಮೋದಿಯವರು ಹಂಚಿಕೊಂಡಿದ್ದು, ಕರುವಿನ ಜೊತೆ ಆಟವಾಡುವ ಸನ್ನಿವೇಶ ಅದಾಗಿದೆ. ಮೋದಿ ಹೋದಲ್ಲೆಲ್ಲ ಅವರ ಜೊತೆಯಲ್ಲೇ ಕರು ಹೋಗುತ್ತದೆ. ಮೋದಿ ದೇವರ ಕೋಣೆಯಲ್ಲಿ ಪೂಜೆಯಲ್ಲಿದ್ದಾಗಲೂ...
ಲಂಡನ್​​ನ ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕಕ್ಕೆ ದಶಮಾನೋತ್ಸವ ಸಡಗರ; ಮೋದಿ ಆಹ್ವಾನಕ್ಕೆ ತೀರ್ಮಾನ

ಲಂಡನ್​​ನ ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕಕ್ಕೆ ದಶಮಾನೋತ್ಸವ ಸಡಗರ; ಮೋದಿ ಆಹ್ವಾನಕ್ಕೆ ತೀರ್ಮಾನ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಲಂಡನ್​​: ಲಂಡನ್​​ನಲ್ಲಿರುವ ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ದಶಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ.ಲಂಡಲ್‌ನ ಥೇಮ್ಸ್ ನದಿ ತೀರದಲ್ಲಿ2015ರಲ್ಲಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಇದೀಗ ಹತ್ತನೇ ವರ್ಷದ ಸಮಾರಂಭದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನಿಸಲು ಲ್ಯಾಂಬೆತ್​​ ಬಸವೇಶ್ವರ ಫೌಂಡೇಶನ್​​ ಸ್ಮಾರಕ ಸಂಸ್ಥೆ ಚಿಂತನೆ ನಡೆಸಿದೆ.ಈ ನಡುವೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರು ಲಂಡನ್ ಪ್ರವಾಸದ ಸಂದರ್ಭದಲ್ಲಿ ಲಂಡಲ್‌ನ ಥೇಮ್ಸ್ ನದಿ ತೀರದ ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. ಆ ವೇಳೆ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸಿರುವ ಲಂಡನ್ ಮಾಜಿ ಮೇಯರ್ ನೀರಜ್ ಪಾಟೀಲ್ ಅವರು ದಶಮಾನೋತ್ಸವ ಸಮಾರಂಭಕ್ಕೆ ಮೋದಿಯವರನ್ನು ಆಹ್ವಾನಿಸುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.ಇದೇ ವೇಳೆ, ತಮ್ಮ ಲಂಡನ್ ಪ್ರವಾಸ ಬಗ್ಗೆ ಸಾಮಾಜಿಕ ಜಾಲತಾಣ 'X'ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂ...
ಇದೀಗ ‘ದೇವರ’ ಹವಾ; ಬಿಡುಗಡೆಗೆ ಮುನ್ನವೇ ದಾಖಲೆಯ ಗಳಿಕೆ

ಇದೀಗ ‘ದೇವರ’ ಹವಾ; ಬಿಡುಗಡೆಗೆ ಮುನ್ನವೇ ದಾಖಲೆಯ ಗಳಿಕೆ

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ಸಿನಿಮಾ
ಜೂನಿಯರ್​ ಎನ್​ಟಿಆರ್ ಅಭಿನಯದ ‘ದೇವರ’ ಚಿತ್ರ ಸಿನಿಲೋಕದಲ್ಲಿ ಬಿಡುಗಡೆಗೆ ಮುನ್ನವೇ ಹವಾ ಸೃಷ್ಟಿಸಿದೆ. ಸೆಪ್ಟೆಂಬರ್ 27ರಂದು ‘ದೇವರ’ ಸಿನಿಮಾ ಬಿಡುಗಡೆ ಅಗಲಿದ್ದು ಈಗಲೇ ಗಳಿಕೆಯಲ್ಲಿ ದಾಖಲೆ ಸೃಷ್ಟಿಸುವ ಪ್ರಯತ್ನದಲ್ಲಿದೆ.ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನದ ಈ ಸಿನಿಮಾ ದೇಶ-ವಿದೇಶಗಳಲ್ಲಿ ಭರ್ಜರಿ ಗಳಿಕೆ ಮೂಲಕ ಸುದ್ದಿಯಲ್ಲಿದೆ. ಅಮೆರಿಕದಲ್ಲೇ ಬರೋಬ್ಬರಿ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.ರಿಲೀಸ್​ಗೂ ಮೊದಲೇ ಅಡ್ವಾನ್ಸ್ ಬುಕಿಂಗ್ ಪ್ರಾರಂಭಿಸಲಾಗಿದ್ದು ಅಮೆರಿಕದಲ್ಲಿ 30 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮಾರಾಟ ಆಗಿವೆ. ಈ ಮೂಲಕ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ....
ನದಿಗೆ ಸ್ನಾನಕ್ಕೆ ತೆರಳಿದ 8 ಮಂದಿ ಜಲಸಮಾಧಿ

ನದಿಗೆ ಸ್ನಾನಕ್ಕೆ ತೆರಳಿದ 8 ಮಂದಿ ಜಲಸಮಾಧಿ

ದೇಶ-ವಿದೇಶ, ಪ್ರಮುಖ ಸುದ್ದಿ
ಗಾಂಧಿನಗರ: ಗುಜರಾತ್‌ನ ಮೆಶ್ವೋ ನದಿಯಲ್ಲಿ ಇಂದು ಹೃದಯ ವಿದ್ರಾವಕ ಘಟನೆಯಲ್ಲಿ 8 ಮಂದಿ ಜಲಸಮಾಧಿಯಾಗಿದ್ದಾರೆ.ಶುಕ್ರವಾರ ಸಂಜೆ ಸ್ನಾನಕ್ಕೆಂದು ನದಿಗೆ ಇಳಿದಿದ್ದ ಜನರ ಪೈಕಿ 8 ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ವಾಸ್ನಾ ಸೊಗ್ತಿ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಗುರುತಿಸಲಾಗಿದೆ.
ಚಿತ್ತೂರು ಬಳಿ ಭೀಕರ ಅಪಘಾತ; 7 ಮಂದಿ ಸಾವು

ಚಿತ್ತೂರು ಬಳಿ ಭೀಕರ ಅಪಘಾತ; 7 ಮಂದಿ ಸಾವು

ದೇಶ-ವಿದೇಶ, ಪ್ರಮುಖ ಸುದ್ದಿ
ಚಿತ್ತೂರು: ಆಂದ್ರಪ್ರದೇಶದ ಚಿತ್ತೂರು ಬಳಿ ಬಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿ 7 ಮಂದಿ ಸಾವನ್ನಪ್ಪಿದ್ದಾರೆ.ಬೆಂಗಳೂರಿಗೆ ತೆರಳುತ್ತಿದ್ದ ಆಂದ್ರಪ್ರದೇಶ ಸಾರಿಗೆ ಸಂಸ್ಥೆಯ ಬಸ್ ಮತ್ತು ಟ್ರಕ್‌ ನಡುವೆ ಶುಕ್ರವಾರ ಅಪಘಾತ ಸಂಭವಿಸಿದೆ.ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲದ ಮೊಗಿಲಿ ಘಾಟ್ ರಸ್ತೆಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪಘಾತದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೃತರ ಬಂಧುಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ....
ನಾಗಮಂಗಲ ಗಲಭೆಗೆ ರಾಜ್ಯ ಸರ್ಕಾರವೇ ಹೊಣೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ನಾಗಮಂಗಲ ಗಲಭೆಗೆ ರಾಜ್ಯ ಸರ್ಕಾರವೇ ಹೊಣೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಹುಬ್ಬಳ್ಳಿ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಸಂಭವಿಸಿದ ಗಲಭೆಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡುತ್ತಾ ನಾಗಮಂಗಲ ಹಿಂಸಾಚಾರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯಿಂದಾಗಿ ನಾಗಮಂಗಲದಲ್ಲಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ಸಂಭವಿಸಿದೆ ಎಂದವರು ದೂರಿದರು.ಗಣೇಶ ಮೂರ್ತಿ ಇದ್ದರೂ ಕಲ್ಲು ಹೊಡೆದು ಬೆಂಕಿ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಲ್ಹಾದ್ ಜೋಶಿ,​ ಸರ್ಕಾರವು ವೋಟ್ ಬ್ಯಾಂಕ್ ನೀತಿ ಅನುಸರಿಸದೆ ಮತಾಂಧ ಶಕ್ತಿಯನ್ನು ಹತ್ತಿಕ್ಕಬೇಕಿದೆ ಎಂದು ಒತ್ತಾಯಿಸಿದರು....