ಆದಿಚುಂಚನಗಿರಿ ಶ್ರೀಗಳ 12 ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವ
ಮಂಡ್ಯ: ವಿಜ್ಞಾನ-ತಂತ್ರಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕು. ವಿಜ್ಞಾನ ವಿವೇಕಿಗಳ ಕೈಯಲ್ಲಿ ಇದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ನಾಗಮಂಗಲದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ, ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12 ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವದಲ್ಲಿ ಆರ್.ಅಶೋಕ ಅವರು ಪಾಲ್ಗೊಂಡರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನಕ್ಕೂ ಮಠಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರುತ್ತದೆ. ಈ ಕಾರ್ಯಕ್ರಮದಲ್ಲಿ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಗಿದೆ. ಧರ್ಮ ಪಾಲಿಸುವವರ ಕೈಯಲ್ಲಿ ಧರ್ಮ ಇದ್ದರೆ ಮಾತ್ರ ಎಲ್ಲರಿಗೂ ಒಳಿತಾಗುತ್ತದೆ. ಅಧರ್ಮೀಯರ ಕೈಯಲ್ಲಿ ವಿಜ್ಞಾನ ಸಿಕ್ಕಿದರೆ ಅದರಿಂದ ದೊಡ್ಡ ಅನಾಹುತವಾಗುತ್ತದೆ. ಇಂದು ರೈಲು, ವಿಮಾನದ ಮೂಲಕ ವೇಗವಾಗಿ ದೂರದ ಸ್ಥಳಗಳನ್ನು ತಲುಪಬಹುದು. ಧರ್ಮ ಪಾಲನೆ ಮಾಡುವವರು ಇಂತಹ ವಿಜ್ಞಾನ-ತಂತ್ರಜ್ಞಾನದ ಸಾಧನ ಬಳಸಿದರೆ ಏನೂ ಆಗಲ್ಲ. ಅದರೆ ಅಧರ್ಮೀಯರು ಬಳಸಿದರೆ ಅಪಾಯವಾಗುತ್ತದೆ. ವಿಮಾನವನ್ನು ಬಳಸಿಯೇ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್...








