Monday, March 30

ರಾಜ್ಯ

ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ: ಪ್ರತಿಪಕ್ಷ ನಾಯಕ ಆರ್.ಅಶೋಕ

ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ: ಪ್ರತಿಪಕ್ಷ ನಾಯಕ ಆರ್.ಅಶೋಕ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಚನ್ನಪಟ್ಟಣ: ಇದು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ, ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ ಎಂದು ಪ್ರತಿಪಕ್ಷ ‌ನಾಯಕ ಆರ್.ಅಶೋಕ ಹೇಳಿದರು.ಚನ್ನಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ವ್ಯಕ್ತಿ ಹೆಸರಲ್ಲಿ ಚುನಾವಣೆ ನಡೆಯುತ್ತಿಲ್ಲ. ಇದು ಎನ್‌ಡಿಎ ಹಾಗೂ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ನಡೆಯುತ್ತಿರುವ ಚುನಾವಣೆ. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಜನರ ಅನುಕಂಪವಿದೆ. ಅವರು ಈ ಹಿಂದೆ ಸೋತಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಜನರು ಗುರುತಿಸಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಲೂಟಿ ಮಾಡುತ್ತಲೇ ಇದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದಲಿತರ ಹಣ ಕೊಳ್ಳೆ ಹೊಡೆಯಲಾಗಿದೆ ಎಂದು ದೂರಿದರು.ಗ್ಯಾರಂಟಿಗಳಿಂದಾಗಿ ಮಣ್ಣು ಎತ್ತಿ ಹಾಕಲು ‌ಕೂಡ ಹಣವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 16 ತಿಂಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹಧನ ನೀಡಿಲ್ಲ. ವಕ್ಫ್ ಬೋರ್ಡ್ ಮುಸ್ಲಿಮ...
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಮಳೆ ಸಾಧ್ಯತೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸಹಿತ ಕರಾವಳಿ ಮಾಲೆನಾಡಿನ ಜಿಲ್ಲೆಗಳಲ್ಲಿ ನವೆಂಬರ್​ 6ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ತುಮಕೂರು, ಚಾಮರಾಜನಗರ, ಮಂಡ್ಯ, ಮೈಸೂರು, ಬೆಳಗಾವಿ, ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲೂ ಮಳೆಯಾ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದ 17ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 6ರವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ....
ಹಾಸನನಾಂಬ ದೇವಿ ಜಾತ್ರೆಗೆ ತೆರೆ; ಲಕ್ಷಾಂತರ ಭಕ್ತರಿಗೆ ಒಲಿದ ದೇವಿ ದರ್ಶನ

ಹಾಸನನಾಂಬ ದೇವಿ ಜಾತ್ರೆಗೆ ತೆರೆ; ಲಕ್ಷಾಂತರ ಭಕ್ತರಿಗೆ ಒಲಿದ ದೇವಿ ದರ್ಶನ

ಆಧ್ಯಾತ್ಮ, ದೇಗುಲ ದರ್ಶನ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಹಾಸನ: ಹಾಸನದ ಅಧಿದೇವತೆ ಹಾಸನನಾಂಬ ದೇವಿ ಜಾತ್ರೆಗೆ ತೆರೆಬಿದ್ದಿದೆ. ಈ ಮೂಲಕ ವರ್ಷಕ್ಕೊಮ್ಮೆ ನಡೆಯುವ ದೇವಿದರ್ಶನವೂ ಅಂತ್ಯವಾಗಿದೆ. ಹಾಸನಾಂಬ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ಭಾನುವಾರ ಮುಚ್ಚಲಾಗುತ್ತದೆ. ​​ ಹಾಸನಾನೆಂಬ ದೇವಾಲಯದ ಗರ್ಭಗುಡಿಯನ್ನು ವರ್ಷಕ್ಕೊಮ್ಮೆ ತೆರೆಯಲಾಗುತ್ತದೆ. ಹಾಗಾಗಿ ವಾರ್ಷಿಕ ಜಾತ್ರೆವೈಭವ ಸಾಕ್ಷೀಕರಿಸಲು ಲಕ್ಷಾಂತರ ಜನರು ಹಾಸನಕ್ಕೆ ಆಗಮಿಸಿದ್ದರು. ಮಹೋತ್ಸವದ ಅಂತಿಮ ದಿನವಾದ ಇಂದು ಹಸನಾನೆಂಬ ದೇವಾಲಯದ ಆವರಣ ಭಕ್ತಸಾಗರದಿಂದ ತುಂಬಿತ್ತು.ಅಕ್ಟೋಬರ್​ 24 ರಂದು ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು. ಅಕ್ಟೋಬರ್​ 25 ರಿಂದ ನವೆಂಬರ್​ 03 ನಸುಕಿನ ಜಾವ 6 ಗಂಟೆಯವರೆಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕಳೆದ ೯ ದಿನಗಳಲ್ಲಿ ಸುಮಾರು 20 ಲಕ್ಷ ಭಕ್ತರು ದೇವಿ ದರ್ಶನ ಪಡೆದು ಪುನೀತರಾಗಿದ್ದಾರೆ. ಇದೇ ವೇಳೆ ಈ ಬಾರಿ ಹಾಸನಾಂಬ ದೇಗುಲಕ್ಕೆ 9 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಹರಿದು ಬಂದಿದೆ ಎಂದು ಮೂಲಗಳು ತಿಳಿಸಿವೆ....
‘ಶಕ್ತಿ’ ಫೈಟ್..! ಸಾಮ್ರಾಟ್ ಟ್ವೀಟ್‌ಗೆ ರಾಮಲಿಂಗಾ ರೆಡ್ಡಿ ಗರಂ; ಬಹಿರಂಗ ಚರ್ಚೆಗೆ ಪಂಥಾಹ್ವಾನ..

‘ಶಕ್ತಿ’ ಫೈಟ್..! ಸಾಮ್ರಾಟ್ ಟ್ವೀಟ್‌ಗೆ ರಾಮಲಿಂಗಾ ರೆಡ್ಡಿ ಗರಂ; ಬಹಿರಂಗ ಚರ್ಚೆಗೆ ಪಂಥಾಹ್ವಾನ..

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: 'ಶಕ್ತಿ' ಗ್ಯಾರೆಂಟಿ ಯೋಜನೆ ವಿಚಾರ ಮುಂದಿಟ್ಟು ಸರ್ಕಾರದ ವಿರುದ್ದ ಪ್ರತಿಪಕ್ಷ ಬಿಜೆಪಿ ನಾಯಕರು ಟೀಕಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಅದರಲ್ಲೂ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಸಾಮಾಜಿಕ ಜಾಲತಾಣ 'X'ನಲ್ಲಿ ಹಾಕಿರುವ ಪೋಸ್ಟ್ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಕೆಂಡಾ ಮಂಡಲರಾಗಿದ್ದಾರೆ.‌ ಅಶೋಕ್ ಹೇಳಿಕೆ ಬಗ್ಗೆ ಆಕ್ರೋಶ ಹೊರಹಾಕಿರುವ ಸಚಿವ ರಾಮಲಿಂಗಾ ರೆಡ್ಡಿ, ಟ್ವೀಟ್ ಬಿಟ್ಟು ಬಹಿರಂಗ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ದಾರೆ‌ಈ ಕುರಿತಂತೆ ರಾಮಲಿಂಗ ರೆಡ್ಡಿ ಸಾಮಾಜಿಕ ಜಾಲತಾಣ 'X'ನಲ್ಲಿ ಎದಿರೇಟು ಎಂಬಂತೆ ಹಾಕಿರುವ ಪೋಸ್ಟ್ ಗಮನಸೆಳೆದಿದೆ. 'ಶಕ್ತಿ' ಯೋಜನೆ ಕುರಿತಂತೆ ಅಂಕಿ ಅಂಶಗಳನ್ನು ಮುಂದಿಟ್ಟಿರುವ ಅವರು, ಮೊಣಚು ಮಾತುಗಳಿಂದ ತಿವಿದಿದ್ದಾರೆ.ತಮಗೆ ಹಾಗೂ ತಮ್ಮ ಪಕ್ಷದವರಿಗೆ ಟ್ಟೀಟ್ ಮಾಡುವುದನ್ನು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂಬುದನ್ನು ಜಗಜಾಹ್ಹೀರು ಮಾಡಿದ್ದೀರಿ ಎಂದು ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ರಾಮಲಿಂಗ ರೆಡ್ಡಿ, ಶಕ್ತಿ ಯೋಜನೆಯು ಅಕ್ಷರಶಃ ಸಾರಿಗೆ ನಿಗಮಗಳಿಗೆ ಶಕ್ತಿಯನ್ನು ತುಂಬಿದೆ ಎಂಬುದರಲ್ಲಿ ಎಳ್ಳಷ್...
‘ಶಕ್ತಿ’ ಮುನ್ನಡೆಸಲು ಕಷ್ಟವಾಗುತ್ತದೆ ಎಂದು ಯಾವ ಮಾಧ್ಯಮಗಳಿಗೂ ಹೇಳಿಕೆ ನೀಡಿಲ್ಲ; ರಾಮಲಿಂಗ ರೆಡ್ಡಿ

‘ಶಕ್ತಿ’ ಮುನ್ನಡೆಸಲು ಕಷ್ಟವಾಗುತ್ತದೆ ಎಂದು ಯಾವ ಮಾಧ್ಯಮಗಳಿಗೂ ಹೇಳಿಕೆ ನೀಡಿಲ್ಲ; ರಾಮಲಿಂಗ ರೆಡ್ಡಿ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಶಕ್ತಿ ಯೋಜನೆ ಮುನ್ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಕುರಿತಂತೆ ತಾವು ಹೇಳಿಕೆಯನ್ನೇ ನೀಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ರಾಮಲಿಂಗ ರೆಡ್ಡಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.‌ 'ನಾನು ಯಾವುದೇ ಮಾಧ್ಯಮದವರಿಗೂ ಶಕ್ತಿ ಯೋಜನೆ ನಡೆಸಲು ಸಾರಿಗೆ ಇಲಾಖೆಗೆ ಸ್ವಲ್ಪ ಕಷ್ಟವಾಗುತ್ತಿದೆ ಎಂಬ ಹೇಳಿಕೆಯನ್ನೇ ನೀಡಿಲ್ಲ. ಈ ರೀತಿಯ ಹೇಳಿಕೆಗಳು ವಿನಾ ಕಾರಣ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿರುವ ಶಕ್ತಿ ಯೋಜನೆಯ ಬಗ್ಗೆ ಗೊಂದಲ ಸೃಷ್ಟಿಸುವ ಹುನ್ನಾರವಾಗಿದೆ. ನಾನು ಮಾತನಾಡಿಯೇ ಇಲ್ಲದ ಹೇಳಿಕೆಗಳನ್ನು ಈ ರೀತಿ ಪ್ರಕಟಿಸಿರುವುದು ಸರಿಯಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ತಾವು ಯಾವುದೇ ಮಾಧ್ಯಮದವರು ಈ ಬಗ್ಗೆ ಸಂರ್ಪಕಿಸಿಯೇ ಇಲ್ಲ ನಾನು ಯಾರೊಂದಿಗೂ ಮಾತನಾಡಿಯೇ ಇಲ್ಲದಿರುವುದರಿಂದ ಈ ರೀತಿಯ ಹೇಳಿಕೆಗಳನ್ನು ಮಾಧ್ಯಮದವರು ಪ್ರಕಟಿಸುವ ಮುನ್ನ ನನ್ನನ್ನು ಖುದ್ದು ಸಂರ್ಪಕಿಸಬೇಕೆಂದು ಅವರು ಸಾಮಾಜಿಕ ಜಾಲತಾಣ 'X'ನಲ್ಲಿ ಪೋಸ್ಟ್ ...
ಮಾಡು ಇಲ್ಲವೇ ಮಡಿ..! ಪಂಚಮಸಾಲಿ ಮೀಸಲಾತಿಗಾಗಿ ಡಿ.9ರಂದು ಸುವರ್ಣ ಸೌಧಕ್ಕೆ ಮುತ್ತಿಗೆ

ಮಾಡು ಇಲ್ಲವೇ ಮಡಿ..! ಪಂಚಮಸಾಲಿ ಮೀಸಲಾತಿಗಾಗಿ ಡಿ.9ರಂದು ಸುವರ್ಣ ಸೌಧಕ್ಕೆ ಮುತ್ತಿಗೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿಸೆಂಬರ್ 9ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ.ಡಿಸೆಂಬರ್ 9 ಕ್ಕೆ ಸುವರ್ಣ ವಿಧಾನ ಸೌಧಕ್ಕೆ ಲಕ್ಷಾಂತರ ಪಂಚಮಸಾಲಿಗಳಿಂದ ಪಂಚಮಸಾಲಿ ವಕೀಲರ ನೇತೃತ್ವದಲ್ಲಿ ಹಾಗೂ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುವುದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.ಪಂಚಮಸಾಲಿ 2a ಹಾಗೂ ಲಿಂಗಾಯತ ಉಪಸಮಾಜಗಳ OBC ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡದ ಕಾರಣ ಈ ಹೋರಾಟ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.ಬೆಳಗಾವಿ ಸುವರ್ಣ ವಿಧಾನಸೌಧ ಅಧಿವೇಶನಕ್ಕೆ ಮುಂಚಿತವಾಗಿ ಪಂಚಮಸಾಲಿ ಮೀಸಲಾತಿ ಘೋಷಿಸಬೇಕೆಂದು ಹಕ್ಕೊತ್ತಾಯಿಸಿ ಡಿಸೆಂಬರ್ 9ರಂದು ಸೋಮವಾರ ಬೆಳಿಗ್ಗೆ 10 ಕ್ಕೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಸಲಾಗುತ್ತದೆ. ವಕೀಲರ ನೇತೃತ್ವದಲ್ಲಿ ಪಂಚಮಸಾಲಿ-ಮಲೆಗೌಡ-ಗೌಡ ದೀಕ್ಷಾ ಲಿಂಗಾಯತರಿಂದ ಸುವರ್ಣ ವಿಧಾನ...
ದೊಡ್ಡಬಳ್ಳಾಪುರ:  ಹೊಂಗೆ ಮರ ಹತ್ತಿ ಕುಳಿತ ಚಿರತೆ ಮರಿ; ಕಾರ್ಯಾಚರಣೆಯಲ್ಲಿ ಸೆರೆ

ದೊಡ್ಡಬಳ್ಳಾಪುರ: ಹೊಂಗೆ ಮರ ಹತ್ತಿ ಕುಳಿತ ಚಿರತೆ ಮರಿ; ಕಾರ್ಯಾಚರಣೆಯಲ್ಲಿ ಸೆರೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಲಕ್ಕಸಂದ್ರ ಕ್ರಾಸ್ ಬಳಿಯಲ್ಲಿದ್ದ ಹೊಂಗೆ ಮರದಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡು ಆತಂಕಕ್ಕೀಡು ಮಾಡಿತ್ತು.ಸುದೀರ್ಘ ಕಾರ್ಯಾಚರಣೆ ನಂತರ ಚಿರತೆ ಮರಿಯನ್ನು ಸೆರೆಹಿಡಿಯಲಾಗಿದೆ. ಶುಕ್ರವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಮರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ರಾತ್ರಿ ಸುಮಾರು 10:30ರಲ್ಲಿ ಚಿರತೆ ಬಲೆಗೆ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಚಿರತೆ ಪ್ರತ್ಯಕ್ಷವಾದ ಸುದ್ದಿ ತಿಳಿದು ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಚಿರತೆ ಮರಿ ಕೂಡಾ ಭಯದಿಂದಾಗಿ ಮರದಿಂದ ಇಳಿಯದೇ ಅಲ್ಲೇ ಕುಳಿತಿತ್ತು.ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಹಾಗೂ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಚಿರತೆ ಮರಿಯನ್ನು ಸೆರೆಹಿಡಿದಿದ್ದಾರೆ ಎನ್ನಲಾಗಿದೆ....
KSRTC: ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಹುಮ್ನಾಬಾದ್‌‌ನಲ್ಲಿ ನ.7ರಿಂದ ಚಾಲನಾ ವೃತ್ತಿ ಪರೀಕ್ಷೆಯ ಅಂತಿಮ ಅವಕಾಶ

KSRTC: ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಹುಮ್ನಾಬಾದ್‌‌ನಲ್ಲಿ ನ.7ರಿಂದ ಚಾಲನಾ ವೃತ್ತಿ ಪರೀಕ್ಷೆಯ ಅಂತಿಮ ಅವಕಾಶ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿ ಹುಮ್ನಾಬಾದ್‌ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. 18-09-2024ರಿಂದ ಏರ್ಪಡಿಸಲಾಗಿದ್ದ ಪರೀಕ್ಷೆಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಲು 07-11-2024 ರಿಂದ 11-11-2024 ರವರೆಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ನಿಗಮ ನಡೆಸಲಿದೆ.ಈ ಸಂಬಂಧ ನಿಗಮ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ಹಂಚಿಕೊಂಡಿದೆ.ಚಾಲಕ-ಕಂ-ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿ ಹುಮ್ನಾಬಾದ್‌ ತರಬೇತಿ ಕೇಂದ್ರದಲ್ಲಿ ಚಾಲನಾ ವೃತ್ತಿ ಪರೀಕ್ಷೆ ಪಡೆಯಲು ಆಯ್ಕೆ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗೆ ಚಾಲನಾ ವೃತ್ತಿ ಪರೀಕ್ಷೆಯನ್ನು 18-09-2024 ರಿಂದ ನಡೆಸಲಾಗುತ್ತದೆ. ಈ ಸಂಬಂಧ ಎಲ್ಲಾ ಅಭ್ಯರ್ಥಿಗಳಿಗೆ ಕರೆಪತ್ರ ಡೌನ್-ಲೋಡ್‌ ಮಾಡಿಕೊಂಡು ನಿಗದಿತ ದಿನಾಂಕದಂದು ಹಾಜರಾಗಲು ಎಸ್‌. ಎಂ.ಎಸ್‌ ಸಂದೇಶ / ಪತ್ರಿಕಾ ಪ್ರಕಟಣೆ ಹಾಗೂ ನಿಗಮದ ಅಧಿಕೃತ ವೆಬ್-ಸೈಟ್‌ನಲ್ಲಿ ಪ್ರಕಟಣೆ ನೀಡುವ ಮೂಲಕ ಮಾಹಿತಿ ನೀಡಲಾಗಿತ್ತು. ಆದರೆ, ಕೆಲವೊಂದು ಅಭ...
ಬೆಂಗಳೂರಿನ BGS ಆಸ್ಪತ್ರೆಗೆ ನಟ ದರ್ಶನ್ ದಾಖಲು

ಬೆಂಗಳೂರಿನ BGS ಆಸ್ಪತ್ರೆಗೆ ನಟ ದರ್ಶನ್ ದಾಖಲು

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಬೆನ್ನು ನೋವಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್​ ಗ್ಲೋಬಲ್ ಆಸ್ಪತ್ರೆಗೆ ದರ್ಶನ್ ಅವರು ಶನಿವಾರ ದಾಖಲಾಗಿದ್ದಾರೆ.ದರ್ಶನ್ ಆಗಮನ ಹಿನಯ ಆಸ್ಪತ್ರೆಗೆ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ಕಾರಣದಿಂದಾಗಿ ಆಸ್ಪತ್ರೆ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ....
‘ವಕ್ಫ್ ರಾಷ್ಟ್ರೀಕರಣವಾಗಲಿ’; ಸಂಚಲನ ಸೃಷ್ಟಿಸಿದ ಯತ್ನಾಳ್ ಪತ್ರ..!

‘ವಕ್ಫ್ ರಾಷ್ಟ್ರೀಕರಣವಾಗಲಿ’; ಸಂಚಲನ ಸೃಷ್ಟಿಸಿದ ಯತ್ನಾಳ್ ಪತ್ರ..!

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರೈತರ ಜಮೀನು ವಕ್ಫ್ ಆಸ್ತಿ ಎಂಬಂತೆ ಬಿಂಬಿತವಾಗುತ್ತಿರುವ ಬೆಳವಣಿಗೆ ಬಗ್ಗೆ ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರಧಾನಿಗೆ ಬರೆದಿರುವ ಪತ್ರ ಗಮನಸೆಳೆದಿದೆ.ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ."ದೇಶದಾದ್ಯಂತ ರೈತರ, ದೇವಸ್ಥಾನಗಳ, ಟ್ರಸ್ಟ್‌ಗಳ ಮತ್ತು ಮಠಗಳ ಜಮೀನುಗಳ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸುತ್ತಿರುವುದು ವಿಷಾದದ ಸಂಗತಿ. ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು" -ಯತ್ನಾಳ್ ಆಗ್ರಹ.Karnataka BJP MLA Basanagouda R Patil writes a letter to PM Narendra Modi "I humbly request your esteemed office to consider nationalizing Waqf properties to ensure fair administration and to prevent further injustices. The Waqf Bo...