Sunday, December 7

ರಾಜ್ಯ

KSRTCಯತ್ತ ಪ್ರಶಸ್ತಿಗಳ ಮೆರವಣಿಗೆ; ಮತ್ತೊಮ್ಮೆ 10ಕ್ಕೂ ಹೆಚ್ಚು ಪುರಸ್ಕಾರಗಳು

KSRTCಯತ್ತ ಪ್ರಶಸ್ತಿಗಳ ಮೆರವಣಿಗೆ; ಮತ್ತೊಮ್ಮೆ 10ಕ್ಕೂ ಹೆಚ್ಚು ಪುರಸ್ಕಾರಗಳು

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಷ್ಟ್ರೀಯ ಮಟ್ಟದ 8 ವೀಡಿಯಾ - ViDEA, 5 ಎಮ್ಕ್ಯೂಬ್ - mCUBE ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿಗಳನ್ನು ಪಡೆದು ಗಮನಸೆಳೆದಿದೆ. ವೀಡಿಯಾ ಪ್ರಶಸ್ತಿಗಳು:  ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಶ್ವಮೇಧ ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್) ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಶ್ವಮೇಧ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್. ಅಂಬಾರಿ ಉತ್ಸವದ ಬ್ರಾಂಡಿಂಗ್ ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟ...
ಕಿತ್ತೂರು: ಬಿಜೆಪಿ ನಾಯಕನ ಅಪಹರಣ

ಕಿತ್ತೂರು: ಬಿಜೆಪಿ ನಾಯಕನ ಅಪಹರಣ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಳಗಾವಿ: ರಾಜಕೀಯ ಬೆಳವಣಿಗೆಗಳ ನಡುವೆಯೇ ಬಿಜೆಪಿ ನಾಯಕರೊಬ್ಬರ ಅಪಹರಣವಾಗಿದೆ. ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಅಪಹರಣ ಮಾಡಲಾಗಿದೆವೆಂಬ ಆರೋಪ ಕೇಳಿಬಂದಿದೆ. ಕಿತ್ತೂರು ಪಟ್ಟಣ ಪಂಚಾಯತಿ ಚುನಾವಣೆ ಸೆಪ್ಟಂಬರ್ 3ಕ್ಕೆ ನಿಗದಿಯಾಗಿದ್ದು, ಬಿಜೆಪಿ 9, ಕಾಂಗ್ರೆಸ್ ಹಾಗೂ ಪಕ್ಷೇತರ ಸೇರಿ 9 ಸದಸ್ಯರ ಸಂಖ್ಯಾಬಲ ಇದೆ. ಹಾಗಾಗಿ ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ಸದಸ್ಯ ನಾಗರಾಜ್ ಅಸುಂಡಿ ಅವರನ್ನು ದುಷ್ಕರ್ಮಿಗಳು ಗುರುವಾರ ರಾತ್ರಿ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇನ್ನೊಂದೆಡೆ, ಪಟ್ಟಣದ ಚೌಕಿಮಠದ ಬಳಿ ನಿಂತಿದ್ದ ನಾಗರಾಜನನ್ನು ಕೆಲವರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಅವರ ತಂದೆ ಬಸವರಾಜ್ ಅವರು ಕಿತ್ತೂರು ಠಾಣೆಗೆ ದೂರು ನೀಡಿದ್ದಾರೆ....
BMTC ಸಂಸ್ಥೆಗೆ ಮತ್ತೊಂದು ರಾಷ್ಟ್ರಮಟ್ಟದ ‘ಸ್ಕಾಚ್ ಪ್ರಶಸ್ತಿ’ಯ ಹಿರಿಮೆ

BMTC ಸಂಸ್ಥೆಗೆ ಮತ್ತೊಂದು ರಾಷ್ಟ್ರಮಟ್ಟದ ‘ಸ್ಕಾಚ್ ಪ್ರಶಸ್ತಿ’ಯ ಹಿರಿಮೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂ.ಮ.ಸಾ.ಸಂಸ್ಥೆಯು ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ QR ಕೋಡ್ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಅತ್ಯಂತ ಸುಲಭವಾಗಿ ಮೆಟ್ರೊ ಫೀಡರ್ಗಳ ಸೇವೆಗಳ ಮಾಹಿತಿಯನ್ನು ಪಡೆಯುವ ಅನುಕೂಲತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಹೆಜ್ಜೆಯಾಗಿದೆ. ಮೆಟ್ರೊ ಫೀಡರ್ನ QR ಕೋಡ್ಗಳ ಬಳಕೆಯೊಂದಿಗೆ, ಸಾರ್ವಜನಿಕ ಪ್ರಯಾಣಿಕರಿಗೆ ಮೆಟ್ರೊ ನಿಲ್ದಾಣವಾರು ಆಚರಣೆಯಾಗುವ ಮೆಟ್ರೊ ಫೀಡರ್ಗಳ ಸೇವೆಗಳ ವೇಳಾಪಟ್ಟಿ, ಮಾರ್ಗ, ಬಸ್ಸುಗಳ ನೈಜ-ಸಮಯ (Live tracking) ಮಾಹಿತಿ ದೊರೆಯುತ್ತದೆ. ಈ ವೈಶಿಷ್ಟ್ಯದಿಂದ ಬಳಕೆದಾರರು ಪ್ರಯಾಣವನ್ನು ಪರಿಣಾಮಕಾರಿಯಾಗಿ ಯೋಜಿಸಿಕೊಂಡು, ತಡೆರಹಿತ ಮತ್ತು ಆರಾಮದಾಯಕವಾಗಿ ತಮ್ಮ ಪ್ರಯಾಣದ ಅನುಭವವನ್ನು ಪಡೆಯಬಹುದಾಗಿರುತ್ತದೆ. ದಿನಾಂಕ:28.08.2024 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬೆಂ.ಮ.ಸಾ.ಸಂಸ್ಥೆಗೆ ಮೆಟ್ರೊ ಫೀಡರ್‌ ಸೇವೆಗಳು (Smart City) ನಾಮನಿರ್ದೇಶನಕ್ಕೆ ಪ್ರತಿಷ್ಟಿತ ರಾಷ್ಟ್ರೀಯ ಸ್ಕಾಚ್ ಸಂಸ್ಥೆಯಿಂದ ಆರ್ಡರ್ ಆಫ್ ಮೇರಿಟ್ ಪ್ರಶಸ್ತಿ ಲಭಿಸಿದೆ. ಸ್ಕೋಚ್ ಗ್ರೂಪ್ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ, ವಿನೂತನ ಉಪಕ್ರಮಕ್ಕಾಗಿ...
BMTC: ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ನೋಡಲು ಅಂತರ್ಜಾಲ ಸೌಲಭ್ಯ; ಸಚಿವ ರಾಮಲಿಂಗರೆಡ್ಡಿ ಚಾಲನೆ

BMTC: ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ನೋಡಲು ಅಂತರ್ಜಾಲ ಸೌಲಭ್ಯ; ಸಚಿವ ರಾಮಲಿಂಗರೆಡ್ಡಿ ಚಾಲನೆ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯ ಗಮನಸೆಳೆದಿದೆ‌   ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸುಮಾರು 27,000 ಅಧಿಕಾರಿ /ನೌಕಕರು ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ಅಧಿಕಾರಿ/ನೌಕರರ ಭವಿಷ್ಯನಿದಿ/ಐಚ್ಛಿಕ ಭವಿಷ್ಯನಿಧಿ ಮಾಹೆಯಾನ ವಂತಿಗೆಗಳ ಮಾಹಿತಿಯನ್ನು ಈ ಹಿಂದೆ ಮುದ್ರಿತ ಚೀಟಗಳ ರೂಪದಲ್ಲಿ ಮುದ್ರಿಸಿ ಪ್ರತಿ ನೌಕರರಿಗೆ ವಾರ್ಷಿಕವಾರು ವಿತರಿಸಲಾಗುತ್ತಿತ್ತು. 2022-2023 ನೇ ಸಾಲಿನಿಂದ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ಬಳಸಿ ಆಂತರಿಕವಾಗಿಯೇ ಗಣಕ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ems.mybmtc.com/pf ತಂತ್ರಜ್ಞಾನದಲ್ಲಿ ಆನ್ಲೈನ್ ನಲ್ಲಿಯೇ ಪ್ರತಿ ನೌಕರನು ತನ್ನ ಮೊಬೈಲ್ನಲ್ಲಿಯೇ ಆತನ ಪಿ.ಎಫ್ ಸಂಖ್ಯೆಯನ್ನ ನಮೂದಿಸಿ ಆತನ ಖಾತೆಯಲ್ಲಿರುವ ಪಿ.ಎಫ್ ಮೊತ್ತ, ವಿ.ಪಿ.ಎಫ್ ಮೊತ್ತ, ಬಡ್ಡಿ ಮೊತ್ತ, ಮುಂಗಡಗಳ ವಿವರಗಳು (ಪ್ರಾರಂಭಿಕ/ಅಂತಿಮ ಶಿಲ್ಲುಗಳೊಂದಿಗೆ) ವೀಕ್ಷಿಸಲು ಅವಕಾಶ ಇದೀಗ ಕಲ್ಪಿಸಲಾಗ...
ಅಕ್ರಮ ಆಸ್ತಿ ಕೇಸ್; ಡಿಕೆಶಿಗೆ ರಿಲೀಫ್

ಅಕ್ರಮ ಆಸ್ತಿ ಕೇಸ್; ಡಿಕೆಶಿಗೆ ರಿಲೀಫ್

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಸಿಬಿಐ ಸಲ್ಲಿಸಿದ್ದ ಅರ್ಜಿ ಕುರಿತಂತೆ ಹೈಕೋರ್ಟ್ ಇಂದು ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ- ಸಿಬಿಐ ನಡುವಿನ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥ ಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಸಿಬಿಐ ಅರ್ಜಿಯನ್ನು ವಿಲೇವಾರಿ ಮಾಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುವಂತೆ ಕೋರ್ಟ್ ಸಲಹೆ ಮುಂದಿಟ್ಟಿದೆ....
ಹಸ್ತ ಕಾರ್ಯಾಚರಣೆಗೆ ಸೆಡ್ಡು ಹೊಡೆದ ಜೆಡಿಎಸ್; ರಿವರ್ಸ್ ಆಪರೇಷನ್ ಮೂಲಕ ಮಂಡ್ಯ ನಗರಸಭೆಯಲ್ಲಿ ಹೆಚ್ಡಿಕೆ ಆಪ್ತನಿಗೆ ಜಯ

ಹಸ್ತ ಕಾರ್ಯಾಚರಣೆಗೆ ಸೆಡ್ಡು ಹೊಡೆದ ಜೆಡಿಎಸ್; ರಿವರ್ಸ್ ಆಪರೇಷನ್ ಮೂಲಕ ಮಂಡ್ಯ ನಗರಸಭೆಯಲ್ಲಿ ಹೆಚ್ಡಿಕೆ ಆಪ್ತನಿಗೆ ಜಯ

ಪ್ರಮುಖ ಸುದ್ದಿ, ರಾಜ್ಯ
ಮಂಡ್ಯ: ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ ನಾಗೇಶ್ ಅವರು ಆಯ್ಕೆಯಾಗಿದ್ದಾರೆ. ಸಚಿವ ಚಲುವರಾಯ ಸ್ವಾಮಿ ಹಾಗೂ ಕೇಂದ್ರ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಉ ಅಖಾಡವಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ನಾಗೇಶ್ ಆಯ್ಕೆಯಾಗಿದ್ದಾರೆ. ಆಪರೇಷನ್ ಹಸ್ತ ಮೂಲಕ ಜೆಡಿಎಸ್‌ನ ಇಬ್ಬರನ್ನು ಕಾಂಗ್ರೆಸ್ ಪಕ್ಷ ಗೆಲುವಿನ ನಿರೀಕ್ಷೆಯಲ್ಲಿತ್ತು. ಇದಕ್ಕೆ ಕಾಂಗ್ರೆಸ್ಸಿಗೆ ಸೆಡ್ಡು ಹೊಡೆದ ಜೆಡಿಎಸ್ ನಾಯಕ ಕುಮಾರಸ್ವಾಮಿ, ರಿವರ್ಸ್ ಆಪರೇಷನ್ ಮಾಡಿ, ಮಂಡ್ಯ ನಗರಸಭಾ ಚುನಾವಣೆಯಲ್ಲಿ ಫಲಿತಾಂಶವನ್ನು ತಮ್ಮದಾಗೊಸಿಕೊಂಡಿದ್ದಾರೆ....
ದ್ವೇಷ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರ, ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ: ಆರ್‌.ಅಶೋಕ

ದ್ವೇಷ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರ, ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ: ಆರ್‌.ಅಶೋಕ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕಲಬುರ್ಗಿ ಜಿಲ್ಲೆಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ಮರು ಆರಂಭಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಯಲ್ಲಿ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಲ್ಲಿನ ಅಧಿಕಾರಿಗಳು ಸ್ಥಳಕ್ಕೆ ಬಾರದೆ ವಿಧಾನಸೌಧದ ಕಡೆಗೆ ಮುಖ ಮಾಡಿಕೊಂಡು ಕೂತಿದ್ದಾರೆ. ಒಂದು ಕಡೆ ಮುಡಾ ಹಗರಣ, ಮತ್ತೊಂದು ಕಡೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಇನ್ನೊಂದು ಖರ್ಗೆ ಹಗರಣ ನಡೆದಿದೆ. ಇಂತಹ ಸ್ಥಿತಿಯಲ್ಲಿ ಸ್ವಾಯತ್ತ ಸಂಸ್ಥೆಯ ಮೇಲೆ ಈ ಕೆಟ್ಟ ಸರ್ಕಾರ ಒತ್ತಡ ಹೇರಿದೆ. ಹಿಂದುಳಿದ ಪ್ರದೇಶವಾದ ಕಲಬುರ್ಗಿಯಲ್ಲಿ ಮುಳುಗಿಹೋಗಿದ್ದ ಸಕ್ಕರೆ ಕಾರ್ಖಾನೆಯನ್ನು ಶಾಸಕ ಯತ್ನಾಳ್‌ ಅಭಿವೃದ್ಧಿಪಡಿಸಿದ್ದಾರೆ. ಈ ಕಾರ್ಖಾನೆಯಿಂದ ಎರಡು ಸಾವಿರ ಜನರಿಗೆ ಉದ್ಯೋಗ ದೊರೆತಿದೆ, ಸಾವಿರಾರು ರೈತರಿಗೆ ಲಾಭವಾಗುತ್ತಿದೆ. ಆದರೆ ಕಾಂಗ್ರೆಸ್‌ ದ್ವೇಷದ ರಾಜಕಾರಣ ಮಾಡುತ್ತಿದೆ. *ಹೈಕೋರ್ಟ್‌...
ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್, ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಂ ಶೀಘ್ರ ಜಾರಿ; ಸಾರಿಗೆ ಇಲಾಖೆಯಲ್ಲಿ ತ್ವರಿತ ಕ್ರಮ

ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್, ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಂ ಶೀಘ್ರ ಜಾರಿ; ಸಾರಿಗೆ ಇಲಾಖೆಯಲ್ಲಿ ತ್ವರಿತ ಕ್ರಮ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಕ್ರಾಂತಿಕಾರಿ ಕ್ರಮಗಳಿಗೆ ಮುನ್ನುಡಿ ಬರೆದಿದೆ. ಆಟೋಮೇಟೆಡ್ ಟೆಸ್ಟಿಂಗ್ ಸ್ಟೇಷನ್‌ಗಳು ಹೊಸ ಆಯಾಮ ನೀಡಲಿದ್ದು, ಜೊತೆಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಸಿಸ್ಟಂ ಶೀಘ್ರ ಜಾರಿಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರಿಂದು (28.08.2024) ಸಾರಿಗೆ ಆಯುಕ್ತರ ಕಛೇರಿಯಲ್ಲಿ, ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ, 2024-25ನೇ ಸಾಲಿನ ರಾಜಸ್ವ ಸಂಗ್ರಹಣೆ ಕುರಿತಂತೆ ಮಾಹಿತಿ ಪಡೆದ ಸಚಿವರು ರಾಜಸ್ವ ಸಂಗ್ರಹಣೆಯ ಗುರಿಯನ್ನು ಶೇಕಡ 100 ರಷ್ಟು ಸಾಧಿಸಲು ಪ್ರವರ್ತನ ಚಟುವಟಿಕೆಗಳೂ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಂಡು ಕಾರ್ಯನಿರ್ವಹಿಸಲು ಸೂಚಿಸಿದರು. 2024-25ನೇ ಸಾಲಿನ ರಾಜಸ್ವ ಸಂಗ್ರಹಣೆ ವಿವರ: ವಾರ್ಷಿಕ ರಾಜಸ್ವ ಗುರಿ- ರೂ.13000‌ಕೋಟಿಜುಲೈ 2024ರ ಅಂತ್ಯಕ್ಕೆ ಸಂಗ್ರಹಿಸಬೇಕಾದ ರಾಜಸ್ವ- ರೂ 4325 ಕೋಟಿ. ಜುಲೈ 2024ರ ಅಂತ್ಯಕ್ಕೆ ಸಂಗ್ರಹಿಸಿರುವ ರಾಜಸ್ವ- 3534 ಶೇಕಡಾವಾರು-82% ಸಾರಿಗೆ ಇಲಾಖೆಗೆ ಹೊಸದಾ...
ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಗಳಿಂದ ಅನ್ನದಾತರ ನಾಶ; ಕುರುಬೂರು ಆಕ್ರೋಶ

ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆಗಳಿಂದ ಅನ್ನದಾತರ ನಾಶ; ಕುರುಬೂರು ಆಕ್ರೋಶ

ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಕಾರೈಕಲ್: ಕೇಂದ್ರ ಸರ್ಕಾರಕ್ಕೆ ದುರ್ಬಲ ಅಧಿಕಾರ ಸಿಕ್ಕಿದರು ರೈತ ವಿರೋಧಿ ಧೋರಣೆಗಳನ್ನೇ ಮುಂದುವರಿಸುತ್ತಿದೆ. ಇದೇ ರೀತಿ ರೈತ ವಿರೋಧಿ ಧೋರಣೆ ಮುಂದುವರೆದರೆ ಅಧಿಕಾರದಿಂದಲೇ ದೂರ ಹಾಕುವ ಸನ್ನಿವೇಶ ನಿರ್ಮಾಣ ಮಾಡಬೇಕಾಗುತ್ತದೆ ಎಂಬುದನ್ನು ಅರಿಯಬೇಕು ಎಂದು ರಾಷ್ಟ್ರೀಯ ಕಿಸಾನ್ ಮೋರ್ಚಾದ ಸಂಚಾಲಕರೂ ಆದ. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್  ಆರೋಪಿಸಿದ್ದಾರೆ. ಪಾಂಡಿಚೇರಿ ಕಾರಯ್ಕಲ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಕೃಷಿ ಭೂಮಿ. ಸಾಲ ವಸುಲಾತಿ ನೆಪದಲ್ಲಿ ಭೂಮಿ ಕಿತ್ತುಕೊಳ್ಳುವ ಸರ್ಪ್ರೈಸಿ ಕಾಯ್ದೆ ಜಾರಿಗೆ ತಂದು. ಸಾಲ ಕಟ್ಟದ ರೈತರ ಜಮೀನುಗಳನ್ನು ಬ್ಯಾಂಕುಗಳು ವಶ ಪಡಿಸಿಕೊಳ್ಳುತ್ತಿವೆ ಇಂತಹ ರೈತ ದ್ರೋಹಿ ಕಾನೂನುಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ ಎಂದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿ. ರೈತರ ಸಂಪೂರ್ಣ ಸಾಲಮನ್ನಾ. ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ. ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ...
ಫ್ರಾನ್ಸ್‌ನ ‘ವಿಶ್ವ ಕೌಶಲ್ಯ ಸ್ಪರ್ಧೆ’ಯಲ್ಲಿ ಕರ್ನಾಟಕದ 9 ಮಂದಿ ವಿದ್ಯಾರ್ಥಿಗಳ ಕಮಾಲ್

ಫ್ರಾನ್ಸ್‌ನ ‘ವಿಶ್ವ ಕೌಶಲ್ಯ ಸ್ಪರ್ಧೆ’ಯಲ್ಲಿ ಕರ್ನಾಟಕದ 9 ಮಂದಿ ವಿದ್ಯಾರ್ಥಿಗಳ ಕಮಾಲ್

ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಫ್ರಾನ್ಸ್ ನ ಲಿಯೋನ್‌ನಲ್ಲಿ ನಡೆಯಲಿರುವ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಕೌಶಲಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸಲು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿ (ಕೆ.ಎಸ್.ಡಿ.ಸಿ) ರಾಜ್ಯದ 9 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದೆ. *ಫ್ರಾನ್ಸ್ ತೆರಳುವ ಮುನ್ನ ಭೇಟಿಯಾದ ವಿದ್ಯಾರ್ಥಿಗಳಿಗೆ ವೈದ್ಯ ಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಬುಧವಾರ ಶುಭಕೋರಿದರು. 2024 ಸೆಪ್ಟೆಂಬರ್ 10 ರಿಂದ 15ರವರೆಗೆ ಫ್ರಾನ್ಸ್ ನ ಲಿಯೋನ್ ನಲ್ಲಿ ನಡೆಯುವ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ವೃತ್ತಿಪರ ಕೌಶಲಗಳ “ಒಲಂಪಿಕ್ಸ್” ಎಂದೇ ಬಣ್ಣಿಸಲಾಗುತ್ತದೆ. 1 ವಿಭಿನ್ನ ಕೌಶಲ್ಯ ಸ್ಪರ್ಧೆಗಳು ನಡೆಯುವ ವಿಶ್ವದ ಅತಿ ದೊಡ್ದ ಕಾರ್ಯಕ್ರಮವಾಗಿದೆ. 22 ವರ್ಷದ ಒಳಗಿನ ಸುಮಾರು 1000 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು, ತಮ್ಮ ವೃತ್ತಿಪರ ಕೌಶಲ್ಯ ಪ್ರದರ್ಶಿಸಲಿದ್ದಾರೆ. ಕರ್ನಾಟಕ ಕೌಶಲ್ಯ ಅಭಿವೃದ್ಧಿ ಮಂಡಳಿಯು ಕರ್ನಾಟಕ ಸರ್ಕಾರದ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ಕರ್ನಾಟಕದ ಕೌಶಲಪೂರ್ಣ ಅಭ್ಯರ...