
ದೇವಾಲಯಗಳಿಂದ ಅಕ್ರಮವಾಗಿ ಹಣ ವಸೂಲಿ ಆರೋಪ; ಅಧಿಕಾರಿಗಳ ಅಮಾನತು
ಬೆಂಗಳೂರು: ಸಾಮಾಜಿಕ ಜಾಲತಾಗಳಲ್ಲಿ ಹಂಚಿಗೊಂಡ ವೀಡಿಯೋದಲ್ಲಿ, ಕೆಲ ಇಲಾಖಾ ಅಧಿಕಾರಿಗಳು ದೇವಾಲಯಗಳಿಂದ ಅಕ್ರಮವಾಗಿ ಹಣ ವಸೂಲಿ ಮಾಡಿರುವ ಸಂಬಂದ ಬಂದ ದೂರಿನ ಹಿನ್ನೆಲೆಯಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ಸಂಭಾಷಣೆಯಲ್ಲಿ, ಬೆಂಗಳೂರು ಜಯನಗರದ ವಿನಾಯಕ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯ ಹೆಸರು ಪ್ರಸ್ತಾಪವಾಗಿದೆ. ಅವರು ಸೋಮಶೇಖರ್ ಅವರ ಸೂಚನೆ ಮೇರೆಗೆ, ದೇವಾಲಯದಿಂದ 25,000 ರೂ.ಗಳನ್ನು ದೇವಾಲಯದ ಸ್ವಚ್ಛತೆ ಕಾರ್ಯ, ಬೀಗದ ಕೀಲಿ ರಿಪೇರಿ ಮತ್ತು ಹಬ್ಬದ ಖರೀದಿಗಳ ಹೆಸರಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ, ಟಿ.ಎನ್. ಮಂಜುಳ ಮತ್ತು ಗಿರೀಶ್ ರವರನ್ನು ಮುಜರಾಯಿ ಇಲಾಖೆ ಆಯುಕ್ತ ಡಾ.ವೆಂಕಟೇಶ್ ಅವರು ಮುಜರಾಯಿ ಸಚಿವರ ನಿರ್ದೇಶನದಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997 ಮತ್ತು 2002ರ ನಿಯಮಗಳು 01.05.2003ರಿಂದ ಜಾರಿಗೆ ಬಂದಿದ್ದು, ಅಧಿಸೂಚಿತ ...





