‘ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಮತ್ತೊಬ್ಬ ಅಧಿಕಾರಿ ಬಲಿ’; ಬಿಜೆಪಿ ಆಕ್ರೋಶ..
'ಕಾಂಗ್ರೆಸ್ ಸರ್ಕಾರದ ಧನದಾಹಕ್ಕೆ ಮತ್ತೊಬ್ಬ ಅಧಿಕಾರಿ ಬಲಿ' ಎಂದು ಬಿಜೆಪಿ ಆಕ್ರೋಶ.. ಪಿಎಸ್ಐ ಸಾವಿಗೆ ಕಾರಣವಾದ ಶಾಸಕನ ಬಂಧನಕ್ಕೆ ಸಿ.ಟಿ.ರವಿ ಆಗ್ರಹ..
ಯಾದಗಿರಿ: ಸೈಬರ್ ಕ್ರೈಮ್ ಠಾಣೆಯ ಪಿಎಸ್ಐ ಪರಶುರಾಮ (34) ಎಂಬವರು ಶುಕ್ರವಾರ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಪ್ರಭಾವಿಗಳಿಂದ ಹಣಕ್ಕಾಗಿ ಒತ್ತಡ ಹೇರಲಾಗಿದ್ದು ಇದರಿಂದ ನೊಂದಿದ್ದ ಪಿಎಸ್ಐ ಪರಶುರಾಮ ಸಾವನ್ನಪ್ಪಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಿಎಸ್ಐ ಸಾವಿನ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಸಿ.ಟಿ.ರವಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ರೇಟ್ ಕಾರ್ಡ್ ಮತ್ತು ಎಕ್ಸ್ಟ್ರಾ ಟಿಪ್ಸ್ ಹಾವಳಿಯಿಂದ ಯಾದಗಿರಿಯ ಪಿಎಸ್ಐ ಪರಶುರಾಮ ಅವರ ಜೀವ ಹೋಗಿದೆ ಎಂದು ಆರೋಪಿಸಿದ್ದಾರೆ.
ಭ್ರಷ್ಟತನದ ಪರಮಾವಧಿ ಮುಟ್ಟಿದ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನೊಬ್ಬ ಪೊಲೀಸ್ ಅಧಿಕಾರಿಯನ್ನು ಬಲಿಪಡೆದಿದೆ. ಅತ್ಯಂತ ಬಡತನದ ಹಿನ್ನಲೆಯಿಂದ ಬಂದರೂ, ತನ್ನ ಛಲ ಮತ್ತು ಸಾಧನೆಯಿಂದ ಪಿಎಸ್ಐ ಆದ ಪರಶುರಾಮ್ ಛಲವಾದಿ ಯಾದಗಿರಿಯಲ್ಲಿ ನಿನ್ನೆ ಸಾವಿಗೀಡಾಗಿದ್ದಾರೆ. ಮೃತರ ಪತ್ನಿ ತನ್ನ ಪತಿಯ ಸಾವಿಗೆ, "ಯಾದಗಿರ...







