Thursday, January 29

ರಾಜ್ಯ

ಮುಡಾ ಹಗರಣ ಖಂಡಿಸಿ ಬೈಂದೂರಿನಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಪ್ರತಿಭಟನೆ

ಮುಡಾ ಹಗರಣ ಖಂಡಿಸಿ ಬೈಂದೂರಿನಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಪ್ರತಿಭಟನೆ

ಪ್ರಮುಖ ಸುದ್ದಿ, ರಾಜ್ಯ
ಉಡುಪಿ: ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲೆ ಇದರ ವತಿಯಿಂದ ಓಬಿಸಿ ಜಿಲ್ಲಾಧ್ಯಕ್ಷರಾದ ವಿಜಯ್ ಕೊಡವೂರು ನೇತೃತ್ವದಲ್ಲಿ ಮೂಡ ಹಗರಣ ಹಾಗೂ ವಾಲ್ಮೀಕಿ ಹಗರಣ ಖಂಡಿಸಿ ಬೈಂದೂರಿನಲ್ಲಿ ಪ್ರತಿಭಟನೆ ನಡೆಯಿತು. ಮೈಸೂರು ನಗರಾಭಿವೃದ್ಧಿ ಇಲಾಖೆ (ಮುಡಾ)ಮೂಲಕ ಸಿಎಂ ಕುಟುಂಬದವರು ಅಕ್ರಮವಾಗಿ ಸೈಟ್ ಪಡೆದಿದ್ದಾರೆ‌ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ನಾಯಕರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಬೈಂದೂರು ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಶಿವರಾಜ್ ಪೂಜಾರಿ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಚಂದ್ರ ಜೋಗಿ, ಜಿಲ್ಲಾ ಒಬಿಸಿ ಉಪಾಧ್ಯಕ್ಷ ರಾಜಶೇಖರ್ ದೇವಾಡಿಗ, ವಿನೋದ್ ಗುಜ್ಜಾಡಿ,ಜಿಲ್ಲಾ ಒಬಿಸಿ ಕಾರ್ಯಕಾರಣಿ ಸದಸ್ಯ ಉಮೇಶ್ ಕಂಡ್ಲೂರು, ಒಬಿಸಿ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ ದೇವಾಡಿಗ, ಕಾರ್ಯದರ್ಶಿ ಅನಿಲ್ ಮೆಂಡನ್, ರಾಜೇಶ್ ಕೊಠಾರಿ, ಮಹೇಂದ್ರ ಬೋವಿ, ಸಂತೋಷ್ ಮೊಗವೀರ ಕಿರುಮಂಜೇಶ್ವರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿ ಮಡಿವಾಳ, ಚಂದ್ರಶೇಖರ್ ದೇವಾಡಿಗ, ಸುಧಾಕರ್ ನೆಂಪು, ಮಹಾ...