Category: Update

  • ಮಹಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಹೊಳೆ; ಗ್ಯಾರೆಂಟಿಗಳ ಸುರಿಮಳೆ

    ಮಹಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಹೊಳೆ; ಗ್ಯಾರೆಂಟಿಗಳ ಸುರಿಮಳೆ

    ಮುಂಬಯಿ: ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಭರವಸೆಗಳ ಮಹಾಪೂರವೇ ಹರಿದಿದೆ.

    ಮಹಿಳೆಯರಿಗೆ ಪ್ರತೀ ತಿಂಗಳು 3,000 ರೂಪಾಯಿ. ಸಹಾಯ ಧನ, ರಾಜ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ಗ್ಯಾರೆಂಟಿ ಭರವಸೆಯನ್ನು ಮಹಾ ವಿಕಾಸ ಅಘಾಡಿ (ಎಂವಿಎ) ನೀಡಿದೆ.

    3 ಲಕ್ಷ ರೂಪಾಯಿ ವರೆಗಿನ ರೈತರ ಸಾಲ ಮನ್ನಾ ಮಾಡಲಾಗುತ್ತದೆ ಜೊತೆಗೆ, ನಿರುದ್ಯೋಗಿ ಯುವಜನರಿಗೆ ಪ್ರತೀ ತಿಂಗಳು 4,000 ರೂಪಾಯಿ ನೆರವು ನೀಡಲಾಗುತ್ತದೆ ಎಂದು ಎಂವಿಎ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆಗಳ ಪಟ್ಟಿಯನ್ನು ನೀಡಿದೆ.

    ತಮ್ಮ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ‘ಲಡ್ಕಿ ಬಹೀನ್‌’ ಯೋಜನೆಯ ಮೊತ್ತವನ್ನು 2,100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಎಂವಿಎ ನಾಯಕರು ಘೋಷಿಸಿದ್ದಾರೆ.

  • ಮಾಡು ಇಲ್ಲವೇ ಮಡಿ..! ಪಂಚಮಸಾಲಿ ಮೀಸಲಾತಿಗಾಗಿ ಡಿ.9ರಂದು ಸುವರ್ಣ ಸೌಧಕ್ಕೆ ಮುತ್ತಿಗೆ

    ಮಾಡು ಇಲ್ಲವೇ ಮಡಿ..! ಪಂಚಮಸಾಲಿ ಮೀಸಲಾತಿಗಾಗಿ ಡಿ.9ರಂದು ಸುವರ್ಣ ಸೌಧಕ್ಕೆ ಮುತ್ತಿಗೆ

    ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಡಿಸೆಂಬರ್ 9ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ತಯಾರಿ ನಡೆದಿದೆ.

    ಡಿಸೆಂಬರ್ 9 ಕ್ಕೆ ಸುವರ್ಣ ವಿಧಾನ ಸೌಧಕ್ಕೆ ಲಕ್ಷಾಂತರ ಪಂಚಮಸಾಲಿಗಳಿಂದ ಪಂಚಮಸಾಲಿ ವಕೀಲರ ನೇತೃತ್ವದಲ್ಲಿ ಹಾಗೂ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುವುದು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

    ಪಂಚಮಸಾಲಿ 2a ಹಾಗೂ ಲಿಂಗಾಯತ ಉಪಸಮಾಜಗಳ OBC ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡದ ಕಾರಣ ಈ ಹೋರಾಟ ನಡೆಸಲಾಗುತ್ತಿದೆ ಎಂದು ಶ್ರೀಗಳು ತಿಳಿಸಿದ್ದಾರೆ.

    ಬೆಳಗಾವಿ ಸುವರ್ಣ ವಿಧಾನಸೌಧ ಅಧಿವೇಶನಕ್ಕೆ ಮುಂಚಿತವಾಗಿ ಪಂಚಮಸಾಲಿ ಮೀಸಲಾತಿ ಘೋಷಿಸಬೇಕೆಂದು ಹಕ್ಕೊತ್ತಾಯಿಸಿ ಡಿಸೆಂಬರ್ 9ರಂದು ಸೋಮವಾರ ಬೆಳಿಗ್ಗೆ 10 ಕ್ಕೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣಿಗೆ ನಡೆಸಲಾಗುತ್ತದೆ. ವಕೀಲರ ನೇತೃತ್ವದಲ್ಲಿ ಪಂಚಮಸಾಲಿ-ಮಲೆಗೌಡ-ಗೌಡ ದೀಕ್ಷಾ ಲಿಂಗಾಯತರಿಂದ ಸುವರ್ಣ ವಿಧಾನ ಸೌಧಕ್ಕೆ ಬೃಹತ್ ಟ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲಾಗುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ ಹಂಚಿಕೊಂಡಿದ್ದಾರೆ.

    ಆಕ್ಟೊಬರ್ 18 ರಂದು ಮುಖ್ಯಮಂತ್ರಿಗಳು ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಎರಡು ಗಂಟೆಗಳ ಸುಧೀರ್ಘ ಸಭೆಯಲ್ಲಿ ಮುಖ್ಯಮಂತ್ರಿಗಳು ಯಾವುದೇ ಸಮಯವನ್ನು ನಿಗದಿ ಮಾಡಲಿಲ್ಲ. ನೀತಿ ಸಂಹಿತೆ ಕಾರಣ ಹೇಳಿದ ಸಿಎಂ ರವರು ಶಿಗ್ಗಾವಿ ಉಪಚುನಾವಣೆ ಮುಗಿದ ನಂತರದಲ್ಲಿಯಾದರು ಕೇಂದ್ರ OBC ಮೀಸಲಾತಿಗಳಾದರೂ ಶಿಫಾರಸ್ಸು ಮಾಡಿ ಎಂದು ವಕೀಲರರೆಲ್ಲಾರೂ ಮನವಿ ಮಾಡಿದರೂ ಸಹ ಒಪ್ಪಲಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಡಿಸೆಂಬರ್ 9ರ ಸುವರ್ಣ ಸೌಧ ಮುತ್ತಿಗೆ ಹೋರಾಟದಲ್ಲಿ‌ 10 ಲಕ್ಷ ಪಂಚಮಸಾಲಿ ಸಮುದಾಯದವರು, 10 ಸಾವಿರ ವಕೀಲರು, 5 ಸಾವಿರ ಟ್ಯಾಕ್ಟರ್‌ಗಳಲ್ಲಿ ರೈತರು ಭಾಗವಹಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.

  • ಪೊಳಲಿ ‘ಫಲ್ಗುಣಿ ಸೇತುವೆ’ ಸಮಸ್ಯೆಗೆ ಮುಕ್ತಿ ಎಂದು? ಸರ್ಕಾರವನ್ನು ಎಚ್ಚರಿಸಲು ಹೋರಾಟದ ಅಸ್ತ್ರ.. ಮಂಗಳವಾರ ಭಾರೀ ಪ್ರತಿಭಟನೆಗೆ ಕರೆ

    ಮಂಗಳೂರು: ಪುರಾಣ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಫಾಲ್ಗುಣಿ ಸೇತುವೆ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿದೆ. ರಾಜ್ಯ ಸರ್ಕಾರದ ತಾತ್ಸಾರ ವಿರುದ್ದ ಸಾರ್ವಜನಿಕರು ಸಿಡಿದೆದ್ದಾರೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

    ಅಡ್ಡೂರು-ಪೊಳಲಿ ನಡುವೆ ಸಂಪರ್ಕ ಕಲ್ಪಿಸಿರುವ ಫಲ್ಗುಣಿ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಘನ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ಘನವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದನ್ನು ಬಿಟ್ಟರೆ, ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಊರ ಜನರ ಆಕ್ರೋಶ. ಇದೀಗ ಸರ್ಕಾರವನ್ನು ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಈ ಸಂಬಂಧ ಪೊಳಲಿಯಲ್ಲಿ ನಡೆದ ವಿವಿಧ ಸಂಘಟನೆಗಳ ಪ್ರಮುಖರ ಸಭೆ ವಿದ್ಯಮಾನಗಳ ಕೇಂದ್ರಬಿಂದುವಾಯಿತು.‌

    ಪೊಳಲಿ–ಅಡ್ಡೂರಿನ ಪಲ್ಗುಣಿ ನದಿಯ ಸೇತುವೆ ಬಿರುಕು ಬಿಟ್ಟ ಕಾರಣಕ್ಕೆ ಘನ ವಾಹನ ಸಂಚಾರ ಸ್ಥಗಿತ ಮಾಡಲಾಗಿತ್ತು. ಸಂಬಂಧಪಟ್ಟ ಇಲಾಖೆ ಸೇತುವೆಯ ಸಾಮರ್ಥ್ಯವನ್ನು ಯಂತ್ರ ಮೂಲಕ ಪರಿಶೀಲನೆ ನಡೆಸಿ ಎರಡು ತಿಂಗಳಾದ್ರೂ ಏನಾಗಿದೆ ಎಂಬ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ. ಇದರಿಂದ ತೊಂದರೆಗೆ ಒಳಗಾಗಿರುವ ಅಮ್ಮುಂಜೆ , ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು ಮತ್ತು ಸುತ್ತಮುತ್ತಲಿನ ಜನರ ಉಪಸ್ಥಿತಿಯಲ್ಲಿ ಭಾನುವಾರ ಸಭೆ ನಡೆದಿದೆ.

    ಜನರ ಸಮಸ್ಯೆಗೆ ಸ್ಪಂದಿಸ ಸರ್ಕಾರದ ಹಾಗೂ ಅಧಿಕಾರಿಗಳ ನಿಲುವು ಖಂಡಿಸಿ ಅಕ್ಟೋಬರ್ 15 ರಂದು ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪೊಳಲಿಯ ರಾಮಕೃಷ್ಣ ತಪೋವನ ರಾಜರಾಜೇಶ್ವರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

    ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಾಚೈತನ್ಯನಂದ ಸ್ವಾಮೀಜಿ , ಪೊಳಲಿ ಅಡ್ಡೂರು ಫಲ್ಗುಣಿ ಹೋರಾಟ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾವಡ, ಚಂದ್ರಹಾಸ್ ಪಲ್ಲಿಪಾಡಿ, ಜಯರಾಮಕೃಷ್ಣ ಪೊಳಲಿ, ನೂಯಿ ಬಾಲಕೃಷ್ಣ ರಾವ್, ಅಬೂಬಕ್ಕರ್ ಅಮ್ಮುಂಜೆ ಸಹಿತ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಹೋರಾಟ ಯಶಸ್ವಿಗಾಗಿ ಸಾರ್ವಜನಿಕರ ಬೆಂಬಲ ಕೋರಿದರು.

  • ಪ್ರಧಾನಿ ನಿವಾಸಕ್ಕೆ ಹೊಸ ಅತಿಥಿ.. ‘ದೀಪಜ್ಯೋತಿ’ಯನ್ನು ಮುದ್ದಾಡಿದ ಮೋದಿ ಮೋಡಿಗೆ ನೆಟ್ಟಿಗರ ಸಕತ್ ಲೈಕ್ಸ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಈ ಒಂದು ಮುದ್ದಾದ ಅತಿಥಿ ಜೊತೆಗಿನ ವಿಡಿಯೋವನ್ನು ಮೋದಿಯವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


    ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಪುಟ್ಟ ಕರು ಆಗಮಿಸಿದೆ. ಆ ಮುಗ್ದ ಕರುವನ್ನು ಪ್ರಧಾನಿ ಮೋದಿ ಮುದ್ದಾಡಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣ ‘Xನಲ್ಲಿ ಮೋದಿಯವರು ಹಂಚಿಕೊಂಡಿದ್ದು, ಕರುವಿನ ಜೊತೆ ಆಟವಾಡುವ ಸನ್ನಿವೇಶ ಅದಾಗಿದೆ. ಮೋದಿ ಹೋದಲ್ಲೆಲ್ಲ ಅವರ ಜೊತೆಯಲ್ಲೇ ಕರು ಹೋಗುತ್ತದೆ. ಮೋದಿ ದೇವರ ಕೋಣೆಯಲ್ಲಿ ಪೂಜೆಯಲ್ಲಿದ್ದಾಗಲೂ ಅಲ್ಲಿಗೂ ಕಾರು ಬಂದಿದೆ. ಮೋದಿ ಜೊತೆ ಈ ಕರು ಆಪ್ತತೆಯಿಂದ ಬೆರೆಯುತ್ತದೆ.

    ಮೋದಿಯವರ ನಿವಾಸದಲ್ಲೇ ಜನಿಸಿರುವ ಕರು ಇದಾಗಿದ್ದು ಇದಕ್ಕೆ ‘ದೀಪಜ್ಯೋತಿ’ ಎಂದು ನಾಮಕರಣ ಮಾಡಲಾಗಿದೆ. ಈ ನಡುವೆ ಮೋದಿ ಅವರು ದೇವರ ಮುಂದೆ ಈ ಕರುವಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿಡಾ ಸನ್ನಿವೇಶ ಗಮನಸೆಳೆದಿದೆ. ಪ್ರಧಾನಿ ಮೋದಿ ಅವರು ಕರುವನ್ನು ಎತ್ತಿ ಮುದ್ದಾಡುವ ದೃಶ್ಯ ಅಭಿಮಾನಿಗಳ ಕುತೂಹಲದ ಕೇಂದ್ರಬಿಂದುವಾಗಿದೆ. ನೆಟ್ಟಿಗರಿಂದ ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.

  • ಹಿಂದೂ ದೇವರಿಗೆ ಅಪಮಾನ; ಮಂಗಳೂರಿನ ಪೊಲೀಸರಿಂದ ಎಫ್​ಐಆರ್

    ಹಿಂದೂ ದೇವರಿಗೆ ಅಪಮಾನ; ಮಂಗಳೂರಿನ ಪೊಲೀಸರಿಂದ ಎಫ್​ಐಆರ್

    ಮಂಗಳೂರು: ಹಿಂದೂ ದೇವರ ಚಿತ್ರಗಳನ್ನು ಅಶ್ಲೀಲವಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಮಾನಿಸಿರುವ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಎಐ ಆಧಾರಿತ ಹಿಂದೂ ದೇವರ ಚಿತ್ರಗಳನ್ನು ಅಶ್ಲೀಲವಾಗಿ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

    ಹಿಂದೂ ದೇವರನ್ನು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ ರಚಿಸಿ ಅವುಗಳನ್ನು “Fact Vid” ಎಂಬ ಹೆಸರಿನ ಫೇಸ್‌ಬುಕ್​ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

  • ಆರೆಸ್ಸೆಸ್ ಶಕ್ತಿಕೇಂದ್ರದಲ್ಲಿ ಹೀಗಿತ್ತು ಸ್ವಾತಂತ್ರ್ಯೋತ್ಸವ ಕೈಂಕರ್ಯ

    ನಾಗ್ಪುರ: ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು ರಾಷ್ಟ್ರಭಕ್ತಿಯ ಹಬ್ಬವಾಗಿ ಆಚರಿಸಲಾಗುತ್ತಿದೆ. RSS ಪಾಳಯದಲ್ಲೂ ಸ್ವಾತಂತ್ರ್ಯೋತ್ಸವ ಸಡಗರ ಕಡುಬಂದಿದೆ.

    ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪ್ರಧಾನ ಕಚೇರಿಯಲ್ಲಿ ನೆರವೇರಿದ ಈ ರಾಷ್ಟ್ರಹಬ್ಬದ ಕೈಂಕರ್ಯವು ನಾಡಿನ ಗಮನೆಳೆಯಿತು. ಸಂಘದ ಶಕ್ತಿಕೇಂದ್ರದಲ್ಲಿನ ಕಾರ್ಯಕ್ರಮಕ್ಕೆ ಸರಸಂಘಚಾಲಕ್ ಡಾ.ಮೋಹನ್ ಭಾಗವತ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು.

    ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಚೇರಿ ಆವರಣದಲ್ಲಿ ಸಮಾಗಮವಾದ ಸಂಘದ ವಿವಿಧ ಕ್ಷೇತ್ರಗಳ ಪ್ರಮುಖರು, ಕಾರ್ಯಕರ್ತರು ಈ ವಿಶೇಷ ಸ್ವಾತಂತ್ರ್ಯ ದಿನಾಚರಣೆಯ ಸನ್ನಿವೇಶವನ್ನು ಸಾಕ್ಷೀಕರಿಸಿದರು.

  • VIDEO: ಭಾರತಾಂಬೆಯಾಗಿ ಗಮನಸೆಳೆದ ಕಟೀಲೇಶ್ವರಿ; ತ್ರಿವರ್ಣ ವಸ್ತ್ರಾಲಂಕಾರದಿಂದ ಭಕ್ತರ ಗಮನಸೆಳೆದ ಕಟೀಲು ಕ್ಷೇತ್ರದ ದೇವಿ

    ಮಂಗಳೂರು: ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವ ಸಂಭ್ರಮ ಆವರಿಸಿದೆ. ನಾಡಿಲೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿಸುತ್ತಿದ್ದು, ಕಟೀಲು ಕ್ಷೇತ್ರದಲ್ಲಿ ನೆಲೆಸಿರುವ ಜಗನ್ಮಾತೆ ಕೂಡಾ ಇಂದು ಭಾರತಾಂಬೆ ಸ್ವರೂಪಿಣಿಯಾಗಿ ಗಮನಸೆಳೆದಿದ್ದಾಳೆ.

    ಜಗದಾಂಬೆ ಶ್ರೀ ಕಟೀಲೇಶ್ವರಿಯು ಸ್ವಾತಂತ್ರ್ಯ ದಿನವಾದ ಇಂದು ಭಾರತಾಂಭೆಯಾಗಿ ಗಮನಸೆಳೆದದ್ದು ವಿಶೇಷ. ಕಳೆದ ವರ್ಷದಂತೆಯೇ ಈ ವರ್ಷವೂ ಸ್ವಾತಂತ್ರ್ಯೋತ್ಸವ ದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ವಿಗ್ರಹಕ್ಕೆ ರಾಷ್ಟ್ರಧ್ವಜವನ್ನು ಹೋಲುವ ಬಣ್ಣದ ವಸ್ತ್ರಾಲಂಕಾರ ಮಾಡಲಾಗಿದೆ. ಈ ಅಲಂಕಾರ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ.

    ಕರಾವಳಿಯ ಪುಣ್ಯಕ್ಷೇತ್ರ ಕಟೀಲಿನಲ್ಲಿ ದೇಶಭಕ್ತಿಯ ಮಹಾ ಹಬ್ಬವನ್ನು ಆಚರಿಸಲಾಯಿತು. ಹಿಂದೂ ಧಾರ್ಮಿಕ ಹಬ್ಬಗಳಂದು ವಿಶೇಷ ಕೈಂಕರ್ಯಗಳಿಂದ ಭಕ್ತರನ್ನು ಕೈಬೀಸಿ ಕರೆಯುವ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಈ ರೀತಿಯ ಆಕರ್ಷಣೆ ಭಕ್ತ ಸಮೂಹದ ಮೆಚ್ಚುಗೆಗೂ ಪಾತ್ರವಾಗಿದೆ.

  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ; RSS ಖಂಡನೆ

    ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ; RSS ಖಂಡನೆ

    ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಖಂಡಿಸಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಹಿಂದೂ ಶ್ರದ್ದಾಕೇಂದ್ರಗಳ ಮೇಲೆ ನಡೆದಿರುವ ದಾಳಿ ಘಟನೆಗಳು ಕಳವಳಕಾರಿ ಬೆಳವಣಿಗೆಯಾಗಿದ್ದು, ಅಲ್ಲಿನ ಮಧ್ಯಂತರ ಸರ್ಕಾರವು ಇಂತಹಾ ಕ್ರೌರ್ಯಗಳಿಗೆ ಅಂತ್ಯ ಹಾಡಬೇಕಿದೆ ಎಂದು ಸಂಘ ಪ್ರತಿಪಾದಿಸಿದೆ.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಬಾಂಗ್ಲಾದೇಶದ ಘಟನೆಗಳ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವುದನ್ನು ಸಹಿಸಲಾಗದು ಎಂದಿದ್ದಾರೆ.

    ಕಳೆದ ಕೆಲವು ದಿನಗಳಲ್ಲಿ ಆಡಳಿತ ಬದಲಾವಣೆಯ ಚಳವಳಿಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು, ಬೌದ್ಧರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧದ ಹಿಂಸಾಚಾರದ ಘಟನೆಗಳ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಗಂಭೀರ ಕಳವಳ ವ್ಯಕ್ತಪಡಿಸುತ್ತದೆ ಎಂದಿರುವ ಅವರು, ಹತ್ಯೆ, ಲೂಟಿ, ಬೆಂಕಿ ಹಚ್ಚುವುದು ಮತ್ತು ಹಿಂದೂ ಹಾಗೂ ಇತರ ಧಾರ್ಮಿಕ ಅಲ್ಪಸಂಖ್ಯಾತ ಮಹಿಳೆಯರ ಮೇಲಿನ ದೌರ್ಜನ್ಯಗಳು ಖಂಡನೀಯ‌. ಬಾಂಗ್ಲಾದೇಶದ ಹಿಂದೂ ಮಂದಿರಗಳ ಮೇಲಿನ ದಾಳಿಗಳಂತಹ ಕ್ರೌರ್ಯವನ್ನು ಸಹಿಸಲಾಗದು ಎಂದಿದ್ದಾರೆ.

    ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಇಂತಹ ಘಟನೆಗಳನ್ನು ತಕ್ಷಣವೇ ನಿಲ್ಲಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅಲ್ಲದೆ, ಸಂತ್ರಸ್ತರ ಜೀವ, ಆಸ್ತಿ ಮತ್ತು ಗೌರವವನ್ನು ರಕ್ಷಿಸಲು ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕು ಎಂದು ದತ್ತಾತ್ರೇಯ ಹೊಸಬಾಳೆ ಅವರು ಸಂದೇಶ ನೀಡಿದ್ದಾರೆ.

    ವಿಶ್ವ ಸಮುದಾಯ ಮತ್ತು ಭಾರತದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಈ ಸಂದಿಗ್ಧ ಸಮಯದಲ್ಲಿ ಹಿಂದೂ, ಬೌದ್ಧ ಮುಂತಾದ ಶೋಷಿತ ಸಮುದಾಯಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ಕೊಟ್ಟಿರುವ ಅವರು, ಸ್ನೇಹಪರ ನೆರೆಹೊರೆಯವರಾಗಿ, ಬಾಂಗ್ಲಾದೇಶದ ಈ ಪರಿಸ್ಥಿತಿಯಲ್ಲಿ ಭಾರತ ಸರ್ಕಾರವು ಸಮರ್ಥ ಪಾತ್ರವನ್ನು ವಹಿಸಲು ಪ್ರಯತ್ನಿಸುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು, ಬೌದ್ಧರು ಇತ್ಯಾದಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

  • ನೋವಿನಲ್ಲೇ ಕುಸ್ತಿಗೆ ವಿದಾಯ ಹೇಳಿದ ವಿನೇಶ್ ಪೋಗಟ್

    ಪ್ಯಾರಿಸ್: ತೂಕ ಹೆಚ್ಚಿದ್ದ ಕಾರಣಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ವಿಭಾಗದ ಫೈನಲ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ಸುದ್ದಿ ಇಡೀ ಕ್ಷೀಡಾ ಕ್ಷೇತ್ರವನ್ನೇ ನಲುಗಿಸದೆ. ಈ ಬಗ್ಗೆ ಕ್ರೀಡಾಪಟುಗಳು ದುಃಖ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಾಗಿರುವ ಕಹಿ ಅನುಭವದ ನಂತರ ವಿನೇಶ್ ಪೊಗಟ್ ಅವರು ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದಾರೆ.

    ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪೋಗಟ್, ‘ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಸಂಪೂರ್ಣ ಛಿದ್ರವಾಗಿದೆ, ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ’ ಎಂದು ವಿನೇಶ್ ಫೋಗಟ್ ನೋವು ಹಂಚಿಕೊಂಡಿದ್ದಾರೆ.

    ಕುಸ್ತಿಗೆ ವಿದಾಯ ಹೇಳುತ್ತಿದ್ದೇನೆ. ನಿಮ್ಮೆಲ್ಲರಿಗೂ ನಾನು ಸದಾ ಋಣಿಯಾಗಿರುತ್ತೇನೆ, ಕ್ಷಮಿಸಿ ಎಂದು ಅವರು Xನಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

  • ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಭಾರತದಲ್ಲಿ ರಕ್ಷಣೆ; ಸರ್ವಪಕ್ಷ ಸಭೆಯಲ್ಲಿ ಸಹಮತ

    ನವದೆಹಲಿ: ಹಿಂಸಾಚಾರದಿಂದ ತತ್ತರಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ ಬಳಿಕ ಭಾರತಕ್ಕೆ ಆಗಮಿಸಿದ್ದು, ಅವರಿಗೆ ರಕ್ಷಣೆ ನೀಡಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರದ ಈ ನಿಲುವಿಗೆ ಸರ್ವಪಕ್ಷಗಳು ಸಹಮತ ಸೂಚಿಸಿವೆ.

    ಈ ಸಂಬಂಧ ನವ ದೆಹಲಿಯಲ್ಲಿ ಮಂಗಳವಾರ ನಡೆದ ಸರ್ವಪಕ್ಷ ಸಭೆ ಮಹತ್ವದ ನಿರ್ಣಯ ಅಂಗೀಕರಿಸಿದೆ. ಬಾಂಗ್ಲಾದೇಶದಿಂದ ಪಲಾಯನವಾಗಿರುವ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತದ ನೆರವು ನೀಡುವ ಕುರಿತು ಮಹತ್ವದ ನಿರ್ಣಯಕ್ಕೆ ಸರ್ವಪಕ್ಷಗಳು ಬೆಂಬಲಿಸಿವೆ.

    ಸೋಮವಾರ ಸಂಜೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಕಲ ರೀತಿಯ ನೆರವು ನೀಡುವುದಾಗಿ ಭಾರತ ಭರವಸೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಸರ್ವಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.