Thursday, January 29

ವೀಡಿಯೊ

18 ವರ್ಷಗಳ ಕನಸು ನನಸು; ಕೊನೆಗೂ ಕಪ್ ಗೆದ್ದ RCB

18 ವರ್ಷಗಳ ಕನಸು ನನಸು; ಕೊನೆಗೂ ಕಪ್ ಗೆದ್ದ RCB

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಅಹ್ಮದಾಬಾದ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹೊರಹೊಮ್ಮಿದೆ. ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಟ್ರೋಫಿ ಎತ್ತಿ ಹಿಡಿದಿದ್ದು, 18 ವರ್ಷಗಳ ಕನಸನ್ನು ನನಸಾಗಿಸಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ RCB ತಮ್ಮ ಎದುರಾಳಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಕಾದಾಟ ನಡೆಸಿ 6 ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು. AAAAARRRRR CEEEEEEE BEEEEEE ❤🏆#TATAIPL | #RCBvPBKS | #Final | #TheLastMile | @RCBTweets pic.twitter.com/lp3AwgCVQl— IndianPremierLeague (@IPL) June 3, 2025 ಮೋಡಲ್ ಬ್ಯಾಟ್ ಮಾಡಿದ ಶ್ರೇಯಸ್ ನಾಯಕತ್ವದ RCB) ತಂಡ 190 ರನ್​ ಗಳಿಸಿತು. ಈ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಪಂಜಾಬ್ 20 ಓವರ್ ಗಳಲ್ಲಿ ಕೇವಲ 184 ರನ್​ಗಳನ್ನಷ್ಟೇ ಗಳಿಸಿತು. ಅದಾಗಲೇ, ರಾಯಲ್ ಚಾಲೆಂಜರ್ಸ್ಅಭಿಮಾನಿಗಳು ವಿಜಯೋತ್ಸವ...
ಒತ್ತಡಕ್ಕೆ ಮಣಿದು ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ ಕರ್ನಾಟಕ ಬಂದ್; ಕನ್ನಡ ಸಂಘಟನೆಗಳ ಎಚ್ಚರಿಕೆ

ಒತ್ತಡಕ್ಕೆ ಮಣಿದು ಥಗ್ ಲೈಫ್ ಚಿತ್ರ ಬಿಡುಗಡೆ ಮಾಡಿದರೆ ಕರ್ನಾಟಕ ಬಂದ್; ಕನ್ನಡ ಸಂಘಟನೆಗಳ ಎಚ್ಚರಿಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕನ್ನಡ ಭಾಷೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ಕನ್ನಡ ಸಂಘಟನೆಗಳ ನಾಯಕರು, ಒಂದು ವೇಳೆ ಒತ್ತಡಕ್ಕೆ ಮಣಿದು ಚಿತ್ರ ಬಿಡ್ಸುಗಡೆಗೆ ಮುಂದಾದರೆ ಕರ್ನಾಟಕ ಬಂದ್ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರೆಸ್ ಕ್ಲಬ್ ನಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಮತ್ತು ವಾಟಾಳ್ ಪಕ್ಷದ ನಾಯಕರು ಕನ್ನಡ ಭಾಷೆಯ ಕುರಿತು ನಟ ಕಮಲಹಾಸನ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು. ವಾಟಾಳ್ ನಾಗರಾಜ್ ಮಾತನಾಡಿ ಕಮಲಹಾಸನ್ ಕನ್ನಡದ ಮುಂದೆ ತೀರ ಸಣ್ಣ ವ್ಯಕ್ತಿ, ತಮಿಳುನಾಡಿನಲ್ಲಿ ಅವರ ಜನಬೆಂಬಲ ಇಲ್ಲ, ಪಾರ್ಟಿ ಕಟ್ಟಿ ಸೋತಿದ್ದಾರೆ ಎಂದು ಕುಟುಕಿದರು. ತಮಿಳಿನಿಂದ ಕನ್ನಡ ಬಂತು ಈ ಮಾತನ್ನ ಆಡಿದ್ದಾರೆ, ಯಾರು ಮಾತನಾಡಿದರು ಎಂಬುದು ಅರ್ಥವಾಗುತ್ತಿಲ್ಲ. ಈ ಪದ ಯಾಕೆ ಉಪಯೋಗಿಸಿದರು ಎಂಬುದು ಅರಿವಾಗುತ್ತಿಲ್ಲ ಎಂದ ಅವರು, ತಮಿಳಿನಿಂದ ಕನ್ನಡ ಹುಟ್ಟಿದ್ದೆ ಎಂದು ಹೇಳಿರುವುದು ಕೆಟ್ಟ ಸಂಸ್ಕೃತಿ, ಅಪರಾಧವಾಗಿದೆ ಎಂದರಲ್ಲದೆ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ ಎಂದರು. ಈ ಹಿಂದೆ ಸಿ.ರಾಜಗೋಪಾಲಚಾ...
ಈಶಾನ್ಯ ರಾಜ್ಯಗಳಲ್ಲಿ ಭೀಕರ ಪ್ರವಾಹ; ಮಣಿಪುರದಲ್ಲಿ 800 ಜನರ ರಕ್ಷಣೆ

ಈಶಾನ್ಯ ರಾಜ್ಯಗಳಲ್ಲಿ ಭೀಕರ ಪ್ರವಾಹ; ಮಣಿಪುರದಲ್ಲಿ 800 ಜನರ ರಕ್ಷಣೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಇಂಫಾಲ್: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಹಠಾತ್ ಪ್ರವಾಹ ಮತ್ತು ಭಾರೀ ಮಳೆಯಿಂದಾಗಿ ಈಶಾನ್ಯ ರಾಜ್ಯಗಳು ತತ್ತರಿಸಿವೆ. ಅದರಲ್ಲೂ ಮಣಿಪುರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರವಾಹ ಪೀಡಿತ ಮಣಿಪುರದಲ್ಲಿ ಜನರನ್ನು ರಕ್ಷಿಸಲು ಮತ್ತು ಸಂತ್ರಸ್ತರಿಗೆ ಪರಿಹಾರ ಒದಗಿಸಲು ಸೇನೆ ಮತ್ತು ಅಸ್ಸಾಂ ರೈಫಲ್ಸ್ 'ಆಪರೇಷನ್ ಜಲ್ ರಹತ್ 2' ಅನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. #WATCH | Imphal East District, Manipur | Flood-like situation in Imphal following incessant rainfall in the area.(Visuals from Sanjenthong Officer Colony) pic.twitter.com/X2D7l3dSDy— ANI (@ANI) May 31, 2025 ಮಣಿಪುರದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರಿದ ತೀವ್ರ ಪ್ರವಾಹ ಮತ್ತು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಉಪ ಆಯುಕ್ತರಿಂದ ಸಹಾಯಕ್ಕಾಗಿ ಬಂದ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ 'ಆಪರೇಷನ್ ಜಲ್ ರಹತ್ 2' ಅನ್ನು ಪ್ರಾರಂಭಿಸಲಾಗಿದೆ. 0 ರಿಂದ 20 ಅಂಗವಿಕಲರು ಮತ್ತು ವೃದ್ಧರು ಸೇರಿದಂತೆ ಒಟ್ಟು ಸುಮಾರು 800 ಜನ...
‘ನಾವು ಗುಂಡುಗಳಿಗೆ ಶೆಲ್‌ಗಳಿಂದ ಪ್ರತಿಕ್ರಿಯಿಸುತ್ತೇವೆ’: ಪಾಕ್‌ಗೆ ಪ್ರಧಾನಿ ಮೋದಿ ಮತ್ತೊಮ್ಮೆ ಎಚ್ಚರಿಕೆ

‘ನಾವು ಗುಂಡುಗಳಿಗೆ ಶೆಲ್‌ಗಳಿಂದ ಪ್ರತಿಕ್ರಿಯಿಸುತ್ತೇವೆ’: ಪಾಕ್‌ಗೆ ಪ್ರಧಾನಿ ಮೋದಿ ಮತ್ತೊಮ್ಮೆ ಎಚ್ಚರಿಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಭೋಪಾಲ್: ಉಗ್ರರ ಪೋಷಕ ಪಾಕಿಸ್ತಾನಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಆಕ್ರಮಣಕಾರಿ ಕೃತ್ಯ ನಡೆಸಿದಲ್ಲಿ ಇನ್ನಷ್ಟು ಕಠಿಣ ಪ್ರತಿಕ್ರಿಯೆ ನೀಡಲಾಗುವುದು ಎಂದು ಮೋದಿ ಗುಡುಗಿದ್ದಾರೆ. 'ಅಬ್ ಗೋಲಿ ಕಾ ಜವಾಬ್ ಗೋಲ್ ಸೆ ಮಿಲೇಗಾ (ಈಗ ನಾವು ಗುಂಡುಗಳಿಗೆ ಶೆಲ್‌ಗಳಿಂದ ಪ್ರತಿಕ್ರಿಯಿಸುತ್ತೇವೆ)" ಎಂದು ಅವರು ಶನಿವಾರ ಹೇಳಿದ್ದಾರೆ. 'ಆಪರೇಷನ್ ಸಿಂದೂರ್' ಭಾರತದ ಅದಮ್ಯ ಚೈತನ್ಯದ ಸಂಕೇತವಾಗಿದೆ, ಇದು ರಾಷ್ಟ್ರದ ಧೈರ್ಯ ಮತ್ತು ಅದರ ಸಾರ್ವಭೌಮತ್ವವನ್ನು ರಕ್ಷಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ. ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಭೋಪಾಲ್‌ನಲ್ಲಿ ನಡೆದ 'ಮಹಿಳಾ ಸಬಲೀಕರಣ ಮಹಾ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, ಭಯೋತ್ಪಾದಕರು ಭಾರತೀಯ ಮಹಿಳೆಯರ ಶಕ್ತಿಯನ್ನು ಪರೀಕ್ಷಿಸುವ ಧೈರ್ಯ ಮಾಡಿದ್ದರು. ಇದು ಅವರ ಹಾಗೂ ಬೆಂಬಲಿಸಿದವರ ಪತನಕ್ಕೆ ಕಾರಣವಾಯಿತು ಎಂದು ಮೋದಿ ಪುನರುಚ್ಚರಿಸಿದರು. मध्य प्रदेश के भोपाल में आज लोकमाता देवी अहिल्याबाई होल्कर के 300वें जयंती सम...
ಆಪರೇಷನ್ ಸಿಂದೂರ್: ಪಾಕಿಸ್ತಾನದಲ್ಲಿ ಊಹಿಸಿದ್ದಕ್ಕಿಂತಲೂ ವ್ಯಾಪಕ ಹಾನಿ; ವೀಡಿಯೊ ಅನಾವರಣ

ಆಪರೇಷನ್ ಸಿಂದೂರ್: ಪಾಕಿಸ್ತಾನದಲ್ಲಿ ಊಹಿಸಿದ್ದಕ್ಕಿಂತಲೂ ವ್ಯಾಪಕ ಹಾನಿ; ವೀಡಿಯೊ ಅನಾವರಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಇತ್ತೀಚಿನ ಉಪಗ್ರಹ ಚಿತ್ರಗಳು ಭಾರತದ 'ಆಪರೇಷನ್ ಸಿಂದೂರ್' ಸಮಯದಲ್ಲಿ ಪಾಕಿಸ್ತಾನದ ಕಾರ್ಯತಂತ್ರದ ಪ್ರಮುಖವಾದ ನೂರ್ ಖಾನ್ ವಾಯುನೆಲೆಯು ಹಿಂದೆ ನಂಬಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಅನುಭವಿಸಿದೆ ಎಂದು ಅನಾವರಣ ಮಾಡಿವೆ. ಪಾಕಿಸ್ತಾನದ ಡ್ರೋನ್ ಮತ್ತು ವಿಐಪಿ ವಾಯುಪಡೆಯ ಪ್ರಮುಖ ಕೇಂದ್ರವಾದ ನೂರ್ ಖಾನ್, ಇಸ್ಲಾಮಾಬಾದ್‌ನಿಂದ 25 ಕಿಲೋ ಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ರಾವಲ್ಪಿಂಡಿಯಲ್ಲಿದೆ. ಈ ನೆಲೆಯು ಹೆಚ್ಚಿನ ಮೌಲ್ಯದ ಗುರಿಯಾಗಿದ್ದು, ಪಾಕಿಸ್ತಾನ ವಾಯುಪಡೆಯ ಪ್ರಮುಖ ಸ್ವತ್ತುಗಳನ್ನು ಹೊಂದಿದೆ. This report spotlights damage at Pakistan’s Murid Airbase - the Indian Air Force strike has caused structural damage to a Command & Control building, a section of the roof has collapsed as well, likely causing internal damage @TheIntelLab #Skyfi pic.twitter.com/k7O4FO0tKS— Damien Symon (@detresfa_) May 26, 2025 "ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಪರಿಶೀಲನೆಯು ಭಾರತದ ದ...
ರಾಜ್ಯದಲ್ಲಿ ಭಾರೀ ಮಳೆ; ಸರಣಿ ಅವಘಡಗಳಿಂದ ಜನ ಕಂಗಾಲು

ರಾಜ್ಯದಲ್ಲಿ ಭಾರೀ ಮಳೆ; ಸರಣಿ ಅವಘಡಗಳಿಂದ ಜನ ಕಂಗಾಲು

Focus, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ರೀತಿ ಭಾರೀ ಮಳೆಯಾಗುತ್ತಿದ್ದು ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕೊಡಗು ಜಿಲ್ಲೆಗಳಲ್ಲಿ ಜನಜೀವನ ಏರುಪೇರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆ ಭಾರೀ ಮಳೆಯಾಗುತ್ತಿದೆ. ಕಳೆದೆರಡು ದಿನಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಭಾರೀ ಮಳೆಯೂ ಸರಣಿ ಅವಘಡಗಳಿಗೂ ಕಾರಣವಾಗಿವೆ. ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿವೆ. ಕುಂದಾಪುರ, ಕಾರ್ಕಳ ತಾಲೂಕುಗಳ ಹಲವು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. #ಭಾಗಮಂಡಲ_ತ್ರಿವೇಣಿ_ಸಂಗಮ_ಭರ್ತಿತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಗಾಳಿ ಮಳೆ ಜೋರಾಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. pic.twitter.com/Np5pTX5RrN— Coorg The Kashmir of Karnataka (@Coorgthekashmir) May 25, 2025 ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರೀ ಮಳೆ ಸರಣಿ ಅನಾಹುತಗಳಿಗೆ ಕಾರಣವಾಗಿವೆ. ಇನ್ನೊಂದೆಡೆ ಹಾಸನ ಜಿಲ್ಲೆಯಲ್ಲೂ ಮಳೆ ಸಂಬಂಧಿ ಘಟನೆ ಸಂಭವಿಸಿದೆ. ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಭೂಕುಸಿತದಿಂದಾಗಿ ವಾ...
‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್

‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಹೈದರಾಬಾದ್: ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನಟಿಸಿರುವ 'ಹರಿ ಹರ ವೀರ ಮಲ್ಲು' ಚಿತ್ರದ ನಿರ್ದೇಶಕಿ ಜ್ಯೋತಿ ಕೃಷ್ಣ, ಜೂನ್ 12 ರಂದು ತೆರೆಗೆ ಬರಲಿದ್ದು, ಪ್ರಪಂಚದಾದ್ಯಂತದ 25 ಕ್ಕೂ ಹೆಚ್ಚು VFX ಸಂಸ್ಥೆಗಳು ಈ ಚಿತ್ರದಲ್ಲಿ ಕೆಲಸ ಮಾಡಿವೆ ಎಂದು ತಿಳಿಸಿದ್ದಾರೆ. ಇರಾನ್, ಯುಎಸ್, ಯುಕೆ, ಸಿಂಗಾಪುರ ಮತ್ತು ಕೆನಡಾ ಸೇರಿದಂತೆ ಹಲವಾರು ತಂಡಗಳು ಈ ಚಿತ್ರದ VFX ಭಾಗಗಳಲ್ಲಿ ಕೆಲಸ ಮಾಡುತ್ತಿವೆ. ಇದಲ್ಲದೆ, ಭಾರತದಲ್ಲಿ ಗಣನೀಯ ಸಂಖ್ಯೆಯ ತಂಡಗಳು ಈ ಚಿತ್ರದಲ್ಲಿ ಕೆಲಸ ಮಾಡುತ್ತಿವೆ. ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಮುಂಬೈ ಸೇರಿದಂತೆ ಇತರ ಸ್ಥಳಗಳಲ್ಲಿ ನಮ್ಮ ತಂಡಗಳು ಇದ್ದವು. ಎಲ್ಲಾ 25 ಸಂಸ್ಥೆಗಳು ಚಿತ್ರದ VFX ಭಾಗಗಳಲ್ಲಿ ಕೆಲಸ ಮಾಡಿವೆ ಎಂದವರು ತಿಳಿಸಿದ್ದಾರೆ. ಜ್ಯೋತಿ ಕೃಷ್ಣ ಅವರು 200 ದಿನಗಳಲ್ಲಿ ಚಿತ್ರವನ್ನು ಚಿತ್ರೀಕರಿಸಿದ್ದೇವೆ ಎಂದು ಬಹಿರಂಗಪಡಿಸಿದರು. ಈ ಕಾಲದ ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ಮತ್ತು ಬಾಲಿವುಡ್ ತಾರೆ ಬಾಬಿ ಡಿಯೋಲ್ ಔರಂಗಜೇಬ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಇದು 16 ನೇ ಶತಮಾನದ ಕಥೆ. ಬಾಬಿ ...
ಇದೇನು ರಸ್ತೆಯೂ? ಚಪಾತಿಯೋ? ಕಳಪೆ ಕಾಮಗಾರಿ ಅನಾವರಣ

ಇದೇನು ರಸ್ತೆಯೂ? ಚಪಾತಿಯೋ? ಕಳಪೆ ಕಾಮಗಾರಿ ಅನಾವರಣ

Focus, Update Videos, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಕಳಪೆ ಕಾಮಗಾರಿ ಮೂಲಕ ರಾಜ್ಯದ ಜನತೆಗೆ ವಂಚಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಲೇ ಇದ್ದಾರೆ. ಇದೇ ಸಂದರ್ಭದಲ್ಲಿ, ವೀಡಿಯೋವೊಂದನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯದಲ್ಲಿನ ಕಳಪೆ ಕಾಮಗಾರಿಯನ್ನು ಅನಾವರಣ ಮಾಡಿದೆ. ಕರ್ನಾಟಕದ ಭ್ರಷ್ಟ @INCKarnataka ಸರ್ಕಾರ 80 ಪರ್ಸೆಂಟ್‌ ಕಮಿಷನ್‌ ಸರ್ಕಾರ ಅನ್ನೊದಕ್ಕೆ ಇಲ್ಲಿದೆ ಪುರಾವೆ!! ಇದು ಮಡಿಕೇರಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿ ಅಂತೆ, ಮಲಗಿ ಎದ್ದ ಮೇಲೆ ಹಾಸಿಗೆಯನ್ನು ಮಡಚಿಟ್ಟ ರೀತಿ, ಡಾಂಬರ್‌ ರಸ್ತೆಯನ್ನು ಸಾರ್ವಜನಿಕರು ಮಡಚುತ್ತಿದ್ದಾರೆ.ಸಿದ್ದರಾಮಯ್ಯ ಅವರೆ, ನಿಮ್ಮ ಸರ್ಕಾರ 80 ಪರ್ಸೆಂಟ್‌ ಕಮಿಷನ್… pic.twitter.com/wLj9TJFuWB— BJP Karnataka (@BJP4Karnataka) May 21, 2025 ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರ 80 ಪರ್ಸೆಂಟ್‌ ಕಮಿಷನ್‌ ಸರ್ಕಾರ ಅನ್ನೊದಕ್ಕೆ ಇಲ್ಲಿದೆ ಪುರಾವೆ ಎಂದು ಸಾಮಾಜಿಕ ಮಾಧ್ಯಮ 'X'ನಲ್ಲಿ ಬರೆದುಕೊಂಡಿರುವ ಬಿಜೆಪಿ, 'ಇದು ಮಡಿಕೇರಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿ ಅಂತೆ, ಮಲಗಿ ಎದ್ದ ಮೇಲೆ ಹಾಸಿಗೆಯನ್ನು ಮಡಚಿಟ್ಟ ರೀತಿ,...
ಐಪಿಎಲ್ ಅಂಗಳದಲ್ಲಿ ಆಟಗಾರರ ಜಗಳ; ವೀಡಿಯೊ ವೈರಲ್

ಐಪಿಎಲ್ ಅಂಗಳದಲ್ಲಿ ಆಟಗಾರರ ಜಗಳ; ವೀಡಿಯೊ ವೈರಲ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಇಂಡಿಯನ್ ಪ್ರೀಮಿಯರ್ ಲೀಗ್​ನ ಸೋಮವಾರದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳ ಆಟಗಾರರು ರಣಾಂಗಣದಲ್ಲೇ ಜಗಳಕ್ಕಿಳಿದ ಪ್ರಸಂಗ ಗೊಂದಲ ಸೃಷ್ಟಿಸಿತು. Lit Abhishek Sharma 🗿🥵🔥 pic.twitter.com/zyBhiQxByJ— Antara (@AntaraonX) May 19, 2025 ಲಕ್ನೋದಲ್ಲಿನ ಏಕಾನ ಸ್ಡೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಮಹತ್ವದ ಪಂದ್ಯ ನಡೆಯಿತು. ಸನ್​ರೈಸರ್ಸ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಔಟಾದ ಸಂದರ್ಭದಲ್ಲಿ ಲಕ್ನೋ ಸ್ಪಿನ್ನರ್ ದಿಗ್ವೇಶ್ ರಾಥಿ, ತಮಾಷೆಯ ಮಾತುಗಳಿಂದ ಕೆಣಕಿದರು. 'ಹೋಯ್ತಾ ಇರು' ಎಂಬ ದಿಗ್ವೇಶ್ ರಾಥಿ ಅವರ ಕೈ ಸನ್ನೆ ಅಭಿಷೇಕ್ ಶರ್ಮಾ ಅವರನ್ನು ಕೆರಳಿಸಿತು. ಈ ಆಸಂದರ್ಭದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟಿತು. ಇಬ್ಬರ ಜಗಳವು ತಾರಕ್ಕೇರುತ್ತಿದ್ದಂತೆ ಅಂಪೈರ್ ಹಾಗೂ ಇತರ ಆಟಗಾರರು ಮಧ್ಯ ಪ್ರವೇಶಿಸಿ ಕುಪಿತ ಇಬ್ಬರು ಆಟಗಾರರನ್ನೂ ದೂರ ಸರಿಯುವಂತೆ ಮಾಡಿದರು. ಆದರೂ ಕೋಪದಿಂದಲೇ ಕ್ರೀಡಾಂಗಣದಿಂದ ನಿರ್ಗಮಿಸಿದ ಅಭಿಷೇಕ್ ಶರ್ಮಾ, 'ಜುಟ್ಟು ಹಿಡಿದು ಹೊಡಿತೀನಿ...
ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು; ಜಾಗತಿಕ ಮಟ್ಟದಲ್ಲಿ ಅಪಮಾನ

ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು; ಜಾಗತಿಕ ಮಟ್ಟದಲ್ಲಿ ಅಪಮಾನ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿರುವ ಮಳೆ ಅನಾಹುತ ಪರಿಹಾರ ಕಾರ್ಯಕ್ಕೆ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ. They can’t clear waterlogged roads or fallen trees after a single downpour, but they want to dig tunnels costing ₹48,000 crore to “solve” Bengaluru’s traffic? Maybe the tunnel’s real purpose is to serve as a water reservoir. pic.twitter.com/yNQRHgWeF6 — P C Mohan (@PCMohanMP) May 19, 2025 ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂಗಾರು ಪೂರ್ವದ ಒಂದೇ ಒಂದು ಮಳೆ ಕಾಂಗ್ರೆಸ್ ಸರ್ಕಾರದ "ಬ್ರಾಂಡ್ ಬೆಂಗಳೂರು"ನ ನಿಜ ಬಣ್ಣ ಬಯಲು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಸಿಎಂ, ಡಿಸಿಎಂ ಮತ್ತು ಸಚಿವರು ಸಾಧನಾ ಸಮಾವೇಶದಲ್ಲಿ ಮೆರೆದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅಪಮಾನ ಹಿಂದಿನ ವರ್ಷದ ಲೋಪಗಳಿಂ...