Friday, September 25

ಇದೇನು ರಸ್ತೆಯೂ? ಚಪಾತಿಯೋ? ಕಳಪೆ ಕಾಮಗಾರಿ ಅನಾವರಣ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಕಳಪೆ ಕಾಮಗಾರಿ ಮೂಲಕ ರಾಜ್ಯದ ಜನತೆಗೆ ವಂಚಿಸುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಲೇ ಇದ್ದಾರೆ. ಇದೇ ಸಂದರ್ಭದಲ್ಲಿ, ವೀಡಿಯೋವೊಂದನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯದಲ್ಲಿನ ಕಳಪೆ ಕಾಮಗಾರಿಯನ್ನು ಅನಾವರಣ ಮಾಡಿದೆ.

ಕರ್ನಾಟಕದ ಭ್ರಷ್ಟ ಕಾಂಗ್ರೆಸ್ ಸರ್ಕಾರ 80 ಪರ್ಸೆಂಟ್‌ ಕಮಿಷನ್‌ ಸರ್ಕಾರ ಅನ್ನೊದಕ್ಕೆ ಇಲ್ಲಿದೆ ಪುರಾವೆ ಎಂದು ಸಾಮಾಜಿಕ ಮಾಧ್ಯಮ ‘X’ನಲ್ಲಿ ಬರೆದುಕೊಂಡಿರುವ ಬಿಜೆಪಿ, ‘ಇದು ಮಡಿಕೇರಿಯಲ್ಲಿ ನಡೆದಿರುವ ರಸ್ತೆ ಕಾಮಗಾರಿ ಅಂತೆ, ಮಲಗಿ ಎದ್ದ ಮೇಲೆ ಹಾಸಿಗೆಯನ್ನು ಮಡಚಿಟ್ಟ ರೀತಿ, ಡಾಂಬರ್‌ ರಸ್ತೆಯನ್ನು ಸಾರ್ವಜನಿಕರು ಮಡಚುತ್ತಿದ್ದಾರೆ’ ಎಂದು ದೂರಿದೆ. ಸರ್ಕಾರ 80 ಪರ್ಸೆಂಟ್‌ ಕಮಿಷನ್‌ ಸರ್ಕಾರ ಎಂಬುದು ಸಾಬೀತಾಗಿದೆನ್ ಎಂದು ಆರೋಪಿಸಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದೆ.