Friday, January 30

ವೀಡಿಯೊ

ಕಂಬನಿ: ‘ಭರತ್ ಕುಮಾರ್’ ಎಂದೇ ಹೆಸರುವಾಸಿಯಾಗಿದ್ದ ನಟ ಮನೋಜ್ ಕುಮಾರ್

ಕಂಬನಿ: ‘ಭರತ್ ಕುಮಾರ್’ ಎಂದೇ ಹೆಸರುವಾಸಿಯಾಗಿದ್ದ ನಟ ಮನೋಜ್ ಕುಮಾರ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಮುಂಬೈ: ಬಾಲಿವುಡ್ ನಟ, ನಿರ್ದೇಶಕ ಮನೋಜ್ ಕುಮಾರ್ ವಿಧಿವಶರಾಗಿದ್ದಾರೆ. ‘ಭರತ್ ಕುಮಾರ್’ ಎಂದೇ ಹೆಸರುವಾಸಿಯಾದ ನಟ ಮನೋಜ್ ಕುಮಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಶುಕ್ರವಾರ ವಿಧಿವಶರಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಮನೋಜ್ ಕುಮಾರ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ॐ शांति मनोज कुमार जी 🪔#Manojkumar pic.twitter.com/VM4OcpppNd— Raja Babu (@GaurangBhardwa1) April 4, 2025 60 ರ ದಶಕದಲ್ಲಿ ಭಕ್ತಿಪ್ರಧಾನ ಸಿನಿಮಾಗಳನ್ನು ಮಾಡಿರುವ ಮನೋಜ್ ಕುಮಾರ್ 'ಶಹೀದ್', 'ಉಪ್ಕಾರ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ. 1992 ರಲ್ಲಿ ಪದ್ಮಶ್ರೀ ಮತ್ತು 2015 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಪಡೆದಿದ್ದಾರೆ....
ದರ್ಶನ್ ಅಭಿಮಾನಿಯನ್ನು ಕ್ರೀಡಾಂಗಣದಿಂದ ಹೊರದಬ್ಬಿದರೇ ಪೊಲೀಸ್? ವೀಡಿಯೋ ವೈರಲ್

ದರ್ಶನ್ ಅಭಿಮಾನಿಯನ್ನು ಕ್ರೀಡಾಂಗಣದಿಂದ ಹೊರದಬ್ಬಿದರೇ ಪೊಲೀಸ್? ವೀಡಿಯೋ ವೈರಲ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಬೆಂಗಳೂರು: ಬೆಂಗಳೂರು ಪೊಲೀಸರು ದರ್ಶನ ಅಭಿಮಾನಿಗೆ ಶಾಕ್ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 2ರಂದು ನಡೆದ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ದರ್ಶನ ಅಭಿಮಾನಿಯೊಬ್ಬನನ್ನು ಕ್ರೀಡಾಂಗಣದಿಂದ ಬಲವಂತವಾಗಿ ಹೊರಗೆ ಕಳುಹಿದ್ದಾರೆ. ಅದಕ್ಕೆ ಕಾರಣ ನಟ ದರ್ಶನ್ ಫೋಟೋ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ನಡುವೆ IPL ಪಂದ್ಯ ವೀಕ್ಷಿಸಲು ಆಗಮಿಸಿದ್ದ ಯುವಕನೊಬ್ಬ ನಟ ದರ್ಶನ್ ಭಾವಚಿತ್ರ ಹಿಡಿದುಕೊಂಡು ಬಂದಿದ್ದ. ಅದನ್ನು ಕಂಡ ಭದ್ರತಾ ಸಿಬ್ಬಂದಿ ಫೋಟೋದ ಜೊತೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ. ಅದಾಗಲೇ ಆ ಯುಕನನ್ನು ಕ್ರೀಡಾಂಗಣದಿಂದ ಹೊರ ದಬ್ಬಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನಿನ್ನೆಯ ಪಂದ್ಯದ ಡಾಗರ್ ಕ್ರಿಮಿನಲ್ ಬೂಸ ದಾಸಪ್ಪ ಫೋಟೋವನ್ನು ಪೊಲೀಸರು ಕ್ರೀಡಾಂಗಣದ ಪ್ರವೇಶದ್ವಾರದಲ್ಲಿ ತಡೆದರು.!🐷🥺😭#CriminalDarshan#RCBvsGT pic.twitter.com/COcGlLel97— 🐐♑ (@Rohi45Appu) April 3, 2025 ಈ ನಡುವೆ, ದರ್ಶನ್ ಅಭಿಮಾನಿಯ ನಡೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್...
ತವರಿನಲ್ಲಿ RCB ಕಳಪೆ ಪ್ರದರ್ಶನ; ಬೆಂಗಳೂರು ಅಭಿಮಾನಿಗಳಿಗೆ ನಿರಾಸೆ

ತವರಿನಲ್ಲಿ RCB ಕಳಪೆ ಪ್ರದರ್ಶನ; ಬೆಂಗಳೂರು ಅಭಿಮಾನಿಗಳಿಗೆ ನಿರಾಸೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ 2025ರ ಬೆಂಗಳೂರು ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೀನಾಯ ಸೋಲಿನ ರುಚಿ ಅನುಭವಿಸುವಂತಾಯ್ತು. ಬುಧವಾರ ತವರಿನಲ್ಲಿ ಮೊದಲ ಪಂದ್ಯವನ್ನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಎದುರಾಳಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟಾನ್ಸ್ ಅದ್ಭುರ್ತ ಆಟ ಪ್ರದರ್ಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ RCB ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿ 169 ರನ್‌ ಪೇರಿಸಿತ್ತು. ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಅರ್ಧಶತಕದ ನೆರವಿನಿಂದ ಈ ಮೊತ್ತ ಸಂಪಾದಿಸುವಲ್ಲಿ RCB ಯಶಸ್ಸಾಗಿತ್ತು. ಆದರೆ, ಗುಜರಾತ್ ಟೈಟಾನ್ಸ್ ಅಬ್ಬರದ ಆಟದ ನಡುವೆ RCB ಮಂಕಾಯಿತು. 170 ರನ್ ಗಳ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 2 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿ ಜಯಭೇರಿ ಬಾರಿಸಿತು. On Display: Brute Force 💪Scorecard ▶ https://t.co/teSEWkWPWL #TATAIPL | #...
ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ; ಅಶೋಕ್

ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ; ಅಶೋಕ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ಲೇಷಿಸಿದ್ದಾರೆ. ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನಾನು ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ.ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ @siddaramaiah ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ,… pic.twitter.com/1h1zFHr8HL— R. Ashoka (@RAshokaBJP) April 1, 2025 ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಸಿದ್ದರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಾಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರ...
ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಬಿರು ಬಿಸಿಲ ಬೇಗೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಹೀಗೊಂದು ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗುರುವಾರದಿಂದ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಇದ್ದು, 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ವೇಳೆ, ಏಪ್ರಿಲ್ 3 ರಿಂದ ಏಪ್ರಿಲ್ 5ರವರೆಗೆ ಉಷ್ಣಾಂಶ ಇಳಿಮುಖವಾಗುವ ಸಾಧ್ಯತೆ ಎಂದು ವಿಶ್ಲೇಷಿಸಲಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ....
ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಯಡಿಯೂರಪ್ಪ

ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಯಡಿಯೂರಪ್ಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ. ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ… pic.twitter.com/2oHzWHliEp — BJP Karnataka (@BJP4Karnataka) April 1, 2025...
‘RSS ಭಾರತದ ಅಮರ ಸಂಸ್ಕೃತಿಯ ಆಧುನಿಕ ‘ಅಕ್ಷಯ ವತ್ ವೃಕ್ಷ’ವಾಗಿದೆ’: ಪ್ರಧಾನಿ ನರೇಂದ್ರ ಮೋದಿ.

‘RSS ಭಾರತದ ಅಮರ ಸಂಸ್ಕೃತಿಯ ಆಧುನಿಕ ‘ಅಕ್ಷಯ ವತ್ ವೃಕ್ಷ’ವಾಗಿದೆ’: ಪ್ರಧಾನಿ ನರೇಂದ್ರ ಮೋದಿ.

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ವೀಡಿಯೊ
ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತದ ಅಮರ ಸಂಸ್ಕೃತಿಯ ಆಧುನಿಕ 'ಅಕ್ಷಯ ವತ್' ಆಗಿದ್ದು, ಇದು ರಾಷ್ಟ್ರವನ್ನು ನಿರಂತರವಾಗಿ ಚೈತನ್ಯಗೊಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಆರ್‌ಎಸ್‌ಎಸ್‌ನ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯಲ್ಲಿ ಅದರ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ. ಪ್ರಧಾನಿ ಶ್ರೀ @narendramodi ಅವರು ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಗೆ ಭೇಟಿ ನೀಡಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.#BRAmbedkar pic.twitter.com/ZQRnc573wa — BJP Karnataka (@BJP4Karnataka) March 30, 2025 ಮಾಧವ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಹೊಸ ವಿಸ್ತರಣಾ ಕಟ್ಟಡವಾದ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಅಡಿಪಾಯ ಹಾಕಿದ ನಂತರ ಅವರು"ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಅಮರ ಸಂಸ್ಕೃತಿಯ ಆಧುನಿಕ ಅಕ್ಷಯ ವತ್ ಆಗಿದೆ; ಈ ಅಕ್ಷಯ ವತ್ ಭಾರತೀಯ ಸಂಸ್ಕೃತಿ ಮತ್ತು ನಮ್ಮ ರಾಷ್...
ಸಂವತ್ಸರದ ಮೊದಲ ದಿನ.. ಭಾರತೀಯ ವರ್ಷಾರಂಭ..! ಯುಗಾದಿಯ ಮಹತ್ವ ಹೀಗಿದೆ..

ಸಂವತ್ಸರದ ಮೊದಲ ದಿನ.. ಭಾರತೀಯ ವರ್ಷಾರಂಭ..! ಯುಗಾದಿಯ ಮಹತ್ವ ಹೀಗಿದೆ..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ವೈವಿಧ್ಯ
ಸಂವತ್ಸರದ ಮೊದಲ ದಿನ 'ಯುಗಾದಿ' ಹನಬ್ಬ ನಾಡಿನಾದ್ಯಂತ ಸಂಭ್ಯಮ ಸಡಗರಕ್ಕೆ ಸಾಕ್ಷಿಯಾಗಿದೆ. ಭಾರತೀಯರ ಪಾಲಿಗೆ ಯುಗಾದಿಯಂದೇ ಹೊಸವರ್ಷಾಚರಣೆ. ಹಾಗಾಗಿ ಹೊಸ ಸಾಂತ್ಸರವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತಿದೆ. ಶುಭಾಶಯಗಳ ವಿನಿಮಯವೂ ಜೋರಾಗಿ ಸಾಗಿದೆ. ಭಾರತೀಯ ಪರಂಪರೆಯಲ್ಲಿ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಅದರಲ್ಲೂ ವರ್ಷಾರಂಭಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಸ್ಥಾನವಿದೆ. ಭಾರತೀಯ ಪರಂಪರೆಯಲ್ಲಿ ಯುಗಾದಿಯೇ ಹೊಸವರ್ಷಾರಂಭ. ಯುಗದ ಆದಿಯೇ ಯುಗಾದಿ ಎಂಬ ಅರ್ಥದಲ್ಲಿ ಒಂದು ವರ್ಷದ ಅವಧಿಯ ಆದಿ ಇಂದು. ಹಾಗಾಗಿಯೇ ವ್ಯವಹಾರಿಕ ವರ್ಷಕ್ಕೆ ಕ್ಯಾಲೆಂಡರ್ ಆಧಾರವಾಗಿದ್ದರೆ, ಸಂಪ್ರದಾಯ, ಧಾರ್ಮಿಕ ಆಚರಣೆಗೆ ಸಂವತ್ಸರವೇ ಆಧಾರ. ಹಾಗಾಗಿ ಸಂವತ್ಸರದ ಮೊದಲ ದಿನ (ಆದ್ಯ ದಿನ) ಈ 'ಯುಗಾದಿ'ಗೆ ಧಾರ್ಮಿಕ ಮಹತ್ವ ಇದೆ. ಪ್ರಕೃತಿಯೂ ಸಹ ಹೊಸತನಕ್ಕೆ ಸಾಕ್ಷಿಯಾಗುತ್ತಿದೆ. ಈ ಸಮಯದಲ್ಲಿ ವೃಕ್ಷಗಳೂ ಹಳೇ ಎಲೆಗಳನ್ನು ಕಳೆದುಕೊಂಡು ಹೊಸ ಎಲೆಗಳೊಂದಿಗೆ ಚಿಗುರಿ ತನ್ನ ಯೌವ್ವನವನ್ನು ಮತ್ತೆ ಹೊಸದಾಗಿ ಆರಂಭಿಸುತ್ತದೆ. ಯುಗಾದಿಯ ದಿನದಂದೇ ಬ್ರಹ್ಮ ದೇವರು ಈ ಭೂಮಿಯನ್ನ...
‘ಒಂದು‌ ಮಚ್ಚಿನ ಕಥೆ’: ಬಹಿರಂಗ ಕ್ಷಮೆ ಯಾಚಿಸಿದ ವಿನಯ್

‘ಒಂದು‌ ಮಚ್ಚಿನ ಕಥೆ’: ಬಹಿರಂಗ ಕ್ಷಮೆ ಯಾಚಿಸಿದ ವಿನಯ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋ‌ ಮೂಲಕ ಅಭಿಮಾನಿಗಳನ್ನು ಸಂಪಾದಿಸಿರುವ ರಜತ್ ಹಾಗೂ ವಿನಯ್ ಗೌಡ 'ಒಂದು‌ ಮಚ್ಚಿನ ಕಥೆ'ಯಿಂದಾಗಿ ವಿಲನ್ ಎನಿಸಿಕೊಂಡರು. ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಹಕ್ಕಿಗಳಾದ ಈ ಇಬ್ಬರು ಸೆಲೆಬ್ರೆಟಿಗಳು ಇದೀಗ ಜಾಮೀನಿನ‌ ಮೂಲಕ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿರುವ ವಿನಯ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಅವರು ಕ್ಷಮೆಕೋರಿದ್ದಾರೆ.   View this post on Instagram   A post shared by Vinay Gowda (@vinaygowdaactor) 'ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದಿರುವ ವಿನಯ್, ಮಚ್ಚು ಇಡ್ಕೊಂಡು ವಿಡಿಯೋ ಮಾಡಬಾರದಿತ್ತು. ಇದರಿಂದ ತೊಂದರೆ ಆಗಿದೆ. ನನ್ನಿಂದ ತಪ್ಪಾಗಿದೆ' ಎಂದಿದ್ದಾರೆ. ಇದು ಇಷ್ಟು ದೊಡ್ಡ ಸಮಸ್ಯೆ ತಂದುಕೊಡುತ್ತದೆ ಅಂಥ ಅಂದ್ಕೊಡಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ' ಎಂದವರು ಹೇಳಿರುವ ವೀಡಿಯೋ ಗಮನಸೆಳೆದಿದೆ....
ಮ್ಯಾನ್ಮಾರ್-ಥೈಲ್ಯಾಂಡ್‌ ಭೂಕಂಪ; ಸಾವಿರಕ್ಕೂ ಹೆಚ್ಚು ಮಂದಿ ಸಾವು

ಮ್ಯಾನ್ಮಾರ್-ಥೈಲ್ಯಾಂಡ್‌ ಭೂಕಂಪ; ಸಾವಿರಕ್ಕೂ ಹೆಚ್ಚು ಮಂದಿ ಸಾವು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಮ್ಯಾನ್ಮಾರ್: ಭೀಕರ ಭೂಕಂಪ ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ ದೇಶಗಳನ್ನು ಸ್ಮಶಾನವನ್ನಾಗಿಸಿದೆ. ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಪ್ರಬಲ ಭೂಕಂಪ ಘಟನೆಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ. Earthquake sum up 3pm (Mynamar/Thailand)- 7.7 quake hit near Mandalay/Myanmar- Hundreds of homes collapsed (various Myanmar cities)- Strong shocks in Thailand + multiple building collapse in Bangkok - USGS predicts thousands of people dead(Bangkok clips from social media:) pic.twitter.com/kJodTn6BIg— Florian Witulski (@vaitor) March 28, 2025 ಎರಡೂ ದೇಶಗಳಲ್ಲಿ ಕಟ್ಟಡಗಳು, ಸೇತುವೆಗಳು, ರಸ್ತೆಗಳು ಕುಸಿದಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಅನೇಕ ಕಟ್ಟಡಗಳು ಕುಸಿದು ಹಿಂದೆಂದೂ ಕಂಡರಿಯದ ರೀತಿ ಮಾರಣಹೋಮವೇ ಸಂಭವಿಸಿದೆ. ಮ್ಯಾನ್ಮಾರ್‌ ಸರ್ಕಾರದ ಮೂಲಗಳ ಪ್ರಕಾರ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಸುಮಾರು 1000ಕ್ಕೆ ಏರಿಕೆಯಾಗಿದೆ. 2 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ...