Friday, January 30

ವೀಡಿಯೊ

ಮಲ್ಪೆಯಲ್ಲಿ‌ ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ

ಮಲ್ಪೆಯಲ್ಲಿ‌ ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ

Focus, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ಉಡುಪಿ: ಮೀನು ಅಳ್ಳತನ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ‌ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. ಮಾರ್ಚ್ 18 ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ಹಲ್ಲೆ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ‌ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು ಎಂದಿರುವ ಸಿಎಂ, ಕಾರಣವೇನೇ ಇರಲಿ ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧ ಎಂದಿದ್ದಾರೆ. ಇಂತಹ ಅನಾಗರೀಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್...
ಸಿನಿಲೋಕದಲ್ಲಿ ‘ಕಣ್ಣಪ್ಪ’ ಬಗ್ಗೆ ಕುತೂಹಲ ಹೆಚ್ಚಿಸಿದ ‘ಮಹಾದೇವ ಶಾಸ್ತ್ರಿ ಪರಿಚಯ ಗೀತೆ’

ಸಿನಿಲೋಕದಲ್ಲಿ ‘ಕಣ್ಣಪ್ಪ’ ಬಗ್ಗೆ ಕುತೂಹಲ ಹೆಚ್ಚಿಸಿದ ‘ಮಹಾದೇವ ಶಾಸ್ತ್ರಿ ಪರಿಚಯ ಗೀತೆ’

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಚೆನ್ನೈ: ಹಿರಿಯ ನಟ, ನಿರ್ಮಾಪಕ ಎಂ. ಮೋಹನ್ ಬಾಬು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ, 'ಕಣ್ಣಪ್ಪ' ಚಿತ್ರದ ನಿರ್ಮಾಪಕರು ಬುಧವಾರ 'ಮಹಾದೇವ ಶಾಸ್ತ್ರಿಯವರ ಪರಿಚಯ ಗೀತೆ' ಎಂಬ ಶೀರ್ಷಿಕೆಯ ಗೀತೆಯನ್ನು ಅನಾವರಣಗೊಳಿಸಿದರು. ಬಹು ನಿರೀಕ್ಷಿತ ಮಹಾಕಾವ್ಯದ ಮೂರನೇ ಹಾಡಾದ ಈ ಹಾಡು, ಗುಡುಗಿನ ಲಯಗಳು ಮತ್ತು ಪ್ರಬಲ ಗಾಯನದೊಂದಿಗೆ ದೃಶ್ಯಕ್ಕೆ ಅಪ್ಪಳಿಸುತ್ತದೆ. ಭಾವಪೂರ್ಣ ಜಾವೇದ್ ಅಲಿ ಹಾಡಿದ್ದಾರೆ, ಶೇಖರ್ ಸಾಹಿತ್ಯ ಬರೆದಿದ್ದಾರೆ ಮತ್ತು ಮಾಂತ್ರಿಕ ಸ್ಟೀಫನ್ ದೇವಸ್ಸಿ ಸಂಯೋಜಿಸಿರುವ ಈ ಹಾಡು ಎಂ.ಮೋಹನ್ ಬಾಬು ಪಾತ್ರದ ಮಹಾದೇವ ಶಾಸ್ತ್ರಿಯ ಕಚ್ಚಾ ಶಕ್ತಿ ಮತ್ತು ಭವ್ಯ ಪ್ರಭಾವಲಯವನ್ನು ಸಾಕಾರಗೊಳಿಸುತ್ತದೆ. https://www.youtube.com/watch?v=FfHc-Kh7x2I ತನ್ನ ದೃಢವಾದ ತಾಳವಾದ್ಯ ಮತ್ತು ಹಿಡಿತದ ಗತಿಯೊಂದಿಗೆ, ಈ ಹಾಡು ಮಹಾದೇವ ಶಾಸ್ತ್ರಿಯನ್ನು ವ್ಯಾಖ್ಯಾನಿಸುವ ಅದಮ್ಯ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ. ಈ ಪಾತ್ರವನ್ನು ಬೇರೆ ಯಾರೂ ಅಲ್ಲ, ಐಕಾನಿಕ್ ಎಂ. ಮೋಹನ್ ಬಾಬು ಸ್ವತಃ ಜೀವಂತಗೊಳಿಸಿದ್ದಾರೆ. ಚಿತ್ರದ ನಾಯಕ ನಟ ವಿಷ್ಣು ಮಂಚು ತಮ್ಮ ತಂದೆಯ ಹುಟ್ಟುಹಬ್ಬದ ಜೊತೆಜೊತೆಗೇ ಬ...
ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್..

ಸುರಕ್ಷಿತವಾಗಿ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್..

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಕೇಪ್ ಕೆನವೆರಲ್: ಬಾಹ್ಯಾಕಾಶದಲ್ಲಿ ಸಿಲುಕಿದ್ದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಮಂಗಳವಾರ ಭೂಮಿಗೆ ಯಶಸ್ವಿಯಾಗಿ ತಲುಪಿದ್ದಾರೆ. ಬಾಹ್ಯಾಕಾಶದಿಂದ ಸುಮಾರು 9 ತಿಂಗಳ ನಂತರ ಭಾರತೀಯ ಕಾಲಮಾನ ಬುಧವಾರ ಸುರಕ್ಷಿತವಾಗಿ ವಾಪಸ್ಸಾಗಿದ್ದು ಕೋಟ್ಯಂತರ ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತ ಜನರಿ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶಕ್ಕೆ ಪಯಣಿಸಿದ್ದರು. ಅವರಿದ್ದ ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ದೋಷ ಕಂಡುಬಂದಿತ್ತು. ಇದರಿಂದಾಗಿ ಸುನೀತಾ ಮತ್ತವರ ಸಹ ಗಗನಯಾತ್ರಿಗಳು ನೌಕೆಯ ಮೂಲಕ ಹಿಂತಿರುಗುವುದು ಅಪಾಯ ಎಂದು ನಾಸಾ ತಿಳಿಸಿತ್ತು. ತಾಂತ್ರಿಕ ತೊಂದರೆಗಳಿಂದಾಗಿ ಅವರ ಮರಳುವಿಕೆ ವಿಳಂಬವಾಗಿತ್ತು. ಹಾಗಾಗಿ ಸುಮಾರು 9 ತಿಂಗಳ ಕಾಲ ಈ ಸಾಹಸಿಗಳು ಬಾಹ್ಯಾಕಾಶದಲ್ಲಿ ಉಳಿದುಕೊಂಡಿದ್ದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿದ್ದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡಾ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರೊಂದಿ...
ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್’ಗೆ ಗಂಗಾ ಜಲ ನೀಡಿ ಗೌರವ

ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್’ಗೆ ಗಂಗಾ ಜಲ ನೀಡಿ ಗೌರವ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಅಮೆರಿಕದ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರು ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರು ತುಳಸಿ ಗಬ್ಬಾರ್ಡ್ ಅವರಿಗೆ ಗಂಗಾ ಜಲ ಮತ್ತು ಉಡುಗೊರೆಗಳನ್ನು ನೀಡಿ ಗೌರವಿಸಿದರು. Hon. PM Shri @narendramodi Ji gifting the holy water from the sacred Mahakumbh to USA’s Director of National Intelligence, @TulsiGabbard, is a symbol of India’s civilizational strength and spiritual diplomacy. It embodies Bharat’s growing global stature and showcases the… pic.twitter.com/McHgquba47 — Yogi Adityanath (@myogiadityanath) March 17, 2025 ಪ್ರಧಾನಿ ಮೋದಿ ಅವರು ಮಹಾ ಕುಂಭದಿಂದ ತಂಡ ಗಂಗಾ ಜಲವನ್ನು ನೀಡಿ, ವಿಶ್ವದ ಅತಿದೊಡ್ಡ ಧಾರ್ಮಿಕ ಕೈಂಕರ್ಯದ ಮಹತ್ವದ ಬಗ್ಗೆ ತುಳಸಿ ಗಬ್ಬಾರ್ಡ್ ಅವರಿಗೆ ವಿವರಿಸಿದರು. "ಇದು ಮಹಾ ಕುಂಭದಿಂದ ಸಂಗ್ರಹಿಸಲಾದ ನೀರು, ಅಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿಯ ಸಂಗಮವಾದ ತ್ರಿವ...
ಔರಂಗಜೇಬ್ ಸಮಾಧಿ ವಿವಾದ: ನಾಗಪುರದಲ್ಲಿ ಹಿಂಸಾಚಾರ ಭುಗಿಲು

ಔರಂಗಜೇಬ್ ಸಮಾಧಿ ವಿವಾದ: ನಾಗಪುರದಲ್ಲಿ ಹಿಂಸಾಚಾರ ಭುಗಿಲು

Focus, Update Videos, ಪ್ರಮುಖ ಸುದ್ದಿ, ವೀಡಿಯೊ
ನಾಗ್ಪುರ: ಮೊಘಲ್‌ ದೊರೆ ಔರಂಗಜೇಬ್ ಸಮಾಧಿ ವಿಚಾರ ಇದೀಗ ಮಹಾರಾಷ್ಟ್ರದ ನಾಗಪುರವನ್ನು ಪ್ರಕ್ಷುಬ್ಧಗೊಳಿಸಿದೆ. ಎರಡು ಗುಂಪುಗಳ ನಡುವೆ ಸಂಘರ್ಷ ಭುಗಿಲೆದ್ದಿದ್ದು ಘಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಹಿಂಸಾಚಾರದಲ್ಲಿ ಮೂವರು ಪೊಲೀಸರು ಸೇರಿ 9 ಮಂದಿ ಗಾಯಗೊಂಡಿದ್ದಾರೆ. #WATCH | Maharashtra: Efforts underway to douse fire in vehicles that have been torched in Mahal area of ​​Nagpur. Tensions have broken out here following a dispute between two groups. pic.twitter.com/rRheKdpGh4 — ANI (@ANI) March 17, 2025 ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್‌ ಸಮಾಧಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಸೋಮವಾರ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸಿತ್ತು. ಅದರ ಬೆನ್ನಲ್ಲೆ ಕುರಾನ್‌ ಪ್ರತಿಯನ್ನು ಸುಡಲಾಗಿದೆ ಎಂಬ ವದಂತಿ ಹಬ್ಬಿದೆ. ಈ ವದಂತಿ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಹಲವೆಡೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರ...
‘ಮತೀಯವಾಗಿ ಮೀಸಲಾತಿಯನ್ನು ಅಂಬೇಡ್ಕರ್ ಅವರೇ ವಿರೋಧಿಸಿದ್ದರು, ಸುಪ್ರೀಂ ಕೋರ್ಟ್ ಕೂಡಾ ಆಕ್ಷೇಪಿಸಿತ್ತು’

‘ಮತೀಯವಾಗಿ ಮೀಸಲಾತಿಯನ್ನು ಅಂಬೇಡ್ಕರ್ ಅವರೇ ವಿರೋಧಿಸಿದ್ದರು, ಸುಪ್ರೀಂ ಕೋರ್ಟ್ ಕೂಡಾ ಆಕ್ಷೇಪಿಸಿತ್ತು’

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದಕ್ಕೆ ಬಿಜೆಪಿಯ ವಿರೋಧವಿದೆ ಎಂದು ವಿಧಾನಪರಿಷತ್ತಿನಲ್ಲಿ ಶಾಸಕ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ. ಧರ್ಮದ ಆಧಾರದಲ್ಲಿ‌ ಮೀಸಲಾತಿ ನೀಡುವುದನ್ನು ಸಾಂವಿಧಾನಿಕವಾಗಿ ತಿರಸ್ಕರಿಸಲಾಗಿದೆ, ದೇಶದ ಸರ್ವೋಚ್ಛ ನ್ಯಾಯಾಲಯ ಕೂಡಾ ಮೀಸಲಾತಿ ನೀಡುವುದನ್ನು ವಿರೋಧಿಸಿದೆ.ಮತೀಯವಾಗಿ ಮೀಸಲಾತಿ ನೀಡುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ ಎಂದು ಸ್ವತಃ ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದರು.‌ ಆದರೆ ಕಾಂಗ್ರೆಸ್ ಸರ್ಕಾರ ಇಂದು ಮುಸ್ಲಿಮರಿಗೆ ಮೀಸಲಾತಿ ನೀಡುವ… pic.twitter.com/kbIxdbPS3C— BJP Karnataka (@BJP4Karnataka) March 17, 2025 ಧರ್ಮದ ಆಧಾರದಲ್ಲಿ‌ ಮೀಸಲಾತಿ ನೀಡುವುದನ್ನು ಸಾಂವಿಧಾನಿಕವಾಗಿ ತಿರಸ್ಕರಿಸಲಾಗಿದೆ, ದೇಶದ ಸರ್ವೋಚ್ಛ ನ್ಯಾಯಾಲಯ ಕೂಡಾ ಮೀಸಲಾತಿ ನೀಡುವುದನ್ನು ವಿರೋಧಿಸಿದೆ ಎಂದು ಅವರು ರಾಜ್ಯ ಸರ್ಕಾರದ ಗಮನಸೆಳೆದಿದ್ದಾರೆ. ಮತೀಯವಾಗಿ ಮೀಸಲಾತಿ ನೀಡುವುದಕ್ಕೆ ನನ್ನ ಸ್ಪಷ್ಟ ವಿರೋಧವಿದೆ ಎಂದು ಸ್ವತಃ ಅಂಬೇಡ್ಕರ್ ಅವರೇ ಪ್ರತಿಪಾದಿಸಿದ್ದರು.‌ ಆದರೆ ಕಾಂಗ್ರೆಸ್ ಸರ್ಕಾರ ಇಂದು ಮುಸ್ಲಿಮರಿಗೆ ಮೀಸಲಾತಿ ನೀಡುವ...
‘ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್’: ರಾಜಕೀಯ ಗುರುವಿಗೆ ನಮಿಸಿದ ಡಿಕೆಶಿ

‘ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್’: ರಾಜಕೀಯ ಗುರುವಿಗೆ ನಮಿಸಿದ ಡಿಕೆಶಿ

Focus, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ಗದಗ: ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗದಗದಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್ ಸಹಿತ ಅನೇಕ ನಾಯಕರು, ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಹಕಾರಿ ಭೀಷ್ಮ ಎಂದೇ ಜನಜನಿತರಾಗಿರುವ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಗದಗ್ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ತಮ್ಮ ಆದರ್ಶ ನಾಯಕರಾಗಿದ್ದ ಕೆ.ಹೆಚ್.ಪಾಟೀಲ್ ಅವರನ್ನು ಸ್ಮರಿಸಿದ ಡಿ.ಕೆ.ಶಿವಕುಮಾರ್, ಸಹಕಾರ ರಂಗದ ಭೀಷ್ಮ ಕೆ.ಹೆಚ್.ಪಾಟೀಲ್ ಅವರ ಜನಪರ ಕಾಳಜಿಯ ನಿದರ್ಶನಗಳು ನಮ್ಮ ಮುಂದಿವೆ. ಅವರು ಚುನಾವಣೆಯಲ್ಲಿ ಸೋತಾಗ ಕುಗ್ಗದೆ, ಅಧಿಕಾರ ಸಿಕ್ಕಾಗ ಹಿಗ್ಗದೆ ದಕ್ಷತೆಯಿಂದ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ದೃಢ ನಿರ್ಧಾರಗಳನ್ನು ಕೈಗೊಂಡು, ಸಹಕಾರಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದರು. ಕೆ.ಹೆಚ್...
“ನಾನು ಸ್ವಯಂಸೇವಕ, ನನಗೆ ಈ ಸ್ಥಾನ, ಚೈತನ್ಯ ಕೊಟ್ಟಿದ್ದೂ ಸಂಘ”: RSSಗೆ ಕೃತಜ್ಞತೆ ಸಲ್ಲಿಸಿದ ಮೋದಿ

“ನಾನು ಸ್ವಯಂಸೇವಕ, ನನಗೆ ಈ ಸ್ಥಾನ, ಚೈತನ್ಯ ಕೊಟ್ಟಿದ್ದೂ ಸಂಘ”: RSSಗೆ ಕೃತಜ್ಞತೆ ಸಲ್ಲಿಸಿದ ಮೋದಿ

Focus, Update, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ವೈವಿಧ್ಯ
ನವದೆಹಲಿ: ತನ್ನನ್ನು ಈ ಮಟ್ಟಕ್ಕೆ ಬೆಳೆಸಿರುವುದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಜೀವನದಲ್ಲಿ ದೇಶಭಕ್ತಿ ಬೆಳೆಸಿದ್ದಕ್ಕಾಗಿ, ತಮ್ಮನ್ನು ಪೋಷಿಸಿದ್ದಕ್ಕಾಗಿ ಸಂಘಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. A wonderful conversation with @lexfridman, covering a wide range of subjects. Do watch! https://t.co/G9pKE2RJqh — Narendra Modi (@narendramodi) March 16, 2025 ಪಾಡ್‌ಕ್ಯಾಸ್ಟ್‌ನಲ್ಲಿ AI ಸಂಶೋಧಕ ಮತ್ತು ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಸಾಂಘಿಕ ಬದುಕಿನ ಬಗ್ಗೆ ಬೆಳಕುಚೆಲ್ಲಿದರು. ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕವಾದ RSS ತಮ್ಮನ್ನು ಒಬ್ಬ ವ್ಯಕ್ತಿಯಾಗಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ ಎಂದರು. 'ಇಂಗ್ಲಿಷ್' ಆವೃತ್ತಿಯಲ್ಲೂ ಓದಿ.. "RSS helped me find a life of purpose": PM Modi “RSS ಮೂಲಕ, ನಾನು ಉದ್ದೇಶಿತ ಜೀವನವನ್ನು ಕಂಡುಕೊಂಡೆ. ನಂತರ ಸಂತರ ನಡುವೆ ಸಮಯ ಕಳೆಯುವ ಅದೃಷ್ಟ ಸಿಕ್ಕ...
ಪೊಲೀಸ್ ಅಧಿಕಾರಿಯಿಂದಲೇ ಗೂಂಡಾಗಿರಿ? ಅಖಾಡಕ್ಕಿಳಿದ ವಿಜಯೇಂದ್ರ

ಪೊಲೀಸ್ ಅಧಿಕಾರಿಯಿಂದಲೇ ಗೂಂಡಾಗಿರಿ? ಅಖಾಡಕ್ಕಿಳಿದ ವಿಜಯೇಂದ್ರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಚಿತ್ರದುರ್ಗದಲ್ಲಿ PSI ಮೇಲೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣಕ್ಕೆ ಹಠಾತ್ ತಿರುವು ಸಿಕ್ಕಿದೆ. ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆ ದೃಶ್ಯವನ್ನು ಹಂಚಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪೊಲೀಸ್ ಅಧಿಕಾರಿಯೇ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ ಕೆಲವು ಕೆಳಹಂತದ ಪೊಲೀಸ್ ಅಧಿಕಾರಿಗಳು ಸಾಮಾನ್ಯರು ಹಾಗೂ ಜವಾಬ್ದಾರಿಯುತ ನಾಗರಿಕರ… pic.twitter.com/zf5ZN3pk3J — Vijayendra Yediyurappa (@BYVijayendra) March 15, 2025 ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣ...
ಭಾರತೀಯನಿಂದ ಗಿನ್ನೆಸ್ ದಾಖಲೆ: ಅತೀ ಹೆಚ್ಚು ಹೊತ್ತು ‘ಹರ್ಕ್ಯುಲಸ್ ಪಿಲ್ಲರ್’ ಹಿಡಿದುಟ್ಟುಕೊಂಡ ಖರಡಿ

ಭಾರತೀಯನಿಂದ ಗಿನ್ನೆಸ್ ದಾಖಲೆ: ಅತೀ ಹೆಚ್ಚು ಹೊತ್ತು ‘ಹರ್ಕ್ಯುಲಸ್ ಪಿಲ್ಲರ್’ ಹಿಡಿದುಟ್ಟುಕೊಂಡ ಖರಡಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ವೈವಿಧ್ಯ
ಭಾರತೀಯ ಅಥ್ಲೀಟ್ ವಿಸ್ಪಿ ಖರಡಿ ಅವರು ವಿಶ್ವದ ಅತೀ ದೊಡ್ಡ 'ಹರ್ಕ್ಯುಲಸ್ ಪಿಲ್ಲರ್ ಹೋಲ್ಡ್' ಅನ್ನು ಅತೀ ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. Longest duration holding Hercules pillars (male) 💪⏱️ 2 mins 10.75 seconds by @VispyKharadi 🇮🇳 pic.twitter.com/JxFFSU4xGv — Guinness World Records (@GWR) March 13, 2025    ಗುಜರಾತ್‌ನ ಸೂರತ್‌ನಲ್ಲಿ ಹೊಸ ದಾಖಲೆಯ ಸನ್ನಿವೇಶ ನಡೆದಿದೆ. ಖರಡಿ ಅವರು 2 ನಿಮಿಷ 10.75 ಸೆಕೆಂಡುಗಳ ಕಾಲ ಬೃಹತ್ ಕಂಬಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ತಮ್ಮ ಅಸಾಧಾರಣ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಗ್ರೀಕ್ ವಾಸ್ತುಶಿಲ್ಪದಿಂದ ಪ್ರೇರಿತವಾದ ಈ ಕಂಬಗಳು 123 ಇಂಚು ಎತ್ತರ ಮತ್ತು 20.5 ಇಂಚು ವ್ಯಾಸವನ್ನು ಹೊಂದಿವೆ. ಇದು ಸುಮಾರು166.7 - 168.9 ಕೆಜಿ ತೂಕವಿದ್ದು, ಅವು ಮಾನವ ಸಹಿಷ್ಣುತೆ ಮತ್ತು ಕಚ್ಚಾ ಶಕ್ತಿಯ ಮಿತಿಗಳನ್ನು ಮೀರಿವೆ ಎಂದು ಹೇಳಲಾಗುತ್ತಿದೆ....