Thursday, January 29

ವೀಡಿಯೊ

ಭಾರೀ ನಿರೀಕ್ಷೆ ಹುಟ್ಟಿಸಿದ ‘ದಿ ಡೆವಿಲ್’ ಟೀಸರ್

ಭಾರೀ ನಿರೀಕ್ಷೆ ಹುಟ್ಟಿಸಿದ ‘ದಿ ಡೆವಿಲ್’ ಟೀಸರ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ನಟ ದರ್ಶನ್ ಜನ್ಮದಿನದ ಸಂಭ್ರಮದ ನಡುವೆಯೇ ಅವರ ಹೊಸ ಸಿನಿಮಾ ‘ದಿ ಡೆವಿಲ್’ ಟೀಸರ್​ ರಿಲೀಸ್ ಆಗಿದೆ. ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಟೀಸರ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ‘ಕಾಟೇರ’ ಸಿನಿಮಾದ ಬಿಗ್ ಸಕ್ಸಸ್ ನಂತರ ದರ್ಶನ್ ಶುರು ಮಾಡಿದ ಸಿನಿಮಾ ‘ದಿ ಡೆವಿಲ್’ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದರೆ, ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರು. ಹಾಗಾಗಿ ಹಲವು ತಿಂಗಳ ಕಾಲ ‘ದಿ ಡೆವಿಲ್’ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಖುಷಿಪಟ್ಟಿದ್ದಾರೆ. https://www.youtube.com/watch?v=7ru18HS_934&ab_channel=SaregamaKannada...
ಮಧ್ಯಮ ವರ್ಗದವರಿಗೂ ಪ್ರಿಯವಾಗಲಿದೆ ‘ಐಫೋನ್ ಎಸ್‌ಇ 4’;

ಮಧ್ಯಮ ವರ್ಗದವರಿಗೂ ಪ್ರಿಯವಾಗಲಿದೆ ‘ಐಫೋನ್ ಎಸ್‌ಇ 4’;

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ವೈವಿಧ್ಯ
ಆಪಲ್ ತನ್ನ ವರ್ಷದ ಮೊದಲ ಪ್ರಮುಖ ಉತ್ಪನ್ನ ಬಿಡುಗಡೆಗೆ ಸಜ್ಜಾಗಿದ್ದು, ಫೆಬ್ರವರಿ 19 ಬುಧವಾರದಂದು ಬಿಡುಗಡೆಯಾಗಲಿದೆ. ಸಿಇಒ ಟಿಮ್ ಕುಕ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡುವ ಮೂಲಕ 'ಐಫೋನ್ ಎಸ್‌ಇ 4' ದಿನಾಂಕವನ್ನು ದೃಢಪಡಿಸಿದ್ದಾರೆ. 'ಕುಟುಂಬದ ಹೊಸ ಸದಸ್ಯರನ್ನು ಭೇಟಿಯಾಗಲು ಸಿದ್ಧರಾಗಿ' ಎಂಬ ಸಂದೇಶದೊಂದಿಗೆ ಅವರು ಮುಂಬರುವ ಸರಣಿ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ತೆರೆದಿಟ್ಟಿದ್ದಾರೆ. ಜೊತೆಗೆ ಅನಿಮೇಟೆಡ್ ಆಪಲ್ ಲೋಗೋ ಕೂಡ ಇದೆ. ಆಪಲ್ ಅಧಿಕೃತವಾಗಿ ಏನನ್ನು ಸಂಗ್ರಹಿಸಿದೆ ಎಂಬುದನ್ನು ಬಹಿರಂಗಪಡಿಸಿಲ್ಲವಾದರೂ, ಮ್ಯಾಕ್‌ಬುಕ್ ಏರ್, ಐಪ್ಯಾಡ್ ಮತ್ತು ಬಹುಶಃ ವಿಷನ್ ಪ್ರೊ ಹೆಡ್‌ಸೆಟ್‌ಗೆ ನವೀಕರಣಗಳ ಜೊತೆಗೆ ಬಹುನಿರೀಕ್ಷಿತ ಐಫೋನ್ ಎಸ್‌ಇ 4 ಮೇಲೆ ಸ್ಪಾಟ್‌ಲೈಟ್ ಇರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಹೊಸ 'iPhone SE 4' ಹೇಗಿದೆ ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ವೀಡಿಯೊಗಳು ಹರಿದಾಡುತ್ತಿವೆ. ಆದರೆ ಹೊಸ 'iPhone SE 4' ಇದೇ ರೀತಿಯಲ್ಲೇ ಇರಲಿದೆಯೇ ಎಂಬ ಬಗ್ಗೆ ಕಂಪನಿತು ತನ್ನ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ...
ಒಂದೆಡೆ KWIN City, ಗ್ಲೋಬಲ್ ಹಬ್ ಎಂದು ಬೊಬ್ಬಿಡುತ್ತಿರುವ ಸರ್ಕಾರ; ಮತ್ತೊಂದೆಡೆ ಯಮಕಿಂಕರರ ತಾಣದಂತಿರುವ ಆಸ್ಪತ್ರೆ!

ಒಂದೆಡೆ KWIN City, ಗ್ಲೋಬಲ್ ಹಬ್ ಎಂದು ಬೊಬ್ಬಿಡುತ್ತಿರುವ ಸರ್ಕಾರ; ಮತ್ತೊಂದೆಡೆ ಯಮಕಿಂಕರರ ತಾಣದಂತಿರುವ ಆಸ್ಪತ್ರೆ!

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: KWIN City, ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆ, ಗ್ಲೋಬಲ್ ಹಬ್, ಪ್ರಗತಿಯಮರುಕಲ್ಪನೆ ಎಂದು ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನಲ್ಲಿ ಬೊಬ್ಬೆ ಹೊಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಉತ್ತರ ಕರ್ನಾಟಕದ ಆಸ್ಪತ್ರೆಗಳ ದುಸ್ಥಿತಿ ಅನಾವರಣವಾಗಿದೆ. KWIN City, ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆ, ಗ್ಲೋಬಲ್ ಹಬ್, #ಪ್ರಗತಿಯಮರುಕಲ್ಪನೆ ಎಂದು ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನಲ್ಲಿ ಬೊಬ್ಬೆ ಹೊಡೆಯುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಉತ್ತರ ಕರ್ನಾಟಕದ ಆಸ್ಪತ್ರೆಗಳ ದುಸ್ಥಿತಿ ಇದು! ಈಗಾಗಲೇ ನೂರಾರು ಬಾಣಂತಿಯರು ಇದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೂ, ಇನ್ನೂ ಎಚ್ಚೆತ್ತಿಲ್ಲದಿರವುದು ನಮ್ಮ… pic.twitter.com/e885sKwlNj — Arvind Bellad (@BelladArvind) February 13, 2025   ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಅವರು ಈ ಕುರಿತಂತೆ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣ 'X'ನಲ್ಲಿ ಪೋಸ್ಟ್ ಮಾಡಿದ್ದು, ಆಸ್ಪತ್ರೆಗಳ ಅವ್ಯವಸ್ಥೆಗೆ ಹೊಣೆಗಾರರಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಈಗಾಗಲೇ ನೂರಾರು ಬಾಣಂತಿಯ...
ವಿಜಯ್ ದೇವರಕೊಂಡ ಅವರ 12ನೇ ಸಿನಿಮಾ ‘ಕಿಂಗ್​ಡಮ್’; ಟೀಸರ್ ಅನಾವರಣ

ವಿಜಯ್ ದೇವರಕೊಂಡ ಅವರ 12ನೇ ಸಿನಿಮಾ ‘ಕಿಂಗ್​ಡಮ್’; ಟೀಸರ್ ಅನಾವರಣ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ..  Actor Vijay Deverakonda’s next titled Kingdom; Film to hit screens on May 30 ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾ ಬಗ್ಗೆ ಇದ್ದ ಕುತೂಹಲ ತಣ್ಣಗಾಗಿದೆ. ಈ ವರೆಗೂ ವಿಜಯ್ ದೇವರಕೊಂಡ ಅವರ ಮುಂಬರುವ ಸಿನಿಮಾವನ್ನು ‘VD12’ ಎಂದು ಕರೆಯಲಾಗುತ್ತಿತ್ತು. ಇದೀಗ ಚಿತ್ರದ ಟೈಟಲ್ ಅನಾವರಣ ಆಗಿದೆ. ಟೀಸರ್​ ಕೂಡ ಬಿಡುಗಡೆ ಆಗಿದ್ದು, ನೂತನ ಸಿನಿಮಾಗೆ ‘ಕಿಂಗ್​ಡಮ್’ ಎಂದು ಹೆಸರಿಡಲಾಗಿದೆ. https://youtu.be/McPGQ-Nb9Uk?si=crsksyReJMcXmBEC ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ‘ಕಿಂಗ್​ಡಮ್​’ ಸಿನಿಮಾದ ಟೀಸರ್ ಬಿಡುಗಡೆಯಾಗಿವೆ. ತೆಲುಗಿನಲ್ಲಿ ಜೂನಿಯರ್​ ಎನ್​ಟಿಆರ್​, ಹಿಂದಿಯಲ್ಲಿ ರಣಬೀರ್​ ಕಪೂರ್​ ಹಾಗೂ ತಮಿಳಿನಲ್ಲಿ ಸೂರ್ಯ ಅವರು ‘ಕಿಂಡ್​ಕಮ್’ ಟೀಸರ್​ಗೆ ಧ್ವನಿ ನೀಡಿರುವುದು ವಿಶೇಷ.....
ಡಾಲಿ -ಧನ್ಯತಾ ಜೋಡಿ ಬಗ್ಗೆ ಸುಂದರ ವೀಡಿಯೋ; ಮದುವೆಗೆ ಆಹ್ವಾನ..

ಡಾಲಿ -ಧನ್ಯತಾ ಜೋಡಿ ಬಗ್ಗೆ ಸುಂದರ ವೀಡಿಯೋ; ಮದುವೆಗೆ ಆಹ್ವಾನ..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಡಾಲಿ ಧನಂಜಯ್ ಅವರು ಫೆಬ್ರವರಿ 16 ರಂದು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಮದುವೆಗೆ ಅಭಿಮಾನಿ ಬಳಗವನ್ನು ಆಹ್ವಾನಿಸಿರುವ ಅವರು ಸುಂದರ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಧನಂಜಯ್-ಧನ್ಯತಾ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಆ ಸನ್ನಿವೇಶದ ವಿಡಿಯೋವನ್ನು ದಾಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ತಾಗಿ ವೈರಲ್ ಆಗುತ್ತಿದೆ....
ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಪ್ರಯಾಗರಾಜ್‌: ಜಗದ್ವಿಖ್ಯಾತ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ಮಹಾ ಕುಂಭಕ್ಕೆ ಆಗಮಿಸುವ ಭಕ್ತರಿಗಾಗಿ ‘ನೇತ್ರ ಮಹಾಕುಂಭ’ ಹೆಸರಿನ ವಿಶೇಷ ಶಿಬಿರವನ್ನು ಸ್ಥಾಪಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಚಶ್ಮೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ. ಜನವರಿ 13 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಿಬಿರವು ಅಗತ್ಯವಿರುವವರಿಗೆ ಉಚಿತ ಕಣ್ಣು ಶಸ್ತ್ರಚಿಕಿತ್ಸೆಯನ್ನೂ ಒದಗಿಸುತ್ತಿದ್ದು, ಕಣ್ಣು ದಾನ ಕುರಿತು ಜನಜಾಗೃತಿ ಮೂಡಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಸಕ್ಷಮ್ ಫೌಂಡೇಶನ್ ಹಾಗೂ ಇತರ ಸಾಮಾಜಿಕ ಸಂಘಟನೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ದಿನನಿತ್ಯ ಸಾವಿರಾರು ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಈ ಬಾರಿ ‘ನೇತ್ರ ಮಹಾಕುಂಭ’ದ ಉದ್ದೇಶ ಐದು ಲಕ್ಷ ಜನರಿಗೆ ಉಚಿತ ಕಣ್ಣಿನ ಆರೈಕೆ ನೀಡುವ ಪ್ರಯತ್ನ ಸಾಗಿದೆ. ಇದರಲ್ಲಿ ಮೂರು ಲಕ್ಷ ಜನರಿಗೆ ಉಚಿತ ಕಣ್ಣು ಪರೀಕ್ಷೆ, ಚಶ್ಮೆ ಹಾಗೂ ಔಷಧಿ ವಿತರಣೆ ಸೇರಿದಂತೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಒದಗಿಸಲಾಗುತ್ತಿದೆ. ಈ ಶಿಬಿರವನ್ನು...
ಭ್ರಷ್ಟರ ಬೆನ್ನಾತ್ತಿದ ಲೋಕಾಯುಕ್ತ; ರಾಜ್ಯದ ಹಲವೆಡೆ ದಾಳಿ

ಭ್ರಷ್ಟರ ಬೆನ್ನಾತ್ತಿದ ಲೋಕಾಯುಕ್ತ; ರಾಜ್ಯದ ಹಲವೆಡೆ ದಾಳಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಭ್ರಷ್ಟರ ಬೆನ್ನಾತ್ತಿರುವ ಲೋಕಾಯುಕ್ತ ಪೊಲೀಸರು ಶುಕ್ರವಾರ ಬೆಳ್ಳಂಬೆಳಿಗ್ಗೆ ಮತ್ತೆ ಕಾರ್ಯಾಚರಣೆಯ ಅಖಾಡಕ್ಕೆ ಧುಮುಕಿದ್ದಾರೆ. ಬೆಂಗಳೂರು, ಬೆಳಗಾವಿ, ರಾಯಚೂರು, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಕೈಗೊಂಡಿದ್ದಾರೆ. ರಾಯಚೂರಿನಲ್ಲಿ ಜವಾರ್ ಕಾಲೋನಿಯಲ್ಲಿರುವ ಜಿಲ್ಲಾ ಪಂಚಾಯತಿ ಲೆಕ್ಕಪತ್ರ ಸಹಾಯಕ ಅಧಿಕಾರಿ ನರಸಿಂಗರಾವ್ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಹೊಲಗೇರಿ ಗ್ರಾಮ ಪಂಚಾಯಿತಿ ಪಿಡಿಒ ಹಿರೇಮಠ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬೆಳಗಾವಿಯ ಪ್ರಭಾರಿ ಸಬ್ ರಿಜಿಸ್ಟ್ರಾರ್ ಸಚಿನ್ ಮಂಡೇದ್ ಅವರ ಬೆಳಗಾವಿ ನಗರದ ಆನಗೋಳದಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ರಾಯಬಾಗ ತಾಲೂಕಿನ ಹಾರೂಗೇರಿ ವೆಟರ್ನರಿ ಇನ್ಸ್ ಪೆಕ್ಟರ್ ಸಂಜಯ್ ಮನೆ ಮೇಲೆ ಮೇಲೂ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ....
VIDEO: ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

VIDEO: ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಯಶೋಗಾಥೆ ಬರೆದಿದೆ. ಎನ್'ವಿಎಸ್-02 ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯಿಸಿದೆ. ಈ ಮೂಲಕ ಇಸ್ರೋ ಸಂಸ್ಥೆಯು ತನ್ನ 100ನೇ ಉಡ್ಡಯನವನ್ನು ಬುಧವಾರ ಯಶಸ್ವಿಯಾಗಿ ನಡೆಸಿದೆ. ಈ ಕುರಿತ ವೀಡಿಯೊವನ್ನು ಇಸ್ರೋ ಸಂಸ್ಥೆ ಹಂಚಿಕೊಂಡಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಯಶೋಗಾಥೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. 🌍 A view like no other! Watch onboard footage from GSLV-F15 during the launch of NVS-02. India’s space programme continues to inspire! 🚀 #GSLV #NAVIC #ISRO pic.twitter.com/KrrO3xiH1s — ISRO (@isro) January 29, 2025...
ಇಸ್ರೋ ಶತಕದ ಯಶೋಗಾಥೆ; ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

ಇಸ್ರೋ ಶತಕದ ಯಶೋಗಾಥೆ; ಎನ್’ವಿಎಸ್-02 ಉಪಗ್ರಹ ಯಶಸ್ವಿ ಉಡ್ಡಯನ

Focus, Update Videos, ಆಧ್ಯಾತ್ಮ, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಯಶೋಗಾಥೆ ಬರೆದಿದೆ. ಎನ್'ವಿಎಸ್-02 ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯಿಸಿದೆ. ಈ ಮೂಲಕ ಇಸ್ರೋ ಸಂಸ್ಥೆಯು ತನ್ನ 100ನೇ ಉಡ್ಡಯನವನ್ನು ಬುಧವಾರ ಯಶಸ್ವಿಯಾಗಿ ನಡೆಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಬುಧವಾರ ಬೆಳಿಗ್ಗೆ 6.23ರ ಸುಮಾರಿಗೆ ಎನ್'ವಿಎಸ್-02 ಉಪಗ್ರಹ ಹೊತ್ತ ಜಿಎಸ್ಎಲ್'ವಿ ನಭಕ್ಕೆ ಜಿಗಿದಿದೆ. ಸ್ವದೇಶಿ ಜಿಪಿಎಸ್ ಯೋಜನೆಯ ಭಾಗವಾಗಿ ಎನ್'ವಿಎಸ್-02 ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. 1963ರ ನ.21ರಂದು ಅಮೆರಿಕಾದ ರಾಕೆಟ್ ಬಳಸಿ ಮೊದಲ ಬಾರಿಗೆ ಉಪಗ್ರಹ ಮಾಡಿದ್ದ ಇಸ್ರೋ, ಬುಧವಾರ ತನ್ನ 100ನೇ ಉಡ್ಡಯನದೊಂದಿಗೆ ಇತಿಹಾಸ ಸೃಷ್ಟಿಸಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೋ, ಬಾಹ್ಯಾಕಾಶ ನ್ಯಾವಿಗೇಷನ್‌ನಲ್ಲಿ ಭಾರತ ಹೊಸ ಎತ್ತರಕ್ಕೆ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದೆ....