ಅಲ್ಬೇನಿಯಾದ AI ಸಚಿವೆ ‘ಡಿಯೆಲ್ಲಾ’ ಈಗ ಗರ್ಭಿಣಿ; 83 ‘AI ಮಕ್ಕಳಿಗೆ’ ಜನ್ಮನೀಡುವ ನಿರೀಕ್ಷೆ
ಟಿರಾನಾ (ಅಲ್ಬೇನಿಯಾ): ಅಲ್ಬೇನಿಯಾದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಚಿವೆ ಡಿಯೆಲ್ಲಾ ಈಗ “ಗರ್ಭಿಣಿ” ಎಂದು ಅಲ್ಬೇನಿಯಾ ಪ್ರಧಾನಿ ಎಡಿ ರಾಮ ಘೋಷಿಸಿದ್ದಾರೆ. ಅವರು 83 “AI ಮಕ್ಕಳಿಗೆ” ಜನ್ಮ ನೀಡುವ ನಿರೀಕ್ಷೆಯಿದ್ದು, ಪ್ರತಿಯೊಬ್ಬ ಸಮಾಜವಾದಿ ಪಕ್ಷದ ಸಂಸದನಿಗೂ ಒಬ್ಬ ಸಹಾಯಕನಂತೆ ಕಾರ್ಯನಿರ್ವಹಿಸಲಿದ್ದಾರೆ.
ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಜಾಗತಿಕ ಸಂವಾದ (BGD) ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ, “ನಾವು ಡಿಯೆಲ್ಲಾ ಮೂಲಕ ಹೊಸ ಪ್ರಯೋಗ ಮಾಡಿದ್ದೇವೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದೇವೆ. ಈಗ ಅವರು 83 ‘ಮಕ್ಕಳಿಗೆ’ ಜನ್ಮ ನೀಡಲಿದ್ದಾರೆ,” ಎಂದು ಹಾಸ್ಯಾತ್ಮಕವಾಗಿ ಹೇಳಿದರು.
ಈ “ಮಕ್ಕಳು” ಅಥವಾ AI ಸಹಾಯಕರು ಸಂಸತ್ತಿನ ಎಲ್ಲಾ ಕಲಾಪಗಳನ್ನು ದಾಖಲಿಸಿ, ಸಂಸದರು ಹಾಜರಾಗಲು ಸಾಧ್ಯವಾಗದ ಸಭೆಗಳ ವಿವರ ಮತ್ತು ಚರ್ಚೆಗಳ ಮಾಹಿತಿಯನ್ನು ನವೀಕರಿಸುವ ಕಾರ್ಯವನ್ನು ನಿರ್ವಹಿಸಲಿದ್ದಾರೆ. “ಪ್ರತಿಯೊಬ್ಬ ಸಹಾಯಕನು ತನ್ನ ‘ತಾಯಿ’ ಡಿಯೆಲ್ಲಾ ಅವರಿಂದ ತರಬೇತಿ ಪಡೆಯಲಿದ್ದಾರೆ,” ಎಂದು ರಾಮ ವಿವರಿಸಿದರು. ಈ ವ್ಯವಸ್ಥೆ 2026ರ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ...









