Wednesday, August 5

ವೀಡಿಯೊ

‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಳಿ‌ ಸಿಕ್ಕಿಬಿದ್ದಿದ್ದಾರೆ. ಗುತ್ತಿಗೆದಾರರಿಂದ ಲಂಚ ಪಡೆಯುತ್ತಿದ್ದರೆಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಬೇರೆ ಪಕ್ಷದವರ ಮೇಲೆ ಲಂಚದ ಆರೋಪವನ್ನು ಸುಲಭವಾಗಿ ಮಾಡುತ್ತಿದ್ದರು. ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು ಎಂದಿದ್ದಾರೆ.ಲೋಕಾಯುಕ್ತರ ತನಿಖೆ ನಡೆದು ಪೂರ್ಣ ಸತ್ಯಾಸತ್ಯತೆ ಹೊರಬರಲಿ. ನಾವ್ಯಾರು ಅದಕ್ಕೆ ಅಡ್ಡಿಮಾಡಲ್ಲ ಎಂದವರು ತಿಳಿಸಿದ್ದಾರೆ. ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿಯವರು ಲಂಚದ ಆರೋಪದ ಮೇಲೆ ಲೋಕಾಯುಕ್ತರ ಬಳಿ‌ ಸಿಕ್ಕಿಬಿದ್ದಿದ್ದಾರೆ. ಬಿಜೆಪಿಯವರು ಬೇರೆ ಪಕ್ಷದವರ ಮೇಲೆ ಲಂಚದ ಆರೋಪವನ್ನು ಸುಲಭವಾಗಿ ಮಾಡುತ್ತಿದ್ದರು. ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು. ಲೋಕಾಯುಕ್ತರ ತನಿಖೆ ನಡೆದು ಪೂರ್ಣ ಸತ್ಯಾಸತ್ಯತೆ ಹೊರಬರಲಿ.… pic.twitter.com/9igAeHXMx3&mda...
ಯಾವುದೇ ಕೆಮಿಕಲ್ ಫ್ಯಾಕ್ಟರಿ ಪೊಲೀಸರ ಕಣ್ತಪ್ಪಿಸಿ ನಡೆಯುವಂತಿಲ್ಲ

ಯಾವುದೇ ಕೆಮಿಕಲ್ ಫ್ಯಾಕ್ಟರಿ ಪೊಲೀಸರ ಕಣ್ತಪ್ಪಿಸಿ ನಡೆಯುವಂತಿಲ್ಲ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ಡ್ರಗ್ಸ್ ದಂಧೆ ವಿಚಾರದಲ್ಲಿ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಗೊಂಡಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ನಿರಂತರವಾಗಿ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಂಡು, ನೂರಾರು ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದಾರೆ ತಿಳಿಸಿರುವ ಅವರು, ರಾಜ್ಯದಲ್ಲಿ ಯಾವುದೇ ರೀತಿಯ ಕೆಮಿಕಲ್ ಫ್ಯಾಕ್ಟರಿ ಪೊಲೀಸರ ಕಣ್ತಪ್ಪಿಸಿ ನಡೆಯುವಂತಿಲ್ಲ ಎಂದಿದ್ದಾರೆ.ಎಲ್ಲ ರೀತಿಯ ಫ್ಯಾಕ್ಟರಿಗಳಿಗೆ ಆಯಾ ವ್ಯಾಪ್ತಿಯ ಸ್ಥಳೀಯ ಪೊಲೀಸರು ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಫ್ಯಾಕ್ಟರಿಯಲ್ಲಿನ ಕಾರ್ಯಚಟುವಟಿಕೆ ಹಾಗೂ ಅಲ್ಲಿ ಬಳಸಲಾಗುವ ಕೆಮಿಕಲ್‌ಗಳು, ಯಂತ್ರಗಳ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕು ಎಂದು ಗೃಹ ಸಚಿವರು ತಿಳಿಸಿದ್ದಾರೆ. ಡ್ರಗ್ಸ್ ದಂಧೆ ವಿಚಾರದಲ್ಲಿ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಗೊಂಡಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದಾದ್ಯಂತ ಪೊಲೀಸರು ನಿರಂತರವಾಗಿ ವಿಶೇಷ ಕಾರ್ಯಾಚರಣೆಗಳನ್ನು ಕೈಗೊಂಡು, ನೂರಾರು ಪ್ರಕರಣಗಳನ್ನು ದಾಖಲಿಸಲಾಗುತ್ತಿದ್ದಾರೆ.. ರಾಜ್ಯದಲ್ಲಿ ಯಾವುದೇ ರೀತಿಯ...
‘ಅಬಕಾರಿ ಲಂಚಾವತಾರ’: ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ – ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ

‘ಅಬಕಾರಿ ಲಂಚಾವತಾರ’: ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ – ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಆರೋಪವನ್ನು ಮುಂದಿಟ್ಟು ಬಿಜೆಪಿ ಶಾಸಕರು ಹೋರಾಟವನ್ನು ಮುಂದುವರಿಸಿದ್ದಾರೆ.ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿರುವ ಶಾಸಕರು, ಅಬಕಾರಿ ಸಚಿವರ ರಾಜೀನಾಮೆಗೆ ಪಟ್ಟುಹಿಡಿದರು. ವಿಧಾನ ಪರಿಷತ್ ಸದಸ್ಯರೂ ಈ ಹೋರಾಟವನ್ನು ಬೆಂಬಲಿಸಿದ್ದು, ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿದ್ದಾರೆ.ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿ ಗಮನಸೆಳೆದರು. ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ.#CongressFailsKarnataka#CongressLootsKarnataka pic.twitter.com/gIXKHQR4o3— N Ravi Kumar (@nrkbjp) February 4, 2026...
ದೇಶದ 45 ಕಡೆ 61,000ಕ್ಕೂ ಹೆಚ್ಚು ಮಂದಿಗೆ ವರ್ಚುವಲ್ ಮೂಲಕ ನೇಮಕಾತಿ ಪತ್ರ ವಿತರಿಸಿದ ಮೋದಿ

ದೇಶದ 45 ಕಡೆ 61,000ಕ್ಕೂ ಹೆಚ್ಚು ಮಂದಿಗೆ ವರ್ಚುವಲ್ ಮೂಲಕ ನೇಮಕಾತಿ ಪತ್ರ ವಿತರಿಸಿದ ಮೋದಿ

ದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ಯುವಜನರನ್ನು ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳೊಂದಿಗೆ ಸಂಪರ್ಕಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ 18ನೇ ರೋಜ್‌ಗಾರ್ ಮೇಳದಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಆಯ್ಕೆಯಾದ 61,000ಕ್ಕೂ ಹೆಚ್ಚು ಯುವಕರಿಗೆ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು.ದೇಶದಾದ್ಯಂತ 45 ಸ್ಥಳಗಳಲ್ಲಿ ನಡೆದ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “2026ರ ಆರಂಭವು ಹೊಸ ಸಂತೋಷಗಳ ಆರಂಭವನ್ನು ಸೂಚಿಸುತ್ತದೆ. ವಸಂತ ಪಂಚಮಿಯ ನಂತರ ನಿಮ್ಮ ಜೀವನದಲ್ಲೂ ಹೊಸ ವಸಂತ ಆರಂಭವಾಗುತ್ತಿದೆ” ಎಂದು ಹೇಳಿದರು. ನೇಮಕಾತಿ ಪತ್ರಗಳನ್ನು ರಾಷ್ಟ್ರ ನಿರ್ಮಾಣದ ಆಹ್ವಾನ ಪತ್ರ ಹಾಗೂ ‘ವಿಕ್ಷಿತ್ ಭಾರತ’ದ ಸಂಕಲ್ಪ ಪತ್ರ ಎಂದು ಅವರು ವರ್ಣಿಸಿದರು.ಗೃಹ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು, ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಸಚಿವಾಲಯಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರು ಸೇರಲಿದ್ದಾರೆ. ರೋಜ್‌ಗಾರ್ ಮೇಳವನ್ನು ಮಿಷನ್ ಮೋಡ್‌ನಲ್ಲಿ ಆರಂಭಿಸಿರು...
‘ಕೋಮುವಾದಿ’ ಹೇಳಿಕೆ ವಿವಾದಕ್ಕೆ ಎ.ಆರ್. ರೆಹಮಾನ್ ಸ್ಪಷ್ಟನೆ

‘ಕೋಮುವಾದಿ’ ಹೇಳಿಕೆ ವಿವಾದಕ್ಕೆ ಎ.ಆರ್. ರೆಹಮಾನ್ ಸ್ಪಷ್ಟನೆ

ದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಮುಂಬೈ: ಹಿಂದಿ ಚಿತ್ರರಂಗದಲ್ಲಿ ‘ಕೋಮುವಾದಿ’ ಪಕ್ಷಪಾತವಿದೆ ಎಂಬ ತಮ್ಮ ಹೇಳಿಕೆಗೆ ಸಂಬಂಧಿಸಿ ಉದ್ಭವಿಸಿದ ವಿವಾದದ ಬಗ್ಗೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಸ್ಪಷ್ಟನೆ ನೀಡಿದ್ದಾರೆ. ಯಾರ ಭಾವನೆಗಳನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ ಎಂದು ಅವರು ಹೇಳಿದ್ದಾರೆ.ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊ ಹಂಚಿಕೊಂಡಿರುವ ರೆಹಮಾನ್, ಭಾರತ ತಮ್ಮ ಮನೆ ಮಾತ್ರವಲ್ಲ, ತಮ್ಮ ಸ್ಫೂರ್ತಿ ಮತ್ತು ಗುರು ಕೂಡ ಆಗಿದೆ ಎಂದು ಹೇಳಿದ್ದಾರೆ. “ಸಂಗೀತವು ಯಾವಾಗಲೂ ಸಂಸ್ಕೃತಿಗಳನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ನನ್ನ ಮಾರ್ಗ. ನನ್ನ ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದರೆ ಸಂಗೀತದ ಮೂಲಕ ಗೌರವ ಸಲ್ಲಿಸುವುದೇ ನನ್ನ ಆಶಯ. ನಾನು ಎಂದಿಗೂ ನೋವುಂಟು ಮಾಡಲು ಬಯಸಿಲ್ಲ,” ಎಂದು ತಿಳಿಸಿದ್ದಾರೆ.ಭಾರತೀಯನಾಗಿರುವುದಕ್ಕೆ ತಾವು ಹೆಮ್ಮೆಪಡುತ್ತೇನೆ ಎಂದಿರುವ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಬಹುಸಾಂಸ್ಕೃತಿಕ ಧ್ವನಿಗಳಿಗೆ ಅವಕಾಶ ನೀಡುವ ವಾತಾವರಣವೇ ತಮ್ಮ ಸೃಜನಶೀಲತೆಯ ಬಲವಾಗಿದೆ ಎಂದು ಹೇಳಿದರು. ವೇವ್ ಶೃಂಗಸಭೆ,...
ಲಕ್ಕುಂಡಿಯಲ್ಲಿ ಉತ್ಖನನ; ಸಾರ್ವಜನಿಕ ಪ್ರವೇಶ, ಫೋಟೋ–ವೀಡಿಯೋಗ್ರಫಿಗೆ ಸಂಪೂರ್ಣ ನಿಷೇಧ

ಲಕ್ಕುಂಡಿಯಲ್ಲಿ ಉತ್ಖನನ; ಸಾರ್ವಜನಿಕ ಪ್ರವೇಶ, ಫೋಟೋ–ವೀಡಿಯೋಗ್ರಫಿಗೆ ಸಂಪೂರ್ಣ ನಿಷೇಧ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಭಾರೀ ಮೌಲ್ಯದ ಚಿನ್ನಾಭರಣ ಪತ್ತೆಯಾದ ಹಿನ್ನೆಲೆಯಲ್ಲಿ, ಅಲ್ಲಿನ ಕೋಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಎದುರು ಉತ್ಖನನ ಕಾರ್ಯ ಆರಂಭಿಸಲಾಗಿದ್ದು, ಉತ್ಖನನ ನಡೆಯುತ್ತಿರುವ ಸ್ಥಳವನ್ನು ನಿರ್ಬಂಧಿತ ಪ್ರದೇಶವಾಗಿ ಘೋಷಿಸಲಾಗಿದೆ.ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಜಾಗದಲ್ಲಿ ಜನವರಿ 16ರಿಂದ ಉತ್ಖನನ ಕಾರ್ಯ ಆರಂಭವಾಗಿದ್ದು, ಪ್ರದೇಶ ಅತ್ಯಂತ ಸೂಕ್ಷ್ಮವಾಗಿರುವ ಕಾರಣ ಸಾರ್ವಜನಿಕ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕಮಲಾಪುರ–ಹಂಪಿ ಹಾಗೂ ಉತ್ಖನನದ ಸಹ ನಿರ್ದೇಶಕರು ಜನವರಿ 16ರಂದು ನೀಡಿದ ಪತ್ರದ ಆಧಾರದಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ.ಅಧಿಕೃತವಾಗಿ ನೇಮಕಗೊಂಡ ಸಿಬ್ಬಂದಿಯನ್ನು ಹೊರತುಪಡಿಸಿ, ಯಾವುದೇ ಸಾರ್ವಜನಿಕರು, ಪ್ರವಾಸಿಗರು ಅಥವಾ ಇತರ ವ್ಯಕ್ತಿಗಳು ಉತ್ಖನನ ಸ್ಥಳಕ್ಕೆ ಪ್ರವೇಶಿಸುವುದು, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ನಡೆಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.ಈ ಕುರಿತು ಗದಗ ಜಿಲ್ಲಾಧಿಕ...
ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಓಟಿನ ಆಸೆಗಾಗಿ ದೇಶದ ಸುರಕ್ಷತೆ ಜೊತೆ ಆಟವಾಡಬೇಡಿ’ ಎಂದ ರವಿ

ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಓಟಿನ ಆಸೆಗಾಗಿ ದೇಶದ ಸುರಕ್ಷತೆ ಜೊತೆ ಆಟವಾಡಬೇಡಿ’ ಎಂದ ರವಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ಬಾಂಗ್ಲಾದೇಶಿಗಳಿಗೆ 1,500 ರೂ.ಗೆ ಆಧಾರ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂಬ ಆರೋಪ ಬಗ್ಗೆ ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ವಾಕ್ಸಮರ ತಾರಕಕ್ಕೇರಿದೆ.ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, "ಅಕ್ರಮ ವಲಸಿಗರು ರಾಜ್ಯಕ್ಕೆ ಮಾರಕವಾಗಬಹುದು ಎಂಬುದನ್ನು ಕಾಂಗ್ರೆಸ್ ಅರಿಯದಿರುವುದು ದುರಾದೃಷ್ಟಕರ. ನಿಮ್ಮ ಓಟಿನ ಆಸೆಗಾಗಿ ದೇಶದ ಆಂತರಿಕ ಸುರಕ್ಷತೆಯೊಂದಿಗೆ ಆಟವಾಡಬೇಡಿ" ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಅಕ್ರಮ ವಲಸಿಗರು ರಾಜ್ಯಕ್ಕೆ ಮಾರಕವಾಗಬಹುದು ಎಂಬುದನ್ನು ಕಾಂಗ್ರೆಸ್ ಅರಿಯದಿರುವುದು ದುರಾದೃಷ್ಟಕರ. ನಿಮ್ಮ ಓಟಿನ ಆಸೆಗಾಗಿ ದೇಶದ ಆಂತರಿಕ ಸುರಕ್ಷತೆಯೊಂದಿಗೆ ಆಟವಾಡಬೇಡಿ.." pic.twitter.com/SETnPHg3oo— Ravi C T 🇮🇳 ರವಿ ಸಿ ಟಿ (@CTRavi_BJP) January 15, 2026...
ಸಂಕ್ರಾಂತಿ ಸಡಗರ: ಸಂಪುಟ ಸಹೋದ್ಯೋಗಿ ಮನೆಯಲ್ಲಿ ಪೊಂಗಲ್ ಆಚರಿಸಿದ ಮೋದಿ

ಸಂಕ್ರಾಂತಿ ಸಡಗರ: ಸಂಪುಟ ಸಹೋದ್ಯೋಗಿ ಮನೆಯಲ್ಲಿ ಪೊಂಗಲ್ ಆಚರಿಸಿದ ಮೋದಿ

ದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನಾಡಿನೆಲ್ಲೆಡೆ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತಿದೆ. ಉತ್ತರಾಯಣ ಪರ್ವಕಾಲದಲ್ಲಿ ಸಂಕ್ರಾಂತಿ ಸಡಗರ ಹೆಚ್ಚಿದೆ. ನಾಡಿನ ದೇವಾಲಯಗಳಲ್ಲಿ ಮನೆ-ಮನೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟ ಸಹೋದ್ಯೋಗಿ ಎಲ್. ಮುರುಗನ್ ಅವರ ನಿವಾಸದಲ್ಲಿ ಏರ್ಪಡಿಸಲಾದ ಸಂಕ್ರಾಂತಿ (ಪೊಂಗಲ್) ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡರು. ಸಾಂಪ್ರದಾಯಿಕ ಪೂಜೆ, ಆರತಿ ಮತ್ತು ಗೋಪೂಜೆ ನೆರವೇರಿಸಿ ಗಮನಸೆಳೆದರು. <blockquote class="twitter-tweet" data-media-max-width="560"><p lang="kn" dir="ltr">ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಎಲ್. ಮುರುಗನ್ ಅವರ ನಿವಾಸದಲ್ಲಿ ಏರ್ಪಡಿಸಲಾದ ಸಂಕ್ರಾಂತಿ (ಪೊಂಗಲ್) ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಪೂಜೆ, ಆರತಿ ಮತ್ತು ಗೋಪೂಜೆ ನೆರವೇರಿಸಿದರು.<a href="https://twitter.com/hashtag/Sankranthi?src=hash&amp;ref_src=twsrc%5Etfw">#Sankranthi</a> <a href="https://t.co/QukIK4PMqJ">pic.twitter.com/Q...

ಪರೀಕ್ಷಾ ಗೋಲ್ ಮಾಲ್ ಆರೋಪ; ಖರ್ಗೆ ಒಡೆತನದ ಕಾಲೇಜು ಮೇಲೆ FIR ಗೆ ಬಿಜೆಪಿ ಆಗ್ರಹ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷಾ ಗೋಲ್ ಮಾಲ್ ನಡೆದಿದ್ದು,ಕೂಡಲೇ ಪ್ರಕರಣ ದಾಖಲಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಲ್ಲಿ ಲೂಟಿ ಹೊಡೆದಿದ್ದಾಯ್ತು ಈಗ ಖರ್ಗೆ ಒಡೆತನದ ಸಿದ್ದಾರ್ಥಕಾನೂನು ಕಾಲೇಜಿನಲ್ಲಿ ಪರೀಕ್ಷಾ ಗೋಲ್ ಮಾಲ್ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.ಪಿಎಸ್ಐ ಹಗರಣದ ಬಗ್ಗೆ ಸುಳ್ಳು ಹೇಳುವ ಪ್ರಿಯಾಂಕ್ ಖರ್ಗೆ, ತಮ್ಮದೇ ಸಂಸ್ಥೆಯಲ್ಲಿ ನಡೆದಿರುವ ಈ ಮಹಾ ಪರೀಕ್ಷಾ ಅಕ್ರಮಕ್ಕೆ ಏನು ಹೇಳುತ್ತಾರೆ? ಕಾನೂನು ಕಾಲೇಜಿನಲ್ಲೇ ಕಾನೂನು ಬಾಹಿರ ಕೆಲಸ ನಡೆಸುತ್ತಿದ್ದಾರೆ? ಇನ್ನೂ ಇಂತಹ ಅದೆಷ್ಟು ಅಕ್ರಮಗಳು ನಡೆದಿವೆ? ಎಂದು ಬಿಜೆಪಿ ತನ್ನ X ಖಾಜತೆಯಲ್ಲಿ ಪ್ರಶ್ನಿಸಿದೆ.ಕೂಡಲೇ ಸರ್ಕಾರ ಸಂಸ್ಥೆಯ ಅಧ್ಯಕ್ಷರು ಹಾಗೂ ಸಂಬಂಧ ಪಟ್ಟವರ ಮೇಲೆ FIR ಹಾಕಿ ಬಂಧಿಸಿ ವಿಚಾರಣೆ ನಡೆಸಬೇಕು, ನ್ಯಾಯಯುತವಾಗಿ ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಕೂಡದು ಎಂದು ಒತ್ತಾಯಿಸಿದೆ. ಸಿದ್ದಾರ್ಥ ವಿಹಾರ ಟ್ರಸ್ಟ್ ಹೆಸರಲ್ಲಿ ಲೂಟಿ ಹೊಡೆದಿದ್ದಾಯ್ತು ಈಗ @kharge ಒಡೆತನದ ಸಿದ...
ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಸುದ್ದಿಯಲ್ಲಿರುವ ನಡುವೆಯೇ, ಅವರ ತಾಯಿ ಪುಷ್ಪಾ ವಿರುದ್ಧ ಭೂ ವಿವಾದಕ್ಕೆ ಸಂಬಂಧಿಸಿದ ಬೆಳವಣಿಗೆ ಸುದ್ದಿಯ ಕೇಂದ್ರಬಿಂದುವಾಗಿದೆ. ಹಾಸನದ ವಿದ್ಯಾನಗರದಲ್ಲಿ ಭಾನುವಾರ ಬೆಳಗಿನ ಜಾವ ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಲಾಗಿದೆ.ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದ ಜಾಗಕ್ಕೆ ಯಶ್ ಅವರ ತಾಯಿ ಪುಷ್ಪಾ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ್ಮಮ್ಮ ಅವರ ಸಂಬಂಧಿ ದೇವರಾಜ್ ಈ ವಿಚಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ನ್ಯಾಯಾಲಯವು ದೇವರಾಜ್ ಪರವಾಗಿ ಆದೇಶ ನೀಡಿದೆ ಎನ್ನಲಾಗಿದೆ.ಭಾನುವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟ Yash ತಾಯಿ ವಿರುದ್ಧ ಭೂಒತ್ತುವರಿ ಆರೋಪ.. ಯಶ್ ತಾಯಿ ವಿರುದ್ಧ ಜಿಪಿಎ ಹೋಲ್ಡರ್ ದೇವರಾಜು ಕಿಡಿ | #TV9D #TV9Kannada #Yashmother #Yash #Yashmotherpushpa #Hassan #Mysuru #Rockingstaryash #Landencroachment #H...