Sunday, December 7

Tag: ಪೊಳಲಿ ವ್ಯವಸಾಯ ಸೇವಾ ಸಹಕಾರ ಸಂಘ

ಪೊಳಲಿ ಸೊಸೈಟಿ ಚುನಾವಣೆ; ನಿರ್ದೇಶಕರ ಅವಿರೋಧ ಆಯ್ಕೆ

ಪೊಳಲಿ ಸೊಸೈಟಿ ಚುನಾವಣೆ; ನಿರ್ದೇಶಕರ ಅವಿರೋಧ ಆಯ್ಕೆ

Focus, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಬಹಳಷ್ಟು ಮಂದಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಹಿಂದೆ ಪೊಳಲಿ ವ್ಯವಸಾಯ ಸೇವಾ ಸಹಕಾರ ಸಂಘ ಇದೀಗ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ನಿಯಮಿತ ಆಗಿ ಪರಿವರ್ತನೆಯಾಗಿದ್ದು, ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣಾ ನಿಗದಿಯಾಗಿದೆ. ಆದರೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಫಲಿತಾಂಶ ಗೊತ್ತಾಗಿದೆ. ಬಹುತೇಕ ಸ್ಥಾನಗಳಿಗೆ ಈ ಬಾರಿ ಅವಿರೋಧ ಆಯ್ಕೆ ನಡೆದಿದೆ ರಿಟರ್ನಿಂಗ್ ಅಧಿಕಾರಿ ಎನ್.ಜೆ. ಗೋಪಾಲ್ ಅವರು ಪ್ರಕಟಿಸಿದ್ದಾರೆ. ನೂತನ ನಿರ್ದೇಶಕರ ಪಟ್ಟಿ: ಸುಕೇಶ್ ಚೌಟ, ವೆಂಕಟೇಶ್ ನಾವಡ, ಯಶವಂತ ಪೂಜಾರಿ, ಅಬೂಬಕ್ಕರ್ ಡಿ.ಎ., ಗೋಪಾಲ್ ಅಂಚನ್, ಗೋಡ್ ಫಿ ಫೆರ್ನಾಂಡಿಸ್, ನಿರಂಜನಿ ಸಿ. ಶೆಟ್ಟಿ ಜಯಂತಿ, ಕರುಣಾಕರ ಆಳ್ವ, ಕರಿಯದ, ಲಕ್ಷ್ಮೀಶ ಶೆಟ್ಟಿ.  ಇದೇ ವೇಳೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾವುದೇ ಉಮೇದುವಾರಿಕೆ ಸ್ವೀಕೃತವಾಗಿಲ್ಲ. ಹಾಗಾಗಿ ಆ ಸ್ಥಾನ ಖಾಲಿ ಉಳಿದಿದೆ....