Tag: ಕಾವೇರಿಯ ಉಗಮ ಸ್ಥಾನ

  • ತಲಕಾವೇರಿಯಲ್ಲಿ ‘ತೀರ್ಥೋದ್ಭವ’; ‘ತೀರ್ಥಸ್ವರೂಪಿಣಿ’ ದರ್ಶನದ ಅನನ್ಯ ಕ್ಷಣ ಕಣ್ತುಂಬಿಕೊಂಡ ಭಕ್ತ ಸಮೂಹ

    ಮಡಿಕೇರಿ: ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ತೀರ್ಥೋದ್ಭವವಾಗಿದೆ. ಕೊಡಗು ಜಿಲ್ಲೆಯ ಭಾಗಮಂಡಲ ಸಮೀಪ ತಲಕಾವೇರಿ ಕ್ಷೇತ್ರ ಈ ಕ್ಷಣಕ್ಕೆ ಸಾಕ್ಷಿಯಾಯಿತು. ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ತುಲಾ ಲಗ್ನದಲ್ಲಿ ತುಲಾ ಸಂಕ್ರಮಣದ ಪವಿತ್ರ ಕಾಲದಲ್ಲಿ ‘ಬ್ರಹ್ಮಕುಂಡಿಕೆ’ಯು ಕಾವೇರಿ ಮಾತೆಯು ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡಿದ ಅನನ್ಯ ಸನ್ನಿವೇಶವನ್ನು ಅಪಾರ ಸಂಖ್ಯೆಯ ಭಕ್ತರು ಕಣ್ತುಂಬಿಕೊಂಡರು.

    ತೀರ್ಥೋದ್ಭವ ಸಂದರ್ಭದಲ್ಲಿ ಬ್ರಹ್ಮಕುಂಡಿಕೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಆರತಿ ಬೆಳಗಿ ಕಾವೇರಿ ಮಾತೆಯನ್ನು ಸ್ವಾಗತಿಸಿದ ಕ್ಷಣವೂ ಗಮನಸೆಳೆಯಿತು.

    ತೀರ್ಥೋದ್ಭವ ಮೂಲಕ ಕಾವೇರಿ ತವರಿನಲ್ಲಿ ಜಾತ್ರೆ ಕಳೆಕಟ್ಟಿದೆ. ಭಾಗಮಂಡಲ-ತಲಕಾವೇರಿಯಲ್ಲಿ ಸುದೀರ್ಘ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು , ಒಂದು ತಿಂಗಳ ಕಾಲ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದೆ. ಇದೇ ವೇಳೆ, ಭಾಗಮಂಡಲದಿಂದ ತಲಕಾವೇರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ.