Tag: ಮಾಜಿ ಶಾಸಕ ರಮೇಶ್ ಬಾಬು

  • ಕೋವಿಡ್‌ ಹಗರಣ: ಬಿಎಸ್‌ವೈ, ಶ್ರೀರಾಮುಲು ಬಗ್ಗೆ ತನಿಖೆಗೆ ಆಯೋಗ ಶಿಫಾರಸು; ಹೆಣ ಇಟ್ಟು ಹಣ ಮಾಡಿದ ಬಿಜೆಪಿ ನಾಯಕರು ಎಂದ ರಮೇಶ್ ಬಾಬು

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭ ಕೋವಿಡ್‌ 19 ಚಿಕಿತ್ಸೆ ಹಾಗೂ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ ಕುನ್ಹಾ ಅವರ ನೇತೃತ್ವದಲ್ಲಿ ರಚಿಸಿದ್ದ ಆಯೋಗವು ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆಗಿನ ಆರೋಗ್ಯ ಸಚಿವರನ್ನು ತನಿಖೆ ನಡೆಸಲು ಶಿಫಾರಸ್ಸು ಮಾಡಿದೆ. ಏಪ್ರಿಲ್‌ 2020ರಲ್ಲಿ ಚೀನಾದ ಎರಡು ಕಂಪನಿಗಳಿಂದ 3 ಲಕ್ಷ ಪಿಪಿಇ ಕಿಟ್‌ಗಳನ್ನು ಅತ್ಯಂತ ದುಬಾರಿ ದರಗಳಲ್ಲಿ ಖರೀದಿಸಿದ್ದಕ್ಕೆ ಯಾವುದೇ ನಿಖರವಾದ ಕಾರಣವಿಲ್ಲಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

    ಸಾಂದರ್ಭಿಕ ಚಿತ್ರ

    ಪಿಪಿಇ ಕಿಟ್‌ ಖರೀದಿ ಪ್ರಕ್ರಿಯೆ ಸಂದರ್ಭ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತು ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದರು. 1988ರ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ವಿಶ್ವಾಸಾರ್ಹತೆ ಉಲ್ಲಂಘನೆ ಅಪರಾಧದ ಅನ್ವಯ ಸೆಕ್ಷನ್‌ 7 ಮತ್ತು 11ರ ಅಡಿ ತನಿಖೆ ನಡೆಸುವಂತೆ ಆಯೋಗವು ಶಿಫಾರಸು ಮಾಡಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

    ಆಗಸ್ಟ್‌ 31ರಂದು ಡಿ ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಪ್ರಸ್ತುತ ಸಂಪುಟದ ಉಪ ಸಮಿತಿಯು ವರದಿಯನ್ನು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಚೀನಾದಿಂದ ಪಿಪಿಇ ಕಿಟ್‌ ಚೀನಾದ ಡಿಎಚ್‌ಬಿ ಗ್ಲೋಬಲ್‌ ಹಾಂಗ್‌ ಕಾಂಗ್‌ ಮತ್ತು ಬಿಗ್‌ ಫಾರ್ಮಾಸ್ಯೂಟಿಕಲ್ಸ್‌ನಿಂದ ಪ್ರತಿ ಯನಿಟ್‌ಗೆ 2,000 ರೂ. ನಂತೆ 3 ಲಕ್ಷ ಪಿಪಿಇ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ಖರೀದಿ ಪ್ರಕ್ರಿಯೆಯು ಯಾವುದೇ ಟೆಂಡರ್‌ ಕರೆಯದೆ ಅಥವಾ 1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ವಿನಾಯಿತಿಯನ್ನು ಪಡೆಯದೆ ನೇರವಾಗಿ ನಡೆದಿದೆ ಎಂಬ ವಿಚಾರವೂ ತನಿಖೆಯ ವೇಳೆ ಗೊತ್ತಾಗಿದೆ ಎನ್ನಲಾಗಿದೆ.

    ಸಂಗ್ರಹಣೆ ನಿಯಮದ ಮೂಲ ಕಾರ್ಯವಿಧಾನವನ್ನು ಅನುಸರಿಸದೆ ನೇರವಾಗಿ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆದೇಶದಂತೆ ಪಿಪಿಇ ಕಿಟ್‌ಗಳ ಸಂಗ್ರಹಣೆ ಮಾಡಲಾಗಿದೆ” ಎಂಬ ಆರೋಪ ಕೇಳಿಬಂದಿದ್ದು, ಪಿಪಿಇ ಕಿಟ್‌ ಖರೀದಿಯ ಇಡೀ ಪ್ರಕ್ರಿಯೆಯು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರ ಆಪ್ತ ಪೂರೈಕೆದಾರರಿಗೆ ಅನುಕೂಲ ಮತ್ತು ಲಾಭ ಮಾಡಿಕೊಡುವ ರೀತಿಯಲ್ಲಿ ನಡೆದಿದೆ” ಎಂದೂ ಆಯೋಗ ಗಮನಸೆಳೆದಿದೆ ಎನ್ನಲಾಗಿದೆ.


    ಹೆಣ ಇಟ್ಟು ಹಣ ಮಾಡಿದ ಬಿಜೆಪಿ ?

    ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ‘ಹೆಣ ಇಟ್ಟು ಹಣ ಮಾಡಿದ ಬಿಜೆಪಿ ನಾಯಕರ ಕೋವಿಡ್ ಹಗರಣ ಬಟಾಬಯಲಾಗಿದೆ’ ಎಂದಿದ್ದಾರೆ. ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಮಾಜಿ ಶಾಸಕ ರಮೇಶ್ ಬಾಬು, ಪಿಪಿಪಿ ಕಿಟ್’ಗಳನ್ನು ಹತ್ತಾರು ಪಟ್ಟು ಹೆಚ್ಚು ದರಕ್ಕೆ ಚೀನಾ/ಖಾಸಗಿಯಿಂದ ಖರೀದಿಸಿ ಧೋಖ ಮಾಡಿ ಜನರ ಪ್ರಾಣ ದೊಂದಿಗೆ ಆಟವಾಡಿದ್ದಾರೆ. ಸರ್ಕಾರ ವರದಿ ಮೇಲೆ ಕ್ರಿಮಿನಲ್ ಕೇಸು ಧಾಖಲಿಸಿ ಜನರಿಗೆ ನ್ಯಾಯ ನೀಡಲಿ ಕೊಳ್ಳೆ ಹಣ ವಸೂಲಿ ಮಾಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ವಿರೋಧ ಪಕ್ಷದ ನಾಯಕ ಸ್ಥಾನ ಉಳಿಸಿಕೊಳ್ಳಲು ನವರಂಗಿ ಆಟ? ಅಶೋಕ್ ವಿರುದ್ಧ ರಮೇಶ್ ಬಾಬು ಟೀಕಾಸ್ತ್ರ

    ಬೆಂಗಳೂರು: ಪ್ರತಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳಲು ಆರ್.ಅಶೋಕ್ ನವರಂಗಿ ಆಟ ಆಡುತ್ತಿದ್ದಾರೆ ಎಂದು ಮಾಜಿ ಶಾಸಕರೂ ಆದ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಕಟುವಾಗಿ ಟೀಕಿಸಿದ್ದಾರೆ.

    ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಆರ್ ಅಶೋಕ್ ರವರು ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಖಂಡಿಸಿರುವ ರಮೇಶ್ ಬಾಬು, ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಗಳನ್ನು ದುರಾಡಳಿತದ ಮೇಲೆ ನಡೆಸುವ ಅವಶ್ಯಕತೆ ಇಲ್ಲ. ಅಂತಹ ಅವಶ್ಯಕತೆ ಏನಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಮತ್ತು ಅವರ ಪಕ್ಷಕ್ಕೆ ಇರುತ್ತದೆ ಎಂದು ಎದಿರೇಟು ನೀಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿರುವುದು ಅವರ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನ. ಕರ್ನಾಟಕದ ನವರಂಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರವರು ಚನ್ನಪಟ್ಟಣದ ಉಪಚುನಾವಣೆಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಪಕ್ಷದ ದುರಳಿತದ ವಿರುದ್ಧ ಉಪಚುನಾವಣೆ ನಡೆಯುತ್ತಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಬಹುತೇಕ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಉಪಚುನಾವಣೆಗಳನ್ನು ದುರಡಳಿತದ ಮೇಲೆ ನಡೆಸುವ ಅವಶ್ಯಕತೆ ಇರುವುದಿಲ್ಲ ಅಂತಹ ಅವಶ್ಯಕತ್ತೆ ಏನಾದರೂ ಇದ್ದರೆ ಅದು ಭಾರತೀಯ ಜನತಾ ಪಕ್ಷದ ನಾಯಕರಿಗೆ ಮತ್ತು ಅವರ ಪಕ್ಷಕ್ಕೆ ಇರುತ್ತದೆ.

    ಬಿಜೆಪಿ ನಾಯಕರಾದ ಯತ್ನಾಳ್ ಅವರು ಆರ್. ಅಶೋಕ್ ಅಡ್ಜಸ್ಟ್ಮೆಂಟ್ ಗಿರಾಕಿ ಎನ್ನುವ ವಿಷಯವನ್ನು ಹಲವಾರು ಬಾರಿ ಪ್ರಸ್ತಾಪ ಮಾಡಿರುತ್ತಾರೆ.ಇದರ ಜೊತೆಗೆ ಕರ್ನಾಟಕದ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಬಾರಿ ಜೆಡಿಎಸ್ ನಾಯಕರು ಜೊತೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲುವ ಆರ್.ಅಶೋಕ್, ತಾವು ಸಮರ್ಥ ವಿರೋಧ ಪಕ್ಷದ ನಾಯಕರು ಎಂಬುದನ್ನ ಇದುವರೆಗೆ ರುಜುವಾತು ಮಾಡಲು ಸಾಧ್ಯವಾಗಿಲ್ಲ ಎಂದು ರಮೇಶ್ ಬಾಬು ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

    ಮಾಧ್ಯಮ ಹೇಳಿಕೆ ನೀಡಿರುವ ರಮೇಶ್ ಬಾಬು, ಬೆಂಗಳೂರು ದಕ್ಷಿಣ ತಾಲೂಕಿನ ಬಿ.ಎಮ್. ಕಾವಲು ಗ್ರಾಮದಲ್ಲಿ 2500 ಎಕರೆ ಅಕ್ರಮ ಮಂಜೂರಾತಿಗೆ ಸಂಬಂಧ ಪಟ್ಟಂತೆ ಗುರುತರವಾದ ಆರೋಪವನ್ನು ಎದುರಿಸುತ್ತಿರುವ ಅಶೋಕ್ ರವರು, ಈ ಪ್ರಕರಣದ ಮಾಹಿತಿಯನ್ನು ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ನೀಡದೆ ಪ್ರಮಾದವನ್ನು ಎಸಗಿರುತ್ತಾರೆ.ಇದರ ಜೊತೆಗೆ ಅವರು ಕರ್ನಾಟಕದ ಕಂದಾಯ ಸಚಿವರಾಗಿ ಬಿಜೆಪಿ ಸರ್ಕಾರದಲ್ಲಿ ಅನೇಕ ವೈಫಲ್ಯಗಳನ್ನು ಕಂಡಿರುತ್ತಾರೆ. ಅವರ ಅವಧಿಯಲ್ಲಿ ಸುಮಾರು 5 ಲಕ್ಷ ಪೋಡಿ ಪ್ರಕರಣಗಳು ಬಾಕಿ ಇದ್ದು, ಇದರಿಂದ ಇಡೀ ರಾಜ್ಯದ ರೈತರು ಸಂಕಷ್ಟ ಅನುಭವಿಸಿದರು. ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿ ವೈಫಲ್ಯ ಕಂಡ ಇವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಿಲ್ಲ. ಬೆಂಗಳೂರು ಜಯನಗರದ ಡಬಲ್ ಕೊಲೆ ಇದುವರೆಗೂ ಪತ್ತೆ ಆಗಲಿಲ್ಲ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲ ಹಳ್ಳಿ ಭೂ ಪ್ರಕರಣದಲ್ಲಿ ಮಾಡಿರಬಹುದಾದ ವಂಚನೆ, ಅವರ ಶಿಕ್ಷಣ ಸಂಸ್ಥೆಗೆ ಪಡೆದಿರುವ ಅಕ್ರಮ ಭೂಮಿ, ಕಂದಾಯ ಸಚಿವರಾಗಿ ಅಕ್ರಮವಾಗಿ ಹಂಚಿರುವ ಭೂಮಿಯ ಆರೋಪಗಳಿಗೆ ಸಾರ್ವಜನಿಕವಾಗಿ ಇಲ್ಲಿಯವರೆಗೆ ಉತ್ತರ ನೀಡದೆ ಪಲಾಯನ ಮಾಡುತ್ತಿರುವ ಆರ್. ಅಶೋಕ್ ರವರು, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಮೇಲೆ ಮಾತನಾಡುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.

    ಕರ್ನಾಟಕದ ಹೊಂದಾಣಿಕೆ ರಾಜಕಾರಣದ ಪಿತಾಮಹ ಖ್ಯಾತಿಯ ಆರ್. ಅಶೋಕ್ ರವರು 2013ರ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಹೊಂದಾಣಿಕೆ ಮಾಡಿಸಿ ಅನಿತಾ ಕುಮಾರಸ್ವಾಮಿ ಮತ್ತು ಪುಟ್ಟರಾಜು ಅವರಿಗೆ ಕೈಕೊಟ್ಟು ದೇವೇಗೌಡರಿಂದ ಚೀಮಾರಿ ಹಾಕಿಸಿಕೊಂಡ ಘಟನೆ ಮಾಸುವ ಮುನ್ನವೇ ಚೆನ್ನಪಟ್ಟಣ ದಲ್ಲಿ ಹೊಸ ನಾಟಕ ಆರಂಭಿಸಿದ್ದಾರೆ. ಉಪ ಚುನಾವಣೆ ಪೂರ್ವದಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಯೋಗೀಶ್ವರ್ ಅವರಿಗೆ ಚಿತಾವಣೆ ಮಾಡಿದ ಅಶೋಕ್, ಪ್ರತಿದಿನ ಒಂದೊಂದು ವೇಷ ಹಾಕುತ್ತಿದ್ದಾರೆ.
    ಬಿಜೆಪಿ ಯಲ್ಲಿ ಅನೇಕ ಹಿರಿಯರ ತುಳಿದು ವಿರೋಧ ಪಕ್ಷದ ಸ್ಥಾನ ಪಡೆದಿರುವ ಇವರು, ರಾಜ್ಯದ ಸಮಸ್ಯೆಗಳ ಮೇಲೆ ಬೆಳುಕು ಚೆಲ್ಲುವ ಬದಲು, ರಾಜಕೀಯ ಭಾಷಣ ಮಾಡಿಕೊಂಡು ಅಲೆದಾಡುತ್ತಿದ್ದಾರೆ. ಇದು ಈ ರಾಜ್ಯದ ದುರಂತ ಮತ್ತು ಬಿಜೆಪಿ ಅಧೋಗತಿ ಎಂದು ರಮೇಶ್ ಬಾಬು ವಿಶ್ಲೇಷಿಸಿದ್ದಾರೆ.

    ಅತ್ಯಂತ ಹಿರಿಯರು ಕರ್ನಾಟಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಸದನದ ಗೌರವವನ್ನು ಎತ್ತಿ ಹಿಡಿದಿದ್ದಾರೆ. ಅವರಂತೆಯೇ ಆರ್. ಅಶೋಕ್ ಅವರೂ ಸಾದ್ಯವಾದರೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಗೌರವ ತುಂಬಲಿ. ಇಲ್ಲದೇ ಹೋದರೆ ರಾಜೀನಾಮೆ ನೀಡಿ ಮನೆ ಸೇರಲಿ. ಒಬ್ಬ ವಿರೋಧ ಪಕ್ಷದ ನಾಯಕರಾಗಿ ವೈಫಲ್ಯದಿಂದ ಸೋತಿರುವ ಆರ್. ಅಶೋಕ್, ಕಾಂಗ್ರೆಸ್ ಟೀಕೆಗೆ ಮುನ್ನ ಅವರ ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ರಮೇಶ್ ಬಾಬು ಸಲಹೆ ನೀಡಿದ್ದಾರೆ.

  • ‘ಭಾಗ್ಯಲಕ್ಷ್ಮಿ’ ಸೀರೆಯಡಿ ಅವಿತಿರುವ ಹಗರಣ; ಬಿಜೆಪಿ ನಾಯಕರ ಕರ್ಮಕಾಂಡ ಕುರಿತು ತನಿಖೆಗೆ ಆಗ್ರಹ

    ‘ಭಾಗ್ಯಲಕ್ಷ್ಮಿ’ ಸೀರೆಯಡಿ ಅವಿತಿರುವ ಹಗರಣ; ಬಿಜೆಪಿ ನಾಯಕರ ಕರ್ಮಕಾಂಡ ಕುರಿತು ತನಿಖೆಗೆ ಆಗ್ರಹ

    ಬೆಂಗಳೂರು: ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ 2010-11ನೇ ಸಾಲಿನಲ್ಲಿ ಸೀರೆ ವಿತರಣೆ ಹೆಸರಲ್ಲಿ ಸುಮಾರು 23 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ. ಈ ಬಹುಕೋಟಿ ಕರ್ಮಕಾಂಡ ಕುರಿತಂತೆ SIT ತನಿಖೆಗೆ ಅವರು ಆಗ್ರಹಿಸಿದ್ದಾರೆ.

    ಈ ಸಂಬಂಧ ಮಾಜಿ ಶಾಸಕರೂ ಆಗಿರುವ ರಮೇಶ್ ಬಾಬು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿರುವ ದೂರು ಕುತೂಹಲ ಕೆರಳಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಆದೇಶ ಸಂಖ್ಯೆ – ಮಮಇ- 99 ಮಮಆ 2006ರ ಅನ್ವಯ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ವತಿಯಿಂದ 2011ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅಂದಿನ ಬಿಜೆಪಿ ಸರ್ಕಾರ ಸೀರೆ ವಿತರಿಸುವ ಕಾರ್ಯಕ್ರಮವನ್ನು ಜಾರಿಗೊಳಿಸಿ, ಸುಮಾರು 10,68,996 ಸೀರೆಗಳನ್ನು ಸರ್ಕಾರದಿಂದ ಕೊಳ್ಳಲಾಗಿರುತ್ತದೆ. ಕರ್ನಾಟಕದ ನೇಕಾರರನ್ನು ಹಾಗೂ ಸೀರೆ ಉತ್ಪಾದನೆಯ ಸಹಕಾರ ಸಂಘಗಳನ್ನು ನಿರ್ಲಕ್ಷ್ಯ ಮಾಡಿ ಗುಜರಾತಿನ ಸೂರತ್ ನಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ನೀಡಿ ಸೀರೆಗಳನ್ನು ಕೊಳ್ಳಲಾಗಿರುತ್ತದೆ. ಈ ವಹಿವಾಟಿನಲ್ಲಿ ಅಂದಿನ ಬಿಜೆಪಿಯ ವಿಧಾನ ಪರಿಷತ್ತಿನ ಸದಸ್ಯರು ಈಗಿನ ರಾಜ್ಯಸಭಾ ಸದಸ್ಯರು ಆದ ಶ್ರೀ ಲಹರ್ ಸಿಂಗ್ ರವರು ಭಾಗಿಯಾಗಿರುವ ಆರೋಪಗಳಿರುತ್ತದೆ ಎಂದು ಗಮನಸೆಳೆದಿದ್ದಾರೆ.

    ಮಾರುಕಟ್ಟೆಯಲ್ಲಿ ಒಂದು ನೂರು ರೂಪಾಯಿಗಳಿಗೆ ದೊರೆಯಬಹುದಾದ ಸೀರೆಗಳನ್ನು ಹೆಚ್ಚಿನ ದರ ನಮೂದಿಸಿ ರಾಜ್ಯದ ಹೊರಭಾಗದಿಂದ ಅಂದಿನ ಬಿಜೆಪಿ ಸರ್ಕಾರ ಖರೀದಿಸಿದೆ. ಈ ಸಂಬಂಧ ಮಾರ್ಚ್ 2011ರಲ್ಲಿ ಕಾಂಗ್ರೆಸ್ ಪಕ್ಷದ ಅಂದಿನ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಮೋಟಮ್ಮ, ಸದಸ್ಯರಾದ ಆರ್.ವಿ.ವೆಂಕಟೇಶ್, ದಯಾನಂದ್ ಮುಂತಾದವರು ಚರ್ಚೆ ಮಾಡಿ ಹಗರಣದ ತನಿಖೆಗೆ ಒತ್ತಾಯ ಮಾಡಿದ್ದರು. ಸದರಿ 23 ಕೋಟಿ ರೂಪಾಯಿಗಳ ಹಗರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರವಾಗಿದ್ದು, ಇದರ ತನಿಖೆ ಆಗಬೇಕೆಂದು ಒತ್ತಾಯ ಮಾಡಿದ್ದರು ಎಂದು ರಮೇಶ್ ಬಾಬು ನೆನಪಿಸಿದ್ದಾರೆ.

    ಭಾಗ್ಯಲಕ್ಷ್ಮಿ ಸೀರೆ ವಿತರಣೆಗೆ ಗುಜರಾತಿನ ಸೂರತ್ ನಿಂದ ಸೀರೆಗಳನ್ನು ಹೆಚ್ಚು ಹಣ ನೀಡಿ ಪಡೆಯುವ ಮೂಲಕ ದೊಡ್ಡ ಮಟ್ಟದ ಭ್ರಷ್ಟಾಚಾರ ಎಸಗಿ ರಾಜ್ಯ ಸರ್ಕಾರಕ್ಕೆ ನಷ್ಟವನ್ನು ಉಂಟು ಮಾಡಿರುತ್ತಾರೆ. ಈ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಮತ್ತು ಎಷ್ಟು ಸಾರ್ವಜನಿಕ ಹಣ ಲೂಟಿ ಆಗಿದೆ ಎಂಬ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ತನಿಖೆ ಮಾಡುವ ಅವಶ್ಯಕತೆ ಇರುತ್ತದೆ ಎಂದವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಕರ್ನಾಟಕದಲ್ಲಿ ಸೀರೆಗಳ ಪೂರೈಕೆಗೆ ವಿಸ್ತಾರವಾದ ಅವಕಾಶವಿದ್ದು, ನಮ್ಮ ರಾಜ್ಯದಲ್ಲೇ ಸೀರೆಗಳನ್ನು ಕ್ರಯಕ್ಕೆ ಪಡೆದುಕೊಂಡಿದ್ದರೆ ಇಲ್ಲಿನ ನೇಕಾರರಿಗೆ ಮತ್ತು ಕೈ ಮಗ್ಗದ ಸಹಕಾರ ಸಂಘಗಳಿಗೆ ಆರ್ಥಿಕವಾಗಿ ಶಕ್ತಿ ಬರುತ್ತಿತ್ತು. ಹೊರ ರಾಜ್ಯದಿಂದ ಸೀರೆಗಳನ್ನು ಹೆಚ್ಚು ದರಕ್ಕೆ ಪಡೆಯುವ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ವಿಶೇಷವಾಗಿ ಇಲ್ಲಿನ ನೇಕಾರರಿಗೆ ಮೋಸ ಎಸಗಲಾಗಿದೆ. ಆದುದರಿಂದ ರಾಜ್ಯದ ಮತ್ತು ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾಗ್ಯಲಕ್ಷ್ಮಿ ಯೋಜನೆಯ 2011ರ ಬಿಜೆಪಿ ಸರ್ಕಾರದ 23 ಕೋಟಿ ರೂಪಾಯಿಗಳ ಸೀರೆ ಹಗರಣವನ್ನು ವಿಶೇಷ ತನಿಖಾ ತಂಡದ ಮೂಲಕ ತನಿಖೆಗೆ ಒಳಪಡಿಸಬೇಕೆಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

  • ಬೆಂಗಳೂರಿನಲ್ಲಿ DL ಹೊಂದಿರದ ಚಾಲಕರ ಅವಾಂತರ..!  ಅವಘಡಗಳಿಗೆ ಬ್ರೇಕ್ ಹಾಕಿ ಎಂದು ಸಿಎಂಗೆ ರಮೇಶ್ ಬಾಬು ಪತ್ರ

    ಬೆಂಗಳೂರಿನಲ್ಲಿ DL ಹೊಂದಿರದ ಚಾಲಕರ ಅವಾಂತರ..!  ಅವಘಡಗಳಿಗೆ ಬ್ರೇಕ್ ಹಾಕಿ ಎಂದು ಸಿಎಂಗೆ ರಮೇಶ್ ಬಾಬು ಪತ್ರ

    ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಚಾಲನಾ ಪರವಾನಿಗಿ (DL ) ಇಲ್ಲದೆ ಲಾರಿ ಚಾಲಕರು ಅಪಘಾತಗಳನ್ನು ಎಸಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ.

    07-08-2024 ರಂದು ಬೆಂಗಳೂರಿನ ಡಾಬಸ್ ಪೇಟೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗರ್ಭಿಣಿ ಮಹಿಳೆ ಮತ್ತು ಗರ್ಭದೊಳಗೆ ಇದ್ದ ಮಗು ಮೃತ ಪಟ್ಟಿದ್ದು, ಟಿಪ್ಪರ್ ಲಾರಿಯ ಚಾಲಕ ಪರಾರಿಯಾಗಿರುತ್ತಾನೆ. ಒಂದು ವಾರದ ಹಿಂದೆ ಬೆಂಗಳೂರಿನ ಕೆ.ಆರ್ ಸರ್ಕಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಇಂಜಿನಿಯರ್‌ಗಳು ಮೃತ ಪಟ್ಟಿದ್ದು, ಬಿಬಿಎಂಪಿ ಕಸದ ಲಾರಿ ಚಾಲಕ ಪರಾರಿಯಾಗಿರುತ್ತಾನೆ. ಇತ್ತೀಚಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರ ಚಾಲನಾ ಪರವಾನಿಗಿ ಇರುವುದಿಲ್ಲ ಎಂದು ರಮೇಶ್ ಬಾಬು ಅವರು ತಮ್ಮ ಪತ್ರದಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.

    ಬೆಂಗಳೂರಿನಲ್ಲಿ ಕಸ ಸಾಗಾಣೆ ಮಾಡುವ ಲಾರಿಗಳು, ವಾಣಿಜ್ಯ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಳ ಸಾಗಾಣೆಗೆ ಬಳಸಿಕೊಳ್ಳುವ ಬಹುತೇಕ ಲಾರಿಗಳ ಚಾಲಕರಿಗೆ, ಕಟ್ಟಡ ಮತ್ತು ಇತರೆ ಕಾಮಗಾರಿಗಳಲ್ಲಿ ಬಳಕೆಯಾಗುತ್ತಿರುವ ಟ್ರ್ಯಾಕ್ಟರ್ ಗಳ ಚಾಲಕರು ಚಾಲನಾ ಅನುಮತಿ ಪತ್ರವನ್ನೇ ಹೊಂದಿಲ್ಲ ಎಂದವರು ದೂರಿದ್ದಾರೆ.

    ಕುಡಿದು ವಾಹನಗಳನ್ನು ಚಾಲನೆ ಮಾಡುವುದು, ಅತೀ ವೇಗದ ಚಾಲನೆ, ರಸ್ತೆ ನಿಯಮಗಳ ಉಲ್ಲಂಘನೆ ಮತ್ತು ಕಡಿಮೆ ವೇತನ ನೀಡಿ ಅಸಮರ್ಥ ಚಾಲಕರನ್ನು ಬಳಸಿಕೊಳ್ಳುವ ಕಾರಣಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪದೇ ಪದೇ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ. ಹಾಗಾಗಿ ತಾವು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಲಾರಿ ಮತ್ತು ಸರಕು ಸಾಗಾಣಿಕೆಯ ಹಾಗೂ ಕಸದ ಲಾರಿಗಳ ಚಾಲಕರ ಚಾಲನಾ ಪತ್ರವನ್ನು (DL) ಕಡ್ಡಾಯವಾಗಿ ಮತ್ತು ನಿರಂತರವಾಗಿ ತಪಾಸಣೆ ಮಾಡಲು ಸೂಚಿಸಬೇಕಾಗಿ ರಮೇಶ್ ಬಾಬು ಆಗ್ರಹಿಸಿದ್ದಾರೆ. ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡುವ ಚಾಲಕರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಒತ್ಗಾಯಿಸಿದ್ದಾರೆ.