Wednesday, June 25

Tag: asia post

ಕೋವಿಡ್ ಮಾದರಿಯಲ್ಲೇ ಮತ್ತೊಂದು ಮಾರಣಾಂತಿಕ ವೈರಸ್ ಉಲ್ಬಣ; ಹೊಸ ವೈರಾಣು ಹೆಸರು ‘HMPV’

ಕೋವಿಡ್ ಮಾದರಿಯಲ್ಲೇ ಮತ್ತೊಂದು ಮಾರಣಾಂತಿಕ ವೈರಸ್ ಉಲ್ಬಣ; ಹೊಸ ವೈರಾಣು ಹೆಸರು ‘HMPV’

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಜಗತ್ತನ್ನು ಬೆಚ್ಚಿಬೀಳಿಸಿದ್ದ ಕೋವಿಡ್ ಸೋಂಕಿನ ಮಾದರಿಯಲ್ಲೇ ಮತ್ತೊಂದು ವೈರಾಣು ಹಾವಳಿ ಚೀನಾದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಮತ್ತೊಂದು ನಿಗೂಢ ವೈರಾಣು ಬಗ್ಗೆ ವಿಶ್ವದೆಲ್ಲೆಡೆ ಆತಂಕ ಎದುರಾಗಿದೆ. ಕೋವಿಡ್ -19 ಸೋಂಕು ಉಲ್ಬಣಗೊಂಡ ಐದು ವರ್ಷಗಳ ನಂತರ, ಚೀನಾದಲ್ಲಿ ಹೊಸ ಉಸಿರಾಟ ತೊಂದರೆಯನ್ನು ಕಾಡುವ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂಬ ಸೋಂಕು ಕಾಣಿಸಿಕೊಂಡಿದೆ. ಈ HMPV ವೈರಸ್ ವೇಗವಾಗಿ ಹರಡುತ್ತಿದೆ ಎಂದು ಹಲವಾರು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್'ಗಳು ಆತಂಕ ಹೆಚ್ಚಿಸಿವೆ. ಚೀನಾದ ಆಸ್ಪತ್ರೆಗಳು HMPV ಸೋಂಕಿಗೆ ಒಳಗಾದವರಿಂದ ತುಂಬಿಹೋಗಿವೆ ಎಂಬ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಎಂದು ಖ್ಯಾತ ಮಾಧ್ಯಮ 'ಏಷ್ಯಾ ಪೋಸ್ಟ್' (Asia Post) ವರದಿ ಮಾಡಿದೆ. HMPV ಪ್ರಕರಣಗಳ ಹೆಚ್ಚಳವು ಹಠಾತ್ ಸಾವುಗಳ ಆತಂಕಕಾರಿ ಸನ್ನಿವೇಶ ಸೃಷ್ಟಿಸಬಹುದೆಂದು ಹೇಳಲಾಗುತ್ತಿದ್ದು, 40 ರಿಂದ 80 ವರ್ಷ ವಯಸ್ಸಿನವರ ಮೇಲೆ ವಿಶೇಷವಾಗಿ ಪರಿಣಾಮ ಬೀಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏನಿದು HMPV? 2001 ರಲ್ಲಿ ಪತ್ತೆಯಾದ...