“You are Great”: ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಟ್ರಂಪ್
ವಾಷಿಂಗ್ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು "ನೀವೊಬ್ಬರು ಶ್ರೇಷ್ಠರು" ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.
ಗುರುವಾರ ಡೊನಾಲ್ಡ್ ಟ್ರಂಪ್ ಅವರು ನರೇಂದ್ರ ಮೋದಿ ಅವರನ್ನು ಶ್ವೇತಭವನದಲ್ಲಿ ಭೇಟಿಯಾದಾಗ ತಮ್ಮ 'ಅವರ್ ಜರ್ನಿ ಟುಗೆದರ್' ಪುಸ್ತಕದ ಸಹಿ ಮಾಡಿದ ಪ್ರತಿಯನ್ನು ಉಡುಗೊರೆಯಾಗಿ ನೀಡಿದರು.
ಟ್ರಂಪ್ ಅವರು ತಮ್ಮ ಓವಲ್ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರನ್ನು ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. "ನಿಮ್ಮನ್ನು ಶ್ವೇತಭವನದಲ್ಲಿ ಮತ್ತೆ ನೋಡಲು ನನಗೆ ಸಂತೋಷವಾಗಿದೆ" ಎಂದು ಮೋದಿ ಅವರು ಅಧ್ಯಕ್ಷ ಟ್ರಂಪ್ ಬಳಿ ಹೇಳಿದರು. "ನಾವು ನಿಮ್ಮನ್ನು ಕಳೆದುಕೊಂಡಿದ್ದೇವೆ, ನಾವು ನಿಮ್ಮನ್ನು ತುಂಬಾ ಕಳೆದುಕೊಂಡಿದ್ದೇವೆ" ಎಂದ ಟ್ರಂಪ್ ಮೋದಿ "ನಿಮ್ಮನ್ನು ಮತ್ತೆ ನೋಡಲು ಸಂತೋಷವಾಗಿದೆ" ಎಂದ ಸನ್ನಿವೇಶ ಗಮನಸೆಳೆಯಿತು.
President Trump often talks about MAGA.
In India, we are working towards a Viksit Bharat, which in American context translates into MIGA.
And together, the India-USA have a MEGA partne...
