Saturday, December 6

Tag: Dr Rajendra Hiremath

ಮಹಾರಾಷ್ಟ್ರ ರಣಾಂಗಣದಲ್ಲಿ ‘ಮಹಾಯುತಿ’ ಪ್ರಚಾರದಬ್ಬರ; ಯುವಸೈನ್ಯಕ್ಕೆ ‘ರವಿ ಮೋಡಿ’ಯೇ ಅಸ್ತ್ರ

ಮಹಾರಾಷ್ಟ್ರ ರಣಾಂಗಣದಲ್ಲಿ ‘ಮಹಾಯುತಿ’ ಪ್ರಚಾರದಬ್ಬರ; ಯುವಸೈನ್ಯಕ್ಕೆ ‘ರವಿ ಮೋಡಿ’ಯೇ ಅಸ್ತ್ರ

ದೇಶ-ವಿದೇಶ, ಪ್ರಮುಖ ಸುದ್ದಿ
ಮುಂಬೈ: ಇಡೀ ದೇಶದ ಗಮನಸೆಳೆದಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳು ಶತಪ್ರಯತ್ನದಲ್ಲಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್-ಶಿವಸೇನೆ ಸಹಿತ ಅಘಾಡಿ ಮೈತ್ರಿ ಸೈನ್ಯ ಹರಸಾಹಸದಲ್ಲಿ ನಿರತವಾಗಿದೆ. ಬಿಜೆಪಿ ಹಾಗೂ ಮಿತ್ರಪಕ್ಷಗಳ (ಮಹಾಯುತಿ) ಅಭ್ಯರ್ಥಿಗಳ ಪರವಾಗಿ ಮಹಾರಾಷ್ಟ್ರ ಪ್ರದೇಶ ಬಿಜೆಪಿ ಮಾಜಿ ಉಸ್ತುವಾರಿ ನಾಯಕ ಕರ್ನಾಟಕಡಾ ಶಾಸಕ ಸಿ.ಟಿ.ರವಿ ಭಾರೀ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಚುನಾವಣಾ ಅಖಾಡದಲ್ಲಿ ಮೊಕ್ಕಂ ಹೂಡಿರುವ ಸಿ.ಟಿ.ರವಿ ಹಲವು ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿ ಮತಬೇಟೆ ಕೈಗೊಂಡಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ ಚುನಾವಣಾ ಉಸ್ತುವಾರಿಯಾಗಿರುವ ಸಿ.ಟಿ.ರವಿಯಿಂದ ಮಹಾಯುತಿ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಶೈಲಿಯಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ವರ್ಷದ ಹಿಂದೆ ಪ್ರದೇಶ ಬಿಜೆಪಿ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಸಂಘಟನಾ ಚತುರನಾಗಿ ಕಾರ್ಯನಿರ್ವಹಿಸಿದ್ದ ಸಿ.ಟಿ.ರವಿ ಅವರಿಗೆ ಮಹಾರಾಷ್ಟ್ರ ರಾಜಕಾರಣದ ವಾಸ್ತವ ಚಿತ್ರಣ ತಿಳಿದ...