
‘ಎರಡು ವರ್ಷಗಳ ಸರಣಿ ಸುಲಿಗೆ! ಯುಗಾದಿ ಹಬ್ಬಕ್ಕೆ ಬೆಲೆ ‘ಏರಿಕೆ ಹೋಳಿಗೆ’
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಕೇಂದ್ರ ಸಚಿವ ಹೆಚ್‌ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿ ಕಾರಿರುವ ಅವರು, 'ಎರಡು ವರ್ಷಗಳ ಸರಣಿ ಸುಲಿಗೆ! ಯುಗಾದಿ ಹಬ್ಬಕ್ಕೆ ಬೆಲೆ 'ಏರಿಕೆ ಹೋಳಿಗೆ' ಎಂದು ತಮ್ಮದೇ ಶೈಲಿಯಲ್ಲಿ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಹಾಲು ಹಾಲಾಹಲ, 3ನೇ ಸಲ ದರ ಏರಿಕೆಯಾಗಿದೆ ಎಂದಿರುವ ಹೆಚ್ಡಿಕೆ, 2023 ಆಗಸ್ಟ್‌ನಲ್ಲಿ 3 ರೂಪಾಯಿ, 2024 ಜೂನ್‌ನಲ್ಲಿ 2 ರೂಪಾಯಿ, ಈಗ 2025ರ ಮಾರ್ಚ್‌ನಲ್ಲಿ 4 ರೂಪಾಯಿ ಏರಿಕೆ ಮಾಡಲಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿದ್ಯುತ್ ದರ ಏರಿಕೆ ಮೂಲಕವೂ ಶಾಕ್ ನೀಡಲಾಗಿದೆ ಎಂದಿರುವ ಕುಮಾರಸ್ವಾಮಿ, ಈಗ ಎಲ್ಲರಿಗೂ ಪ್ರತೀ ಯೂನಿಟ್ಟಿಗೆ 36 ಪೈಸೆ ಬರೆ ಎಳೆಯಲಾಗಿದೆ. ಈಮೂಲಕ 'ಮಹಾದೇವಪ್ಪನಿಗೂ ಶಾಕು, ಕಾಕಾ ಪಾಟೀಲಗೂ ಶಾಕು' ಎಂದು ವ್ಯಂಗ್ಯವಾಡಿದ್ದಾರೆ.
ಒಂದು ಕೈಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುವ ದಶಾವತಾರಿ ರಾವಣರೂಪಿ ಸುಲಿಗೆಯು ಪ್ರವೃತ್ತಿ ಕನ್ನಡಿಗರ ಪಾಲಿಗೆ ಮರಣಶಾಸನ ಎಂದು ಆಕ್ರೋಶ ಹೊರಹಾಕಿರುವ ಕುಮಾರಸ್ವಾಮಿ, ಹಾಲು, ವಿದ್ಯ...