Friday, January 30

Tag: journalist alvin mendonca

ಮಂಗಳೂರು: ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾ! ಅಕ್ರಮ ದಂಧೆ ಬಗ್ಗೆ ಅಧಿಕಾರಿಗಳ ಮೌನವೇಕೆ? CSಗೆ ಪರಿಸರ ಹೋರಾಟಗಾರ ಆಲ್ವಿನ್ ದೂರು

ಮಂಗಳೂರು: ದ್ವೀಪವನ್ನೇ ನುಂಗುತ್ತಿರುವ ಮರಳು ಮಾಫಿಯಾ! ಅಕ್ರಮ ದಂಧೆ ಬಗ್ಗೆ ಅಧಿಕಾರಿಗಳ ಮೌನವೇಕೆ? CSಗೆ ಪರಿಸರ ಹೋರಾಟಗಾರ ಆಲ್ವಿನ್ ದೂರು

Others
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ತಾಂಡವವಾಡುತ್ತಿರುವ ಮರಳು ಮಾಫಿಯಾ ವಿರುದ್ಧ ರಣಕಹಳೆ ಮೊಳಗಿದೆ. ಮಂಗಳೂರು ಹೊರವಲಯದ 'ಉಳಿಯ' ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಸ್ಥಳೀಯರು ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿರುವಂತೆಯೇ, ಮರಳು ಮಾಫಿಯಾ ಜೊತೆ ಜಿಲ್ಲೆಯ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಹಿರಿಯ ಪತ್ರಕರ್ತರೂ ಆದ ಪರಿಸರ ಹೋರಾಟಗಾರ ಆಲ್ವಿನ್ ಮೆಂಡೋನ್ಸಾ ಅವರು ಈ ದೂರನ್ನು ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧವೇ ಆದ್ಯ ಕ್ರಮವಾಗಬೇಕಿದೆ ಎಂದು ಗಮನಸೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು ನದಿಯನ್ನು ಆವರಿಸಿಕೊಂಡಿರುವ ಪ್ರದೇಶವಾಗಿದೆ. ಕುಮಾರಧಾರ, ನೇತ್ರಾವತಿ, ಫಲ್ಗುಣಿ, ನಂದಿನಿ ಸಹಿತ ಹಲವಾರು ನದಿಗಳು ಕರಾವಳಿ ಜನರ ಜೀವನಾಡಿಯಾಗಿದ್ದು, ಇದೀಗ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜಲಮೂಲಕ್ಕೆ ಸಂಚಕಾರ ಎದುರಾಗಿದೆ. ಕರ್ನಾಟಕ ಕರಾವಳಿಯ ದೊಡ್ಡ ನದಿಗಳಲ್ಲಿ ಒಂದಾಗಿರುವ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಗಳು ನ...