ಕ್ವಿನ್ ಸಿಟಿ ಮೂಲಕ ಕರ್ನಾಟಕದಲ್ಲಿ ‘ಪ್ರತಿಭಾ ಕಣಜ’ ಸೃಷ್ಟಿ: ಶರಣ್ ಪ್ರಕಾಶ್ ಪಾಟೀಲ್
ಬೆಂಗಳೂರು: ಕರ್ನಾಟಕ ರಾಜ್ಯವು ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕೌಶಲ್ಯಭರಿತವಾಗಿ ರಾಜ್ಯವಾಗಿದೆ. ತಾಂತ್ರಿಕವಾಗಿಯೂ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿಯೂ ನಮ್ಮ ಕರುನಾಡು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ ನಮ್ಮ ರಾಜಧಾನಿ ಸಮೀಪ ತಲೆ ಎತ್ತುತ್ತಿರುವ ಕ್ವಿನ್ ಸಿಟಿಯು ಕೌಶಲ್ಯ ಹಾಗೂ ವೈದ್ಯಕೀಯ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಇಂಗ್ಲೀಷ್ ಭಾಷೆಯಲ್ಲೂ ಈ ಸುದ್ದಿ ಓದಿ.. KWIN City to Transform Karnataka into a Talent Hub: Dr. Sharan Prakash Patil
ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಇನ್ವೆಸ್ಟ್ ಕರ್ನಾಟಕ) ಮೂರನೇ ದಿನವಾದ ಗುರುವಾರ "ಕ್ವಿನ್ ಸಿಟಿಯಲ್ಲಿ ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಸಂಯೋಜಿಸುವುದು" ಎಂಬ ವಿಷಯದ ಕುರಿತ ನಡೆದ ದುಂಡು ಮೇಜಿನ ಸಭೆಯಲ್ಲಿ ಸಚಿವರು ತಮ್ಮ ಅಭಿಪ್ರಾಯ ಮಂಡಿಸಿದರು.
ಕ್ವಿನ್ ಸಿಟಿಯಲ್ಲಿ ಕ್ರಿಯಾಶೀಲತೆ ಹ...
